- Home
- Life
- Relationship
- ಅಜ್ಜಿ ಹೆಸ್ರೂ ಅಲ್ಲ, ಏನೂ ಅಲ್ಲ: ಮಗಳಿಗೆ ಶಾರದಾ ಹೆಸರು ಇಟ್ಟಿರುವ ಹಿಂದಿನ ಕುತೂಹಲ ತೆರೆದಿಟ್ಟ ನಟಿ Neha Gowda
ಅಜ್ಜಿ ಹೆಸ್ರೂ ಅಲ್ಲ, ಏನೂ ಅಲ್ಲ: ಮಗಳಿಗೆ ಶಾರದಾ ಹೆಸರು ಇಟ್ಟಿರುವ ಹಿಂದಿನ ಕುತೂಹಲ ತೆರೆದಿಟ್ಟ ನಟಿ Neha Gowda
'ಲಕ್ಷ್ಮೀ ಬಾರಮ್ಮ' ಖ್ಯಾತಿಯ ನಟಿ ನೇಹಾ ಗೌಡ ತಮ್ಮ ಮಗಳಿಗೆ 'ಶಾರದಾ' ಎಂದು ಹೆಸರಿಟ್ಟಿದ್ದಾರೆ. ಈ ಹಳೆಯ ಹೆಸರನ್ನು ಆಯ್ಕೆ ಮಾಡಿದ್ದೇಕೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ತനിക്ക് ಸಾಂಪ್ರದಾಯಿಕ ಹೆಸರು ಇಷ್ಟ ಮತ್ತು 'ಶಾರದಾ' ಎಂದು ಕರೆಯುವಾಗ ಖುಷಿಯಾಗುತ್ತದೆ ಎಂದು ಕಾರಣವನ್ನು ಬಹಿರಂಗಪಡಿಸಿದ್ದಾರೆ

ಲಕ್ಷ್ಮೀ ಬಾರಮ್ಮ ಖ್ಯಾತಿಯ ನೇಹಾ ಗೌಡ
'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಖ್ಯಾತಿಯ ನಟಿ ನೇಹಾ ಗೌಡ ಮತ್ತು ಪತಿ ಚಂದನ್ ಗೌಡ ಅವರೀಗ ಒಂದು ವರ್ಷ ಪುಟಾಣಿ ಮಗಳ ಅಪ್ಪ- ಅಮ್ಮ. ನೇಹಾ ಗೌಡ ಅವರ ಮಗಳಿಗೆ ನಾಮಕರಣ ಮಾಡಿದ್ದಾಗಿನಿಂದಲೂ ಅದರ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಆಗುತ್ತಲೇ ಇದೆ.

ಚಿತ್ರ ವಿಚಿತ್ರ ಹೆಸರುಗಳು
ಅಷ್ಟಕ್ಕೂ ಈಗ ಹುಟ್ಟುವ ಮಕ್ಕಳಿಗೆ ಅದರಲ್ಲಿಯೂ ಸೆಲೆಬ್ರಿಟಿಗಳು ತಮ್ಮ ಮಕ್ಕಳಿಗೆ ಚಿತ್ರ-ವಿಚಿತ್ರ ಹೆಸರು ಇಡುವುದು ಇದೆ. ಸೆಲೆಬ್ರಿಟಿಗಳನ್ನೇ ಫಾಲೋ ಮಾಡುವ ಜನರು ಕೂಡ ಅರ್ಥವೇ ಇಲ್ಲದ, ಸುಲಭದಲ್ಲಿ ಹೇಳಲಿಕ್ಕೂ ಬಾರದ ಹೆಸರುಗಳನ್ನು ಇಡುವುದು ಮಾಮೂಲು.
ಕರೆಯಲು ಕಷ್ಟವಾಗುವ ಹೆಸರು
ಸೆಲೆಬ್ರಿಟಿಗಳು ಆಮೇಲೆ ತಮ್ಮ ಮಕ್ಕಳಿಗೆ ಈ ಹೆಸರು ಇಟ್ಟಿದ್ಯಾಕೆ ಎಂದು ಸಂಸ್ಕೃತದ ಅರ್ಥ ಸೇರಿದಂತೆ ಇತಿಹಾಸದ ಲೆಕ್ಕಾಚಾರವೆಲ್ಲಾ ಹೇಳುವುದು ಇದೆ. ಆದರೆ ವಯಸ್ಸಾದವರಿಗೆ ಬಿಡಿ, ಅವರಿಗೇ ಖುದ್ದು ಕರೆಯುವುದು ಕಷ್ಟವಾಗಿ ಚಿಂಟು, ಪುಂಟು ಎಂದೆಲ್ಲಾ ಕರೆಯುತ್ತಾರೆ.
ಶಾರದಾ ಹೆಸರೇಕೆ
ಆದರೆ ಇವೆಲ್ಲವುಗಳಿಗಿಂತ ಭಿನ್ನವಾಗಿ ಹೆಸರು ಇಟ್ಟಿರುವುದು ನಟಿ ನೇಹಾ ಗೌಡ ದಂಪತಿ. ಅವರ ಮಗಳ ಹೆಸರು ಶಾರದಾ. ಶಾರದಾ ಎನ್ನುವುದು ದೇವತೆಯ ಹೆಸರಾದರೂ ಇದು ತೀರಾ ಹಳೆಯ ಹೆಸರು. ಇದನ್ಯಾಕೆ ಇಟ್ಟಿದ್ದೀರಿ, ಅಜ್ಜಿಯ ಹೆಸರಾ ಹೀಗೆ ಹಲವರು ಕೇಳುವುದು ಇದೆ. ಆದರೆ ಅದ್ಯಾವುದೂ ಅಲ್ಲ, ಈ ಹೆಸರನ್ನು ಏಕೆ ಇಟ್ಟಿರುವುದು ಎಂದು ಇದೀಗ ಬಾಸ್ಟಿವಿಗೆ ನೀಡಿರುವ ಸಂದರ್ಶನದಲ್ಲಿ ನೇಹಾ ಗೌಡ ರಿವೀಲ್ ಮಾಡಿದ್ದಾರೆ.
ಹೆಣ್ಣುಮಗು ಎಂದ್ರೆ ಇಷ್ಟ
ನನಗೆ ಮೊದಲಿನಿಂದಲೂ ಹೆಣ್ಣುಮಗು ಎಂದರೆ ಹೆಚ್ಚು ಇಷ್ಟ. ಮಗಳು ಹುಟ್ಟಿದರೆ ಟ್ರೆಡಿಷನಲ್ ಹೆಸರೇ ಇಡಬೇಕು ಎಂದುಕೊಂಡಿದ್ದೆ. ಆದ್ರೆ ಯಾವುದೂ ಎಂದು ತಿಳಿದಿರಲಿಲ್ಲ. ಕೊನೆಗೆ 'ಸ'ದಲ್ಲಿ ಹೆಸರು ಬಂತು. ಸೀತಾ ಎಂದು ಹೆಸರು ಇಡಬಹುದು ಎಂದುಕೊಂಡೆ. ಆದರೆ ಸೀತಾಳ ಲೈಫ್ ಅಷ್ಟು ಚೆನ್ನಾಗಿರಲಿಲ್ಲ. ಬೇಡ ಎಂದಾಯ್ತು.
ಶಾರದಾ ಎನ್ನುವಾಗ
ಕೊನೆಗೆ ಶ ಎಂದು ಬಂದಾಗ ಶಾರದಾ ಎಂದು ಹೊಳೆಯಿತು. ಇದನ್ನು ಹೇಳುವಾಗ ಸಿಕ್ಕಾಪಟ್ಟೆ ಖುಷಿಯಾಗುತ್ತದೆ. ಅದಕ್ಕೇ ಚಂದನ್ ಅವರು ಈ ಹೆಸರು ಚಾಯ್ಸ್ ಮಾಡಿದ್ರು. ಈಗಲೂ ಅವಳಿಗೆ ಷಾರ್ಟ್ಫಾರ್ಮ್ ಎಲ್ಲಾ ಕರೆಯಲ್ಲ. ಶಾರದಾ ಎಂದೇ ಕರೆಯೋದು. ಕರೆಯುವಾಗ ಸಿಕ್ಕಾಪಟ್ಟೆ ಖುಷಿಯಾಗುತ್ತದೆ ಎಂದಿದ್ದಾರೆ ನಟಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

