MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಮದ್ವೆಯಾಗದೇ ತಂದೆಯಾದ್ರು, ಮದ್ವೆಯಾದ್ರೂ ಸಿಂಗಲ್ ಫಾದರ್ಸ್​ ಆದ್ರು: ಬಾಲಿವುಡ್​ ನಟರ ರೋಚಕ ಸ್ಟೋರಿ

ಮದ್ವೆಯಾಗದೇ ತಂದೆಯಾದ್ರು, ಮದ್ವೆಯಾದ್ರೂ ಸಿಂಗಲ್ ಫಾದರ್ಸ್​ ಆದ್ರು: ಬಾಲಿವುಡ್​ ನಟರ ರೋಚಕ ಸ್ಟೋರಿ

ಒಂಟಿ ಪಾಲಕರು ಎಂದರೆ ಕೇವಲ ಮಹಿಳೆಯರಲ್ಲ, ಪುರುಷರೂ ಆಗಿರಬಹುದು. ಬಾಲಿವುಡ್‌ನ ಕರಣ್ ಜೋಹರ್, ಹೃತಿಕ್ ರೋಷನ್, ಕಮಲ್ ಹಾಸನ್ ಮತ್ತು ರಾಹುಲ್ ದೇವ್ ಅವರಂತಹ ನಟರು ವಿಚ್ಛೇದನ, ಬಾಡಿಗೆ ತಾಯ್ತನ ಅಥವಾ ಪತ್ನಿಯ ನಿಧನದಂತಹ ಕಾರಣಗಳಿಂದ ಒಂಟಿ ಅಪ್ಪಂದಿರಾಗಿ ತಮ್ಮ ಮಕ್ಕಳನ್ನು ಯಶಸ್ವಿಯಾಗಿ ಪೋಷಿಸುತ್ತಿದ್ದಾರೆ.

2 Min read
Author : Suchethana D
Published : Jun 05 2026, 10:24 PM IST
Share this Photo Gallery
  • FB
  • TW
  • Linkdin
  • Whatsapp
16
ಇವರು ಸಿಂಗಲ್​ ಫಾದರ್ಸ್​
Image Credit : Social Media

ಇವರು ಸಿಂಗಲ್​ ಫಾದರ್ಸ್​

ಒಂಟಿ ಪಾಲಕರು (Single Parents) ಎಂದಾಗ ಹೆಚ್ಚಾಗಿ ಕಣ್ಮುಂದೆ ಬರುವುದು ಒಂಟಿ ಹೆಣ್ಣು. ಒಂಟಿಯಾಗಿದ್ದುಕೊಂಡು ಮಕ್ಕಳನ್ನು ಪೋಷಿಸುವಾಕೆ ಹೆಣ್ಣೆ ಎನ್ನಲಾಗುತ್ತದೆ. ಆದರೆ ಅಸಲಿಗೆ ಹೆಣ್ಣು ಮಾತ್ರವಲ್ಲ, ಪುರುಷರೂ ಒಂಟಿ ಪಾಲಕರಾಗಿ ಮಕ್ಕಳನ್ನು ಸಲಹುತ್ತಿದ್ದಾರೆ. ಸಾಮಾನ್ಯ ಜನರು ಮಾತ್ರವಲ್ಲದೇ ಸೆಲೆಬ್ರಿಟಿಗಳೂ ಒಂಟಿ ಅಪ್ಪ ಆಗಿದ್ದಾರೆ. ಬಾಲಿವುಡ್​ನ ಕೆಲವು ನಟರೂ ಸಿಂಗಲ್​ ಡ್ಯಾಡ್​ ಆಗಿದ್ದಾರೆ. ಕೆಲವರು ಮದುವೆಯಾಗದೇ, ದೈಹಿಕ ಸಂಪರ್ಕವನ್ನೂ ಹೊಂದದೆ ಒಂಟಿ ತಂದೆಯಾಗಿದ್ದರೆ, ಇನ್ನು ಕೆಲವರು ಡಿವೋರ್ಸ್​ ಕೊಟ್ಟು ಮಕ್ಕಳನ್ನು ಪಾಲನೆ ಮಾಡುತ್ತಿದ್ದಾರೆ. ನಾವು ಇಲ್ಲಿ 5 ಬಾಲಿವುಡ್ ತಾರೆಯರ ಬಗ್ಗೆ ಮಾತನಾಡುತ್ತೇವೆ. ಈ ನಟರು ವರ್ಷಗಳಿಂದ ತಮ್ಮ ಮಕ್ಕಳನ್ನು ಒಂಟಿಯಾಗಿ ಬೆಳೆಸುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಕರಣ್​ ಜೋಹರ್​ (Karan Johar)
Image Credit : Instagram

ಕರಣ್​ ಜೋಹರ್​ (Karan Johar)

ಈ ಪಟ್ಟಿಯಲ್ಲಿ ಮೊದಲ ಹೆಸರು ಹಿರಿಯ ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ಅವರದ್ದು. ಕರಣ್ ಜೋಹರ್ ಮದುವೆಯಾಗಿಲ್ಲ ಮತ್ತು ಬಾಡಿಗೆ ತಾಯ್ತನದ ಮೂಲಕ ಎರಡು ಅವಳಿ ಮಕ್ಕಳ ತಂದೆಯಾದರು. ಕರಣ್‌ಗೆ ಒಬ್ಬ ಮಗಳು ಮತ್ತು ಮಗ ಇದ್ದಾರೆ. ಒಂಬತ್ತು ತಿಂಗಳ ಕಾಲ ಮಕ್ಕಳನ್ನು ಗರ್ಭದಲ್ಲಿಟ್ಟು ಬೆಳೆಸಿದ ಬಾಡಿಗೆ ತಾಯಿಗೂ ಕರಣ್‌ ಕೃತಜ್ಞತೆ ಹೇಳಿದ್ದರು. ಆದರೆ, ಆಕೆ ಯಾರು ಎನ್ನುವ ಗುಟ್ಟು ಬಿಟ್ಟುಕೊಟ್ಟಿಲ್ಲ. ಇವರು ತಮ್ಮ ತಾಯಿಯ ಸಹಯೊಂದಿಗೆ ಮಕ್ಕಳನ್ನು ಬೆಳೆಸುತ್ತಿದ್ದಾರೆ. 'ವೈದ್ಯಕೀಯ ವಿಸ್ಮಯದ ಸಹಾಯದಿಂದ ಈ ಜಗತ್ತಿಗೆ ಸ್ವಾಗತಿಸಲ್ಪಟ್ಟ ನನ್ನ ಹೃದಯದ ಎರಡು ತುಣುಕುಗಳಿಗೆ ತಂದೆಯಾಗುವುದು ನನ್ನ ಮಹಾ ಭಾಗ್ಯ ಎಂದು ಭಾವಿಸಿದ್ದೇನೆ ಎಂದು ಕರಣ್‌ ಜೋಹರ್‌ ಮಕ್ಕಳು ಹುಟ್ಟಿದ ಸಂದರ್ಭದಲ್ಲಿ ಹೇಳಿದ್ದರು.

Related Articles

Related image1
47ರ ಹರೆಯದಲ್ಲೂ 20ರ ಸೌಂದರ್ಯ: ನಟಿ ಜ್ಯೋತಿಕಾ ಬ್ಯೂಟಿ ಗುಟ್ಟು ರಟ್ಟಾಗೋಯ್ತು
Related image2
Bigg Boss ರಕ್ಷಿತಾ ಗೌಡಗೆ ಕೂಡಿ ಬಂತು ಕಂಕಣ ಭಾಗ್ಯ? ಗೆಜ್ಜೆ ಹಾಕಿ ಪ್ರಪೋಸ್​ ಮಾಡಿದ ನಟ ಭವಿಷ್​ ಗೌಡ
36
ಹೃತಿಕ್​ ರೋಷನ್​ (Hrithik Roshan)
Image Credit : Instagram

ಹೃತಿಕ್​ ರೋಷನ್​ (Hrithik Roshan)

2014 ರಲ್ಲಿ ಹೃತಿಕ್ ರೋಷನ್ ಮತ್ತು ಸುಸಾನೆ ಖಾನ್ ಬೇರೆಯಾದರು. ವಿಚ್ಛೇದನದ ನಂತರ, ನಟ ಮತ್ತು ಅವರ ಮಾಜಿ ಪತ್ನಿ ಇಬ್ಬರೂ ತಮ್ಮ ಪುತ್ರರ ಜವಾಬ್ದಾರಿಗಳನ್ನು ಚೆನ್ನಾಗಿ ನಿರ್ವಹಿಸುತ್ತಾರೆ. ಈ ದಂಪತಿ ಇನ್ನೂ ಪುತ್ರರಿಗಾಗಿ ಒಟ್ಟಿಗೆ ಸಮಯ ಕಳೆಯುತ್ತಿದ್ದಾರೆ. ಆದರೆ ಸದ್ಯ ಹೃತಿಕ್​ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಹೃತಿಕ್​ ರೋಷನ್​ ಹೆಸರು ಕೆಲವು ನಟಿಯರ ಜೊತೆ ಥಳಕು ಹಾಕಿಕೊಳ್ಳುತ್ತಿದ್ದರೂ ವಿಚ್ಛೇದನದ ಬಳಿಕ ಸದ್ಯ ಅವರು ಸಿಂಗಲ್​ ಆಗಿದ್ದಾರೆ.

46
ಕಮಲ್​ ಹಾಸನ್​ (Kamal hassan)
Image Credit : our own

ಕಮಲ್​ ಹಾಸನ್​ (Kamal hassan)

ವರ್ಷಗಳ ಕಾಲ ದಕ್ಷಿಣ ಮತ್ತು ಹಿಂದಿ ಚಿತ್ರಗಳನ್ನು ಆಳಿದ ನಟ ಕಮಲ್ ಹಾಸನ್ ಕೂಡ ಸಿಂಗಲ್ ಡ್ಯಾಡ್. ಸಾರಿಕಾಗೆ ವಿಚ್ಛೇದನ ನೀಡಿದ ನಂತರ, ನಟ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಏಕಾಂಗಿಯಾಗಿ ಬೆಳೆಸಿದರು. ಇಂದು ಅವರ ಪುತ್ರಿಯರಾದ ಶ್ರುತಿ ಹಾಸನ್ ಮತ್ತು ಅಕ್ಷರಾ ಹಾಸನ್ ಕೂಡ ಚಿತ್ರರಂಗದಲ್ಲಿ ಹೆಸರು ಗಳಿಸುತ್ತಿದ್ದಾರೆ.

56
ರಾಹುಲ್​ ದೇವ್​ (Rahul Dev)
Image Credit : Social Media

ರಾಹುಲ್​ ದೇವ್​ (Rahul Dev)

ನಟ ರಾಹುಲ್ ದೇವ್ 2009ರಲ್ಲಿ ಪತ್ನಿಯನ್ನು ಕಳೆದುಕೊಂಡಿದ್ದರು. ನಟನ ಪತ್ನಿ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದರು, ಇದರಿಂದಾಗಿ ಅವರು ಸಂಪೂರ್ಣವಾಗಿ ಮುರಿದುಬಿದ್ದರು. ಪತ್ನಿಯ ಮರಣದ ನಂತರ ರಾಹುಲ್ ಮರುಮದುವೆಯಾಗದೆ ಒಂಟಿ ತಂದೆಯಾಗಿ ಮಗನನ್ನು ಒಬ್ಬರೇ ನೋಡಿಕೊಳ್ಳುತ್ತಿದ್ದಾರೆ.

66
ತುಷಾರ್​ ಕಪೂರ್​ (Tushar Kapoor)
Image Credit : Social Media

ತುಷಾರ್​ ಕಪೂರ್​ (Tushar Kapoor)

ತುಷಾರ್ ಕಪೂರ್ ಇನ್-ವಿಟ್ರೊ ಫರ್ಟಿಲೈಸೇಶನ್ (ಐವಿಎಫ್) ಬಳಸಿಕೊಂಡು ಬಾಡಿಗೆ ತಾಯ್ತನದ ಮೂಲಕ ಮಗನ ತಂದೆ ಆಗಿದ್ದಾರೆ. 2016ರಲ್ಲಿ ಇವರು ತಂದೆಯಾಗಿದ್ದಾರೆ. ಮಗನ ಹೆಸರು ಲಕ್ಷ್ಯ. ತನ್ನ ಸಹೋದರಿ ಏಕ್ತಾ ಕಪೂರ್ ಮತ್ತು ತಂದೆ ಜೀತೇಂದ್ರ ಜೊತೆಗೆ, ಈ ನಟ ತನ್ನ ಮಗನನ್ನು ಬೆಳೆಸುತ್ತಿದ್ದಾರೆ. ತುಷಾರ್ ತಮ್ಮ ಮಗನೊಂದಿಗೆ ಅದ್ಭುತ ಬಾಂಧವ್ಯ ಹೊಂದಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಮನರಂಜನಾ ಸುದ್ದಿ
ತಂದೆ
ಸಂಬಂಧಗಳು
Latest Videos
Recommended Stories
Recommended image1
47ರ ಹರೆಯದಲ್ಲೂ 20ರ ಸೌಂದರ್ಯ: ನಟಿ ಜ್ಯೋತಿಕಾ ಬ್ಯೂಟಿ ಗುಟ್ಟು ರಟ್ಟಾಗೋಯ್ತು
Recommended image2
ಪತಿಯ ಜೊತೆ ನಟಿ ಸಂಜನಾ ಬುರ್ಲಿ ಫೋಟೋಶೂಟ್​: ಕೊಟ್ಟರೊಂದು ಸ್ವೀಟ್​ ನ್ಯೂಸ್​
Recommended image3
Bigg Boss ರಕ್ಷಿತಾ ಗೌಡಗೆ ಕೂಡಿ ಬಂತು ಕಂಕಣ ಭಾಗ್ಯ? ಗೆಜ್ಜೆ ಹಾಕಿ ಪ್ರಪೋಸ್​ ಮಾಡಿದ ನಟ ಭವಿಷ್​ ಗೌಡ
Related Stories
Recommended image1
47ರ ಹರೆಯದಲ್ಲೂ 20ರ ಸೌಂದರ್ಯ: ನಟಿ ಜ್ಯೋತಿಕಾ ಬ್ಯೂಟಿ ಗುಟ್ಟು ರಟ್ಟಾಗೋಯ್ತು
Recommended image2
Bigg Boss ರಕ್ಷಿತಾ ಗೌಡಗೆ ಕೂಡಿ ಬಂತು ಕಂಕಣ ಭಾಗ್ಯ? ಗೆಜ್ಜೆ ಹಾಕಿ ಪ್ರಪೋಸ್​ ಮಾಡಿದ ನಟ ಭವಿಷ್​ ಗೌಡ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved