MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಮಗಳು ರಾಹಾ ಬಗ್ಗೆ ಆಲಿಯಾ ಭಟ್​ ಚಿಂತೆ: ಸದ್ಗುರು ಜಗ್ಗಿ ವಾಸುದೇವ ಹೇಳಿದ್ದು ಕೇಳಿ ನಟಿ ಶಾಕ್​

ಮಗಳು ರಾಹಾ ಬಗ್ಗೆ ಆಲಿಯಾ ಭಟ್​ ಚಿಂತೆ: ಸದ್ಗುರು ಜಗ್ಗಿ ವಾಸುದೇವ ಹೇಳಿದ್ದು ಕೇಳಿ ನಟಿ ಶಾಕ್​

ನಟಿ ಆಲಿಯಾ ಭಟ್ ಅವರು ತಮ್ಮ ಮಗಳು ರಾಹಾ ಬಗ್ಗೆ ಇರುವ ಪೋಷಕರ ಚಿಂತೆಯನ್ನು ಸದ್ಗುರು ಜಗ್ಗಿ ವಾಸುದೇವ್ ಅವರೊಂದಿಗೆ ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ, ಚಿಂತೆ ಮಾಡುವ ಪೋಷಕರು ಒಳ್ಳೆಯ ಪೋಷಕರಾಗಲು ಸಾಧ್ಯವಿಲ್ಲ, ಬದಲಿಗೆ ಮಕ್ಕಳಿಂದಲೇ ಜೀವನವನ್ನು ಕಲಿಯಬೇಕು ಎಂದು ಸದ್ಗುರು ಸಲಹೆ ನೀಡಿದ್ದಾರೆ.

2 Min read
Author : Suchethana D
Published : Apr 13 2026, 08:44 PM IST
Share this Photo Gallery
  • FB
  • TW
  • Linkdin
  • Whatsapp
16
ಅಮ್ಮನ ಚಿಂತೆ ಬಗ್ಗೆ ಆಲಿಯಾ ಭಟ್​
Image Credit : sadhguru Instagram

ಅಮ್ಮನ ಚಿಂತೆ ಬಗ್ಗೆ ಆಲಿಯಾ ಭಟ್​

ಅಪ್ಪ-ಅಮ್ಮಂದಿರು ಸೆಲೆಬ್ರಿಟಿಗಳಾದರೇನು, ವಿವಿಐಪಿ ಆದರೇನು, ಅವರಿಗೆ ಸದಾ ಮಕ್ಕಳ ಬಗ್ಗೆ ಚಿಂತೆ ಇದ್ದೇ ಇರುತ್ತದೆ. ಅದರಲ್ಲಿಯೂ ಅಮ್ಮನಾದವಳು ಮಕ್ಕಳ ಬಗ್ಗೆ ಸ್ವಲ್ಪ ಹೆಚ್ಚೇ ಚಿಂತೆ ಮಾಡುತ್ತಿರುತ್ತಾಳೆ. ಕೆಲವೊಮ್ಮೆ ಆ ಚಿಂತೆ ಅನವಶ್ಯಕ ಎನ್ನಿಸಿದರೂ, ಚಿಂತೆ ಆಗುವುದು ಆಗಿಯೇ ಆಗುತ್ತದೆ. ಅದರಲ್ಲಿಯೂ ಹೊರಗೆ ದುಡಿಯುವ ಅಮ್ಮಂದಿರಿಗೆ ತುಸು ಹೆಚ್ಚೇ ಈ ಚಿಂತೆ ಇರುವುದು ಸಹಜ. ಅದರಲ್ಲಿಯೂ ನಟಿಯರು ಎಂದ ಮೇಲೆ ಮಕ್ಕಳನ್ನು ಇನ್ನೂ ಹೆಚ್ಚಿನ ಕಾಲ ಬಿಟ್ಟಿರಬೇಕು, ಮನೆಯಲ್ಲಿ ಆಳು-ಕಾಳುಗಳ ಎಷ್ಟೇ ಇದ್ದರೂ ಅಮ್ಮನ ಹೃದಯ ಮನೆಯಲ್ಲಿ ಇರುವ ಮಗುವಿನ ಮೇಲೆಯೇ ಇರುವುದು ಸಹಜವೇ. ಅದಕ್ಕೇ ಆಕೆಯನ್ನು ಅಮ್ಮಾ ಎನ್ನುವುದು. ಇದೀಗ ಅಂಥದ್ದೇ ಚಿಂತೆಯ ಬಗ್ಗೆ ನಟಿ ಆಲಿಯಾ ಭಟ್​ ಸದ್ಗುರು ಜೊತೆ ಮಾತನಾಡಿದ್ದಾರೆ.

26
ಚಿಂತೆ ಮಾಡುವ ಪೋಷಕರಿಗೆ ಸಲಹೆ ಕೇಳಿದ ಆಲಿಯಾ
Image Credit : instagram

ಚಿಂತೆ ಮಾಡುವ ಪೋಷಕರಿಗೆ ಸಲಹೆ ಕೇಳಿದ ಆಲಿಯಾ

ಜೈನ್ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ ಆಯೋಜಿಸಿದ್ದ "ಇನ್ ಕಾನ್ವರ್ಸೇಷನ್ ವಿತ್ ದಿ ಮಿಸ್ಟಿಕ್" ಎನ್ನುವ ಕಾರ್ಯಕ್ರಮದಲ್ಲಿ ನಟಿ ಆಲಿಯಾ ಭಟ್​ (Alia Bhatt) ಮಗಳ ಬಗೆಗಿನ ತಮ್ಮ ಚಿಂತೆಯನ್ನು ಸದ್ಗುರು ಜಗ್ಗಿ ವಾಸುದೇವ ಅವರ ಮುಂದೆ ಇಟ್ಟರು. ನನಗೆ ನನ್ನ ಮಗಳ ಬಗ್ಗೆ ತುಂಬಾ ಚಿಂತೆ ಆಗುತ್ತಿರುತ್ತದೆ. ಚಿಂತೆ ಮಾಡುವ ಪೋಷಕರಿಗೆ ನಿಮ್ಮ ಸಲಹೆ ಏನು ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಸದ್ಗುರು ನಿಮ್ಮ ಮಗಳ ಹೆಸರು ಏನು ಎಂದು ಪ್ರಶ್ನಿಸಿದರು. ಅದಕ್ಕೆ ಆಲಿಯಾ ರಾಹಾ ಎಂದು ಹೇಳಿದರು.

Related Articles

Related image1
Anchor Anushree ಗುಡ್​ನ್ಯೂಸ್​ ಯಾವಾಗ? ಫ್ಯಾನ್ಸ್​ ಕಾಡ್ತಿರೋ ಪ್ರಶ್ನೆಗೆ ಉತ್ತರ ಕೊಟ್ಟೇಬಿಟ್ರು ನಟಿ
Related image2
6 ವರ್ಷದ ಪುತ್ರಿ ಜೊತೆ ಮೊದಲ ಬಾರಿ ನಟಿ Shilpa Shetty: ಬಾಡಿಗೆ ತಾಯ್ತನದಿಂದ ಹುಟ್ಟಿದ ಪುಟಾಣಿ ಸ್ಟೋರಿ
36
ಚಿಂತೆ ಮಾಡುವ ಅಪ್ಪ-ಅಮ್ಮ
Image Credit : instagram

ಚಿಂತೆ ಮಾಡುವ ಅಪ್ಪ-ಅಮ್ಮ

ಆಗ ಸದ್ಗುರು, ಚಿಂತೆ ಮಾಡುವ ಅಪ್ಪ-ಅಮ್ಮ ಯಾವತ್ತಿಗೂ ಒಳ್ಳೆಯ ಪೋಷಕರು ಆಗುವುದಿಲ್ಲ ಎಂದಾಗ ನಟಿ ಒಂದು ಕ್ಷಣ ಶಾಕ್​ ಆದರು. ಅದಕ್ಕೆ ಸದ್ಗುರು, ಆತಂಕದಲ್ಲಿರುವ ಪೋಷಕರು ಯಾವತ್ತಿಗೂ ಮಗುವಿಗೆ ಪ್ರಯೋಜನಕಾರಿಯಾಗುವುದಿಲ್ಲ. ಅವರು ತುಂಬಾ ಚಿಂತಿಸುವುದರಿಂದ ತಮ್ಮನ್ನು ತಾವು ಹಾನಿ ಮಾಡಿಕೊಳ್ಳುತ್ತಾರೆಯೇ ವಿನಾ ಒಳ್ಳೆಯ ಪೋಷಕರು ಆಗಲು ಸಾಧ್ಯವಿಲ್ಲ ಎಂದರು.

46
ಯಾರು ಸಂತೋಷವಾಗಿರ್ತಾರೆ?
Image Credit : Asianet News

ಯಾರು ಸಂತೋಷವಾಗಿರ್ತಾರೆ?

ನಿಮ್ಮ ಮಗುವಿಗೆ ಏನನ್ನಾದರೂ ಕಲಿಸಬೇಕು ಎಂಬ ನಿಮ್ಮ ಕಲ್ಪನೆಯನ್ನು ಬಿಟ್ಟುಬಿಡಿ. ನೀವು ಅದ್ಭುತ ಮಹಿಳೆ ಎಂದು ನನಗೆ ತಿಳಿದಿದೆ, ಆದರೆ ಇಂಥ ಕಲ್ಪನೆ ಮಾಡುವುದು ಬೇಡ ಎನ್ನುವ ಮೂಲಕ, ಸದ್ಗುರು ಎಲ್ಲಾ ಮಹಿಳೆಯರಿಗೂ ಇದೇ ವಿಷಯವನ್ನು ಹೇಳಿದ್ದಾರೆ. ಅದಕ್ಕೆ ಸದ್ಗುರು ಉತ್ತಮ ಉದಾಹರಣೆಯನ್ನೂ ನೀಡಿದ್ದಾರೆ. ಹೀಗೆ ಅವರು ಹೇಳಲು ಕಾರಣ ಏನೆಂದರೆ, ಅವರು ನಟಿಯ ಬಳಿ ನಿಮ್ಮ ಮತ್ತು ನಿಮ್ಮ 3.5 ವರ್ಷದ ಮಗಳ ನಡುವೆ, ಯಾರು ಹೆಚ್ಚು ಸಂತೋಷವಾಗಿರುತ್ತಾರೆ ಎಂದುದ ಪ್ರಶ್ನಿಸಿದಾಗ ನಟಿ, ನನ್ನ ಮಗಳು ಎಂದರು. ಯಾರು ಎಲ್ಲರನ್ನೂ ಸಂತೋಷವಾಗಿ ಇರಿಸುತ್ತಾರೆ ಎಂದಾಗ ನಟಿ, ಅವಳೇ ಎಂದರು.

56
ನೀವು ಕಲಿಸೋದು ಏನಿದೆ?
Image Credit : Asianet News

ನೀವು ಕಲಿಸೋದು ಏನಿದೆ?

ಇಷ್ಟೆಲ್ಲಾ ಇದ್ದ ಮೇಲೆ ಅವಳಿಗೆ ನೀವು (ಪೋಷಕರು) ಕಲಿಸುವುದು ಏನಿದೆ ಎಂದು ಸದ್ಗುರು ಪ್ರಶ್ನಿಸಿದರು. ನೀವು ಮಕ್ಕಳಿಗೆ ಅವಕಾಶ ನೀಡಬೇಕು. ನೀವು ಅವರನ್ನು ನೋಡಿ ಕಲಿಯಬೇಕು. ಏಕೆಂದರೆ, ಒಂದು ಮಗು ನಿಮಗಿಂತ ಜೀವನಕ್ಕೆ ಹೆಚ್ಚು ಹತ್ತಿರವಾಗಿದೆ ಎಂದರು ಸದ್ಗುರು.

66
ಬೆಳವಣಿಗೆ ಗಮನಿಸಿ
Image Credit : instagram

ಬೆಳವಣಿಗೆ ಗಮನಿಸಿ

ಮಕ್ಕಳು ಬೆಳೆಯುತ್ತಿದ್ದಂತೆ ಅವರ ಬೆಳವಣಿಗೆಯನ್ನು ಸರಳವಾಗಿ ಗಮನಿಸಿ. ಕಲಿಸಲು ಹೆಚ್ಚಿನದೇನೂ ಇರುವುದಿಲ್ಲ. ಏಕೆಂದರೆ ವಯಸ್ಕರು ಹೆಚ್ಚಾಗಿ ಜೀವನವನ್ನು ತಮ್ಮದೇ ಆದ ದೃಷ್ಟಿಕೋನದಿಂದ ನೋಡುತ್ತಾರೆ ಮತ್ತು ಎಲ್ಲದರ ಬಗ್ಗೆಯೂ ಗಲಾಟೆ ಮಾಡುತ್ತಾರೆ. ಆದರೆ ಮೂರರಿಂದ ಆರು ವರ್ಷದೊಳಗಿನ ಮಕ್ಕಳು ಸಾಮಾನ್ಯವಾಗಿ ಸಂತೋಷವಾಗಿರುತ್ತಾರೆ ಮತ್ತು ನಗುವಿನೊಂದಿಗೆ ಇರುತ್ತಾರೆ. ಆದರೆ ವಯಸ್ಕರು ಹೆಚ್ಚಾಗಿ ಹಾಗೆ ಮಾಡುವುದಿಲ್ಲ ಎಂದರು. ಅಂದರೆ, ನೀವು ಹೇಳುವುದು ಏನೆಂದರೆ ನೀವು ಅವಳಿಗೆ ಸಲಹೆ ಕೊಡಬೇಡಿ, ನೀವೇ ಅವಳಿಂದ ಸಲಹೆ ಪಡೆದುಕೊಳ್ಳಿ ಎನ್ನುತ್ತಿದ್ದೀರಾ ಎಂದು ಆಲಿಯಾ ಪ್ರಶ್ನಿಸಿದರು. ನಿಜ. ಜೀವನ ಎಂದರೆ ಏನು ಎನ್ನುವುದು ನೀವು ನೋಡಬೇಕು. ಅವಳೇ ನಿಮ್ಮ ಜೀವನ ಆಗಿರುವಾಗ, ಅವಳಿಗೆ ಹೇಗೆ ಇರಬೇಕು ಎನ್ನುವುದು ತಿಳಿದಿರುವಾಗ ನೀವು ಹೇಳುವುದು ಏನೂ ಇಲ್ಲ ಎಂದರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಮನರಂಜನಾ ಸುದ್ದಿ
ಆಲಿಯಾ ಭಟ್
ಬಾಲಿವುಡ್
ಸಂಬಂಧಗಳು

Latest Videos
Recommended Stories
Recommended image1
ವಧು ಬೇಡಿಕೆ ಕೇಳಿ ಬೆಚ್ಚಿಬಿದ್ದ ಶೋಭನ ರಾತ್ರಿಗೆ ರೆಡಿಯಾಗಿ ಬಂದ ವರ; ಕುಟುಂಬಸ್ಥರು ಶಾಕ್
Recommended image2
ಪೊಲೀಸ್​ ಸ್ಟೇಷನ್​ ಮೆಟ್ಟಿಲೇರಿತು ಬೆಂಗಳೂರು ಬೆಕ್ಕುಗಳ ಲವ್​ ಸ್ಟೋರಿ! ಪೊಲೀಸರು ಸುಸ್ತು- ಆಗಿದ್ದೇನು
Recommended image3
ನಿನ್ನೆ ಮೊನಾಲಿಸಾ ಮಿಸ್ಸಿಂಗ್​ ಅಂದ, ಇಂದು ನಾನವಳ ಗಂಡನೇ ಅಲ್ಲ ಅಂತಿದ್ದಾನೆ! ಅಷ್ಟಕ್ಕೂ ಏನಾಯ್ತು ನೋಡಿ
Related Stories
Recommended image1
Anchor Anushree ಗುಡ್​ನ್ಯೂಸ್​ ಯಾವಾಗ? ಫ್ಯಾನ್ಸ್​ ಕಾಡ್ತಿರೋ ಪ್ರಶ್ನೆಗೆ ಉತ್ತರ ಕೊಟ್ಟೇಬಿಟ್ರು ನಟಿ
Recommended image2
6 ವರ್ಷದ ಪುತ್ರಿ ಜೊತೆ ಮೊದಲ ಬಾರಿ ನಟಿ Shilpa Shetty: ಬಾಡಿಗೆ ತಾಯ್ತನದಿಂದ ಹುಟ್ಟಿದ ಪುಟಾಣಿ ಸ್ಟೋರಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved