- Home
- Life
- Relationship
- ವರ್ಜಿನ್ ಹೆಣ್ಣುಮಗಳ ಮೌನವೇ ಮದುವೆಗೆ ಸಮ್ಮತಿ, ಅಫ್ಘಾನ್‌ನಲ್ಲಿ ಬಾಲ್ಯ ವಿವಾಹಕ್ಕೆ ಕಾನೂನು ಜಾರಿ
ವರ್ಜಿನ್ ಹೆಣ್ಣುಮಗಳ ಮೌನವೇ ಮದುವೆಗೆ ಸಮ್ಮತಿ, ಅಫ್ಘಾನ್‌ನಲ್ಲಿ ಬಾಲ್ಯ ವಿವಾಹಕ್ಕೆ ಕಾನೂನು ಜಾರಿ
ಏನೂ ತಿಳಿಯದ ಅಪ್ರಾಪ್ತ ಹೆಣ್ಣುಮಗು ಮೌನವಾಗಿದ್ದರೆ ಅದು ಸಮ್ಮತಿ ಎಂದು ಪರಿಗಣಿಸಿ ಮದುವೆ ಮಾಡುವ ಬಾಲ್ಯ ವಿವಾದ ಕಾನೂನು ಅಫ್ಘಾನಿಸ್ತಾನದಲ್ಲಿ ಜಾರಿಯಾಗಿದೆ. ಇದು ವಿಚ್ಚೇದಿತ ಅಥವಾ ಮದುವೆಯಾಗಿರುವ ಮಹಿಳೆಯರಿಗೆ ಅನ್ವಯವಾಗಲ್ಲ.

ಮೌನ ಸಮ್ಮತಿ ಲಕ್ಷಣಂ
ಆಫ್ಘಾನಿಸ್ತಾನದಲ್ಲಿ ಮೊದಲೇ ಮಹಿಳೆಯರು, ಹೆಣ್ಣುಮಕ್ಕಳ ಪರಿಸ್ಥಿತಿ ಶೋಚನೀಯವಾಗಿತ್ತು. ತಾಲೀಬಾನ್ ಸರ್ಕಾರ ಬಂದ ಬಳಿಕ ಮತ್ತಷ್ಟು ಹದಗೆಟ್ಟಿದೆ. ಶಿಕ್ಷಣ ಇಲ್ಲ, ಹೊರಗೆ ಹೋಗುವಂತಿಲ್ಲ, ಸ್ವಾತಂತ್ರ್ಯವಿಲ್ಲ ಸೇರಿದಂತೆ ಹಲವು ಕಠಿಣ ನಿಯಮಗಳು ಜಾರಿಯಲ್ಲಿದೆ. ಇದೀಗ ತಾಲೀಬಾನ್ ಸರ್ಕಾರ ಕೌಟಂಬಿಕ ಕಾನೂನು ಆದೇಶ ಹೊರಡಿಸಿದೆ. ಈ ಆದೇಶದ ಪ್ರಕಾರ ಪ್ರಯಾಕ್ಕೆ ಬಂದ ಹೆಣ್ಣುಮಗಳು ಮೌನವೇ ಮದುವೆಗೆ ಸಮ್ಮತಿ ಎಂಬ ಕಾನೂನು ತರಲಾಗಿದೆ.

ವಯಸ್ಸಿಗೆ ಬಂದರೆ ಸಾಕು ಮದುವೆಗೆ ಒಕೆ
ತಾಲೀಬಾನ್ ಸರ್ಕಾರ ಇದೀಗ ವಿವಾದಿತ ಬಾಲ್ಯವಿವಾಹ ಕಾನೂನು ಜಾರಿಗೆ ತಂದಿದೆ. ಈ ಕಾನೂನು ಪ್ರಕಾರ ಮದುವೆಯಾಗಲು ಹೆಣ್ಣುಮಕ್ಕಳು ( (Virgin Girl) ) ವಯಸ್ಸಿಗೆ ಬಂದರೆ ಸಾಕು, 18 ವರ್ಷ ತುಂಬಬೇಕು ಎಂದಿಲ್ಲ. ಇಷ್ಟೇ ಅಲ್ಲ ಈ ಹೆಣ್ಣುಮಕ್ಕಳು ಈ ವರ ಒಪ್ಪಿಗೆಯಾ, ನಿನಗೆ ಮದುವೆ ಮಾಡಿಸುತ್ತಿದ್ದೇವೆ ಎಂದೆಲ್ಲಾ ಕೇಳಿದಾಗ ಮೌನವಾಗಿದ್ದರೆ ಸಾಕು ಅದುವೇ ಸಮ್ಮತಿ ಎಂದು ಪರಿಗಣಿಸುವ ಕಾನೂನು ಇದು.
ಅಪ್ರಾಪ್ತ ಹೆಣ್ಣುಮಕ್ಕಳಿಗೆ ಮದುವೆ ಕಾನೂನು ಬದ್ಧ
ತಾಲೀಬಾನ್ ನಾಯಕ ಹಿಬತುಲ್ಲಾ ಅಖುಂದ್ಜಾದಾ ಹೊಸ ಆದೇಶ ಹೊರಡಿಸಿ ಈ ಕಾನೂನು ಜಾರಿಗೆ ತಂದಿದ್ದರೆ. 31 ವಿಧಿಗಳಿರುವ ಹೊಸ ಕಾನೂನು ಜಾರಿಗೆ ಬಂದಿದೆ. ಅಪ್ರಾಪ್ತ ಹೆಣ್ಣುಮಕ್ಕಳ ಮದುವೆ ಕೆಲ ನಿಬಂಧನೆಗಳೊಂದಿಗೆ ಕಾನೂನು ಬದ್ಧ ಮಾಡಲಾಗಿದೆ. ಅಂದರೆ ಅಪ್ರಾಪ್ತ ಹೆಣ್ಣುಮಕ್ಕಳ ಮದುವೆ ಅಧಿಕಾರವನ್ನು ಅವರ ಪೋಷಕರಿಗೆ ನೀಡಲಾಗಿದೆ. ಪೋಷಕರು ನಿರ್ಧರಿಸಿದರೆ ಅಪ್ರಾಪ್ತ ಹೆಣ್ಣುಮಕ್ಕಳಿಗೆ ಮದುವೆ ಮಾಡಬಹುದು.
ಪೋಷಕರು, ಅಜ್ಜನಿಗೆ ಪರಮಾಧಿಕಾರ
ಅಪ್ರಾಪ್ತ ಹೆಣ್ಣುಮಗು ಮದುವೆ, ಸಂಸಾರದ ಏನೆಂದು ಗೊತ್ತಿಲ್ಲದೆ, ಉತ್ತರ ಹೇಳಲು ಆಗದೆ ಮೌನವಾಗಿದ್ದರೆ ಆಕೆಗೆ ಮದುವೆಗೆ ಸಮ್ಮತಿ ಇದೆ ಎಂದು ಪರಿಗಣಿಸಲಾಗುತ್ತದೆ. ಇನ್ನು ಪೋಷಕರು ಅಥವಾ ಹೆಣ್ಣುಮಗುವಿನ ಅಜ್ಜನಿಗೆ ಪರಮ ಅಧಿಕಾರವಿದೆ. ಮತ್ತೊಂದು ವಿಶೇಷತೆ ಅಂದರೆ ಪೋಷಕರು ಅಥವಾ ಅಜ್ಜ ಹೊರತುಪಡಿಸಿ ಇನ್ಯಾರೆ ಹೆಣ್ಣುಮಗುವಿನ ಮಜದುವೆ ಮಾಡಿದರೆ ಹೆಣ್ಣುಮಗು ವಯಸ್ಸಿಗೆ ಬಂದ ಬಳಿಕ ಆ ಮದುವೆಯನ್ನು ರದ್ದುಪಡಿಸಲು ಅವಕಾಶವಿದೆ.
ಮದುವೆಯಾದ ಮಹಿಳೆಯರಿಗೆ ಅನ್ವಯಿಸಲ್ಲ
ಮೌನಂ ಸಮ್ಮತಿ ಲಕ್ಷಣಂ ಸೇರಿದಂತೆ ಇತರ ಮದುವೆ ನಿಯಮಗಳು ಮದುವೆಯಾಗಿರುವ, ವಿಚ್ಚೇದಿತ ಮಹಿಳೆಯರಿಗೆ ಅನ್ವಯವಾಗುವುದಿಲ್ಲ. ಜೊತೆಗೆ ಹುಡುಗರಿಗೂ ಅನ್ವಯವಾಗುವುದಿಲ್ಲ. ಒಂದು ವೇಳೆ ಪೋಷಕರ ದುರಾಸೆ, ಮಾನಸಿಕ ಅಸ್ವಸ್ಥರಾಗಿದ್ದರೆ ಅಂತಹ ಮದುವೆಯನ್ನು ತಾಲೀಬಾನ್ ಕೋರ್ಟ್ ರದ್ದುಗೊಳಿಸಲು ಸಾಧ್ಯವಿದೆ.
ಮಾನವ ಹಕ್ಕುಗಳಿಂದ ತೀವ್ರ ಆಕ್ಷೇಪ
ಆಫ್ಘಾನಿಸ್ತಾನದ ತಾಲೀಬಾನ್ ಸರ್ಕಾರದ ಈ ಕಾನೂನಿಗೆ ಮಾನವ ಹಕ್ಕುಗಳಿಂದ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಹಲವು ಬಡಕುಟುಂಬಗಳು ಸಾಲ ತೀರಿಸಲು, ಹಣಕ್ಕಾಗಿ ಅಪ್ರಾಪ್ತ ಹೆಣ್ಣುಮಕ್ಕಳನ್ನು ಮದುವೆ ಮಾಡಿಸುತ್ತಿದ್ದಾರೆ. ಬಳಿಕ ಹೆಣ್ಣುಮಕ್ಕಳನ್ನು ಪಾಡು ಹೇಳತೀರದು. ಇದೀಗ ಕಾನೂನು ಬದ್ಧಗೊಳಿಸಿದರೆ ಘೋರ ದುರಂತ ನಡೆಯಲಿದೆ ಎಂದು ಎಚ್ಚರಿಕೆ ನೀಡಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

