MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • Mother's Dayಗೆ ಕರ್ಣ ಸೀರಿಯಲ್​ ಕಿರಣ್ ರಾಜ್​ರಿಂದ ಅಮ್ಮನಿಗೆ ಭರ್ಜರಿ ಗಿಫ್ಟ್​- ವಿಡಿಯೋ ಶೇರ್​

Mother's Dayಗೆ ಕರ್ಣ ಸೀರಿಯಲ್​ ಕಿರಣ್ ರಾಜ್​ರಿಂದ ಅಮ್ಮನಿಗೆ ಭರ್ಜರಿ ಗಿಫ್ಟ್​- ವಿಡಿಯೋ ಶೇರ್​

ವಿಶ್ವ ಅಮ್ಮಂದಿರ ದಿನದಂದು 'ಕರ್ಣ' ಸೀರಿಯಲ್ ಖ್ಯಾತಿಯ ನಟ ಕಿರಣ್ ರಾಜ್ ತಮ್ಮ ತಾಯಿಗೆ ಮಹೀಂದ್ರಾ ಥಾರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ನಿಜ ಜೀವನದಲ್ಲಿಯೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅವರು, ತಮ್ಮ ಆದಾಯದ ಒಂದು ಭಾಗವನ್ನು ಅನಾಥರಿಗೆ ಸಹಾಯ ಮಾಡಲು ಮೀಸಲಿಟ್ಟಿದ್ದಾರೆ.

2 Min read
Author : Suchethana D
Published : May 10 2026, 09:52 AM IST
Share this Photo Gallery
  • FB
  • TW
  • Linkdin
  • Whatsapp
16
ವಿಶ್ವ ಅಮ್ಮಂದಿರ ದಿನ
Image Credit : Instagram

ವಿಶ್ವ ಅಮ್ಮಂದಿರ ದಿನ

ಇಂದು ಅರ್ಥಾತ್​ ಮೇ 10, ವಿಶ್ವ ಅಮ್ಮಂದಿರ ದಿನ. ಪ್ರತಿ ದಿನವೂ ಅಮ್ಮನ ದಿನವೇ ಆಗಿದ್ದರೂ, ಈ ಧಾವಂತದ ಬದುಕಿನಲ್ಲಿ ಅಮ್ಮನ ಬಗ್ಗೆ ಕಾಳಜಿ ತೋರುವುದನ್ನೇ ಮರೆಯುತ್ತಾರೆ, ಅಮ್ಮನಿಗಾಗಿ ಒಂದಿಷ್ಟು ಕ್ಷಣ ಮೀಸಲು ಇಡುವುದನ್ನೇ ಮರೆಯುವುದು ಇದೆ. ಅದೇ ಕಾರಣಕ್ಕೆ ಅಮ್ಮನ ದಿನ ಆಚರಿಸಲಾಗುತ್ತಿದೆ.

Add Asianetnews Kannada as a Preferred SourcegooglePreferred
26
ಅಮ್ಮನಿಗೆ ಕರ್ಣನ ಭರ್ಜರಿ ಗಿಫ್ಟ್​
Image Credit : Instagram

ಅಮ್ಮನಿಗೆ ಕರ್ಣನ ಭರ್ಜರಿ ಗಿಫ್ಟ್​

ಅಮ್ಮನ ದಿನದ ಅಂಗವಾಗಿ ಕರ್ಣ ಸೀರಿಯಲ್​ ಖ್ಯಾತಿಯ ಕರ್ಣ ಉರ್ಫ್​ ಕಿರಣ್​ ರಾಜ್​ ಅವರು, ಅಮ್ಮನಿಗೆ ಭರ್ಜರಿ ಗಿಫ್ಟ್​ ನೀಡಿದ್ದಾರೆ. ಅಮ್ಮನಿಗೆ ಕೇಕ್​ ತಿನ್ನಿಸಿ ವಿಷ್​ ಮಾಡಿರುವ ನಟ, ಮಹೀಂದ್ರಾ ಥಾರ್​ ಅನ್ನು ಗಿಫ್ಟ್​ ಆಗಿ ನೀಡಿದ್ದು, ಅದರ ವಿಡಿಯೋ ಶೇರ್​ ಮಾಡಿದ್ದಾರೆ.

Related Articles

Related image1
Karna ಸೀರಿಯಲ್​ಗೆ ಎರಡೆರಡು ಬಾರಿ ಅದೃಷ್ಟ ತಂದ TRP King ಕಿರಣ್​ ರಾಜ್​ ರೋಚಕ ಸ್ಟೋರಿ
36
ನಟನ ಕುರಿತು ಹೇಳುವುದಾದರೆ...
Image Credit : Instagram

ನಟನ ಕುರಿತು ಹೇಳುವುದಾದರೆ...

ಇನ್ನು ಕಿರಣ್ ರಾಜ್​ ಅವರ ಕುರಿತು ಹೇಳುವುದಾದರೆ, ಕಿರಣ್​ ರಾಜ್​ ಎಂದರೆ ಬಹಳಷ್ಟು ಮಂದಿಗೆ ತಿಳಿಯದೇ ಹೋಗಬಹುದು. ಆದರೆ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಕರ್ಣ ಸೀರಿಯಲ್​ (Karna Serial) ಕರ್ಣ ಎಂದರೆ ಸಾಕು, ಅಗತ್ಯಕ್ಕಿಂತ ಹೆಚ್ಚು ಒಳ್ಳೆಯವನಾಗಿರುವ ನಾಯಕ ಕಣ್ಮುಂದೆ ಬರುತ್ತಾರೆ. ಈ ಹ್ಯಾಂಡ್​ಸಮ್​ ಯುವಕನೇ ಕಿರಣ್​ ರಾಜ್​ (Kiran Raj). TRP King ಎಂದೇ ಫೇಮಸ್​ ಆಗಿದ್ದಾರೆ ಕಿರಣ್​ ರಾಜ್​.

46
ನಿಜ ಜೀವನದಲ್ಲಿಯೂ ಕರ್ಣ
Image Credit : social media

ನಿಜ ಜೀವನದಲ್ಲಿಯೂ ಕರ್ಣ

ಅಷ್ಟಕ್ಕೂ ಕಿರಣ್​ ರಾಜ್​ ಅವರು ನಿಜ ಜೀವನದಲ್ಲಿಯೂ ಕರ್ಣನೇ. ಅನಾಥ ಮಕ್ಕಳಿಗೆ ನೆರವು ನೀಡುವ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು ಕಿರಣ್​ ರಾಜ್​ (Karna urf Kiran Raj). ಅವರು ತಮ್ಮ ಆದಾಯದ ಒಂದು ಭಾಗವನ್ನು ಮೀಸಲಿಟ್ಟಿದ್ದಾರೆ.

56
ಜನರಿಗೆ ಸಹಾಯ
Image Credit : Asianet News

ಜನರಿಗೆ ಸಹಾಯ

ಅವರು ಅನಾಥಾಶ್ರಮ, ಬಡವರಿಗೆ, ಮತ್ತು ಬೀದಿ ಬದಿಯ ಜನರಿಗೆ ಆಹಾರ, ಊಟ, ಬಟ್ಟೆ, ನೋಟ್‌ಬುಕ್‍ಗಳಂತಹ ಅಗತ್ಯ ವಸ್ತುಗಳನ್ನು ವಿತರಿಸುತ್ತಾರೆ. ಅವರು ಹಬ್ಬಗಳ ಸಂದರ್ಭಗಳಲ್ಲಿ ವಿಶೇಷವಾಗಿ ಸಹಾಯ ಮಾಡುತ್ತಾರೆ ಮತ್ತು ಕೋವಿಡ್‌-19 ಸಮಯದಲ್ಲಿಯೂ ಅವರು ಸಾಕಷ್ಟು ಸೇವೆ ಮಾಡಿದ್ದಾರೆ.

66
ನಟನ ಹಿನ್ನೆಲೆ
Image Credit : kiran raj instagram

ನಟನ ಹಿನ್ನೆಲೆ

ಮೈಸೂರಿನರಾದ ಕಿರಣ್ ಹುಟ್ಟಿ ಬೆಳೆದಿದ್ದೆಲ್ಲಾ ಉತ್ತರ ಭಾರತದಲ್ಲಿ. ಲವ್ ಬೈ ಚಾನ್ಸ್, ಯೇ ರಿಸ್ತಾ ಕ್ಯಾ ಕೆಹಲಾತಾ ಹೈ, ಹೀರೋಸ್, ಕನೆಕ್ಷನ್ ಆಫ್ ಟೀನೇಜರ್ಸ್ ಧಾರಾವಾಹಿಗಳಲ್ಲಿ ನಟಿಸಿದರು. ದೇವತಿ ಸೀರಿಯಲ್ ಮೂಲಕ ಸೀರಿಯಲ್​ಗೆ ಎಂಟ್ರಿ ಕೊಟ್ಟ ಇವರು, ಗುಂಡ್ಯಾನ್ ಹೆಂಡ್ತಿ, ಚಂದ್ರಮುಖಿ, ಕಿನ್ನರಿ, ಕನ್ನಡತಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡತಿ ಧಾರಾವಾಹಿಯಲ್ಲಿನ ಅಭಿನಯಕ್ಕಾಗಿ ಜನಮೆಚ್ಚಿದ ನಾಯಕ ಪ್ರಶಸ್ತಿ ಪಡೆದಿದ್ದಾರೆ. ಡ್ಯಾನ್ಸ್ ಡ್ಯಾನ್ಸ್ ಹಾಗೂ ಲೈಫ್ ಸೂಪರ್ ಗುರು, ಬಿಗ್‌ಬಾಸ್‌ ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕರ್ಣ ಧಾರಾವಾಹಿ
ಸಂಬಂಧಗಳು
ಮನರಂಜನಾ ಸುದ್ದಿ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ಶೇ.60 ರಷ್ಟು ಉದ್ಯೋಗಿಗಳಿಗೆ ಸಹೋದ್ಯೋಗಿಗಳ ಜೊತೆ ಅಫೇರ್; ಸಮೀಕ್ಷೆಯಲ್ಲಿ ಹೊರಬಿತ್ತು ಶಾಕಿಂಗ್ ರಿಪೋರ್ಟ್
Recommended image2
ರಶ್ಮಿಕಾ ಜೊತೆ ಬಾಲ್ಕನಿಗೆ ಬಂದು ವಿಜಯ್ ಮಾಡಿದ 'ಈ ಕೆಲಸ' ವೈರಲ್; ಇಷ್ಟು ವರ್ಷದಲ್ಲಿ ಇದೇ ಮೊದಲಂತೆ!
Recommended image3
ಈ 3 ಟೈಮ್‌ನಲ್ಲಿ ಯಾರಾದ್ರೂ ಮಾತಾಡಿದ್ರೆ ಸಾಕೆಂದು 6,000 ರೂ.ಆಫರ್ ನೀಡಿದ ಯುವಕ!
Related Stories
Recommended image1
Karna ಸೀರಿಯಲ್​ಗೆ ಎರಡೆರಡು ಬಾರಿ ಅದೃಷ್ಟ ತಂದ TRP King ಕಿರಣ್​ ರಾಜ್​ ರೋಚಕ ಸ್ಟೋರಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved