- Home
- Entertainment
- TV Talk
- ಮತ್ತೊಂದು ಗುಡ್‌ನ್ಯೂಸ್ ಕೊಟ್ಟ ಕನ್ನಡ ಯುಟ್ಯೂಬರ್ ಮಧು ಗೌಡ; ಅಂಬಾನಿ ಥರ 1 ವಾರ ಮದುವೆಯಾಗಿದ್ದ ಜೋಡಿ
ಮತ್ತೊಂದು ಗುಡ್‌ನ್ಯೂಸ್ ಕೊಟ್ಟ ಕನ್ನಡ ಯುಟ್ಯೂಬರ್ ಮಧು ಗೌಡ; ಅಂಬಾನಿ ಥರ 1 ವಾರ ಮದುವೆಯಾಗಿದ್ದ ಜೋಡಿ
Kannada Youtuber Madhu Gowda Pregnancy: ಕನ್ನಡ ಯುಟ್ಯೂಬರ್ ಮಧು ಗೌಡ ಅವರು ಎರಡು ವರ್ಷಗಳ ಹಿಂದೆ ಅದ್ದೂರಿಯಾಗಿ ಮದುವೆ ಆಗಿದ್ದರು. ನಿಖಿಲ್ ರವೀಂದ್ರ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಒಂದು ವಾರಗಳ ಕಾಲ ಮದುವೆ ನಡೆದಿತ್ತು.

ಒಂದು ವಾರದ ಕಾಲ ಮದುವೆ
ಮಧು ಗೌಡ ಹಾಗೂ ನಿಖಿಲ್ ರವೀಂದ್ರ ಅವರು ಇಬ್ಬರೂ ಯುಟ್ಯೂಬರ್ ಆಗಿದ್ದಾರೆ. ನಿಖಿಲ್ ತಂಗಿ ನಿಶಾ ಹಾಗೂ ಮಧು ಇಬ್ಬರೂ ಸ್ನೇಹಿತರು. ಇವರ ಮೂಲಕವೇ ನಿಖಿಲ್-ಮಧು ಪರಿಚಯ ಆಗಿತ್ತು. ಒಂದು ವಾರಗಳ ಕಾಳ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆಯಾಗಿದ್ದರು. ಕನ್ನಡದಲ್ಲಿ ಇವರೇ ಒಂದು ವಾರದ ಕಾಲ ಮದುವೆ ಆಗಿದ್ದು ಎಂದು ಟ್ರೋಲ್ ಆಗಿತ್ತು.
ಬ್ಯುಸಿನೆಸ್ ಆರಂಭ
ಮಧು ಗೌಡ ಹಾಗೂ ನಿಖಿಲ್ ಅವರು ಈಗ ಸೀರೆ ಬ್ಯುಸಿನೆಸ್ ಕೂಡ ಮಾಡುತ್ತಿದ್ದಾರೆ. ಇವರ ಸೀರೆ ಬ್ಯುಸಿನೆಸ್ ಸಖತ್ ಆಗಿ ನಡೆಯುತ್ತಿದೆ. ಅಂದಹಾಗೆ ಯುಟ್ಯೂಬ್, ಜಾಹೀರಾತು ಕೂಡ ಮಾಡುತ್ತಿದ್ದಾರೆ.
ಇಷ್ಟೆಲ್ಲ ಹಣ ಬರುತ್ತಿರೋದು ಹೇಗೆ?
ಪದೇ ಪದೇ ಟ್ರಿಪ್, ಬಂಗಾರ ಖರೀದಿ, ಮನೆ ಕಟ್ಟುವುದನ್ನೆಲ್ಲ ನೋಡಿ ಅನೇಕರು, ಇವರಿಗೆ ಯುಟ್ಯೂನ್‌ನಿಂದಲೇ ಇಷ್ಟೆಲ್ಲ ಹಣ ಬರುತ್ತಿದೆಯಾ ಎಂಬ ಪ್ರಶ್ನೆ ವೀಕ್ಷಕರಿಗೆ ಕಾಡಿತ್ತು. ಆದರೆ ಮಧು ಗೌಡ ಅವರ ತವರು ಮನೆಯಲ್ಲಿ ಶ್ರೀಮಂತರು, ಒಟ್ಟೂ ಹದಿನಾಲ್ಕು ಮನೆಗಳನ್ನು ಬಾಡಿಗೆಗೆ ನೀಡಲಾಗಿದೆಯಂತೆ.
ಅದ್ದೂರಿ ಮದುವೆ
ವಿಶೇಷವಾದ ಡಿಸೈನರ್ ಬಟ್ಟೆ, ಕಂಪ್ಲೀಟ್ ಬಂಗಾರದ ಆಭರಣಗಳನ್ನು ಧರಿಸಿ ಮಧು ಗೌಡ ಹಾಗೂ ನಿಖಿಲ್ ರವೀಂದ್ರ ಅವರು ಮದುವೆಯಾಗಿದ್ದರು.
ಮಗುವಿನ ನಿರೀಕ್ಷೆ
ಮದುವೆಯಾಗಿ ಎರಡು ವರ್ಷಕ್ಕೆ ಈ ಜೋಡಿ ಗುಡ್‌ನ್ಯೂಸ್ ನೀಡಿದೆ. ಇವರಿಬ್ಬರು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರೋದಾಗಿ ಹೇಳಿಕೊಂಡಿದೆ.
ವಿಶೇಷ ಫೋಟೋಶೂಟ್
ಮಧು ಗೌಡ ಅವರು ಪ್ರಗ್ನೆನ್ಸಿ ಪ್ರಯುಕ್ತ ವಿಶೇಷ ಫೋಟೋಶೂಟ್ ಮಾಡಿಸಿದ್ದಾರೆ.
ಎರಡು ವರ್ಷ
ಮಧು ಗೌಡ ಮದುವೆಯಾಗಿ ಎರಡು ವರ್ಷ ಆಗಿದೆ, ಇವರಿಗೆ 25 ವರ್ಷ ವಯಸ್ಸು ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

