MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಜೊತೆಯಾಗಿ ಮದುವೆಗೆ ಬಂದ ದಳಪತಿ ವಿಜಯ್ ತ್ರಿಷಾ ಕೃಷ್ಣನ್: ರವಿಮೋಹನ್ ಹಾಗೂ ಕೆನಿಷಾಗೆ ಹೋಲಿಸಿದ ನೆಟ್ಟಿಗರು

ಜೊತೆಯಾಗಿ ಮದುವೆಗೆ ಬಂದ ದಳಪತಿ ವಿಜಯ್ ತ್ರಿಷಾ ಕೃಷ್ಣನ್: ರವಿಮೋಹನ್ ಹಾಗೂ ಕೆನಿಷಾಗೆ ಹೋಲಿಸಿದ ನೆಟ್ಟಿಗರು

ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬೆನ್ನಲ್ಲೇ, ನಟ ದಳಪತಿ ವಿಜಯ್ ಮತ್ತು ನಟಿ ತ್ರಿಶಾ ಕೃಷ್ಣನ್ ಮದುವೆ ಆರತಕ್ಷತೆಯೊಂದಕ್ಕೆ ಜೊತೆಯಾಗಿ ಬಂದಿದ್ದು, ಒಂದೇ ಬಣ್ಣದ ಬಟ್ಟೆ ಧರಿಸಿ, ಒಂದೇ ಕಾರಿನಲ್ಲಿ ಬಂದಿದ್ದು, ಇವರಿಬ್ಬರ ವಿವಾಹೇತರ ಸಂಬಂಧದ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.

2 Min read
Author : Anusha Kb
| Updated : Mar 06 2026, 11:05 AM IST
Share this Photo Gallery
  • FB
  • TW
  • Linkdin
  • Whatsapp
16
ವಿವಾಹೇತರ ಸಂಬಂಧದ ವದಂತಿ ಮಧ್ಯೆ ಜೊತೆಯಾಗಿ ಮದುವೆಗೆ ಬಂದ ತ್ರಿಶಾ ಹಾಗೂ ವಿಜಯ್ ಜೋಸೆಫ್
Image Credit : X

ವಿವಾಹೇತರ ಸಂಬಂಧದ ವದಂತಿ ಮಧ್ಯೆ ಜೊತೆಯಾಗಿ ಮದುವೆಗೆ ಬಂದ ತ್ರಿಶಾ ಹಾಗೂ ವಿಜಯ್ ಜೋಸೆಫ್

ಪತ್ನಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ಬಳಿಕ ಸಾಕಷ್ಟು ಸುದ್ದಿಯಲ್ಲಿರುವ ತಮಿಳು ನಟ ದಳಪತಿ ವಿಜಯ್, ನಟಿ ತ್ರಿಶಾ ಕೃಷ್ಣನ್ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಾರೆಂದು ಸಾಕಷ್ಟು ಊಹಾಪೋಹಾಗಳು ಹಬ್ಬಿದ್ದವು, ಇದರ ಬೆನ್ನಲೇ ಈಗ ನಟಿ ತ್ರಿಶಾ ಕೃಷ್ಣನ್ ಜೊತೆ ವಿಜಯ್ ಮದುವೆ ಆರತಕ್ಷತೆಯೊಂದರಲ್ಲಿ ಭಾಗವಹಿಸಿದ್ದು, ಸಂಚಲನ ಸೃಷ್ಟಿಸಿದೆ. ಗುರುವಾರ ಚೆನ್ನೈನಲ್ಲಿ ನಡೆದ ನಿರ್ಮಾಪಕ ಕಲ್ಪತಿ ಎಸ್ ಸುರೇಶ್ ಮತ್ತು ಮೀನಾಕ್ಷಿ ಸುರೇಶ್ ಅವರ ಮಗನ ವಿವಾಹ ಆರತಕ್ಷತೆಯಲ್ಲಿ ನಟ ಕಾಮ್ ರಾಜಕಾರಣಿ ದಳಪತಿ ವಿಜಯ್ ಮತ್ತು ನಟಿ ತ್ರಿಶಾ ಕೃಷ್ಣನ್ ಭಾಗವಹಿಸಿದ್ದರು. ಈ ಆರತಕ್ಷತೆ ಕಾರ್ಯಕ್ರಮವು ತಮಿಳು ಚಲನಚಿತ್ರೋದ್ಯಮದ ಹಲವಾರು ಸದಸ್ಯರನ್ನು ಒಟ್ಟುಗೂಡಿಸಿತು

26
ರವಿ ಮೋಹನ್ ಹಾಗೂ ಕೆನಿಷಾಗೆ ಹೋಲಿಸಿದ ನೆಟ್ಟಿಗರು
Image Credit : Social Media

ರವಿ ಮೋಹನ್ ಹಾಗೂ ಕೆನಿಷಾಗೆ ಹೋಲಿಸಿದ ನೆಟ್ಟಿಗರು

ವಿಜಯ್ ಅವರ ಪತ್ನಿ ಸಂಗೀತಾ ಸೊರ್ನಲಿಂಗಂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಹೊರಬಿದ್ದ ಬಳಿಕ ಈ ಬೆಳವಣಿಗೆ ನಡೆದಿದೆ. ಗಂಡ ಹೆಂಡತಿಯಂತೆ ಮ್ಯಾಚಿಂಗ್ ಬಟ್ಟೆ ತೊಟ್ಟು ಒಂದೇ ಕಾರಿನಲ್ಲಿ ವಿಜಯ್ ಹಾಗೂ ತ್ರಿಷಾ ಕೃಷ್ಣನ್ ಆಗಮಿಸಿದ್ದು, ಇವರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಇವರನ್ನು ತಮಿಳು ಚಿತ್ರರಂಗದ ಮತ್ತೊಂದು ವಿವಾದಿತ ಜೋಡಿ ರವಿ ಮೋಹನ್ ಹಾಗೂ ಅವರ ಗರ್ಲ್ಫ್ರೆಂಡ್‌ ಕೆನಿಷಾಗೆ ಜನ ಹೋಲಿಸಿದ್ದಾರೆ. ರವಿ ಮೋಹನ್ ಕೂಡ ಪತ್ನಿ ಆರತಿಯಿಂದ ಡಿವೋರ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದು, ಇವರಿಗೂ ಇಬ್ಬರು ಗಂಡು ಮಕ್ಕಳಿದ್ದಾರೆ.

Related Articles

Related image1
ಪುರುಷರಲ್ಲಿ ಉದಯನಿಧಿ ಸ್ಟಾಲಿನ್, ಮಹಿಳೆಯರಲ್ಲಿ ರಮ್ಯಾ ಕೃಷ್ಣನ್ ಅವರನ್ನು ತ್ರಿಶಾ ಪ್ರೀತಿಸುತ್ತಿದ್ದಾರೆ, ವಿಜಯ್ ಅಲ್ಲ: ಗಾಯಕಿ ಸುಚಿತ್ರಾ!
Related image2
ಗಂಡು-ಹೆಣ್ಣು ಇಬ್ಬರನ್ನೂ ಲವ್ ಮಾಡ್ತಾರೆ ಅಂದ್ರೂ ತ್ರಿಷಾ ಯಾಕೆ ಸೈಲೆಂಟ್ ಆಗಿದಾರೆ? ಅಲ್ಲೇ ಇರೋದು ಭಾರೀ ಗುಟ್ಟು!
36
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ವಿಜಯ್ ಪತ್ನಿ
Image Credit : Social Media

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ವಿಜಯ್ ಪತ್ನಿ

ವಿಜಯ್ ಪತ್ನಿ ಸಂಗೀತಾ ಸೊರ್ನಲಿಂಗಂ ಅವರು ಡಿಸೆಂಬರ್ 2025 ರಲ್ಲಿ ಪತಿ ವಿಜಯ್‌ನಿಂದ ವಿಚ್ಛೇದನಕ್ಕೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದು. ಅರ್ಜಿಯು ಏಪ್ರಿಲ್ 20 ರಂದು ವಿಚಾರಣೆಗೆ ಬರುವ ನಿರೀಕ್ಷೆಯಿದೆ. ಈ ವಿಚ್ಛೇದನ ಅರ್ಜಿಯಲ್ಲಿ ವಿಜಯ್ ಪತ್ನಿ ಸಂಗೀತಾ ಅವರು ವಿಜಯ್ ನಟಿ ಜೊತೆ ವಿವಾಹೇತರ ಸಂಬಂಧ ಹೊಂದಿರುವ ಬಗ್ಗೆ ಆರೋಪಿಸಿದ್ದರು. ವಿಜಯ್ ವಿವಾಹೇತರ ಸಂಬಂಧದಲ್ಲಿ ಇರುವುದನ್ನು ಏಪ್ರಿಲ್ 2021 ರಲ್ಲಿ ಪತ್ತೆ ಮಾಡಿದ್ದಾಗಿ ಅಗತ್ಯವಿದ್ದರೆ ಪ್ರಕರಣದಲ್ಲಿ ನಟಿಯನ್ನು ಎರಡನೇ ಪ್ರತಿವಾದಿಯನ್ನಾಗಿ ಮಾಡುವುದಾಗಿ ಅವರು ಹೇಳಿದ್ದಾರೆ.

46
ವಿಜಯ್ ಸಂಗೀತಾದು ಪ್ರೇಮ ವಿವಾಹ
Image Credit : instagram

ವಿಜಯ್ ಸಂಗೀತಾದು ಪ್ರೇಮ ವಿವಾಹ

ಸಂಗೀತಾ ವಿಜಯ್ ಜೊತೆಗಿನ ವಿವಾಹವನ್ನು ವಜಾಗೊಳಿಸುವ ಜೊತೆಗೆ ತನ್ನ ವೈವಾಹಿಕ ಮನೆಯಲ್ಲಿ ವಾಸಿಸುವ ಹಕ್ಕು ಮತ್ತು ಶಾಶ್ವತ ಜೀವನಾಂಶವನ್ನು ಕೋರಿದ್ದಾರೆ. ವಿಜಯ್ ಸಂಗೀತಾ ಅವರದ್ದು ಪ್ರೇಮ ವಿವಾಹವಾಗಿತ್ತು. ನಟ ತನ್ನ ಅಭಿಮಾನಿಯನ್ನೇ ಮದುವೆಯಾಗಿದ್ದರು. ಈ ಜೋಡಿ ಆಗಸ್ಟ್ 25, 1999 ರಂದು ಚೆನ್ನೈನಲ್ಲಿ ಅಂತರ್ಧರ್ಮೀಯ ವಿವಾಹವಾಗಿದ್ದು, ಕ್ರಿಶ್ಚಿಯನ್ ಆಗಿರುವ ವಿಜಯ್ ಮತ್ತು ಹಿಂದೂ ಆಗಿರುವ ಸಂಗೀತಾ ಸಾಂಪ್ರದಾಯಿಕ ಹಿಂದೂ ವಿವಾಹ ಸಮಾರಂಭದಲ್ಲಿ ವಿವಾಹವಾಗಿದ್ದರು.

56
ಸಿನಿಮಾ ರಂಗದಿಂದ ದೂರವೇ ಉಳಿದಿದ್ದ ಸಂಗೀತಾ
Image Credit : X

ಸಿನಿಮಾ ರಂಗದಿಂದ ದೂರವೇ ಉಳಿದಿದ್ದ ಸಂಗೀತಾ

ಒಂದು ವರ್ಷದ ನಂತರ, ಅವರು 2000ದ ಆಗಸ್ಟ್ 26ರಂದು ತಮ್ಮ ಮೊದಲ ಮಗುವಾದ ಜೇಸನ್ ಸಂಜಯ್ ಗೆ ಜನ್ಮ ನೀಡಿದರು. ಮಗಳು ದಿವ್ಯಾ ಸಾಶಾ 2005 ರಲ್ಲಿ ಜನಿಸಿದ್ದಳು. ತಮಿಳು ಚಿತ್ರರಂಗದ ದೊಡ್ಡ ತಾರೆಯರಲ್ಲಿ ಒಬ್ಬರನ್ನು ಮದುವೆಯಾಗಿದ್ದರೂ, ಸಂಗೀತಾ ಹೆಚ್ಚಾಗಿ ಜನಮನದಿಂದ ದೂರವೇ ಉಳಿದವರು. ಈ ಹಿನ್ನೆಲೆಯಲ್ಲಿ ವಿಜಯ್ ಮತ್ತು ತ್ರಿಶಾ ಒಂದೇ ಕಾರಿನಲ್ಲಿ ಒಟ್ಟಿಗೆ ಬಂದು ಎಜಿಎಸ್ ಕುಟುಂಬದ ವಿವಾಹದಲ್ಲಿ ಭಾಗವಹಿಸುತ್ತಿರುವುದು ಆನ್‌ಲೈನ್ ಹೊಸಚರ್ಚೆಗಳನ್ನು ಹುಟ್ಟುಹಾಕಿದೆ.

ಇದನ್ನೂ ಓದಿ: ಇರಾನ್ ಯುದ್ಧದ ಮಧ್ಯೆ ರಷ್ಯಾದ ತೈಲ ಖರೀದಿಸಲು ಭಾರತಕ್ಕೆ ಅಮೆರಿಕದಿಂದ 30 ದಿನಗಳ ವಿನಾಯಿತಿ

66
ತಮಿಳಿನ ಮತ್ತೊಬ್ಬ ಖ್ಯಾತ ನಟನದ್ದು ಇದೇ ಕತೆ
Image Credit : Google

ತಮಿಳಿನ ಮತ್ತೊಬ್ಬ ಖ್ಯಾತ ನಟನದ್ದು ಇದೇ ಕತೆ

ಇತ್ತ ತಮಿಳಿನ ಮತ್ತೊಬ್ಬ ಖ್ಯಾತ ನಟ ರವಿ ಮೋಹನ್ ಅವರದ್ದು ಇದೇ ಕತೆ. ಮುದ್ದಾದ ಹೆಂಡ್ತಿ ಇದ್ದರೂ ಅವರು ಗಾಯಕಿ/ಸಂಗೀತ ನಿರ್ಮಾಪಕಿ ಕೆನಿಷಾ ಫ್ರಾನ್ಸಿಸ್ ಜೊತೆ ವಿವಾಹೇತರ ಸಂಬಂಧದಲ್ಲಿ ಸಿಲುಕಿಕೊಂಡು ಈಗ ವಿಚ್ಚೇದನಕ್ಕೂ ಅರ್ಜಿ ಸಲ್ಲಿಸಿದ್ದಾರೆ. ಈ ಕೆನಿಷಾ ಹಾಗೂ ರವಿ ಮೋಹನ್ ಅವರು ಕೂಡ ತಮ್ಮ ಪ್ರೇಮ ಸಂಬಂಧದ ಗಾಸಿಪ್ ಊರೆಲ್ಲಾ ಹಬ್ಬಿದ ನಂತರ ಜೊತೆಯಾಗಿ ಮ್ಯಾಚಿಂಗ್ ಮ್ಯಾಚಿಂಗ್ ಬಟ್ಟೆ ತೊಟ್ಟು ಚೆನ್ನೈನಲ್ಲಿ ನಡೆದ ನಿರ್ಮಾಪಕ ಇಶಾರಿ ಗಣೇಶ್ ಅವರ ಮಗಳ ಮದುವೆಯಲ್ಲಿ ಕಾಣಿಸಿಕೊಂಡಿದ್ದರು. ರವಿ ಮೋಹನ್ ತಮ್ಮ ಮಾಜಿ ಪತ್ನಿ ಆರತಿಯಿಂದ ಬೇರ್ಪಡುವುದಾಗಿ ಘೋಷಿಸಿದ ತಿಂಗಳುಗಳ ನಂತರ ಅವರು ಹೀಗೆ ಜೊತೆಜೊತೆಯಾಗಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: 

ಹೆಣ್ಮಕ್ಕಳ ಉಚಿತ ಬಸ್ ಸೇವೆ ಶಕ್ತಿ ಯೋಜನೆಯ 5313 ಕೋಟಿ ಬಿಡುಗಡೆಗೆ KSRTC ಎಂಡಿಯಿಂದ ಸರ್ಕಾರಕ್ಕೆ ಪತ್ರ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ತ್ರಿಷಾ ಕೃಷ್ಣನ್
ದಳಪತಿ ವಿಜಯ್
ಸಂಬಂಧಗಳು
ಮನರಂಜನಾ ಸುದ್ದಿ

Latest Videos
Recommended Stories
Recommended image1
ಸದ್ದಿಲ್ಲದೇ ಮದ್ವೆ ಮಾಡಿಕೊಂಡ Shrirasthu Shubhamasthu ಸಮರ್ಥ್​? ನಟ ದರ್ಶಿತ್​ ಗೌಡ ಫೋಟೋ ಇಲ್ಲಿವೆ
Recommended image2
ಈ ಖ್ಯಾತ ನಟಿಗೆ 4 ಮಕ್ಕಳು ಬೇಕಂತೆ, ಯಾರಿಂದ ಗೊತ್ತಾ? ಆಕೆಯ 'ಫ್ಯಾಮಿಲಿ ಪ್ಲಾನಿಂಗ್' ನೋಡಿ ಶಾಕ್ ಆಗ್ಬೇಡಿ, ಕೂಲ್ ಕೂಲ್..!
Recommended image3
ಮದ್ವೆಯಾದ್ಮೇಲೆ ಏನಾದ್ರೂ ಅನ್ನಿಸ್ತಿದ್ಯಾ ಕೇಳಿದ್ರೆ ರಾಧಿಕಾ ಪಂಡಿತ್​ ಓಪನ್ನಾಗಿ ಹೀಗೆ ಹೇಳೋದಾ? Yash ಶಾಕ್​!
Related Stories
Recommended image1
ಪುರುಷರಲ್ಲಿ ಉದಯನಿಧಿ ಸ್ಟಾಲಿನ್, ಮಹಿಳೆಯರಲ್ಲಿ ರಮ್ಯಾ ಕೃಷ್ಣನ್ ಅವರನ್ನು ತ್ರಿಶಾ ಪ್ರೀತಿಸುತ್ತಿದ್ದಾರೆ, ವಿಜಯ್ ಅಲ್ಲ: ಗಾಯಕಿ ಸುಚಿತ್ರಾ!
Recommended image2
ಗಂಡು-ಹೆಣ್ಣು ಇಬ್ಬರನ್ನೂ ಲವ್ ಮಾಡ್ತಾರೆ ಅಂದ್ರೂ ತ್ರಿಷಾ ಯಾಕೆ ಸೈಲೆಂಟ್ ಆಗಿದಾರೆ? ಅಲ್ಲೇ ಇರೋದು ಭಾರೀ ಗುಟ್ಟು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved