- Home
- Life
- Relationship
- ರಾಹುಲ್ ಗಾಂಧಿ ಬಿಜೆಪಿಗೆ ಬಂದ್ರೆ ಮದ್ವೆಯಾಗ್ತಾರಂತೆ ಕಂಗನಾ ರಣಾವತ್? ನಟಿಯ ಪ್ರತಿಕ್ರಿಯೆ ವೈರಲ್
ರಾಹುಲ್ ಗಾಂಧಿ ಬಿಜೆಪಿಗೆ ಬಂದ್ರೆ ಮದ್ವೆಯಾಗ್ತಾರಂತೆ ಕಂಗನಾ ರಣಾವತ್? ನಟಿಯ ಪ್ರತಿಕ್ರಿಯೆ ವೈರಲ್
ನಟಿ ಮತ್ತು ಸಂಸದೆ ಕಂಗನಾ ರಣಾವತ್, ರಾಹುಲ್ ಗಾಂಧಿ ಕುರಿತು ತಾವು ಹೇಳಿಕೆ ನೀಡಿದ್ದಾರೆ ಎನ್ನಲಾದ ನಕಲಿ ಪೋಸ್ಟ್ ವಿರುದ್ಧ ಕಿಡಿಕಾರಿದ್ದಾರೆ. ಈ ವೈರಲ್ ಸುದ್ದಿಯನ್ನು ನೀಚತನದ್ದು ಎಂದು ಕರೆದಿರುವ ಅವರು, ಸುಳ್ಳು ಹರಡುವವರಿಗೆ ಎಚ್ಚರಿಕೆ ನೀಡಿದ್ದಾರೆ.

ಕಾಂಟ್ರವರ್ಸಿ ಕ್ಷೀನ್ ಕಂಗನಾ
ಬಾಲಿವುಡ್ ನಟಿ ಮತ್ತು ಹಿಮಾಚಲ ಪ್ರದೇಶದ ಮಂಡಿಯ ಸಂಸದೆ ಕಂಗನಾ ರಣಾವತ್ ಕಾಂಟ್ರವರ್ಸಿಗಳಿಂದಲೇ ಫೇಮಸ್ ಆಗಿರುವವರು. ಇದಕ್ಕೆ ಕಾರಣ, ಇದ್ದದ್ದನ್ನು ಇದ್ದ ಹಾಗೆ ನೇರಾನೇರ ಹೇಳಿ ಕಾಂಟ್ರವರ್ಸಿ ಕ್ರಿಯೇಟ್ ಮಾಡುತ್ತಲೇ ಇರುತ್ತಾರೆ. ಇನ್ನು ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಕಂಡರಂತೂ ಕಂಗನಾಗೆ ಇನ್ನಿಲ್ಲದ ಕೋಪ. ರಾಹುಲ್ ಗಾಂಧಿ ಅವರು ಹೊರದೇಶಗಳಿಗೆ ಹೋಗಿ ಭಾರತದ ಮರ್ಯಾದೆ ತೆಗೆಯುವಾಗ, ಸಂಸತ್ತಿನಲ್ಲಿ ಅಲ್ಲಿ ಸಂಬಂಧವಿಲ್ಲದ್ದನ್ನು ಮಾತನಾಡುವಾಗಲೆಲ್ಲಾ ಅವರ ತಲೆಯ ಮೇಲೆ ಹೊಡೆದಂತೆ ಕಂಗನಾ ಎದುರೆದುರಿಗೇ ಬೈಯುವಂಥವರು.
ರಾಹುಲ್ ಗಾಂಧಿ ಟಾರ್ಗೆಟ್
ಕಂಗನಾ ಪದೇ ಪದೇ ರಾಹುಲ್ ಗಾಂಧಿ ಅವರನ್ನು ಟಾರ್ಗೆಟ್ ಮಾಡುವುದನ್ನು ಕಂಡು ಕಂಡು ಸಾಕಾಗಿರುವ ರಾಹುಲ್ ಅಭಿಮಾನಿಗಳು ಇದೀಗ ಒಂದು ಪೋಸ್ಟ್ ಅನ್ನು ವೈರಲ್ ಮಾಡಿದ್ದರು. ಅದರಲ್ಲಿ ಕಂಗನಾ ಅವರು, ರಾಹುಲ್ ಗಾಂಧಿ ಬಿಜೆಪಿಗೆ ಬಂದರೆ ನಾನು ಅವರನ್ನು ಮದುವೆಯಾಗಲು ಸಿದ್ಧ ಎಂದು ಬರೆಯಲಾಗಿತ್ತು. ಇದನ್ನು ಕಂಗನಾ ಅವರೇ ಬರೆದಂತೆ ಬಿಂಬಿಸಲಾಗಿತ್ತು.
ವಿಕೃತ ಮನಸ್ಥಿತಿಗಳು
ಇದು ನಕಲಿ ಪೋಸ್ಟ್ ಎನ್ನುವುದು ಎಂಥವರಿಗೂ ತಿಳಿಯುತ್ತದೆ. ಆದರೆ ಇಂಥದ್ದಕ್ಕೇ ಕಾಯುವ ವಿಕೃತ ಮನಸ್ಸುಗಳು ಈ ಪೋಸ್ಟ್ ಹಂಚಿಕೊಂಡು ನಟಿಯ ಬಗ್ಗೆ ಇಲ್ಲಸಲ್ಲದ ಕಮೆಂಟ್ ಮಾಡುತ್ತಿದ್ದರು. ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಲೇ ಸಿಡಿದೆದ್ದಿದ್ದಾರೆ ನಟಿ, ಸಂಸದೆ ಕಂಗನಾ.
ನಟಿ ಹೇಳಿದ್ದೇನು?
ಈ ನಕಲಿ ಸುದ್ದಿ ಅತ್ಯಂತ ನೀಚತನದ್ದಾಗಿದೆ ಎಂದು ಬರೆದು ಕಂಗನಾ ತಮ್ಮ ಇನ್‌ಸ್ಟಾಗ್ರಾಮ್ ಕಥೆಯಲ್ಲಿ ನಕಲಿ ಪೋಸ್ಟ್ ಅನ್ನು ಮರು ಹಂಚಿಕೊಂಡಿದ್ದಾರೆ. ರಾಜಕೀಯದಲ್ಲಿಯೂ ಮಹಿಳೆಯರಿಗೆ ಯಾವುದೇ ಘನತೆ ಉಳಿದಿಲ್ಲ ಎಂದು ಕಂಗನಾ ವಿಷಾದಿಸಿದ್ದಾರೆ. ಅಂತಹ ಸುಳ್ಳುಗಳನ್ನು ಹರಡುವವರಿಗೆ ಅವರು ಎಚ್ಚರಿಕೆ ನೀಡಿದರು, ಅವರು ತಮ್ಮ ಕಾರ್ಯಗಳ ಬಗ್ಗೆ ನಾಚಿಕೆಪಡಬೇಕು ಎಂದು ಹೇಳಿದರು. ಅಂತಹ ಯಾವುದೇ ಅಗ್ಗದ ನಡವಳಿಕೆಯನ್ನು ನಾನು ಕ್ಷಮಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಚಿರಾಗ್ ಪಾಸ್ವಾನ್ ಜೊತೆ
ಕೆಲ ದಿನಗಳ ಹಿಂದೆ ನಟ, ಸಂಸದ ಚಿರಾಗ್ ಪಾಸ್ವಾನ್ ಜೊತೆ ಕಂಗನಾ ಅವರ ಮದುವೆ ಎನ್ನುವ ಸುದ್ದಿ ವೈರಲ್ ಮಾಡಲಾಗಿತ್ತು. ನಟಿ ಇನ್ನೂ ಸಿಂಗಲ್ ಆಗಿರುವ ಕಾರಣ, ಯಾರ್ಯಾರು ಸಿಂಗಲ್ ಇದ್ದಾರೋ ಅವರ ಹೆಸರಿನ ಜೊತೆ ನಟಿಯ ಹೆಸರನ್ನು ಸೇರಿಸಿ ವೈರಲ್ ಮಾಡಲಾಗುತ್ತಿದೆ.
ಕ್ವೀನ್ 2 ಚಿತ್ರದಲ್ಲಿ ನಟಿ
ಅಂದಹಾಗೆ ಕಂಗನಾ ಸದ್ಯ, "ಕ್ವೀನ್ 2" ಗಾಗಿ ತಯಾರಿಯಲ್ಲಿ ನಿರತರಾಗಿದ್ದಾರೆ. ತಮ್ಮ ನಟನಾ ವೃತ್ತಿಜೀವನದ ಮೇಲೆ ಸಂಪೂರ್ಣವಾಗಿ ಗಮನಹರಿಸುತ್ತಿದ್ದಾರೆ ಮತ್ತು ಅವರ ರಾಜಕೀಯ ವೃತ್ತಿಜೀವನವನ್ನು ಸಹ ಮುಂದುವರಿಸುತ್ತಿದ್ದಾರೆ. ಕೆಲಸದ ವಿಚಾರಕ್ಕೆ ಬಂದರೆ, ಅವರು ಶೀಘ್ರದಲ್ಲೇ ತಮ್ಮ "ಕ್ವೀನ್" ಚಿತ್ರದ ಮುಂದುವರಿದ ಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ವಿಕಾಸ್ ಬಹ್ಲ್ ಈ ಯೋಜನೆಗೆ ಸಿದ್ಧತೆಗಳನ್ನು ಚುರುಕುಗೊಳಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

