MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಮದ್ವೆಯಾದ್ಮೇಲೆ ಏನಾದ್ರೂ ಅನ್ನಿಸ್ತಿದ್ಯಾ ಕೇಳಿದ್ರೆ ರಾಧಿಕಾ ಪಂಡಿತ್​ ಓಪನ್ನಾಗಿ ಹೀಗೆ ಹೇಳೋದಾ? Yash ಶಾಕ್​!

ಮದ್ವೆಯಾದ್ಮೇಲೆ ಏನಾದ್ರೂ ಅನ್ನಿಸ್ತಿದ್ಯಾ ಕೇಳಿದ್ರೆ ರಾಧಿಕಾ ಪಂಡಿತ್​ ಓಪನ್ನಾಗಿ ಹೀಗೆ ಹೇಳೋದಾ? Yash ಶಾಕ್​!

ಸ್ಯಾಂಡಲ್​ವುಡ್​ನ ಕ್ಯೂಟ್ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ 9 ವರ್ಷಗಳ ದಾಂಪತ್ಯವನ್ನು ಪೂರೈಸಿದ್ದಾರೆ. ಮದುವೆಯ ನಂತರದ ಜೀವನದ ಬಗ್ಗೆ ಕೇಳಿದ ಪ್ರಶ್ನೆಗೆ ರಾಧಿಕಾ ನೀಡಿದ ಉತ್ತರಕ್ಕೆ ಯಶ್ ಅವರೇ ಒಂದು ಕ್ಷಣ ಅವಾಕ್ಕಾಗಿದ್ದಾರೆ. 

2 Min read
Author : Suchethana D
Published : Mar 05 2026, 04:43 PM IST
Share this Photo Gallery
  • FB
  • TW
  • Linkdin
  • Whatsapp
16
ಸಿನಿಮಾದಿಂದ ದೂರ
Image Credit : Instagram

ಸಿನಿಮಾದಿಂದ ದೂರ

ಸ್ಯಾಂಡಲ್​ವುಡ್​ ಸಿಂಡ್ರೆಲ್ಲಾ ಎಂದೇ ಖ್ಯಾತಿ ಪಡೆದಿರುವ ನಟಿ ರಾಧಿಕಾ ಪಂಡಿತ್​, ಸದ್ಯ ಮಗಳು, ಕುಟುಂಬ ಎಂದು ಬಿಜಿಯಾಗಿದ್ದಾರೆ. ನಟಿ ಕಾಣಸಿಗ್ತಿರೋದು ಸೋಷಿಯಲ್​ ಮೀಡಿಯಾದಲ್ಲಿ ಮಾತ್ರ. ರಾಕಿಂಗ್ ಸ್ಟಾರ್ ಯಶ್​ (Yash) ಜೊತೆ 2016ರಲ್ಲಿ ಮದುವೆಯಾದ ರಾಧಿಕಾ ಸದ್ಯ ಐರಾ ಹಾಗೂ ಯಥರ್ವ್ ಎಂಬ ಮಕ್ಕಳ ಲಾಲನೆಯಲ್ಲಿ ಬಿಜಿಯಾಗಿದ್ದಾರೆ.

26
ಸ್ಯಾಂಡಲ್​ವುಡ್​ನ ಕ್ಯೂಟ್​ ಜೋಡಿ
Image Credit : Social Media

ಸ್ಯಾಂಡಲ್​ವುಡ್​ನ ಕ್ಯೂಟ್​ ಜೋಡಿ

ಇದೀಗ ಯಶ್​ ಮತ್ತು ರಾಧಿಕಾ ಅವರ ಮದುವೆಯ 10ನೇ ವರ್ಷದ ಸಂಭ್ರಮ. ಕಳೆದ ಡಿಸೆಂಬರ್​ 9ರಂದು ಒಂಬತ್ತು ವರ್ಷ ಪೂರೈಸಿದೆ ಈ ಜೋಡಿ. ಅಷ್ಟಕ್ಕೂ ಸ್ಯಾಂಡಲ್​ವುಡ್​ನ ಕ್ಯೂಟ್​ ಜೋಡಿ ಯಾವುದು ಎಂದು ಕೇಳಿದರೆ ಅದರಲ್ಲಿ ಟಾಪ್​ ಸ್ಥಾನದಲ್ಲಿ ಕೇಳಿಬರುವ ಹೆಸರು ನಟರಾದ ರಾಕಿಂಗ್ ಸ್ಟಾರ್ ಯಶ್​ (Yash) ಮತ್ತು ರಾಧಿಕಾ ಪಂಡಿತ್​ (Radhika Pandit) ಅವರದ್ದು. 2012 ರಲ್ಲಿ ಬಿಡುಗಡೆಯಾದ ಯೋಗರಾಜ್ ಭಟ್ ನಿರ್ದೇಶನ ಡ್ರಾಮಾ ಚಿತ್ರದಲ್ಲಿ ಯಶ್ ರಾಧಿಕಾ ಪಂಡಿತ್ ನಟಿಸಿದ್ದರು. ಬಳಿಕ ಬಂದ ಮಿಸ್ಟರ್ ಅ೦ಡ್ ಮಿಸ್ಸಸ್ ರಾಮಾಚಾರಿ ಸಿನಿಮಾದಲ್ಲಿಯೂ ಒಟ್ಟಾಗಿ ನಟಿಸಿದ್ದರು.

Related Articles

Related image1
Toxic: ವರ್ಷಗಳ ಗಡ್ಡಕ್ಕೆ ಯಶ್​ ಗುಡ್​ಬೈ ಹೇಳೋ ಮುನ್ನ ಪತ್ನಿ ರಾಧಿಕಾ ಪಂಡಿತ್​ ಏನ್​ ಹೇಳಿದ್ರು ನೋಡಿ!
Related image2
ಮುಳುಗುವ ಸೂರ್ಯನೆದುರು ನಿಂತು ಜೀವನದ ಪಾಠ ಹೇಳಿದ ನಟಿ ರಾಧಿಕಾ ಪಂಡಿತ್​
36
ಮದುವೆಗೆ 9ರ ಸಂಭ್ರಮ
Image Credit : our own

ಮದುವೆಗೆ 9ರ ಸಂಭ್ರಮ

ಬಳಿಕ ಸೆಟ್​ನಲ್ಲಿಯೇ ಲವ್​ ಆಗಿದೆ. 2016 ಡಿಸೆಂಬರ್‌ 9ರಂದು ಗೋವಾದಲ್ಲಿ ಮದುವೆಯಾದ ಈ ಜೋಡಿ ಈಗ ಇಬ್ಬರು ಮುದ್ದಾದ ಮಕ್ಕಳ ಪಾಲಕರು. ಐರಾ ಹಾಗೂ ಯಥರ್ವ್ ಎಂಬ ಮಕ್ಕಳ ಲಾಲನೆಯಲ್ಲಿ ರಾಧಿಕಾ ಬಿಜಿಯಾಗಿದ್ದಾರೆ. ಯಶ್ ಅವರನ್ನು ಮದುವೆಯಾದ ಬಳಿಕ ರಾಧಿಕಾ ಹಚ್ಚೇನು ಸಿನಿಮಾ ಮಾಡಿಲ್ಲ. ಮನೆ, ಸಂಸಾರ ಎಂದು ಬಿಜಿಯಾಗಿದ್ದಾರೆ.

46
ಸೋಷಿಷಯಲ್ ಮೀಡಿಯಾದಲ್ಲಿ ಆ್ಯಕ್ಟೀವ್​
Image Credit : Instagram

ಸೋಷಿಷಯಲ್ ಮೀಡಿಯಾದಲ್ಲಿ ಆ್ಯಕ್ಟೀವ್​

ಆದರೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಕುಟುಂಬದ ಫೋಟೋ ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. ಹೆಚ್ಚಾಗಿ ಅವರು ಮಕ್ಕಳ ಜೊತೆಗಿನ ಫೋಟೋಗಳು ಹಂಚಿಕೊಳ್ಳುತ್ತಾರೆ. ಪತಿ ಯಶ್​ ಮತ್ತು ಮಕ್ಕಳ ಜೊತೆ ಆಗಾಗ್ಗೆ ಟೂರ್​ಗೆ ಹೋಗುತ್ತಾ ಅದರ ಫೋಟೋಗಳನ್ನೂ ಶೇರ್​ ಮಾಡಿಕೊಳ್ಳುತ್ತಾರೆ. ರಾಧಿಕಾ ಪಂಡಿತ್ ಅವರು ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ.

56
ರಾಧಿಕಾ ಉತ್ತರಕ್ಕೆ ಯಶ್​ ಶಾಕ್​
Image Credit : instagram

ರಾಧಿಕಾ ಉತ್ತರಕ್ಕೆ ಯಶ್​ ಶಾಕ್​

ಇದೀಗ ಈ ಜೋಡಿಗೆ ಒಂದು ಪ್ರಶ್ನೆ ಕೇಳಲಾಗಿತ್ತು. ಅದನ್ನು ರಾಧಿಕಾ ಪಂಡಿತ್​ಗೆ ಕೇಳಲಾಗಿತ್ತು. ಮದುವೆಯಾಗಿ 9 ವರ್ಷವಾಗಿದೆ. ಏನಾದ್ರೂ ಡಿಫರೆನ್ಸ್​ ಅನಿಸತ್ತಾ ಎಂದು ಕೇಳಿದಾಗ, ರಾಧಿಕಾ ಅವರು ಜೋರಾಗಿ ನಕ್ಕು, ಈಗ ಪಬ್ಲಿಕ್​ನಲ್ಲಿ ಇಬ್ಬರೂ ಪರಸ್ಪರ ಓಪನ್ನಾಗಿ ಕೈಹಿಡಿದುಕೊಂಡು ಹೋಗಬಹುದು ಎಂದರು. ಈ ಉತ್ತರಕ್ಕೆ ಒಂದು ಕ್ಷಣ ಯಶ್​ ಅವರೇ ಅವಾಕ್ಕಾಗಿ ಹೋದರು.

66
ಮಧ್ಯರಾತ್ರಿ ವಿಷ್​?
Image Credit : radhika pandit instagram

ಮಧ್ಯರಾತ್ರಿ ವಿಷ್​?

ಕೊನೆಗೆ ರಾಧಿಕಾ ಅವರು ಪ್ರತಿ ಹುಟ್ಟುಹಬ್ಬನನ್ನು ಮಧ್ಯರಾತ್ರಿ 12 ಗಂಟೆಗೆ ನನಗೆ ಯಶ್​ ವಿಶ್​ ಮಾಡುತ್ತಾರೆ ಎಂದರು. ಬಹುಶಃ ಯಶ್​ ಅವರು ರಾಧಿಕಾ ಅವರ ಹುಟ್ಟುಹಬ್ಬವನ್ನು ಮರೆಯುತ್ತಾರೆ ಎಂದು ತಮಾಷೆ ಮಾಡಿದ್ದೋ ಗೊತ್ತಿಲ್ಲ. ಹೀಗೆ ಹೇಳುತ್ತಿದ್ದಂತೆಯೇ ಯಶ್​ ಅವರಿಗೆ ಪ್ರೀತಿಯ ಏಟು ನೀಡಿದರು. ಇನ್ನು ಈ ಜೋಡಿಯ ಕುರಿತು ಹೇಳುವುದಾದರೆ, ಸದ್ಯ ರಾಧಿಕಾ ಸಿನಿ ರಂಗದಿಂದ ದೂರವಿದ್ದರೆ, ಯಶ್​ ಅವರ ಟಾಕ್ಸಿಕ್​ ಚಿತ್ರಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಯಶ್
ಮನರಂಜನಾ ಸುದ್ದಿ
ಸ್ಯಾಂಡಲ್ವುಡ್ ಫಿಲ್ಮ್
ಸ್ಯಾಂಡಲ್‌ವುಡ್
ರಾಧಿಕಾ ಪಂಡಿತ್
ಸಂಬಂಧಗಳು
ಮದುವೆ
ಪ್ರೇಮ ವಿವಾಹ

Latest Videos
Recommended Stories
Recommended image1
ರಶ್ಮಿಕಾ ಪರ ನಿಂತ Gen Z ಪಾರ್ಟಿ.. ರಶ್ಮಿಕಾ ಈಸ್ ಗ್ರೇಟ್.. ಕರ್ನಾಟಕ ಕ್ರಶ್ ಟು 'ನ್ಯಾಷನಲ್ ಕ್ರಶ್' ಆಗಿದ್ದು ಸಣ್ಣ ಸಾಧನೆಯಲ್ಲ!
Recommended image2
Shiman Mandanna: ರಶ್ಮಿಕಾ ಮಂದಣ್ಣ ದೇಶಕ್ಕೇ ಗೊತ್ತು ಈ ಶಿಮಾನ್ ಮಂದಣ್ಣ ಯಾರು ಗೊತ್ತಾ?
Recommended image3
ಮಳೆ ಹುಡುಗಿಯ ಮುತ್ತಿನಂಥ ಕನ್ನಡಾಕ್ಷರಗಳಿಗೆ ಮಾರುಹೋದ ಕನ್ನಡಿಗರು; ಯಶ್ ಬಗ್ಗೆ ನಟಿ ಪೂಜಾ ಗಾಂಧಿಯ ಲೆಟರ್ ವೈರಲ್!
Related Stories
Recommended image1
Toxic: ವರ್ಷಗಳ ಗಡ್ಡಕ್ಕೆ ಯಶ್​ ಗುಡ್​ಬೈ ಹೇಳೋ ಮುನ್ನ ಪತ್ನಿ ರಾಧಿಕಾ ಪಂಡಿತ್​ ಏನ್​ ಹೇಳಿದ್ರು ನೋಡಿ!
Recommended image2
ಮುಳುಗುವ ಸೂರ್ಯನೆದುರು ನಿಂತು ಜೀವನದ ಪಾಠ ಹೇಳಿದ ನಟಿ ರಾಧಿಕಾ ಪಂಡಿತ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved