MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Relationship
  • ನಿಮ್ಮ ಗಂಡ ಹೀಗ್ ಮಾಡುತ್ತಿದ್ದರೆ ಸಂಗಾತಿ ಆಯ್ಕೆಯಲ್ಲಿ ನೀವು ಫೇಲ್ ಎಂದರ್ಥ!

ನಿಮ್ಮ ಗಂಡ ಹೀಗ್ ಮಾಡುತ್ತಿದ್ದರೆ ಸಂಗಾತಿ ಆಯ್ಕೆಯಲ್ಲಿ ನೀವು ಫೇಲ್ ಎಂದರ್ಥ!

ಕೆಲವರು ಮದುವೆಯ ನಂತರವೂ ತಮ್ಮ ಕೆಲಸಕ್ಕಾಗಿ ಇತರರನ್ನು ಅವಲಂಬಿಸ್ತಾರೆ. ಅವರು ತಮ್ಮದೇ ಆದ ಕೆಲಸವನ್ನು ಸಹ ಮಾಡುವುದಿಲ್ಲ. ಅದಕ್ಕೂ ತಮ್ಮ ಸಂಗಾತಿಯ ಮೇಲೆ ಡಿಪೆಂಡ್ ಆಗಿರುತ್ತಾರೆ. ನಿಮ್ಮ ಪತಿ ಕೂಡ ಇದನ್ನೆಲ್ಲಾ ಮಾಡ್ತಾ ಇದ್ರೆ ತಿಳಿಯಿರಿ ನೀವು ಸರಿಯಾದ ವ್ಯಕ್ತಿಯನ್ನು ಮದ್ವೆಯಾಗಿಲ್ಲ ಎಂದು.

2 Min read
Suvarna News
Published : Mar 03 2023, 02:52 PM IST
Share this Photo Gallery
  • FB
  • TW
  • Linkdin
  • Whatsapp
17

ಪ್ರಬುದ್ಧತೆ ಅಥವಾ ಜವಾಬ್ದಾರಿ (responsibility) ಎಂಬುದು ಸಮಯಕ್ಕೆ ಸರಿಯಾಗಿ ಅರಿತುಕೊಂಡರೆ, ವ್ಯಕ್ತಿಯ ಜೀವನ ಯಶಸ್ವಿಯಾಗುತ್ತದೆ ಅನ್ನೋದು ನಿಜ.. ಅಂದಹಾಗೆ, ಜವಾಬ್ದಾರಿಯ ಬಗ್ಗೆ ಹೇಳೊದಾದ್ರೆ, ಅದು ಸಮಯದೊಂದಿಗೆ ಮಾತ್ರ ಬರುತ್ತದೆ. ಹುಡುಗಿಯರು ಈ ಎಲ್ಲಾ ವಿಷಯಗಳನ್ನು ಬಹಳ ಬೇಗ ಕಲಿತರೂ, ಹುಡುಗರು ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳುವುದು ಬಹಳ ಮುಖ್ಯವಾದರೂ, ಹೆಚ್ಚಿನವರು ಅದನ್ನು ಕಲಿಯಲು ಬಯಸೋದೆ ಇಲ್ಲ. ಏಕೆಂದರೆ ಮದುವೆಯ ನಂತರ, ಅವರ ಜವಾಬ್ದಾರಿ ತಕ್ಷಣ ದ್ವಿಗುಣಗೊಳ್ಳುತ್ತದೆ.  
 

27

ಕೆಲವು ಜನರು ಜವಾಬ್ದಾರಿಯುತರಾಗಲು ಯಾವುದೇ ವಿಶೇಷ ಪ್ರಯತ್ನಗಳನ್ನು ಮಾಡಬೇಕಾಗಿಲ್ಲ. ಆದರೆ ಎಲ್ಲರಿಗೂ ಹಾಗಲ್ಲ. ಕೆಲವು ಹುಡುಗರು ಮದುವೆ ನಂತರವೂ ಎಲ್ಲದಕ್ಕೂ ಇತರರನ್ನು ಅವಲಂಬಿಸುತ್ತಾರೆ. ಅವರು ತಮ್ಮ ಕೆಲಸವನ್ನು ಮಾಡಲು ಸೋಮಾರಿಗಳಾಗಿರುತ್ತಾರೆ. ನಿಮ್ಮ ಪತಿಯೂ ಈ ವರ್ಗಕ್ಕೆ ಸೇರುತ್ತಾರೆ ಎಂದು ನೀವು ಅನುಮಾನಿಸಿದರೆ, ನೀವು ಜವಾಬ್ದಾರಿಯೇ ಇಲ್ಲದ ವ್ಯಕ್ತಿಯನ್ನು ಮದುವೆಯಾಗಿದ್ದೀರಿ (married irresponsible person) ಅನ್ನೋದನ್ನು ಸೂಚಿಸುತ್ತೆ. ನಿಮ್ಮ ಪತಿಯೂ ಹೀಗೇನಾ? 
 

37
ঘর পরিষ্কার করুন

ঘর পরিষ্কার করুন

ಮನೆಕೆಲಸಗಳಲ್ಲಿ ಸಹಾಯ ಮಾಡದೇ ಇರೋದು (not helping in household)
ಅತ್ತೆ-ಮಾವಂದಿರು ಮನೆಯನ್ನು ನೋಡಿಕೊಳ್ಳಲು ಒಟ್ಟಿಗೆ ಕೆಲಸ ಮಾಡಿದರೆ. ಜೊತೆಗೆ ಮನೆಕೆಲಸಗಳಲ್ಲಿ ಅವರು ನಿಮಗೆ ಸಹಾಯ ಮಾಡುತ್ತಾರೆ ಎಂದಾದರೆ ಒಳ್ಳೆಯದೇ. ಆದರೆ ನಿಮ್ಮ ಪತಿ ಹಾಗೆ ಮಾಡದಿದ್ದರೆ, ಅವರು ಇನ್ನೂ ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡಿಲ್ಲ ಎಂದು ಅರ್ಥಮಾಡಿಕೊಳ್ಳಿ.  

47

ತಡವಾಗಿ ಮನೆಗೆ ಬರೋದು (late coming)
ಕೆಲವೊಮ್ಮೆ ಕೆಲಸದಿಂದ ತಡವಾಗಿ ಬರುವುದು ತುಂಬಾ ಸಾಮಾನ್ಯವಾಗಿದೆ. ಆದರೆ ನಿಮ್ಮ ಪತಿ ಯಾವಾಗಲೂ ತಡವಾಗಿ ಬಂದರೆ ಮತ್ತು ಕಾರ್ಯಕ್ರಮಕ್ಕೆ ಸಮಯಕ್ಕೆ ಸರಿಯಾಗಿ ಬರದಿದ್ದರೆ, ಅವರು ಜವಾಬ್ದಾರಿ ಇಲ್ಲದ ವ್ಯಕ್ತಿ ಅನ್ನೋದು ತಿಳಿಯಿರಿ. ಅಂತಹ ವ್ಯಕ್ತಿಯೊಂದಿಗಿನ ನಿಮ್ಮ ಜೀವನವು ಅರ್ಥಹೀನವಾಗಿದೆ.

57

ಪ್ರಾಮಿಸ್ ಮುರಿಯುವುದು (break the promise)
ಪ್ರಾಮಿಸ್ ಮುರಿಯುವುದು ಅವಮಾನಕರ ಮಾತ್ರವಲ್ಲ, ಅದು ಇತರರಿಗೂ ನೋವುಂಟು ಮಾಡುತ್ತದೆ. ನಿಮ್ಮ ಪತಿ ನಿಮಗೆ ಭರವಸೆಗಳನ್ನು ನೀಡುತ್ತಲೇ ಇದ್ದರೆ, ಆದರೆ ಕೆಲವು ಸೆಕೆಂಡುಗಳ ನಂತರ ನಿಮ್ಮ ಬಗ್ಗೆ ಅವರ ಮನೋಭಾವವು ಬದಲಾಗುತ್ತಿದ್ದರೆ, ಎಲ್ಲಾ ಪ್ರಾಮೀಸ್ ಮುರಿದರೆ, ಆ ವ್ಯಕ್ತಿ ನಿಮ್ಮ ನಂಬಿಕೆಗೆ ಅರ್ಹನಲ್ಲ.

67

ದುಂದು ವೆಚ್ಚ (wasting money)
ಮದುವೆಯ ನಂತರ, ಪತಿ ಆರ್ಥಿಕತೆಯನ್ನು ಚೆನ್ನಾಗಿ ನಿರ್ವಹಿಸಬೇಕು. ಆದರೆ ನಿಮ್ಮ ಪತಿ ದುಂದು ಬೆಚ್ಚ ಮಾಡುತ್ತಿದ್ದು ಮತ್ತು ಭವಿಷ್ಯಕ್ಕಾಗಿ ಯಾವುದೇ ಉಳಿತಾಯವನ್ನು ಮಾಡದಿದ್ದರೆ, ನಿಮ್ಮ ಭವಿಷ್ಯವು ನಿಜವಾಗಿಯೂ ಅಪಾಯದಲ್ಲಿದೆ. ಅನಾರೋಗ್ಯಕ್ಕೆ ತುತ್ತಾದಾಗ ಅಥವಾ ನಿವೃತ್ತಿಯ ನಂತರ ಮನೆಯನ್ನು ನಡೆಸಲು ಹಣ ಬಹಳ ಮುಖ್ಯ. ಇದರಲ್ಲಿ, ಹೆಂಡತಿ ಮಾತ್ರವಲ್ಲದೆ ಪತಿ ಕೂಡ ಸಾಕಷ್ಟು ಕೊಡುಗೆ ನೀಡಬೇಕು. ನಿಮ್ಮ ಪತಿ ಉಳಿಸದಿದ್ದರೆ, ಅದು ಅವರ ಬೇಜಾವಾಬ್ಧಾರಿಯ ಸಂಕೇತವಾಗಿದೆ.


 

77

ನೀವೇ ಎಲ್ಲವನ್ನೂ ಮಾಡಬೇಕು (you have to do everything)
ಹೆಂಡತಿ ತನ್ನ ಗಂಡನಿಗಾಗಿ ಎಲ್ಲವನ್ನೂ ಮಾಡಲು ಸಿದ್ಧಳಾಗಿದ್ದಾಳೆ. ಆದರೆ ಪ್ರತಿಯಾಗಿ ಪತಿ ಅದೇ ರೀತಿ ಅವಳನ್ನು ನೋಡಿಕೊಳ್ಳದಿದ್ದರೆ, ಯಾವುದೇ ಹೆಂಡತಿ ಅದನ್ನು ಇಷ್ಟಪಡುವುದಿಲ್ಲ. ನಿಮ್ಮ ಪತಿ ಕೂಡ ನಿಮ್ಮ ಜೀವನದಲ್ಲಿ ಯಾವುದೇ ಕೊಡುಗೆ ನೀಡದಿದ್ದರೆ, ಅವರು ಬೇಜವಾಬ್ದಾರಿಯುತ ವ್ಯಕ್ತಿ.

About the Author

SN
Suvarna News
ದಂಪತಿಗಳು
ಮದುವೆ
ಸಂಬಂಧಗಳು

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved