ಸಾರ್ವಜನಿಕವಾಗಿಯೇ ತಾರಾ ಸುತಾರಿಯಾ ಈ ವರ್ತನೆ ಕಂಡು ವೀರ್ ಪಹಾರಿಯಾ ಬೆಚ್ಚಿಬಿದ್ದಿದ್ದಾರೆ. ಈ ಘಟನೆ ನಡೆದಾದ, ಒಬ್ಬರೇ ಏನೇನೋ ಗೊಣಗುತ್ತಾ ಆ ಕಡೆಯಿಂದ ಈ ಕಡೆ ಓಡಾಡಿದ್ದಾರೆ. ವೀರ್ ಪಹಾರಿಯಾ ಅವರ ಈ ಚಡಪಡಿಕೆ ಕ್ಯಾಮರಾ ಕಣ್ಣಿನಲ್ಲಿ ಸದ್ಯ ಸೆರೆಯಾಗಿದ್ದು, ಆ ವಿಡಿಯೋ ಸಖತ್ ವೈರಲ್ ಆಗಿದೆ.
ಏನಿದು ತಾರಾ ರಹಸ್ಯ?
ಈ ಜಗತ್ತಿನಲ್ಲ ಲವ್ ಮಾಡೋಕೆ ಬಹಳಷ್ಟು ಕಾರಣಗಳು ಇರುತ್ತವೆಯೇ? ಹೌದು ಎನ್ನುತ್ತಿವೆ ಇತ್ತೀಚೆಗೆ ನಡೆಯುತ್ತಿರುವ ಕೆಲವು ಘಟನೆಗಳು. ಯಾರು ಯಾವ ಉದ್ದೇಶಕ್ಕೆ ಯಾರನ್ನು ಲವ್ ಮಾಡ್ತಾರೋ ಅದು ಸ್ವತಃ ಅವರಿಗಷ್ಟೇ ಗೊತ್ತಿರುತ್ತೆ ಎನ್ನಬಹುದೇ? ಇಲ್ಲೊಂದು ಘಟನೆ ನೋಡಿದರೆ, ಅದೇನು ಹೇಳ್ಬೇಕು ಅಂತಾನೇ ತೋಚೋದಿಲ್ಲ.. ನೀವೇ ಹೇಳಿ ಎನ್ ಹೇಳ್ಬೇಕು ಇಂಥವ್ರಿಗೆ, ಇವ್ರು ಮಾಡಿರೋ ಕೆಲಸಕ್ಕೆ..?
ಇತ್ತೀಚೆಗೆ ಹೆಚ್ಚಾಗಿ ರಿಯಲ್ ಗಿಂತ ಹೆಚ್ಚಾಗಿ ರೀಲ್ ಲವ್ ಜಾಸ್ತಿ ಆಗ್ತಿದ್ಯಾ? ರೀಲ್‌ನಲ್ಲಿ ಚಿಗುರೊಡೆಯುವ ಪ್ರೀತಿ ಅಂದ್ರೆ ಸುಳ್ಳು ಅಂತೇನಿಲ್ಲ. ಹಲವರು ರೀಲ್ ಪ್ರೀತಿಯಲ್ಲಿ ಬಿದ್ದು ರಿಯಲ್ ಪ್ರೀತಿಸಿ ಮದುವೆ-ಮಕ್ಕಳು ಮಾಡಿಕೊಂಡು ಸುಖ-ಸಂಸಾರ ಮಾಡಿದವರು ಇದ್ದಾರೆ. ಆದರೂ ಈಗ ಕಾಲ ಬದಲಾಗಿದೆಯಾ? ಹೌದು ಅಂತೀರಾ ಇಲ್ಲ ಅಂತೀರಾ?
ಲವ್ ಹೊಸ ಅರ್ಥ ಪಡೆದುಕೊಂಡಿದೆಯಾ?
ಆದರೆ, ಒಂದು ಮಾತಂತೂ ಸತ್ಯ.. ಇಂದು ಪ್ರೀತಿ ತನ್ನ ನಿಜವಾದ ಅರ್ಥವನ್ನು ಕಳೆದುಕೊಂಡಿದೆ ಎನ್ನಬಹುದೇನೋ! ಪ್ರೀತಿಯನ್ನು ಅರ್ಥೈಸಿಕೊಳ್ಳುವ ರೀತಿ ಕೂಡ ಬದಲಾಗಿದೆ ಎನ್ನಬಹುದೇನೋ! ಈ ಮೊದಲು ಪ್ರೀತಿ ಅನ್ನೋದು ಎರಡು ಮನಸುಗಳ ಪಿಸು ಮಾತಾಗಿ ಮಾತ್ರ ಇತ್ತು.. ಆದರೆ ಈಗ ಅದು ಹಾಗೆ ಉಳಿದಿಲ್ಲ ಎನ್ನಬಹುದು. ಈ ಸೋಷಿಯಲ್ ಮೀಡಿಯಾ ಯುಗದಲ್ಲಿ ಲವ್ ಅನ್ನೋದು ಸಾರ್ವಜನಿಕ ಪ್ರದರ್ಶನವಾಗಿದೆ ಎನ್ನಬಹುದು.
ಇನ್ನು, ಸಿನಿಮಾರಂಗದಲ್ಲಿ ಅಂತೂ ಯಾರು ಯಾವಾಗ ಯಾರ ಜೊತೆ ಓಡಾಡುತ್ತಾರೆ, ಲವ್ ಮಾಡುತ್ತಾರೆ, ಬ್ರೀಕಪ್ ಮಾಡಿಕೊಳ್ಳುತ್ತಾರೆ ಅನ್ನೋದನ್ನು ಹೇಳೋದೇ ಕಷ್ಟ. ಇವತ್ತು ಯಾರದೋ ಜೊತೆಯಲ್ಲಿದ್ದವರು ಮರುದಿನ ಇನ್ಯಾರದ್ದೋ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇವತ್ತು ಯಾರಿಗೋ ಕಿಸ್ ಮಾಡಿ ನಾಳೆ ಇನ್ಯಾರದ್ದೂ ತುಟಿಗೆ ತುಟ್ಟಿ ಇಟ್ಟು ಮೊದಲಿನವರ ಬೇಸರಕ್ಕೆ ಕಾರಣವಾಗುತ್ತಾರೆ. ಇದೀಗ ಇಂಥಹುದೇ ಘಟನೆ ನಡೆದಿದ್ದು, ಅದನ್ನು ಮಾಡಿದ್ದು ಬೇರೆ ಯಾರೂ ಅಲ್ಲ, ನಟಿ ತಾರಾ ಸುತಾರಿಯಾ..!
ಕಾಯಾ ವಾಚಾ ಮನಸಾ ಪ್ರೀತಿಸುವುದಾಗಿ ಹೇಳಿ, ಬಾಯ್‌ಫ್ರೆಂಡ್ ಜೊತೆಗೇ ಈವೆಂಟ್‌ಗೆ ಬಂದು ಅಲ್ಲಿ ಸೆಲೆಬ್ರೆಟಿ ನೋಡಿ ಸಾರ್ವಜನಿಕವಾಗಿ ಮೈಮರೆತು ತಮ್ಮ ಸಂಗಾತಿಗೆ ಇರಿಸು ಮುರಿಸು ಉಂಟಾಗುವಂತೆ ಆ ತಾರೆಯ ತೋಳಿನ ತೆಕ್ಕೆಯಲ್ಲಿ ಬಂಧಿಯಾಗಿ ಆತನಿಗೆ ಕಿಸ್ ಕೊಟ್ಟಿದ್ದಾರೆ ನಟಿ ತಾರಾ ಸುತಾರಿಯಾ. ತಮ್ಮ ಗರ್ಲ್‌ಫ್ರೆಂಡ್ ವೇದಿಕೆ ಮೇಲೆ ಹೋಗಿ ಅಲ್ಲಿದ್ದ ಹುಡುಗ ಗಾಯಕನಿಗೆ ಕಿಸ್ ಕೊಡುವುದನ್ನು ನೋಡುತ್ತ ಮುಜುಗರಕ್ಕೆ ಒಳಗಾಗಿರುವವರು ತಾರಾ ಸುತಾರಿಯಾ (Tara Sutariya) ಬಾಯ್‌ಫ್ರೆಂಡ್ ವೀರ್ ಪಹಾರಿಯಾ (Veer Pahariya).
ನಟಿ ತಾರಾ ಸುತಾರಿಯಾ ಅವರು "ಸೂಡೆಂಟ್ ಆಫ್ ದಿ ಇಯರ್ 2" ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಚೆಲುವೆ. ಮರ್‌ಜಾವಾ, ತಡಪ್, ಹೀರೋಪಂತಿ 2 ಚಿತ್ರದಲ್ಲಿ ಕೂಡ ನಾಯಕಿ ಪಾತ್ರ ನಿರ್ವಹಿಸಿದ್ದ ತಾರಾ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರ ಮುಂಬರುವ ಚಿತ್ರ "ಟಾಕ್ಸಿಕ್"ನ ಮುಖ್ಯ ಪಾತ್ರಧಾರಿಗಳಲ್ಲಿ ಒಬ್ಬರು. ಚಿತ್ರರಂಗದಲ್ಲಿ ಮೂರು ಮತ್ತೊಂದು ಚಿತ್ರವನ್ನು ಮಾಡಿರುವ ಈ ತಾರಾ ಸುತಾರಿಯಾ ಮೊದಲಿಂದ ತಮ್ಮ ಚಿತ್ರಕ್ಕಿಂತ ತಮ್ಮ ವೈಯಕ್ತಿಕ ಬದುಕಿನ ವಿಚಾರದಿಂದ ಹೆಚ್ಚು ಸುದ್ದಿಯಾದವರು. ಇಂಥಾ ತಾರಾ ಸುತಾರಿಯಾ ಸದ್ಯ ತಮ್ಮ ಬಾಯ್‌ಫ್ರೆಂಡ್ ಎದುರಿನಲ್ಲಿಯೇ ಗಾಯಕ ಎಪಿ ಧಿಲ್ಲೋನ್‌ಗೆ ಕಿಸ್ ಮಾಡಿದ್ದಾರೆ. ಗಾಯಕನ ತೋಳ ತೆಕ್ಕೆಯಲ್ಲಿ ಬಂಧಿಯಾಗಿ ಮಿಂದಿದ್ದಾರೆ.
ಗಾಯಕ ಎ.ಪಿ.ಧಿಲ್ಲೋನ್ ಸದ್ಯ ಭಾರತದ ಪ್ರವಾಸದಲ್ಲಿದ್ದಾರೆ
ಇಂಡೋ-ಕೆನಡಿಯನ್ ಗಾಯಕ ಎ.ಪಿ.ಧಿಲ್ಲೋನ್ ಸದ್ಯ ಭಾರತದ ಪ್ರವಾಸದಲ್ಲಿದ್ದಾರೆ. ಮೊನ್ನೆ ಪುಣೆಯಲ್ಲಿ ಇವರ ಸಂಗೀತ ಸಂಜೆಯನ್ನು ಆಯೋಜಿಸಲಾಗಿತ್ತು. ಈ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ತಾರಾ ತಾವು ಮದುವೆಯಾಗುತ್ತಿರುವ ಹುಡುಗ ವೀರ್ ಪಹಾರಿಯಾ ಜೊತೆ ಭಾಗವಹಿಸಿದ್ದರು. ಈ ವೀರ್ ಪಹಾರಿಯಾ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್‌ಕುಮಾರ್ ಶಿಂಧೆ ಅವರ ಮೊಮ್ಮಗ. ತಾರಾ ಸುತಾರಿಯಾ ಅವರಿಗಿಂತ ಮೊದಲು ಈ ವೀರ್ ಅವರು ಸಾರಾ ಅಲಿ ಖಾನ್ ಜೊತೆ ಓಡಾಡಿಕೊಂಡಿದ್ದವರು. ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಅವರ ಹೃದಯ ಕದ್ದ ಶಿಖರ್ ಪಹಾರಿಯಾ ಅವರ ಸಹೋದರ ಕೂಡ ಹೌದು ಈ ವೀರ್ ಪಹಾರಿಯಾ.
ಸದ್ಯ ತಾರಾ ಸುತಾರಿಯಾ ಜೊತೆ ವೀರ್ ಪಹಾರಿಯಾ ಸಂಬಂಧದಲ್ಲಿದ್ದಾರೆ. ಈ ಬಾರಿ ತಮ್ಮ ರಿಲೇಷನ್ ವಿಚಾರದಲ್ಲಿ ಸೀರಿಯಸ್ ಆಗಿರುವ ವೀರ್ ಪಹಾರಿಯಾ, ತಾರಾ ಜೊತೆ ಮದುವೆಯಾಗುವ ಆಲೋಚನೆಯನ್ನು ಕೂಡ ಮಾಡಿದ್ದಾರೆ. ಹೀಗಿರುವಾಗ ತಾರಾ ಸುತಾರಿಯಾ ಸಮಸ್ತ ಸಂಗೀತ ಪ್ರೇಮಿಗಳ ಎದುರು, ಪಬ್ಲಿಕ್‌ನಲ್ಲಿ ತಾವು ಮದುವೆಯಾಗುತ್ತಿರುವ ಹುಡುಗ ವೀರ್ ಪಹಾರಿಯಾ ಎದುರೇ ಗಾಯಕ ಎ.ಪಿ. ಧಿಲ್ಲೋನ್ ಜೊತೆ ಭಾರೀ ಕ್ಲೋಸ್ ಆಗಿ ಕಾಣಿಸಿಕೊಂಡಿದ್ದಾರೆ, ಕಿಸ್ ಕೂಡ ಮಾಡಿದ್ದಾರೆ.
ಸಾರ್ವಜನಿಕವಾಗಿಯೇ ತಾರಾ ಸುತಾರಿಯಾ ಅವರ ಈ ವರ್ತನೆ ಕಂಡು ವೀರ್ ಪಹಾರಿಯಾ ಬೆಚ್ಚಿಬಿದ್ದಿದ್ದಾರೆ. ಈ ಘಟನೆ ನಡೆದಾದ, ಒಬ್ಬರೇ ಏನೇನೋ ಗೊಣಗುತ್ತಾ ಆ ಕಡೆಯಿಂದ ಈ ಕಡೆ ಓಡಾಡಿದ್ದಾರೆ. ವೀರ್ ಪಹಾರಿಯಾ ಅವರ ಈ ಚಡಪಡಿಕೆ ಕ್ಯಾಮರಾ ಕಣ್ಣಿನಲ್ಲಿ ಸದ್ಯ ಸೆರೆಯಾಗಿದ್ದು, ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಈ ವಿಡಿಯೋ ನೋಡುತ್ತಿದ್ದಂತೆ, ಕೆಲವರು ನಟಿ ತಾರಾ ಸುತಾರಿಯಾ ಅವರನ್ನು ಈ ಘಟನೆ ಉಲ್ಲೇಖಿಸಿ ಬೈಯ್ದಿದ್ದಾರೆ. ಆ ಕ್ಷಣಕ್ಕೆ ವೀರ್ ಪಹಾರಿಯಾ ಪರಿಸ್ಥಿತಿಯನ್ನು ಕಂಡು ಮರುಗಿದ್ದಾರೆ. ಈ ಹಿಂದೊಮ್ಮೆ ಇದೇ ಎ.ಪಿ. ಧಿಲ್ಲೋನ್ ಜೊತೆ ತಾರಾ ಸುತಾರಿಯಾ ರೆಸ್ಟೋರೆಂಟ್ ಒಂದರಲ್ಲಿ ಕೂಡ ಕ್ಯಾಮರಾ ಕಣ್ಣಿನಲ್ಲಿ ಸಿಕ್ಕಿಬಿದ್ದಿದ್ದರು. ಆಗಲೇ ಈ ಇಬ್ಬರೂ ಪ್ರೀತಿಯಲ್ಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಇದಾದ ಕೆಲವೇ ದಿನಗಳಲ್ಲಿ ತಾರಾ ಸುತಾರಿಯಾ ಬದುಕಿನಲ್ಲಿ ವೀರ್ ಪಹಾರಿಯಾ ರಂಗಪ್ರವೇಶ ಆಯ್ತು. ಈಗ ಈ ವಿಡಿಯೋ ವೈರಲ್ ಆಗಿದೆ. ಹಾಗಿದ್ದರೆ ನಿಜವಾಗಿಯೂ ನಟಿ ತಾರಾ ಸುತಾರಿಯಾ ಯಾರ ಲವ್‌ನಲ್ಲಿ ಬಿದ್ದಿದ್ದಾರೆ? ಯಾರಿಗೆ ಮೋಸ ಮಾಡ್ತಿದ್ದಾರೆ? ಉತ್ತರವನ್ನು ಅವರೇ ಹೇಳಬೇಕು..


