Asianet Suvarna News Asianet Suvarna News

ಎಚ್ಚರವಾಗಿಬಿಡುತ್ತೆ, ನಿದ್ರೆಯೇ ಬರೋಲ್ಲ ಎನ್ನೋರಿಗೆ ಇಲ್ಲಿವೆ ಟಿಪ್ಸ್

ಒಂದು ದಿನ ನಿದ್ರೆ ಇಲ್ಲದಿದ್ದರೆ ಮನುಷ್ಯನ ಆರೋಗ್ಯದಲ್ಲಿ ಹಲವು ಏರಿಳಿತಳಗಳನ್ನು ಕಾಣಬಹುದು. ಹೀಗಿರುವ ರಾತ್ರಿ ಒಂದು ಬಾರಿ ಎಚ್ಚರವಾದರೆ ಮತ್ತೆ ನಿದ್ರೆ ಬರುವುದು ಕಷ್ಟ. ಈ ರೀತಿಯ ಸಮಸ್ಯೆಯಿಂದ ಬಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಈ ರೀತಿ ಮಧ್ಯ ರಾತ್ರಿ ನಿದ್ರಾಹೀನತೆಯಿಂತ(Insomnia) ತಪ್ಪಿಸಿಕೊಳ್ಳಲು ಇಲ್ಲಿವೆ ಸಲಹೆಗಳು

How to overcome from Mid Night Sleeping Disorder
Author
First Published Oct 31, 2022, 10:23 AM IST

ರಾತ್ರಿಯ ನಿದ್ದೆಯು ಅನೇಕ ಆರೋಗ್ಯ ಸಮಸ್ಯೆಗಳನ್ನು ಮೊಗ್ಗಿನಲ್ಲೇ ಚಿವುಟಿ ಹಾಕುತ್ತದೆ. ದೇಹವನ್ನು ರಿಪೇರಿ ಮಾಡುವುದರಿಂದ ಹಿಡಿದು ಮುಂದಿನ ದಿನದಲ್ಲಿ ಮನಸ್ಸನ್ನು ರೀಚಾರ್ಜ್(Recharge) ಮಾಡುವವರೆಗೂ ದೇಹದ ಅನೇಕ ಪ್ರಮುಖ ಕಾರ್ಯಗಳಿಗೆ ನಿದ್ರೆ ಅತ್ಯಗತ್ಯ. ಚೆನ್ನಾಗಿ ನಿದ್ರಿಸಿದಾಗ ವಿಷಯಗಳು ಉತ್ತಮವಾಗಿ ಬದಲಾಗಬಹುದು. ಅದಾಗ್ಯೂ, ನಿದ್ರೆಯ ಸಮಸ್ಯೆಗಳೊಂದಿಗೆ ಹೋರಾಡುವ ಅನೇಕ ಜನರಿದ್ದಾರೆ. ಆಧುನಿಕ ಜೀವನಶೈಲಿಯ ಒತ್ತಡ(Stress) ಮತ್ತು ಆತಂಕವು(Anxiety) ನಮ್ಮ ಆಲೋಚನೆಗಳನ್ನು ಒಳನುಗ್ಗುವಂತೆ ಮಾಡುತ್ತದೆ. ಗುಣಮಟ್ಟದ ನಿದ್ರೆಗೆ ಮುಖ್ಯವಾದ ವಿಶ್ರಾಂತಿಯ ಆಳವಾದ ಸ್ಥಿತಿಯನ್ನು ಪ್ರವೇಶಿಸುವುದನ್ನು ತಡೆಯುವುದರಿಂದ ಪ್ರತಿ ದಿನವೂ ನಿದ್ರಾಹೀನತೆ ಎಂಬುದು ಸಾಮಾನ್ಯವಾಗಿ ಹೆಚ್ಚುತ್ತಿದೆ.

ಬಹುತೇಕ ಜನರು ಮಧ್ಯರಾತ್ರಿಯಲ್ಲಿ ಎಚ್ಚರಗೊಂಡರೆ ಮತ್ತೆ ಅವರಿಗೆ ನಿದ್ರೆ ಬರುವುದು ಕಷ್ಟ. ನಿದ್ರಿಸಲು ಸಾಧ್ಯವಾಗುತ್ತಿಲ್ಲ ಎಂಬ ಆತಂಕವೇ ವ್ಯಕ್ತಿಯ ನಿದ್ರೆಯನ್ನು ತಡೆಯುವಂತೆ ಮಾಡುತ್ತದೆ. ಈ ರೀತಿ ಮಧ್ಯರಾತ್ರಿಯಲ್ಲಿ ನಿದ್ರೆಗೆಡಿಸುವ ಹಿಂದೆ ಹಲವು ಕಾರಣವಿರಬಹುದು. ಮಧ್ಯರಾತ್ರಿಯಲ್ಲಿ ಒತ್ತಡ ಮತ್ತು ಆತಂಕದ ಸಮಸ್ಯೆಗಳನ್ನು ಕೆಲವು ಸಲಹೆಗಳು ಮತ್ತು ತಂತ್ರಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವ ಮೂಲಕ ನಿಭಾಯಿಸಬಹುದು.

ರಾತ್ರಿಯಲ್ಲಿ ಒಮ್ಮೆ ಎಚ್ಚರವಾದಾಗ ನಿದ್ರೆ ಮಾಡುವಾಗಿನ ತೊಂದರೆಯನ್ನು ವೈದ್ಯಕೀಯವಾಗಿ ನಿದ್ರಾಹೀನತೆ ಎಂದು ಹೇಳಲಾಗುತ್ತದೆ. ರಾತ್ರಿಯ ನಿದ್ರೆಯಲ್ಲಿ ತೊಂದರೆಯನ್ನು ಅನುಭವಿಸುವುದಕ್ಕೆ ನಿದ್ರಾಹೀನತೆ ಎನ್ನುತ್ತಾರೆ. ರಾತ್ರಿ ನಿದ್ರೆಯಿಂದ ಎಚ್ಚರವಾದಾಗ ಮತ್ತೆ ನಿದ್ರೆ ಬರದಿರಲು ಹಲವು ಕಾರಣಗಳಿವೆ ಎಂದು ತಜ್ಞರು ಹೇಳುತ್ತಾರೆ. 

ಈ ರೀತಿಯಾಗಿ ನಿಮ್ಮ ಸ್ಕ್ರೀನ್ ಟೈಮ್ ಕಡಿಮೆ ಮಾಡೋದನ್ನು ಕಲಿಯಿರಿ

ನಿದ್ರೆಯಿಂದ ಎಚ್ಚರಗೊಂಡ ನಂತರ ಮತ್ತೆ ನಿದ್ರಿಸದಿರಲು ಕಾರಣಗಳು 
1. ಬಾಹ್ಯ ಅಂಶಗಳು(External Factor) 

ಕೋಣೆಯ ಉಷ್ಣತೆ, ದೀಪಗಳು, ಶಬ್ದಗಳು ಅಥವಾ ಅಂತಹ ಯಾವುದೇ ಅಂಶವು ನಿದ್ರೆಯ ಅಡಚಣೆಗೆ ಕಾರಣವಾಗಬಹುದು.

2. ನಿದ್ರೆಯ ಅಸ್ವಸ್ಥತೆ( Sleep Disorder)
ಕೆಲವು ನಿದ್ರಾಹೀನತೆಗಳು ರಾತ್ರಿಯ ನಿದ್ರೆಯನ್ನು ಆನಂದಿಸುವುದನ್ನು ತಡೆಯಬಹುದು. ಕೆಲವು ರೀತಿಯ ವೈದ್ಯಕೀಯ ತೊಂದರೆಗಳು ಇರಬಹುದು. ವೈದ್ಯಕೀಯ ಕಾರಣಗಳಲ್ಲಿ ನಿದ್ರೆಗೆ ಸಂಬAಧಿಸಿದ ಉಸಿರಾಟದ ಅಸ್ವಸ್ಥತೆಗಳು,  ಆವರ್ತಕ ಅಂಗಗಳ ಚಲನೆಯ ಅಸ್ವಸ್ಥತೆಗಳು ನಿದ್ರಿಸಲು ತೊಂದರೆಕೊಡಬಹುದು.

3. ಹೃದಯ ವೈಫಲ್ಯ, ಪ್ರಾಸ್ಟೇಟ್ ಸಮಸ್ಯೆಗಳು(Cardiac Failure, Prostate Issues) 

ನಿದ್ರೆಯ ಅಸ್ವಸ್ಥತೆಗಳ ಹೊರತಾಗಿ ಹೃದಯ ವೈಫಲ್ಯದಂತಹ ಇತರೆ ವೈದ್ಯಕೀಯ ಕಾರಣಗಳು ಉಸಿರಾಟ ಮತ್ತು ತೊಂದರೆಗೊಳಗಾದ ನಿದ್ರೆಗೆ ಕಾರಣವಾಗಬಹುದು. ಹೆಚ್ಚಿದ ಪ್ರಾಸ್ಟೇಟ್ ಆಗಾಗ್ಗೆ ರಾತ್ರಿಯ ಮೂತ್ರ ವಿಸರ್ಜನೆಗೆ ಕಾರಣವಾಗಬಹುದು. ಇದು ಮತ್ತೆ ನಿದ್ರೆಗೆ ಅಡ್ಡಿಪಡಿಸುತ್ತದೆ. 

ಈ ಗಿಡಮೂಲಿಕೆ ಬಳಸಿದ್ರೆ 5 ನಿಮಿಷಗಳಲ್ಲಿ ನಿದ್ರೆ ಬರುತ್ತೆ! ಟ್ರೈ ಮಾಡಿ ನೋಡಿ

ಹಾಸಿಗೆಗೆ ಹೋಗುವ ಮುನ್ನ ನಿದ್ರೆಯ ಕುರಿತು ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ ಅಂಶಗಳು
1. ವಾರದ ಎಲ್ಲಾ ದಿನಗಳಲ್ಲಿ ಒಂದೇ ರೀತಿಯ ನಿದ್ರೆ ಮತ್ತು ಏಳುವ ಸಮಯವನ್ನು ಅನುಸರಿಸಿ. ಹಾಗೂ ವಾರಾಂತ್ಯದಲ್ಲಿ ನಿದ್ರೆ ಕುರಿತು ವಿನಾಯಿತಿಗಳನ್ನು ಕಂಡುಕೊಳ್ಳಬೇಡಿ.
2. ಸಂಜೆ 6 ಗಂಟೆಯ ನಂತರ ಕೆಫೀನ್‌ಯುಕ್ತ(Caffeine Drinks) ಪಾನೀಯಗಳನ್ನು ಸೇವಿಸಬೇಡಿ.
3. ಮಲಗುವ ಸಮಯಕ್ಕೆ ಕನಿಷ್ಠ 3 ಗಂಟೆಗಳ ಮೊದಲು ನೀಲಿ ಬೆಳಕನ್ನು(Blue Light) ಹೊರಸೂಸುವ ಎಲೆಕ್ಟ್ರಾನಿಕ್ಸ್ ಗ್ಯಾಜೆಟ್‌ಗಳನ್ನು(Electronic Gadgets) ತಪ್ಪಿಸಿ. 
4. ಮದ್ಯಪಾನ(Drinking) ಮತ್ತು ಧೂಮಪಾನ(Smoking) ರಾತ್ರಿವೇಳೆ ಬೇಡ. 
5. ನಿಮಗಾಗಿ ಆಹ್ಲಾದಕರ ಮಲಗುವ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸಿ.

ರಾತ್ರಿ ಚೆನ್ನಾಗಿ ಮಲಗಿದ್ದೀರಾ ? Good sleep ಆಗಿದ್ಯಾ ಅಂತ ಹೀಗೆ ಚೆಕ್ ಮಾಡಿ

ರಾತ್ರಿ ಹಠಾತ್ತನೆ ಎದ್ದ ನಂತರ ಏನು ಮಾಡಬೇಕು
1. ರಾತ್ರಿ ಎದ್ದ ನಂತರ ನಿದ್ರೆಗೆ ಮರಳಲು ಮೊದಲನೆಯದು ಕಾರಣವನ್ನು ಕಂಡುಹಿಡಿಯುವುದು.
2. ರಾತ್ರಿ ಎದ್ದ ನಂತರ ಎಲೆಕ್ಟ್ರಾನಿಕ್ ಗ್ಯಾಜೆಟ್ ಅನ್ನು ಬಳಸಬೇಡಿ.
3. ಕೋಣೆಯ ಉಷ್ಣಾಂಶವನ್ನು ಆಹ್ಲಾದಕರವಾಗಿಡಲು ಪ್ರಯತ್ನಿಸಿ. ಬಾಹ್ಯ ದೀಪಗಳನ್ನು ನಿರ್ಬಂಧಿಸಿ.
4. ಹಿತವಾದ ಸಂಗೀತವನ್ನು(Music) ಆಲಿಸಿ. ನಿಮ್ಮ ದೇಹದ ಪ್ರತಿಯೊಂದು ಸ್ನಾಯುವನ್ನು ಕಾಲಿನ ಬೆರಳಿನಿಂದ ತಲೆಯವರೆಗೆ ವಿಶ್ರಾಂತಿ ಮಾಡಿ. ಇದು ಒತ್ತಡವನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ.
5. ಎಲ್ಲದಕ್ಕಿಂತ ಹೆಚ್ಚಾಗಿ ಧ್ಯಾನ(Meditation) ಮಾಡಲು ಪ್ರಯತ್ನಿಸಿ.

Follow Us:
Download App:
  • android
  • ios