Dear Gentlemen ನಿಮ್ಮ ಮಾನಸಿಕ ನೆಮ್ಮದಿಯ ಗುಟ್ಟು ನಿಮ್ಮಲ್ಲೇ ಇದೆ
ಕೆಲವರಿಗೆ ಜೀವನದಲ್ಲಿ ನೆಮ್ಮದಿಯೇ ಇಲ್ಲ ಎನ್ನುವ ಭಾವ ಇರುತ್ತೆ. ನಿಮಗೂ ಹಾಗೆ ಅನಿಸುತ್ತಿದೆಯೇ? ನಿಮಗೆ ಏನೇ ಮಾಡಿದ್ರು ಸಂತೋಷವಾಗೋದಿಲ್ವಾ? ನೀವು ಮಾನಸಿಕ ಅಶಾಂತಿಯಿಂದ ತೊಂದರೆಗೀಡಾಗಿದ್ದೀರಾ? ನೀವು ಪುರುಷನಾ? ಹಾಗಿದ್ರೆ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಕಾಣಬಹುದು. ಇದು ನಿಮ್ಮ ಕೆಲಸದ ಜೀವನವನ್ನು ಸುಧಾರಿಸುವುದಲ್ಲದೆ, ವೈಯಕ್ತಿಕ ಜೀವನವನ್ನು ಸಹ ಸುಧಾರಿಸುತ್ತೆ.

ಇಂದಿನ ಕಾಲದಲ್ಲಿ, ಅತಿದೊಡ್ಡ ಕೊರತೆಯೆಂದ್ರೆ ಆರಾಮ ಮತ್ತು ಮಾನಸಿಕ ಶಾಂತಿಯದು(Mental peace). ನೆಮ್ಮದಿಯೇ ಇಲ್ಲ ಎಂದು ಕೊರಗುವವರೇ ಇಲ್ಲಿ ಹೆಚ್ಚು. ಇದಕ್ಕೆ ಮುಖ್ಯ ಕಾರಣ ಒತ್ತಡ, ಕೋಪ ಮತ್ತು ಬ್ಯಾಡ್ ಹ್ಯಾಬಿಟ್ಸ್. ಆದರೆ ಹೆಚ್ಚಿನ ವಿವಾಹಿತ ಪುರುಷರು ಈ ಸಮಸ್ಯೆಗೆ ತಮ್ಮ ರಿಲೇಷನ್ಶಿಪ್ ದೊಡ್ಡ ಕಾರಣವೆಂದು ಪರಿಗಣಿಸ್ತಾರೆ. ಕೆಲಸದ ಜೀವನದಲ್ಲಿ ಬಾಸ್ ಮತ್ತು ಮನೆಯಲ್ಲಿ ಹೆಂಡತಿ ಎಂದಿಗೂ ಸಮಾಧಾನದಿಂದ ಇರಲು ಬಿಡೋದಿಲ್ಲ ಎಂದು ತಮಾಷೆಯಾಗಿ ಹೇಳಲಾಗುತ್ತೆ. ಆದರೆ ಇದೆಲ್ಲವೂ ಮನಸ್ಸಿನ ಭ್ರಮೆ. ಯಾಕಂದ್ರೆ ನಿಮ್ಮ ಆರಾಮ ಮತ್ತು ಮಾನಸಿಕ ಶಾಂತಿ ನಿಮ್ಮ ಕೈಯಲ್ಲಿದೆ.
ಹೆಚ್ಚಿನ ಜನರ ಪ್ರಶ್ನೆ ಮಾನಸಿಕ ಶಾಂತಿಯನ್ನು ಹೇಗೆ ಕಂಡುಕೊಳ್ಳಲಿ? ಎಂದು. ಮಾನಸಿಕ ಅಶಾಂತಿಗೆ ಕಾರಣಗಳು ನಮ್ಮೊಳಗೇ ಇವೆ. ಆದ್ದರಿಂದ, ಆರಾಮವನ್ನು ಪಡೆಯಲು, ಪುರುಷರು ತಮ್ಮೊಳಗೆ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತೆ. ಮಾನಸಿಕ ಶಾಂತಿಯನ್ನು ಪಡೆಯಲು ಪ್ರತಿದಿನ ಈ ಪರಿಣಾಮಕಾರಿ ಸಲಹೆಗಳನ್ನು(Tips) ಪ್ರಯತ್ನಿಸಿ.
ಸ್ವೀಕರಿಸೋದು (Accept)
ಮಾನಸಿಕ ಅಶಾಂತಿಗೆ ಕಾರಣ ಪ್ರತಿಕೂಲ ಪರಿಸ್ಥಿತಿಗಳು. ಅಂತಹ ಪರಿಸ್ಥಿತಿಗಳನ್ನು ಬದಲಾಯಿಸಲು ಬಯಸುತ್ತೇವೆ, ಆದರೆ ಅವುಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಇಲ್ಲಿಂದಲೇ ರೋಷ, ಕೋಪ ಮತ್ತು ಉದ್ವಿಗ್ನತೆ ಪ್ರಾರಂಭವಾಗುತ್ತೆ. ಆದ್ದರಿಂದ ನಿಯಂತ್ರಣದಲ್ಲಿಲ್ಲದ ವಿಷಯಗಳನ್ನು ಬದಲಾಯಿಸೋ ಯೋಚನೆ ಬಿಟ್ಟು ಸ್ವೀಕರಿಸಲು ಕಲಿಯಿರಿ. ಇದರಿಂದ ನಿಮ್ಮ ಮನಸು ಕೂಡ ಶಾಂತವಾಗಿರುತ್ತೆ.
ನೆಪ
ಯಾರಾದರೂ ತಪ್ಪು ಮಾಡಿದಾಗ, ಅದರ ಹಿಂದಿನ ಕಾರಣವನ್ನು ಕಂಡುಹಿಡಿಯುವಲ್ಲಿ ನಾವು ನಿರತರಾಗ್ತಿವಿ. ಈ ಕಾರಣದಿಂದಾಗಿ ಕೋಪ(Anger) ಬರುತ್ತೆ. ಇನ್ನೊಬ್ಬರು ಮಾಡಿದ ತಪ್ಪನ್ನು ನಾವು ಕ್ಷಮಿಸೋದಿಲ್ಲ ಮತ್ತು ಅದನ್ನು ಮನಸಿನಲ್ಲಿಯೇ ಹಿಡಿದಿಟ್ಟುಕೊಳ್ಳುತ್ತೇವೆ. ಆದ್ದರಿಂದ ಜನರು ಮಾಡಿದ ತಪ್ಪಿಗೆ ಅವರನ್ನು ಕ್ಷಮಿಸಲು ಕಲಿಯಿರಿ. ಇದು ಮುಂದೆ ಸಾಗಲು ನಿಮಗೆ ಸಹಾಯ ಮಾಡುತ್ತೆ.
ಧ್ಯಾನ (Meditation)
ಧ್ಯಾನ ಒಂದು ಧಾರ್ಮಿಕ ಕ್ರಿಯೆಯಲ್ಲ. ಬದಲಾಗಿ, ನಮ್ಮ ಆರೋಗ್ಯಕರ ಜೀವನಶೈಲಿಗೆ ಇದು ಬಹಳ ಮುಖ್ಯ. ಧ್ಯಾನ ಮಾಡುವ ಮೂಲಕ, ನಾವು ಆಲೋಚನೆಗಳನ್ನು ನಿಯಂತ್ರಿಸಲು ಕಲಿಯುತ್ತೇವೆ. ಇದು ನಕಾರಾತ್ಮಕ ಆಲೋಚನೆಗಳನ್ನು ದೂರ ಮಾಡಲು ಸಹಾಯ ಮಾಡುತ್ತೆ.
ಮಿ ಟೈಮ್ (Me time)
ಪುರುಷರು ಮಿ ಟೈಮ್ ನಿಷ್ಪ್ರಯೋಜಕ ವಿಷಯವೆಂದು ಅಂದುಕೊಳ್ತಾರೆ. ಅವಸರದಲ್ಲಿ ತನಗಾಗಿ ಸಮಯವನ್ನು ಮಾಡಿಕೊಳ್ಳೋದಿಲ್ಲ. ಇದರಿಂದಾಗಿ ಅವರು ಸಂತೋಷ ಮತ್ತು ಮಾನಸಿಕ ಶಾಂತಿಯನ್ನು ಪಡೆಯೋದಿಲ್ಲ. ಅದಕ್ಕಾಗಿ ನಿಮಗಾಗಿ ನೀವು ಸಮಯ ಮೀಸಲಿಡೋದನ್ನು ಕಲಿಯಿರಿ. ಇದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ.
ನೀವು ಯಾವುದೇ ವಿಷಯಗಳನ್ನು ಇಷ್ಟಪಡುತ್ತೀರೋ, ಅದಕ್ಕಾಗಿ ಪ್ರತಿದಿನ ಸ್ವಲ್ಪ ಸಮಯ ಮೀಸಲಿಡಿ. ಇದು ನಿಮ್ಮ ಒತ್ತಡವನ್ನು(Stress) ದೂರವಿರಿಸುತ್ತೆ ಮತ್ತು ಆಂತರಿಕ ಸಂತೋಷವನ್ನು ಸಹ ನೀಡುತ್ತೆ. ಹಾಗಾಗಿ ಮಿ ಟೈಮ್ ತುಂಬಾ ಮುಖ್ಯ. ಇನ್ನು ಮುಂದಾದರೂ ನಿಮಗಾಗಿ ನೀವು ಸಮಯ ಮೀಸಲಿಡೋದನ್ನು ಕಲಿಯಿರಿ.
ಬರವಣಿಗೆ(Writing)
ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಬರವಣಿಗೆ ಅತ್ಯುತ್ತಮ ಮಾರ್ಗವಾಗಿದೆ. ಅನೇಕ ಬಾರಿ ನಮ್ಮ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು ಸರಿ ಎಂದು ನಾವು ಭಾವಿಸೋದಿಲ್ಲ ಅಥವಾ ಅಂತಹ ಯಾವುದೇ ವ್ಯಕ್ತಿ ನಮ್ಮ ಲೈಫ್ ಲ್ಲಿ ಇಲ್ಲದೇ ಇರಬಹುದು. ಆದರೆ ಒಂದು ಡೈರಿ ಆ ಕೆಲಸವನ್ನು ಮಾಡಬಲ್ಲದು. ಒಳ್ಳೆಯ ಮತ್ತು ಕೆಟ್ಟ ಭಾವನೆಗಳ ಬಗ್ಗೆ ನಿಮ್ಮ ಡೈರಿಯಲ್ಲಿ ಪ್ರತಿದಿನ ಬರೆಯಿರಿ. ಇದರಿಂದ ಮನಸಿಗೆ ನೆಮ್ಮದಿ ಸಿಗುತ್ತೆ.
ನಿಸರ್ಗ(Nature)
ಪ್ರಪಂಚದ ಅತ್ಯಂತ ಆರಾಮ ಮತ್ತು ಶಾಂತಿಯು ಪ್ರಕೃತಿಯಿಂದ ಮಾತ್ರ ಸಿಗುತ್ತೆ. ಜಲಪಾತ ಅಥವಾ ನದಿ, ತೆರೆದ ಮತ್ತು ಶುದ್ಧ ಗಾಳಿ, ಮರಗಳು ಮತ್ತು ಸಸ್ಯಗಳ ಶಬ್ದವು ಮನಸ್ಸನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತೆ. ಇದಕ್ಕಾಗಿ, ನೀವು ಪ್ರತಿದಿನ ಪಾರ್ಕ್ ಗೆ ಹೋಗಬಹುದು ಅಥವಾ ಕೆಲವು ದಿನಗಳವರೆಗೆ ಶಾಂತ ಮತ್ತು ಏಕಾಂತ ಪರ್ವತಕ್ಕೆ ಹೋಗಬಹುದು. ಇದು ನಕಾರಾತ್ಮಕ ಆಲೋಚನೆಗಳನ್ನು ದೂರವಿಡಲು ಸಹಾಯ ಮಾಡುತ್ತೆ.