ಮದುವೆ ಬಗ್ಗೆ ಕೊನೆಗೂ ಗುಡ್ನ್ಯೂಸ್ ಕೊಟ್ಟ ನಮ್ರತಾ ಗೌಡ: ಹುಡುಗನ ಬಗ್ಗೆ ಹೇಳಿದ್ದೇನು ನಟಿ
ಬಿಗ್ ಬಾಸ್ ಖ್ಯಾತಿಯ ನಟಿ ನಮ್ರತಾ ಗೌಡ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದು, ತಮ್ಮ ಮದುವೆ ಒಂದು ಟ್ರೆಂಡ್ ಸೃಷ್ಟಿಸಬೇಕು ಎಂಬ ಕನಸನ್ನು ಹಂಚಿಕೊಂಡಿದ್ದಾರೆ. ಜೊತೆಗೆ, ಕಾರ್ತಿಕ್ ಮಹೇಶ್ ಅವರೊಂದಿಗಿನ ಸಂಬಂಧದ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಮತ್ತು ಅದಕ್ಕೆ ಜೋಡಿಯ ಸ್ಪಷ್ಟನೆಯ ವಿವರಗಳು ಇಲ್ಲಿವೆ.

ಕರ್ಣದಲ್ಲಿ ನಿತ್ಯಾ
ಬಿಗ್ಬಾಸ್ ಮೂಲಕ ಫೇಮಸ್ ಆಗಿದ್ದ ನಟಿ ನಮ್ರತಾ ಗೌಡ, ಸದ್ಯ ಕರ್ಣ ಸೀರಿಯಲ್ನಲ್ಲಿ ನಿತ್ಯಾ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಸದ್ಯದ ಮಟ್ಟಿಗೆ ಅವರ ರೋಲ್ ಮುಗಿದಿದ್ದು, ಇನ್ನು ಯಾವ ರೂಪದಲ್ಲಿ ಕಾಣಿಸಿಕೊಳ್ಳುತ್ತಾರೋ ಎಂದು ಗೊತ್ತಾಗಬೇಕಿದೆ.
ಬಿಜಿ ನಟಿ
ಅದೇ ಇನ್ನೊಂದೆಡೆ ನಟಿ ರೀಲ್ಸ್, ಪ್ರಮೋಷನ್ ಆ್ಯಡ್ಸ್ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಬಿಜಿಯಾಗಿದ್ದಾರೆ. ಇದೀಗ ನಟಿ, ಯೋಗಲಕ್ಷ್ಮಿ ಸಿಲ್ಕ್ಸ್ ಸೀರೆ ಸುಗ್ಗಿ ಮತ್ತು ಮಹಾಲಕ್ಷ್ಮೀ ಸಿಲ್ಕ್ಸ್ ಸೀರೆ ಸಾಗರ 13ನೇ ಮಹಾಸಂಗಮದಲ್ಲಿ ಪಾಲ್ಗೊಳ್ಳಲು ಬಂದಾಗ ಅವರಿಗೆ ಮದುವೆಯ ಬಗ್ಗೆ ಪ್ರಶ್ನಿಸಲಾಗಿದೆ.
ನನಗೂ ಮದ್ವೆ ಇಷ್ಟ
ಆಗ ನಟಿ ನನಗೆ ಮದುವೆಯಾಗುವುದು ಎಂದರೆ ತುಂಬಾ ಇಷ್ಟ. ಅಂದರೆ ಮದುವೆ ಬಗ್ಗೆ ಯಾರಾದ್ರೂ ಕೇಳಿದ್ರೆ ಸಹಜವಾಗಿ ಸಂಕೋಚ ಆಗುತ್ತದೆ, ಮುಜುಗರ ಆಗುತ್ತದೆ. ಅಷ್ಟು ಓಪನ್ ಅಪ್ ಆಗಿ ಮಾತನಾಡಲು ನಾಚಿಕೆ ಆಗುತ್ತದೆ ಎಂದಿದ್ದಾರೆ. ನನಗೂ ಮದುವೆ ಬಗ್ಗೆ ಕನಸು ಇದೆ. ಆದರೆ ಅದನ್ನು ಎಲ್ಲರ ಬಳಿಯೂ ಹೇಳಿಕೊಳ್ಳಲು ಆಗಲ್ವಲ್ಲಾ ಎಂದಿದ್ದಾರೆ ನಟಿ. ಅದೆಲ್ಲಾ ಸೀಕ್ರೇಟ್ ಎಂದಿದ್ದಾರೆ.
ನಾನು ಟ್ರೆಂಡ್ ಆಗಬೇಕು
ನನ್ನ ಮದುವೆ ಸಾರಿ ಟ್ರೆಂಡ್ ಆಗಬೇಕು, ನನ್ನ ಮದುವೆಯ ಲುಕ್ಕೇ ಟ್ರೆಂಡ್ ಆಗಬೇಕು. ನನ್ನದು ಮಾತ್ರವಲ್ಲ, ನನ್ನ ಹುಡುಗನ ಲುಕ್ ಕೂಡ ಟ್ರೆಂಡ್ ಆಗಬೇಕು. ಆ ರೀತಿ ಪ್ಲ್ಯಾನ್ ಮಾಡಬೇಕು ಅಂದುಕೊಂಡಿದ್ದೇನೆ. ನೋಡೋಣ ಎಂದಿದ್ದಾರೆ. ಹಾಗಿದ್ರೆ ಸದ್ಯದಲ್ಲಿಯೇ ಮದುವೆನಾ ಎಂದು ಪ್ರಶ್ನೆ ಕೇಳಿದಾಗ, ನಮ್ರತಾ ಗೌಡ ಮಾತು ಬದಲಿಸಿ ಈ ಸೀರೆಯ ರೇಟ್ ಎಷ್ಟು ಎಂದು ಕೇಳಿದ್ದಾರೆ. ಒಟ್ಟಿನಲ್ಲಿ ನಮ್ರತಾ ಗೌಡ ಶೀಘ್ರದಲ್ಲಿ ಗುಡ್ನ್ಯೂಸ್ ಕೊಡುತ್ತಾರೆ ಎಂದು ಅಭಿಮಾನಿಗಳ ಹಾರೈಕೆ ಆಗಿದೆ.
ಕಾರ್ತಿಕ ಮಹೇಶ್ ಜೊತೆ?
ಅಷ್ಟಕ್ಕೂ ನಮ್ರತಾ ಗೌಡ ಮತ್ತು ಬಿಗ್ ಬಾಸ್ ಖ್ಯಾತಿಯ ಕಾರ್ತಿಕ್ ಮಹೇಶ್ ನಡುವಿನ ಸಂಬಂಧದ ಬಗ್ಗೆ ಕಳೆದ ಕೆಲವು ತಿಂಗಳುಗಳಿಂದ ಸುದ್ದಿ ಹರಿದಾಡುತ್ತಲೇ ಇದೆ. ನಟಿ ನಮ್ರತಾ ಗೌಡ ಅವರು ಆಗಾಗ ಟ್ರಿಪ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಅವರು ವಿದೇಶಕ್ಕೆ ಹೋಗಿದ್ದರು. ಅಲ್ಲಿ ಅವರು ಭೇಟಿ ನೀಡಿರುವ ಸ್ಥಳಗಳಲ್ಲಿ ಫೋಟೋ, ವಿಡಿಯೋ ಮಾಡಿಕೊಂಡಿದ್ದರು. ಆ ವೇಳೆ ಅವರು ಒಬ್ಬರ ಕೈ ಹಿಡಿದುಕೊಂಡು ತಿರುಗಿದ್ದಾರೆ. ಆ ಕೈಗೆ ಹಾಕಿಕೊಂಡ ಬ್ಲ್ಯಾಕ್ ಬಾಂಡ್ ಹಾಗೂ ಕಾರ್ತಿಕ್ ಮಹೇಶ್ ಹಾಕಿಕೊಂಡ ಬ್ಯಾಂಡ್ ಎರಡೂ ಸೇಮ್ ಇದೆ ಎನ್ನಲಾಗಿತ್ತು.
ಜೋಡಿ ಹೇಳಿದ್ದೇನು?
ಈ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ ಉತ್ತರ ನೀಡಿದ ಕಾರ್ತಿಕ್ ಮಹೇಶ್ ಅವರು, “ಇಲ್ಲ, ಏನಾದರೂ ಇದ್ದಾಗ ನಾವು ಹೇಳುತ್ತೀವಿ. ನಾನು ಕೈಗೆ ಬ್ಯಾಂಡ್ ಹಾಕಿಕೊಂಡಿಲ್ಲ. ಈ ರೀತಿ ಜೋಡಿ ಮಾಡಿದ್ದನ್ನು ನಾನು, ನಮ್ರತಾ ಚರ್ಚೆ ಮಾಡಿಕೊಂಡು ನಕ್ಕಿದ್ದೇವೆ. ಅಭಿಮಾನಿಗಳು ಪೋಸ್ಟ್ ಹಾಕಿದಾಗ ಖುಷಿ ಆಗುತ್ತದೆ, ಈ ರೀತಿ ಬೇರೆಯವರ ಜೊತೆ ಕೂಡ ಫೋಟೋ ಹಾಕಿದ್ದಾರೆ. ಏನಾದರೂ ಇದ್ದರೆ ತಿಳಿಸುತ್ತೇವೆ” ಎಂದು ಹೇಳಿದ್ದರು.ಆದರೂ ಇವರಿಬ್ಬರ ನಡುವಿನ ಸಂಬಂಧ (Bigg Boss Karthik Mahesh and Namratha Gowda marriage) ಮದುವೆಯವರೆಗೂ ಹೋಗಲಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಸದ್ದು ಮಾಡುತ್ತಲೇ ಇರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

