Actress Renu Sudhi: “ಸೀರೆ ಉಟ್ಟಾಗ ಹೊಟ್ಟೆ ಕಾಣದ ಹಾಗೆ ಅದರ ಮೇಲೆ ಟವೆಲ್ ಬಿಗಿಯಾಗಿ ಕಟ್ಟಿಕೊಳ್ಳಬೇಕಾ? ನನ್ನಿಂದ ಅದೆಲ್ಲಾ ಆಗಲ್ಲ,” ಎಂದು ನಟಿ ರೇಣು ಸುಧಿ ಟ್ರೋಲಿಗರಿಗೆ ಖಡಕ್ ಉತ್ತರ ನೀಡಿದ್ದಾರೆ. 

ನಟಿ ರೇಣು ಸುಧಿ, ತಮ್ಮ ಬಗ್ಗೆ, ತಮ್ಮ ಡ್ರೆಸ್ಸಿಂಗ್ ಬಗ್ಗೆ, ಹಾಗೇ ಹಿರಿಯ ಮಗ ಕಿಚು ಜೊತೆಗಿನ ಸಂಬಂಧದ ಬಗ್ಗೆ ಬರ್ತಿರೋ ನೆಗೆಟಿವ್ ಕಾಮೆಂಟ್‌ಗಳಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ. ನಾನೂ ಎಲ್ಲರ ಹಾಗೆ ಒಬ್ಬ ಮನುಷ್ಯಳು, ನನಗೂ ನೋವು, ಖುಷಿ ಎಲ್ಲ ಇದೆ. ಗಂಡ ತೀರಿಕೊಂಡ್ರು ಅಂತ ಸುಮ್ಮನೆ ಕೂರೋಕೆ ಆಗಲ್ಲ ಅಂತ ರೇಣು ಹೇಳಿದ್ದಾರೆ.

Add Asianetnews Kannada as a Preferred SourcegooglePreferred

"ನನ್ನ ಅಪ್ಪ-ಅಮ್ಮನಿಗೆ ಹುಷಾರಿಲ್ಲ. ಇಡೀ ಮನೆ ಜವಾಬ್ದಾರಿ ನನ್ನ ಮೇಲಿದೆ. ನನ್ನ ಮಕ್ಕಳನ್ನು ನಾನು ಉಪವಾಸ ಇಡೋಕೆ ಆಗಲ್ಲ. ಜೀವನದಲ್ಲಿ ಏನು ಮಾಡೋದು ಅಂತ ತೋಚದೆ ಇದ್ದಾಗ, ಪುಣ್ಯಕ್ಕೆ ಸಣ್ಣಪುಟ್ಟ ಆಲ್ಬಂ, ನಾಟಕಗಳಲ್ಲಿ ಅವಕಾಶ ಸಿಕ್ತು. ದಿವಂಗತ ಪತಿ ಸುಧೀ ಅವರ ಆಶೀರ್ವಾದದಿಂದಲೇ ಬಿಗ್ ಬಾಸ್‌ನಂತಹ ದೊಡ್ಡ ಶೋಗೆ ನನ್ನನ್ನು ಕರೆದರು. ಅಲ್ಲಿ ನಾನು ಹೇಗಿದ್ದೆ ಅಂತ ನೀವೆಲ್ಲ ನೋಡಿದ್ದೀರಿ. ಬೈಯೋರು ಇದ್ದರೂ, ಇಷ್ಟಪಡೋರು ಆಗಲೂ ಇದ್ರು," ಅಂತ ರೇಣು ವಿವರಿಸಿದ್ದಾರೆ.

ಹೊಟ್ಟೆ ಕಂಡರೆ ಏನು ಮಾಡಲಿ?

ತಮ್ಮ ಡ್ರೆಸ್ಸಿಂಗ್ ಬಗ್ಗೆ ಬರೋ ಟೀಕೆಗಳಿಗೂ ರೇಣು ಉತ್ತರ ಕೊಟ್ಟಿದ್ದಾರೆ. "ಸೀರೆ ಉಟ್ಟಾಗ ಅದರ ಮೇಲೆ ಟವೆಲ್ ಹಾಕಿಕೊಳ್ಳಬೇಕಾ? ಹೊಟ್ಟೆ ಕಾಣಬಾರದು ಅಂತ ಸೀರೆ ಮೇಲೆ ಟವೆಲ್ ಬಿಗಿಯಾಗಿ ಕಟ್ಟಿಕೊಳ್ಳಬೇಕಾ? ನನ್ನ ಕೈಯಲ್ಲಿ ಅದೆಲ್ಲಾ ಆಗಲ್ಲ. ಹಳೆ ಕಾಲದಲ್ಲಿ ಹೆಂಗಸರು ಬರೀ ಸೀರೆ, ರವಿಕೆ ಹಾಕಿಕೊಂಡು ಓಡಾಡ್ತಿರಲಿಲ್ವಾ? ಆಗ ಹೊಟ್ಟೆ ಕಾಣ್ತಿರಲಿಲ್ವಾ?" ಅಂತ ಯೂಟ್ಯೂಬ್ ಚಾನೆಲ್ ಒಂದರ ಪ್ರಶ್ನೆಗೆ ರೇಣು ಖಾರವಾಗಿ ಕೇಳಿದ್ದಾರೆ.

ಇಂಟಿಮೇಟ್ ಸೀನ್‌ಗಳಿದ್ದ ಆಲ್ಬಂ ಬಗ್ಗೆ ಮಗ ಕಿಚು ಏನಾದ್ರೂ ಹೇಳಿದ್ನಾ ಅನ್ನೋ ಪ್ರಶ್ನೆಗೂ ರೇಣು ಸ್ಪಷ್ಟನೆ ನೀಡಿದ್ದಾರೆ. "ಹಾಗೆಲ್ಲಾ ಮಾತಾಡೋರ ಮಕ್ಕಳೇ ಏನಾದ್ರೂ ಹೇಳಿರಬೇಕು. ನನ್ನ ಮಗ ನಾನೆಷ್ಟೇ ಆಲ್ಬಂ ಮಾಡ್ಲಿ, ಏನೇ ಕೆಲಸ ಮಾಡ್ಲಿ, ಯಾವತ್ತೂ ಏನೂ ಹೇಳಿಲ್ಲ. ಒಂದ್ಸಲ ನನ್ನ ಒಂದು ಆಲ್ಬಂ ನೋಡಿ, 'ಅಮ್ಮಾ, ಇದರ ಕಥೆ ಏನು?' ಅಂತ ಅರ್ಥ ಆಗದೆ ಫೋನ್ ಮಾಡಿ ಕೇಳಿದ್ದ. ಅಷ್ಟೇ ಬಿಟ್ಟರೆ ಬೇರೇನೂ ಕೇಳಿಲ್ಲ," ಅಂತ ರೇಣು ಹೇಳಿದ್ದಾರೆ.