- Home
- Entertainment
- TV Talk
- ಸಿನಿಮಾ ಕಥೆ ಮೀರಿಸುವಂತಿದೆ Madhyama Kutumba Vlogsನ ಪ್ರಿಯಾ ದಂಪತಿ ಲವ್ ಸ್ಟೋರಿ.. ಕಷ್ಟದ ದಿನ ನೆನೆದು ಭಾವುಕ
ಸಿನಿಮಾ ಕಥೆ ಮೀರಿಸುವಂತಿದೆ Madhyama Kutumba Vlogsನ ಪ್ರಿಯಾ ದಂಪತಿ ಲವ್ ಸ್ಟೋರಿ.. ಕಷ್ಟದ ದಿನ ನೆನೆದು ಭಾವುಕ
Madhyama Kutumba Vlogs Priya: ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸರಳತೆ ಮತ್ತು ಅನ್ಯೋನ್ಯತೆಯಿಂದಲೇ ಗುರುತಿಸಿಕೊಂಡಿರುವ ಜನಪ್ರಿಯ ಯೂಟ್ಯೂಬರ್ ಪ್ರಿಯಾ ಅವರು, ಇತ್ತೀಚೆಗೆ ತಮ್ಮ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಹಂಚಿಕೊಂಡ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.
ಸಿನಿಮಾ ಕಥೆಯಂತಿದೆ ಲವ್ ಸ್ಟೋರಿ
ಸಿನಿಮಾ ಕಥೆಯಂತಿದೆ ಲವ್ ಸ್ಟೋರಿ
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಜನಪ್ರಿಯ ಜೋಡಿ Madhyama Kutumba Vlogsನ ಪ್ರಿಯಾ ದಂಪತಿ ತಮ್ಮ ವಿವಾಹ ವಾರ್ಷಿಕೋತ್ಸವದ (Anniversary Week) ಅಂಗವಾಗಿ ತಮ್ಮ ಜೀವನದ ಏರಿಳಿತಗಳು ಹಾಗೂ ಪ್ರೀತಿಯ ಜರ್ನಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. "ನಮ್ಮ ಲವ್ ಸ್ಟೋರಿ ಒಂದು ಸಿನಿಮಾ ಕಥೆಯಂತಿದೆ" ಎಂದು ಹೇಳುವ ಮೂಲಕ ತಮ್ಮ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.
ಹಳೆಯ ಕಹಿ ನೆನಪು ಬೇಡ
ಹಳೆಯ ಕಹಿ ನೆನಪು ಬೇಡ
"ನಮ್ಮ ಲವ್ ಸ್ಟೋರಿಯ ಬಗ್ಗೆ ಸಾಕಷ್ಟು ಜನರು ಕೇಳುತ್ತಿದ್ದರು, ಆದರೆ ಮದುವೆಗೆ ಮುಂಚಿನ ಕಥೆಯನ್ನು ಹಂಚಿಕೊಳ್ಳಲು ನಾವು ಇಷ್ಟಪಡುವುದಿಲ್ಲ" ಎಂದು ಪ್ರಿಯಾ ನಿರಾಕರಿಸಿದ್ದಾರೆ. "ಏಕೆಂದರೆ ನಮ್ಮ ಲವ್ ಸ್ಟೋರಿಯಲ್ಲಿ ಅನೇಕ ವ್ಯಕ್ತಿಗಳು ಬರುತ್ತಾರೆ. ಅಂದು ಇದ್ದ ಪರಿಸ್ಥಿತಿಯೇ ಬೇರೆ, ಇಂದು ಎಲ್ಲವೂ ಬದಲಾಗಿದೆ. ಹಳೆಯ ವಿಷಯಗಳನ್ನು ಕೆದಕಿ ಯಾರಿಗೂ ಮುಜುಗರ ಉಂಟುಮಾಡುವುದು ನಮಗೆ ಇಷ್ಟವಿಲ್ಲ. ಹಾಗಾಗಿ ಮದುವೆಯ ನಂತರದ ನಮ್ಮ ಸುಂದರ ಬದುಕಿನ ಬಗ್ಗೆ ಮಾತ್ರ ನಾವು ಹೇಳಿಕೊಳ್ಳುತ್ತೇವೆ" ಎಂದು ಪ್ರಿಯಾ ಸ್ಪಷ್ಟಪಡಿಸಿದ್ದಾರೆ.
ದಿನದಿಂದ ದಿನಕ್ಕೆ ಇನ್ನು ಹೆಚ್ಚಾಯಿತು ಪ್ರೀತಿ
ದಿನದಿಂದ ದಿನಕ್ಕೆ ಇನ್ನು ಹೆಚ್ಚಾಯಿತು ಪ್ರೀತಿ
ಅಂದಹಾಗೆ ಮದುವೆಯ ಆರಂಭದ ದಿನಗಳಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾಗಿ ದಂಪತಿಗಳು ನೆನಪಿಸಿಕೊಂಡಿದ್ದಾರೆ. "ಆರಂಭದಲ್ಲಿ ತುಂಬಾ ಜನ ನಮ್ಮ ಮೇಲೆ ಸಿಟ್ಟಾಗಿದ್ದರು. ನಾವು ಆ ಸಮಯದಲ್ಲಿ ಸಾಕಷ್ಟು ಆರ್ಥಿಕ ಹಾಗೂ ಮಾನಸಿಕ ಸಂಕಷ್ಟಗಳನ್ನು ಎದುರಿಸಿದೆವು. ಆದರೆ ಆ ಕಷ್ಟದ ಕಾಲವೇ ನಮ್ಮನ್ನು ಒಬ್ಬರಿಗೊಬ್ಬರು ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು. ಕಷ್ಟ ಬಂದಾಗ ದೂರ ಸರಿಯುವವರ ಮಧ್ಯೆ, ನಮ್ಮ ಪ್ರೀತಿ ದಿನದಿಂದ ದಿನಕ್ಕೆ ಇನ್ನು ಹೆಚ್ಚಾಯಿತು" ಎಂದು ಭಾವುಕರಾಗಿ ನುಡಿದಿದ್ದಾರೆ.
ಮಕ್ಕಳೂ ಕೂಡ ನಮ್ಮನ್ನು ನೋಡಿ ಸಾಕಷ್ಟು ಕಲಿತ್ತಿದ್ದಾರೆ
ಮಕ್ಕಳೂ ಕೂಡ ನಮ್ಮನ್ನು ನೋಡಿ ಸಾಕಷ್ಟು ಕಲಿತ್ತಿದ್ದಾರೆ
ತಮ್ಮ ಸುಖೀ ಸಂಸಾರದ ರಹಸ್ಯವನ್ನು ಬಿಚ್ಚಿಟ್ಟ ಅವರು, "ನಮ್ಮ ನಡುವೆ ಒಂದು ಡೀಲ್ ಇದೆ. ಇಂದು ಜಗಳವಾದರೆ ಒಬ್ಬರು ಕ್ಷಮೆ ಕೇಳಬೇಕು, ಮುಂದಿನ ಬಾರಿ ಇನ್ನೊಬ್ಬರು ಕ್ಷಮೆ ಕೇಳಬೇಕು. ನಮ್ಮ ಜಗಳ ಐದು ನಿಮಿಷಕ್ಕಿಂತ ಹೆಚ್ಚು ಹೊತ್ತು ಇರುವುದಿಲ್ಲ. ಒಬ್ಬರನ್ನೊಬ್ಬರು ಬಿಟ್ಟು ನಾವು ಒಂದು ನಿಮಿಷವೂ ಇರಲಾರೆವು" ಎಂದಿದ್ದಾರೆ. ಅಲ್ಲದೆ, ಮಕ್ಕಳೂ ಕೂಡ ತಮ್ಮ ಈ ಅನ್ಯೋನ್ಯತೆಯನ್ನು ನೋಡಿಯೇ ಬೆಳೆದಿದ್ದಾರೆ, ತಾಯಿಗೆ ಗೌರವ ನೀಡುವುದನ್ನು ತಂದೆಯಿಂದ ಕಲಿತಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಟೀಕೆ ಮಾಡುವವರಿಗೆ ಪ್ರಿಯಾ ಉತ್ತರ
ಟೀಕೆ ಮಾಡುವವರಿಗೆ ಪ್ರಿಯಾ ಉತ್ತರ
"ನಾನು ದಪ್ಪಗಿದ್ದೇನೆ, ನನ್ನ ಪತಿ ನೋಡಲು ಸಣ್ಣಗಿದ್ದಾರೆ ಅಥವಾ ಮಗನಂತೆ ಕಾಣುತ್ತಾರೆ ಎಂಬಿತ್ಯಾದಿ ನೆಗೆಟಿವ್ ಕಮೆಂಟ್‌ಗಳು ನಮಗೆ ಬಂದಿವೆ. ಆದರೆ ನಾವು ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ಜನರ ಮಾತು ಕೇಳುತ್ತಾ ಕೂತರೆ ಬದುಕು ನಡೆಸಲು ಸಾಧ್ಯವಿಲ್ಲ. ಪರಸ್ಪರ ಪ್ರೀತಿ, ನಂಬಿಕೆ ಇದ್ದರೆ ಎಲ್ಲವನ್ನೂ ಎದುರಿಸಬಹುದು" ಎಂದು ಟೀಕಾಕಾರರಿಗೆ ಟಾಂಗ್ ನೀಡಿದ್ದಾರೆ ಪ್ರಿಯಾ. ಸದ್ಯ ಈ ದಂಪತಿ ತಮ್ಮ ಹಳೆಯ ಕಹಿ ನೆನಪುಗಳನ್ನು ಮರೆತು, ಎಲ್ಲ ಸಂಬಂಧಿಕರೊಂದಿಗೆ ಒಟ್ಟಾಗಿ ದೊಡ್ಡ ಫ್ಯಾಮಿಲಿಯಾಗಿ ಸುಖವಾಗಿದ್ದಾರೆ. "ಪ್ರೀತಿ ಒಂದಿದ್ದರೆ ಜೀವನದಲ್ಲಿ ಎಲ್ಲವನ್ನೂ ಸಾಧಿಸಬಹುದು" ಎಂಬ ಸಂದೇಶದೊಂದಿಗೆ ಈ ದಂಪತಿ ತಮ್ಮ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.
ನೆಟ್ಟಿಗರ ಮೆಚ್ಚುಗೆಯ ಸುರಿಮಳೆ
ನೆಟ್ಟಿಗರ ಮೆಚ್ಚುಗೆಯ ಸುರಿಮಳೆ
ಪ್ರಿಯಾ ಅವರ ವಿಡಿಯೋಗೆ ನೆಟ್ಟಿಗರು ಅಭಿನಂದನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಪ್ರಮುಖವಾಗಿ ಕೆಲವು ಕಾಮೆಂಟ್‌ಗಳು ಗಮನ ಸೆಳೆದಿವೆ
"2019 ರಿಂದ ನಿಮ್ಮ ವ್ಲಾಗ್ (Vlog) ನೋಡ್ತಾ ಇದ್ದೀನಿ, ನಿಮ್ಮ ಜೀವನದ ಹಾದಿ ನಮಗೆ ಸ್ವಲ್ಪ ಅರ್ಥವಾಗುತ್ತೆ. Touchwood, ನೀವು ಹೀಗೆಯೇ ಸದಾ ಚೆನ್ನಾಗಿರಿ" ಎಂದು ಅಭಿಮಾನಿಯೊಬ್ಬರು ಹಾರೈಸಿದ್ದಾರೆ.
"ಎಲ್ಲಾ ಕಷ್ಟಗಳ ನಡುವೆಯೂ ಒಳ್ಳೆ ಮನಸ್ಸಿನಿಂದ ಎಲ್ಲರನ್ನು ಒಟ್ಟಿಗೆ ಸೇರಿಸಿ, ಇಂದು ಖುಷಿಯಿಂದ ಜೀವನ ಮಾಡ್ತಿದ್ದೀರಲ್ಲ, ಅದೇ ಗ್ರೇಟ್!" ಎಂದು ಇವರ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ.
"ನಮ್ಮವರೇ ನಮಗೆ ವೈರಿಯಾಗಿದ್ದ ದಿನಗಳು ಎಷ್ಟು ಇರುತ್ತವೆ.. ಆದರೆ ನಮ್ಮವರು ಎಂಬ ಭಾವನೆ ನಮ್ಮಲ್ಲಿರುವಾಗ ನಾವು ಅವರಿಗೆ ನೋವು ಕೊಡಲು ಬಯಸುವುದಿಲ್ಲ ಅಲ್ವಾ? ನಿಜಕ್ಕೂ ನಿಮ್ಮ ಮಾತು ಮನಸ್ಸಿಗೆ ತಾಕಿತು" ಎಂದು ಅನೇಕರು ತಮ್ಮ ಜೀವನದ ಅನುಭವವನ್ನೂ ಹಂಚಿಕೊಂಡಿದ್ದಾರೆ.
"ಮೊದಲು ಚೆನ್ನಾಗಿದ್ದೀರಿ, ಇನ್ಮುಂದೆಯೂ ದೇವರು ನಿಮ್ಮನ್ನು ಹೀಗೆಯೇ ಸುಖವಾಗಿಟ್ಟಿರಲಿ" ಎಂದು ನೂರಾರು ಜನರು ಹಾರೈಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
