Hardik Pandyas Girlfriend Mahika Sharma Hints at Marriage ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ, ನತಾಶಾ ಸ್ಟಾಂಕೋವಿಕ್ ಜೊತೆಗಿನ ವಿಚ್ಛೇದನದ ನಂತರ ಮಾಡೆಲ್ ಮಹಿಕಾ ಶರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರೂ ಮಾಲ್ಡೀವ್ಸ್‌ನಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ.
ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ತಮ್ಮ ಕ್ರಿಕೆಟ್ ಪಂದ್ಯಗಳಿಂದ ಮಾತ್ರವಲ್ಲ, ವೈಯಕ್ತಿಕ ಜೀವನದ ಸುದ್ದಿಗಳಿಂದಲೂ ಪ್ರಚಲಿತದಲ್ಲಿರುತತಾರೆ. ಅವರ ರಿಲೇಷನ್‌ಷಿಪ್ ಸ್ಟೇಟಸ್‌ಗಳು ಆಗಾಗ ಗಮನಸೆಳೆಯುತ್ತಿರುತ್ತದೆ. ಹಾರ್ದಿಕ್ ಪಾಂಡ್ಯ ಅವರ ಪ್ರೇಮ ವ್ಯವಹಾರಗಳಿಂದಾಗಿ ಆಗಾಗ್ಗೆ ಚರ್ಚೆಯ ವಿಷಯವಾಗುತ್ತಾರೆ. ಅವರ ವೈಯಕ್ತಿಕ ಜೀವನವೂ ಸಹ ವಿವಾದದಲ್ಲಿರುವುದು ಹೊಸತಲ್ಲ. ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್ ಅವರಿಂದ ವಿಚ್ಛೇದನ ಪಡೆದ ನಂತರ, ಹಾರ್ದಿಕ್ ಈಗ ಜೀವನದಲ್ಲಿ ಮುಂದುವರೆದಿದ್ದಾರೆ ಮತ್ತು ಪ್ರಸ್ತುತ ಹೊಸ ಮಾಡೆಲ್ ಜೊತೆ ಕಾಣಿಸಿಕೊಂಡಿದ್ದಾರೆ. ಅವರ ಹೆಸರು ಮಹಿಕಾ ಶರ್ಮಾ. ಹೌದು, ಹಾರ್ದಿಕ್ ಪಾಂಡ್ಯ ಮತ್ತು ಮಾಡೆಲ್ ಮಹಿಕಾ ಶರ್ಮಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವುದು ದೃಢವಾಗಿದೆ. ಮಾಡೆಲ್ ಕ್ರಿಕೆಟಿಗನೊಂದಿಗೆ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಇದಷ್ಟೇ ಅಲ್ಲ, ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಒಟ್ಟಿಗೆ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ ಮತ್ತು ಅವರ ಫೋಟೋಗಳಿಂದ ಹಾರ್ದಿಕ್ ಮತ್ತು ಮಹಿಕಾ ಪರಸ್ಪರ ಸಂಬಂಧದಲ್ಲಿದ್ದಾರೆ ಎನ್ನುವುದೂ ಸ್ಪಷ್ಟವಾಗಿದೆ. ಈಗ ಮಹಿಕಾ ಶರ್ಮ ಗುಡ್‌ನ್ಯೂಸ್ ನೀಡುವ ಹಾದಿಯಲ್ಲಿದ್ದಾರೆ. ಅದೇನು ಅನ್ನೋದನ್ನೂ ಅವರೇ ತಿಳಿಸಿದ್ದಾರೆ.
ಏನಿದು ಗುಡ್‌ನ್ಯೂಸ್?
ಹಾರ್ದಿಕ್ ಪಾಂಡ್ಯ ಮತ್ತು ಮಹಿಕಾ ಶರ್ಮಾ ಪ್ರಸ್ತುತ ತಮ್ಮ ವೆಕೇಷನ್‌ಅನ್ನು ಆನಂದಿಸುತ್ತಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಅವರ ರೋಮ್ಯಾಂಟಿಕ್ ವೆಕೇಷನ್ ಫೋಟೋಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿವೆ. ಈ ಫೋಟೋಗಳಲ್ಲಿ, ಇಬ್ಬರೂ ಒಟ್ಟಿಗೆ ಮತ್ತು ಮೋಜು ಮಾಡುತ್ತಿರುವುದನ್ನು ಕಾಣಬಹುದು. ಈ ನಡುವೆ, ಮಹಿಕಾ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಸ್ಟೋರಿಯನ್ನು ಹಂಚಿಕೊಂಡಿದ್ದಾರೆ, ಇದು ಎಲ್ಲರ ಗಮನ ಸೆಳೆಯುತ್ತಿದೆ. ಮಹಿಕಾ ತನ್ನ ಸ್ನೇಹಿತೆಯ ಸ್ಟೋರಿ ಹಂಚಿದ್ದಾರೆ. ಇದರಲ್ಲಿ ಮಹಿಕಾಳ ಸ್ನೇಹಿತೆ ಲಕ್ಮೆ ಫ್ಯಾಷನ್ ವೀಕ್ ಸಮಯದಲ್ಲಿ ದೆಹಲಿಯಲ್ಲಿ ಮಹಿಕಾಳನ್ನು ತುಂಬಾ ಮಿಸ್ ಮಾಡಿಕೊಂಡಿದ್ದಾಗಿ ಹೇಳಿದ್ದಾರೆ.
ಈ ಬಾರಿ ದೆಹಲಿಯಲ್ಲಿ ನಡೆಯಲಿರುವ ಲಕ್ಮೆ ಫ್ಯಾಷನ್ ವೀಕ್‌ನಲ್ಲಿ ಮಹಿಕಾ ಶರ್ಮಾ ಭಾಗವಹಿಸುವುದನ್ನು ತಪ್ಪಿಸಿದ್ದಾರೆ. ಈ ಬಗ್ಗೆ ಅವರ ಸ್ನೇಹಿತೆ ಬರೆದುಕೊಂಡಿದ್ದು 'ಈ ಸೀಸನ್‌ನಲ್ಲಿ ನಿಮ್ಮನ್ನು ತುಂಬಾ ಮಿಸ್ ಮಾಡಿಕೊಂಡೆ, ಆದರೆ ನಾನು ಯಾವಾಗಲೂ ಈ ಅನೌನ್ಸ್‌ಮೆಂಟ್‌ಗಾಗಿ ಕಾಯುತ್ತಿದ್ದೆ' ಎಂದು ಬರೆದಿದ್ದಾರೆ. ತನ್ನ ಸ್ನೇಹಿತೆಯ ಇನ್‌ಸ್ಟಾಗ್ರಾಮ್ ಸ್ಟೋರಿ ಮರು ಹಂಚಿಕೊಂಡಿರುವಮಹಿಕಾ ಶರ್ಮಾ ಬರೆದಿದ್ದಾರೆ, 'ವಾವ್, ಇದು ತುಂಬಾ ಸ್ವೀಟ್. ಶೀಘ್ರದಲ್ಲೇ ನಿಮ್ಮೆಲ್ಲರನ್ನೂ ಭೇಟಿಯಾಗುತ್ತೇನೆ ಮತ್ತು ಹೌದು, ಕಾಯುವಿಕೆ ವ್ಯರ್ಥವಾಗುವುದಿಲ್ಲ ಎಂದು ನನ್ನನ್ನು ನಂಬಿ' ಎಂದು ಬರೆದಿದ್ದಾರೆ. ಈಗ, ಮಹಿಕಾ ಅವರ ಮಾತುಗಳು ಅವರು ನಿಜವಾಗಿಯೂ ಶೀಘ್ರದಲ್ಲೇ ಹಾರ್ದಿಕ್ ಅವರನ್ನು ಮದುವೆಯಾಗಲಿದ್ದಾರೆಯೇ ಅಥವಾ ಇದರ ಹಿಂದೆ ಬೇರೆ ಏನಾದರೂ ಕಾರಣವಿದೆಯೇ ಎಂದು ಅಭಿಮಾನಿಗಳು ತಲೆಕೆರೆದುಕೊಳ್ಳುತ್ತಿದ್ದಾರೆ.
ಹಾರ್ದಿಕ್ ಪಾಂಡ್ಯ ಜೊತೆ ಮಹಿಕಾ ವೆಕೇಷನ್
ಹಾರ್ದಿಕ್ ಪಾಂಡ್ಯ ಮಹಿಕಾಳ ಜೊತೆಗಿನ ಸಂಬಂಧವನ್ನು ಅಧಿಕೃತಗೊಳಿಸಿದಾಗಿನಿಂದ, ಇಬ್ಬರೂ ಸುದ್ದಿಯಲ್ಲಿದ್ದಾರೆ. ಇಬ್ಬರೂ ಒಟ್ಟಿಗೆ ಡಿನ್ನರ್ ಡೇಟ್‌ಗಳಿಗೆ ಹೋಗುತ್ತಿದ್ದಾರೆ ಮತ್ತು ವಿಮಾನ ನಿಲ್ದಾಣದಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈಗ ಮಹಿಕಾ ಮತ್ತು ಹಾರ್ದಿಕ್ ಒಟ್ಟಿಗೆ ಮಾಲ್ಡೀವ್ಸ್‌ನಲ್ಲಿದ್ದಾರೆ. ಇಬ್ಬರೂ ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಬ್ಬರೂ ವಿಭಿನ್ನ ಉಡುಪಿನಲ್ಲಿ ಪೋಸ್ ನೀಡುತ್ತಿದ್ದರೆ, ಒಂದು ಫೋಟೋದಲ್ಲಿ ಮಹಿಕಾ ಮತ್ತು ಹಾರ್ದಿಕ್ ಪರಸ್ಪರ ಕೈ ಹಿಡಿದುಕೊಂಡಿರುವುದು ಕಂಡುಬರುತ್ತದೆ. ಹಾರ್ದಿಕ್ ಪಾಂಡ್ಯಳ ಗೆಳತಿ ಮಹಿಕಾ ಶರ್ಮಾ ಒಬ್ಬ ಮಾಡೆಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೇಟರ್ ಕೂಡ ಆಗಿದ್ದಾರೆ.
