MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಪ್ರೀತಿಯಲ್ಲಿ ಸೋಲು, ಬಾಲ್ಯದ ನೆರಳಿನಾಟ! ತಪ್ಪಾದ ಸಂಗಾತಿಯನ್ನು ಆಯ್ಕೆ ಮಾಡೋದ್ಯಾಕೆ?

ಪ್ರೀತಿಯಲ್ಲಿ ಸೋಲು, ಬಾಲ್ಯದ ನೆರಳಿನಾಟ! ತಪ್ಪಾದ ಸಂಗಾತಿಯನ್ನು ಆಯ್ಕೆ ಮಾಡೋದ್ಯಾಕೆ?

ಪದೇ ಪದೇ ಸಂಬಂಧಗಳು ಮುರಿದು ಬೀಳಲು ನಿಮ್ಮ ಕೆಟ್ಟ ಸಮಯ ಕಾರಣವಲ್ಲ, ಬದಲಿಗೆ ನಿಮ್ಮ ಬಾಲ್ಯದ ಅನುಭವಗಳು ಮತ್ತು ಮನಸ್ಥಿತಿಯೇ ಕಾರಣವೆಂದು ಮನೋವಿಜ್ಞಾನ ಹೇಳುತ್ತದೆ. ಬಾಲ್ಯದಲ್ಲಿ ಪ್ರೀತಿ, ಗೌರವ ಕಾಣದವರು, ತಮಗರಿವಿಲ್ಲದಂತೆಯೇ ದೊಡ್ಡವರಾದ ಮೇಲೆ ಅಂಥದ್ದೇ ಅಶಾಂತ ಸಂಬಂಧಗಳ ಕಡೆಗೆ ಆಕರ್ಷಿತರಾಗುತ್ತಾರೆ.

2 Min read
Author : Mahmad Rafik
Published : Apr 04 2026, 07:38 AM IST
Share this Photo Gallery
  • FB
  • TW
  • Linkdin
  • Whatsapp
15
 ದಿನ ಕಳೆದಂತೆ ಹಳೆ ಕಥೆನೇ ಮತ್ತೆ ಶುರು
Image Credit : Gemini AI

ದಿನ ಕಳೆದಂತೆ ಹಳೆ ಕಥೆನೇ ಮತ್ತೆ ಶುರು

ಎಷ್ಟೋ ಜನರ ಲೈಫಲ್ಲಿ ಹೊಸ ಪ್ರೀತಿ ಶುರುವಾದಾಗ ಎಲ್ಲವೂ ಅದ್ಭುತವಾಗಿ ಕಾಣುತ್ತದೆ. ಆದರೆ ದಿನ ಕಳೆದಂತೆ ಹಳೆ ಕಥೆನೇ ಮತ್ತೆ ಶುರುವಾಗುತ್ತೆ. ಸಂಗಾತಿಯ ನಡವಳಿಕೆಯಲ್ಲಿ ಬದಲಾವಣೆ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳದಿರುವುದು, ಕೊನೆಗೆ ಮನಸ್ತಾಪದಿಂದ ಸಂಬಂಧವೇ ಮುರಿದು ಬೀಳುತ್ತೆ.

ನಿಮ್ಮ ಜೀವನದಲ್ಲೂ ಹೀಗೆ ಪದೇ ಪದೇ ಆಗ್ತಿದ್ರೆ, ಅದು ನಿಮ್ಮ ಕೆಟ್ಟ ಟೈಮ್ ಅಲ್ಲ. ಬದಲಿಗೆ ನಿಮ್ಮ ಮನಸ್ಥಿತಿ ಮತ್ತು ಬಾಲ್ಯದ ಅನುಭವಗಳೇ ಇದಕ್ಕೆ ಕಾರಣ ಅಂತಾರೆ ಸೈಕಾಲಜಿ ತಜ್ಞರು.

25
ತಪ್ಪು ವ್ಯಕ್ತಿಯನ್ನು ಆಯ್ಕೆ ಮಾಡಲು ಕಾರಣಗಳು
Image Credit : Gemini AI

ತಪ್ಪು ವ್ಯಕ್ತಿಯನ್ನು ಆಯ್ಕೆ ಮಾಡಲು ಕಾರಣಗಳು

ಸೈಕಾಲಜಿ ಪ್ರಕಾರ, ನಾವು ಚಿಕ್ಕವರಿದ್ದಾಗ ಮನೆಯಲ್ಲಿ ನೋಡಿದ ವಾತಾವರಣವೇ ನಮ್ಮ ಮುಂದಿನ ಸಂಬಂಧಗಳಿಗೆ ಒಂದು ಬ್ಲೂಪ್ರಿಂಟ್ ಇದ್ದ ಹಾಗೆ. ತಂದೆ-ತಾಯಿ ನಡುವೆ ಪ್ರೀತಿ, ಗೌರವ ನೋಡಿ ಬೆಳೆದ ಮಕ್ಕಳು, ದೊಡ್ಡವರಾದ ಮೇಲೆ ತಮ್ಮ ಸಂಗಾತಿಯಲ್ಲೂ ಅದನ್ನೇ ಹುಡುಕುತ್ತಾರೆ. ಆದರೆ ಬಾಲ್ಯದಲ್ಲಿ ಜಗಳ, ಪ್ರೀತಿ ಇಲ್ಲದ ವಾತಾವರಣದಲ್ಲಿ ಬೆಳೆದವರು, ತಮಗೇ ಗೊತ್ತಿಲ್ಲದಂತೆ ಅಂಥದ್ದೇ ಕಷ್ಟದ ಸಂಬಂಧಗಳ ಕಡೆಗೆ ಆಕರ್ಷಿತರಾಗುತ್ತಾರೆ.

Related Articles

Related image1
ನಿಮ್ಮ ಗಂಡ ಹೀಗ್ ಮಾಡುತ್ತಿದ್ದರೆ ಸಂಗಾತಿ ಆಯ್ಕೆಯಲ್ಲಿ ನೀವು ಫೇಲ್ ಎಂದರ್ಥ!
Related image2
Chanakya niti: ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಈ ತಪ್ಪು ಮಾಡಬೇಡಿ!
35
ಜಗಳ, ಕಿರುಚಾಟ, ಪ್ರೀತಿಯ ಕೊರತೆ
Image Credit : Gemini AI

ಜಗಳ, ಕಿರುಚಾಟ, ಪ್ರೀತಿಯ ಕೊರತೆ

ತಜ್ಞರ ಪ್ರಕಾರ, ನಮ್ಮ ಮನಸ್ಸು ಯಾವಾಗಲೂ ತನಗೆ ಪರಿಚಿತವಾದ ಭಾವನೆಗಳನ್ನೇ ಹುಡುಕುತ್ತೆ. ಒಂದು ವೇಳೆ ನೀವು ಚಿಕ್ಕವರಿದ್ದಾಗ ಮನೆಯಲ್ಲಿ ಜಗಳ, ಕಿರುಚಾಟ, ಪ್ರೀತಿಯ ಕೊರತೆ ನೋಡಿ ಬೆಳೆದಿದ್ದರೆ, ನಿಮ್ಮ ಮೆದುಳಿಗೆ ಆ ಅಶಾಂತ ವಾತಾವರಣವೇ 'ನಾರ್ಮಲ್' ಅನಿಸಿಬಿಡುತ್ತೆ. ಹಾಗಾಗಿ, ದೊಡ್ಡವರಾದ ಮೇಲೆ ಯಾರಾದ್ರೂ ನಿಮ್ಮನ್ನು ಪ್ರೀತಿ, ಗೌರವದಿಂದ ನೋಡಿಕೊಂಡರೆ ಅದು ಬೋರಿಂಗ್ ಅನಿಸಬಹುದು. ನಿಮಗೆ ಗೊತ್ತಿಲ್ಲದ ಹಾಗೆ, ನಿಮ್ಮ ಮನಸ್ಸು ಹಳೆ ಗಾಯವನ್ನು ನೆನಪಿಸುವ ಕೋಪಿಷ್ಠ, ಭಾವನೆಗಳಿಲ್ಲದ ವ್ಯಕ್ತಿಗಳ ಕಡೆಗೆ ನಿಮ್ಮನ್ನು ಸೆಳೆಯುತ್ತೆ.

45
ಗೌರವ ಸಿಗಲು ಅರ್ಹತೆ ಇದೆಯಾ?
Image Credit : Gemini AI

ಗೌರವ ಸಿಗಲು ಅರ್ಹತೆ ಇದೆಯಾ?

ನಿಜ ಹೇಳಬೇಕೆಂದರೆ, ಹಲವು ಬಾರಿ ನಮಗೆ ನಮ್ಮ ಮೇಲೆಯೇ ನಂಬಿಕೆ ಇರೋದಿಲ್ಲ. 'ನನಗೆ ನಿಜವಾದ ಪ್ರೀತಿ, ಗೌರವ ಸಿಗಲು ಅರ್ಹತೆ ಇದೆಯಾ? ಅನ್ನೋ ತಪ್ಪು ಕಲ್ಪನೆ ನಮ್ಮನ್ನು ಕಾಡುತ್ತಿರುತ್ತೆ. ಇದರಿಂದಾಗಿ, ನಮ್ಮನ್ನು ಸರಿಯಾಗಿ ನೋಡಿಕೊಳ್ಳದವರನ್ನೂ ನಾವು ಸಹಿಸಿಕೊಳ್ಳಬೇಕಾಗುತ್ತೆ. ಇದೊಂದು ವಿಷವರ್ತುಲದ ಹಾಗೆ. ಆತ್ಮವಿಶ್ವಾಸ ಕಡಿಮೆ ಆದಷ್ಟು, ಕೆಟ್ಟ ಸಂಬಂಧಕ್ಕೆ ಬೀಳುವ ಸಾಧ್ಯತೆ ಹೆಚ್ಚಾಗಿರುತ್ತೆ.

ಇದನ್ನೂ ಓದಿ: ಇಂದು 7 ರಾಶಿಯವರ ಜೀವನದಲ್ಲಿ ನೆಲೆಸಲಿದೆ ನೆಮ್ಮದಿ; ಸಾಲದಿಂದ ಮುಕ್ತಿ, ಸಿಗುತ್ತೆ ಬಯಸಿದ ಕೆಲಸ

55
ಸಂಗಾತಿ ಆಯ್ಕೆ
Image Credit : Gemini AI

ಸಂಗಾತಿ ಆಯ್ಕೆ

ಈ ವಿಷವರ್ತುಲದಿಂದ ಹೊರಬರಬೇಕೆಂದರೆ, ಮೊದಲು ನಿಮ್ಮ ಹಳೆಯ ಸಂಬಂಧಗಳನ್ನು ವಿಶ್ಲೇಷಣೆ ಮಾಡಿಕೊಳ್ಳಬೇಕು. ನೀವು ಎಂಥವರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೀರಿ, ಯಾವ ತಪ್ಪುಗಳು ಮತ್ತೆ ಮತ್ತೆ ಆಗ್ತಿವೆ ಅನ್ನೋದನ್ನು ಗುರುತಿಸಬೇಕು. ಅಗತ್ಯವಿದ್ದರೆ, ಸ್ನೇಹಿತರು ಅಥವಾ ಸೈಕಾಲಜಿಸ್ಟ್‌ಗಳ ಸಹಾಯ ತೆಗೆದುಕೊಳ್ಳಿ. ಎಲ್ಲಕ್ಕಿಂತ ಮುಖ್ಯವಾಗಿ, ಮೊದಲು ನಿಮ್ಮನ್ನು ನೀವು ಪ್ರೀತಿಸುವುದು, ಗೌರವಿಸುವುದನ್ನು ಕಲಿತಾಗ ಮಾತ್ರವೇ, ಸರಿಯಾದ ಸಂಗಾತಿಯನ್ನು ಆಯ್ಕೆ ಮಾಡುವ ಅವಕಾಶ ಸಿಗುತ್ತೆ ಅಂತ ಸೈಕಾಲಜಿ ತಜ್ಞರು ಸಲಹೆ ನೀಡುತ್ತಾರೆ.

ಇದನ್ನೂ ಓದಿ: ಸ್ವಾರ್ಥಕ್ಕೆ ಮಕ್ಕಳು ಮಾಡಿಕೊಳ್ಳೋ ಪರಂಪರೆ ಕೊನೆಯಾಗಲಿ- ರಶ್ಮಿಕಾ ಮಂದಣ್ಣ ಹೇಳಿದ್ದೇನು? ಚಪ್ಪಾಳೆ ಸುರಿಮಳೆ ಆಗಿದ್ಯಾಕೆ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಸಂಬಂಧಗಳು
ದಂಪತಿಗಳು

Latest Videos
Recommended Stories
Recommended image1
ಸ್ವಾರ್ಥಕ್ಕೆ ಮಕ್ಕಳು ಮಾಡಿಕೊಳ್ಳೋ ಪರಂಪರೆ ಕೊನೆಯಾಗಲಿ- ರಶ್ಮಿಕಾ ಮಂದಣ್ಣ ಹೇಳಿದ್ದೇನು? ಚಪ್ಪಾಳೆ ಸುರಿಮಳೆ ಆಗಿದ್ಯಾಕೆ
Recommended image2
ನನ್ನಂಥ ಗಂಡ ಬೇಕೆಂದ್ರೆ ಹೀಗೆ ಮಾಡಿ: ಫ್ಯಾನ್ಸ್​ಗೆ Amrthadhaare ಸಿಂಪಲ್​ ಸುನಿ ಬಿಗ್​ ಆಫರ್​
Recommended image3
ಏನಿಲ್ಲ, ಏನಿಲ್ಲ ಎನ್ನುತ್ತಲೇ ವೇದಿಕೆ ಮೇಲೆ ತಗ್ಲಾಕ್ಕೊಂಡ Bigg Boss ಸೂರಜ್​- ರಾಶಿಕಾ ಶೆಟ್ಟಿ: ಆಗಿದ್ದೇನು
Related Stories
Recommended image1
ನಿಮ್ಮ ಗಂಡ ಹೀಗ್ ಮಾಡುತ್ತಿದ್ದರೆ ಸಂಗಾತಿ ಆಯ್ಕೆಯಲ್ಲಿ ನೀವು ಫೇಲ್ ಎಂದರ್ಥ!
Recommended image2
Chanakya niti: ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಈ ತಪ್ಪು ಮಾಡಬೇಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved