- Home
- Life
- Relationship
- ಎಪಿ ಧಿಲ್ಲೋನ್ ಕನ್ಸರ್ಟ್ ವೈರಲ್ ವೀಡಿಯೋ ಎಫೆಕ್ಟ್: ಟಾಕ್ಸಿಕ್ ನಟಿ ತಾರಾ ಸುತಾರಿಯಾ ವೀರ್ ಪಹಾರಿಯಾ ಬ್ರೇಕಪ್
ಎಪಿ ಧಿಲ್ಲೋನ್ ಕನ್ಸರ್ಟ್ ವೈರಲ್ ವೀಡಿಯೋ ಎಫೆಕ್ಟ್: ಟಾಕ್ಸಿಕ್ ನಟಿ ತಾರಾ ಸುತಾರಿಯಾ ವೀರ್ ಪಹಾರಿಯಾ ಬ್ರೇಕಪ್
ಬಾಲಿವುಡ್ ತಾರಾ ಜೋಡಿ ತಾರಾ ಸುತಾರಿಯಾ ಮತ್ತು ವೀರ್ ಪಹರಿಯಾ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಎರಡು ತಿಂಗಳ ಹಿಂದಷ್ಟೇ ತಮ್ಮ ಪ್ರೇಮವನ್ನು ಬಹಿರಂಗಪಡಿಸಿದ್ದ ಈ ಜೋಡಿಯ ಬೇರ್ಪಡಿಕೆಗೆ, ಎಪಿ ಧಿಲ್ಲೋನ್ ಮ್ಯೂಸಿಕ್ ಕನ್ಸರ್ಟ್‌ನಲ್ಲಿ ನಡೆದ ಘಟನೆಯೇ ಕಾರಣ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.

ತಾರಾ ಸುತಾರಿಯಾ ಹಾಗೂ ವೀರ್ ಪಹರಿಯಾ ಮಧ್ಯೆ ಬ್ರೇಕಪ್
ಎಪಿ ಧಿಲ್ಲೋನ್ ಮ್ಯೂಸಿಕ್ ಕನ್ಸರ್ಟ್ ಬಳಿಕ ಸಾಕಷ್ಟು ಸುದ್ದಿಯಾಗಿದ್ದ ಬಾಲಿವುಡ್ ತಾರಾ ಜೋಡಿ ತಾರಾ ಸುತಾರಿಯಾ ಹಾಗೂ ವೀರ್ ಪಹರಿಯಾ ಮಧ್ಯೆ ಬ್ರೇಕಪ್ ಆಗಿದೆ ಎಂದು ವರದಿಯಾಗಿದೆ. ಈ ಸುದ್ದಿ ವೀರ್ ಹಾಗೂ ತಾರಾ ಅಭಿಮಾನಿಗಳಿಗೆ ಆಘಾತವುಂಟು ಮಾಡಿದೆ. ಏಕೆಂದರೆ ಈ ಜೋಡಿ ಎರಡು ತಿಂಗಳ ಹಿಂದಷ್ಟೇ ತಮ್ಮ ಪ್ರೇಮವನ್ನು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದರು. ಆದರೆ ಫಿಲ್ಮ್‌ಫೇರ್ ವರದಿಯ ಪ್ರಕಾರ ಈ ಜೋಡಿ ದೂರಾಗಲು ನಿರ್ಧರಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ. ಆದರೆ ಇಬ್ಬರೂ ಈ ಸುದ್ದಿಯನ್ನು ದೃಢಪಡಿಸಿಲ್ಲ, ಜೊತೆಗೆ ನಿರಾಕರಿಸಿಯೂ ಇಲ್ಲ.
ಪ್ರಿಯಕರ ವೀರ್ ಪಹರಿಯಾ ಮುಂದೆಯೇ ಗಾಯಕನಿಗೆ ಮುತ್ತಿಟ್ಟಿದ್ದ ನಟಿ
ಇತ್ತೀಚೆಗೆ ತಾರಾ ಮತ್ತು ವೀರ್ ಗಾಯಕ ಎಪಿ ಧಿಲ್ಲೋನ್ ಅವರ ಮುಂಬೈ ಮ್ಯೂಸಿಕ್ ಕನ್ಸರ್ಟ್ ವೇಳೆ ಬೇರೆಯದೇ ಕಾರಣಕ್ಕೆ ಸುದ್ದಿಯಾಗಿದ್ದರು. ಈ ಕನ್ಸರ್ಟ್‌ನಲ್ಲಿ ಗಾಯಕ ಎಪಿ ಧಿಲ್ಲೋನ್‌ಗೆ ಟಾಕ್ಸಿಕ್ ನಟಿ ತಾರಾ ಸುತಾರಿಯಾ ತನ್ನ ಪ್ರಿಯಕರ ವೀರ್ ಪಹರಿಯಾ ಮುಂದೆಯೇ ಮುತ್ತಿಕ್ಕಿದ್ದರು. ಇದನ್ನು ವೀರ್ ಪಹರಿಯಾ ಬಹಳ ಆತಂಕದಿಂದ ನೋಡುತ್ತಿರುವ ವೀಡಿಯೋಗಳು ನಂತರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಅನೇಕರು ತಾರಾ ಸುತಾರಿಯಾ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದರು.
ಗಾಸಿಪ್‌ಗೆ ತೆರೆ ಎಳೆದಿದ್ದ ಜೋಡಿ
ಆದರೆ ಈ ವೀಡಿಯೋಗೆ ಇಬ್ಬರು ಸ್ಪಷ್ಟನೆ ನೀಡಿದ್ದರು. ಇದೊಂದು ಸ್ನೇಹಪರ ನಡವಳಿಕೆ ಎಂದು ತಾರಾ ಸಮರ್ಥಿಸಿಕೊಂಡಿದ್ದರು. ಅಲ್ಲದೇ ಇದೊಂದು ಸುಳ್ಳು ಪ್ರಚಾರ ಎಂದು ಅವರು ಆರೋಪಿಸಿದ್ದರು. ಈ ವೈರಲ್ ವೀಡಿಯೋವನ್ನು ಮಿಸ್ ಲೀಡ್ ಮಾಡಲಾಗಿದೆ ಎಂದು ವೀರ್ ಕೂಡ ಹೇಳಿದ್ದರು. ನಂತರ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಓರಿ ಮಾಡಿದ ವೀಡಿಯೋದಲ್ಲಿ ವೀರ್ ಪಹರಿಯಾ ಹಾಗೂ ತಾರಾ ಎಪಿ ಧಿಲ್ಲನ್‌ಗೆ ಪ್ರೋತ್ಸಾಹಿಸುತ್ತಿರುವುದು ಸೆರೆ ಆಗಿತ್ತು.
ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ ಬ್ರೇಕಪ್ ನ್ಯೂಸ್
ಆದರೆ ಆಮೇಲೇನಾಯ್ತೋ ಗೊತ್ತಿಲ್ಲ. ಈ ಜೋಡಿ ಪರಸ್ಪರ ದೂರಾಗಿದ್ದಾರೆ ಎಂಬ ಸುದ್ಧಿ ಬಂದಿದೆ. ಇತ್ತ ಈ ಜೋಡಿಗೆ ಬ್ರೇಕಪ್ ಆಗಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಎಪಿ ಧಿಲ್ಲೋನ್ ಇಂಟರ್‌ನೆಟ್‌ನಲ್ಲಿ ಭಾರಿ ಟ್ರೆಂಡಿಂಗ್‌ನಲ್ಲಿದ್ದಾರೆ. ತಮ್ಮ ಮ್ಯೂಸಿಕ್ ಕನ್ಸರ್ಟ್‌ನಲ್ಲಿ ಈ ಟಾಕ್ಸಿಕ್ ನಟಿಯನ್ನು ತಬ್ಬಿಕೊಂಡು ಧಿಲ್ಲೋನ್ ಮುತ್ತಿಟ್ಟಿದೆ ಇದಕ್ಕೆ ಕಾರಣ ಎಂದು ನೆಟ್ಟಿಗರು ಕಾಮೆಂಟ್ ಟ್ರೋಲ್ ಮಾಡ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಎಪಿ ಧಿಲ್ಲೋನ್ ಟ್ರೆಂಡಿಂಗ್
ತಾರಾ ಸುತಾರಿಯಾ ತಮ್ಮ ಹಾಗೂ ವೀರ್ ಜೊತೆಗಿನ ಸಂಬಂಧದ ಬಗ್ಗೆ ಹಬ್ಬಿದ ನೆಗೆಟಿವ್ ಸುದ್ದಿಗಳನ್ನು ಈ ಹಿಂದೆ ತಿರಸ್ಕರಿಸಿದ್ದರೂ, ಎಪಿ ಧಿಲ್ಲೋನ್ ಅವರ ಮ್ಯೂಸಿಕ್ ಕನ್ಸರ್ಟ್‌ನಲ್ಲಿ ನಡೆದ ಘಟನೆಯೇ ಈ ಬ್ರೇಕಪ್‌ಗೆ ಕಾರಣವಾಗಿದೆ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.
ಎಪಿ ಧಿಲ್ಲೋನ್‌ನಿಂದ ಬ್ರೇಕಪ್ ಆಯ್ತು ಅಂತಿದ್ದಾರೆ ನೆಟ್ಟಿಗರು
ಮುಂಬೈ ಶೋನಲ್ಲಿ ಅವರ ವರ್ತನೆಗಳು ತಾರಾ ಮತ್ತು ವೀರ್ ಅವರ ಬೇರ್ಪಡಿಕೆಗೆ ಕಾರಣವಾಯಿತೆ ಎಂದು ನೆಟಿಜನ್‌ಗಳು ಪ್ರಶ್ನಿಸುತ್ತಿದ್ದಾರೆ. ವದಂತಿಗಳು ಬೆಳೆಯುತ್ತಲೇ ಇದ್ದವು. ಒತ್ತಡ ಹೆಚ್ಚಾಯಿತು. ಸಂಬಂಧ ಕೊನೆಗೊಂಡಿತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ತಾರಾ ಧಿಲ್ಲೋನ್ ಜೊತೆ ನೃತ್ಯ ಮಾಡಲು ಪ್ರಾರಂಭಿಸಿದರು ಮತ್ತು ಅವನಿಗೆ ಮುತ್ತಿಟ್ಟರು. ಅವರ ಸಂಬಂಧ ಮುರಿದು ಬೀಳಲು ಇದೇ ಕಾರಣ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಎಪಿ ಧಿಲ್ಲೋನ್ ಅವರ ಸಂಗೀತ ಕಚೇರಿಯಲ್ಲಿ ಏನಾಯಿತು?
ವೀರ್ ಪಹರಿಯಾ ಮತ್ತು ಅವರ ಗೆಳತಿ ತಾರಾ ಸುತಾರಿಯಾ ಡಿಸೆಂಬರ್ 26, 2025 ರಂದು ಎಪಿ ಧಿಲ್ಲೋನ್ ಅವರ ಮುಂಬೈ ಸಂಗೀತ ಕಚೇರಿಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದರೂ, ಒಂದು ನಿರ್ದಿಷ್ಟ ಕ್ಲಿಪ್ ಎಲ್ಲರ ಗಮನ ಸೆಳೆಯಿತು. ಆ ವೀಡಿಯೊದಲ್ಲಿ, ಎಪಿ ಧಿಲ್ಲೋನ್ ತಾರಾ ಅವರನ್ನು ವೇದಿಕೆಗೆ ಕರೆಯುವುದನ್ನು ವೀರ್ ವೀಕ್ಷಿಸುತ್ತಿದ್ದರು. ಧಿಲ್ಲೋನ್ ವೇದಿಕೆಗೆ ಕರೆಯುತ್ತಿದ್ದಂತೆಸುಂದರವಾದ ಕಪ್ಪು ಉಡುಪನ್ನು ಧರಿಸಿದ್ದ ತಾರಾ ವೇದಿಕೆಗೆ ಬಂದರು ನಂತರ ಗಾಯಕ ಧಿಲ್ಲೋನ್ ಅವರನ್ನು ತಬ್ಬಿಕೊಂಡು ಅವರ ಕೆನ್ನೆಗಳಿಗೆ ಮುತ್ತಿಟ್ಟರು. ನಂತರ ವೀಡಿಯೊದಲ್ಲಿ, ಗಾಯಕ ತನ್ನ ಕೆಲವು ಹಿಟ್ ಹಾಡುಗಳನ್ನು ಪ್ರದರ್ಶಿಸುವಾಗ ತಾರಾ ಮತ್ತು ಎಪಿ ಧಿಲ್ಲೋನ್ ವೇದಿಕೆಯಲ್ಲಿ ಕುಣಿದಿದ್ದಾರೆ. ತಾರಾ ಕೂಡ ಎಪಿಯ ಭುಜಗಳ ಸುತ್ತಲೂ ತಮ್ಮ ತೋಳುಗಳನ್ನು ಹಾಕಿರುವುದು ವೀಡಿಯೋದಲ್ಲಿ ಕಂಡುಬಂದಿದ್ದರೆ ಇತ್ತ ವೀರ್ ಈ ದೃಶ್ಯವನ್ನು ಆತಂಕದಿಂದಲೇ ನೋಡುತ್ತಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

