MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • News
  • 47ರ ಹರೆಯದಲ್ಲೂ 20ರ ಸೌಂದರ್ಯ: ನಟಿ ಜ್ಯೋತಿಕಾ ಬ್ಯೂಟಿ ಗುಟ್ಟು ರಟ್ಟಾಗೋಯ್ತು

47ರ ಹರೆಯದಲ್ಲೂ 20ರ ಸೌಂದರ್ಯ: ನಟಿ ಜ್ಯೋತಿಕಾ ಬ್ಯೂಟಿ ಗುಟ್ಟು ರಟ್ಟಾಗೋಯ್ತು

25 ವರ್ಷಗಳ ನಂತರ ಬಾಲಿವುಡ್‌ಗೆ ಮರಳಿರುವ ನಟಿ ಜ್ಯೋತಿಕಾ, 47ನೇ ವಯಸ್ಸಿನಲ್ಲೂ ತಮ್ಮ ಫಿಟ್‌ನೆಸ್‌ನಿಂದ ಗಮನ ಸೆಳೆದಿದ್ದಾರೆ. ನಿಯಮಿತ ವ್ಯಾಯಾಮ ಮತ್ತು ಕಡಿಮೆ ಕ್ಯಾಲೋರಿ ಆಹಾರದ ಮೂಲಕ 16 ಕೆ.ಜಿ ತೂಕ ಇಳಿಸಿಕೊಂಡಿರುವ ಅವರ ಫಿಟ್ನೆಸ್ ರಹಸ್ಯದ ಬಗ್ಗೆ ಈ ಲೇಖನ ವಿವರಿಸುತ್ತದೆ.

2 Min read
Author : Suchethana D
Published : Jun 05 2026, 10:04 PM IST
Share this Photo Gallery
  • FB
  • TW
  • Linkdin
  • Whatsapp
16
25 ವರ್ಷಗಳ ಬಳಿಕ ಕಮ್​ಬ್ಯಾಕ್​
Image Credit : Social Media

25 ವರ್ಷಗಳ ಬಳಿಕ ಕಮ್​ಬ್ಯಾಕ್​

ತೆರೆಯಿಂದ ಮರೆಯಾಗಿದ್ದ ಖ್ಯಾತ ನಟಿ, ತಮಿಳಿನ ಸ್ಟಾರ್ ನಟ ಸೂರ್ಯ ಪತ್ನಿ ಜ್ಯೋತಿಕಾ (Jyotika) ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಶೇಷ ಎಂದರೆ ಜ್ಯೋತಿಕಾ 2024ರಲ್ಲಿ ಬಿಡುಗಡೆಯಾದ ಸೈತಾನ್​ ಚಿತ್ರದ ಮೂಲಕ ಬಾಲಿವುಡ್​ಗೆ 25 ವರ್ಷಗಳ ಮರಳಿದ್ದರು. ಈ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ (Ajay Devagan) ಮತ್ತು ಆರ್ ಮಾಧವನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಹಿಟ್​ ಆಗುತ್ತಿದ್ದಂತೆಯೇ ನಟಿಯ ಫಿಟ್​ನೆಸ್​ ಕುರಿತು ಸಾಕಷ್ಟು ಚರ್ಚೆಯಾಗಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
47ರಹರೆಯದಲ್ಲೂ ಫಿಟ್​
Image Credit : Instagram

47ರಹರೆಯದಲ್ಲೂ ಫಿಟ್​

ಅಷ್ಟಕ್ಕೂ ಸೂರ್ಯ ಮತ್ತು ಜ್ಯೋತಿಕಾ ದಂಪತಿಗೆ ಇಬ್ಬರು ಮಕ್ಕಳು. ಮಗಳು ದಿಯಾ (18 ವರ್ಷ) ಮಗ ದೇವ್ (15 ವರ್ಷ). ಜ್ಯೋತಿಕಾ ಅವರಿಗೆ 47 ವರ್ಷ ವಯಸ್ಸು. ಈ ವಯಸ್ಸಿನಲ್ಲಿಯೂ, ಇಬ್ಬರು ದೊಡ್ಡ ಮಕ್ಕಳ ಅಮ್ಮನಾದ ಮೇಲೂ ಜ್ಯೋತಿಕಾ ಫಿಟ್​ ಆಗಿದ್ದಾರೆ. ಸೌಂದರ್ಯವನ್ನು ಕಾಪಾಡಿಕೊಂಡಿದ್ದಾರೆ.

Related Articles

Related image1
Amruthadhaare ಸೀರಿಯಲ್​ನಲ್ಲಿ ಸುಟ್ಟು ಬೂದಿಯಾದ ದಿಯಾ ಈಗ ಶ್ರೀಮತಿ, ಕ್ಯೂಟ್​ ವಿಡಿಯೋ ಶೂಟ್​
Related image2
Bigg Boss ರಕ್ಷಿತಾ ಗೌಡಗೆ ಕೂಡಿ ಬಂತು ಕಂಕಣ ಭಾಗ್ಯ? ಗೆಜ್ಜೆ ಹಾಕಿ ಪ್ರಪೋಸ್​ ಮಾಡಿದ ನಟ ಭವಿಷ್​ ಗೌಡ
36
2 ಗಂಟೆಯಲ್ಲಿ ಮಿಲಿಯನ್​ ಫಾಲೋವರ್ಸ್​
Image Credit : Social Media

2 ಗಂಟೆಯಲ್ಲಿ ಮಿಲಿಯನ್​ ಫಾಲೋವರ್ಸ್​

ಇದಕ್ಕೆ ಕಾರಣ, ಇವರ ವರ್ಕ್​ಔಟ್​. ಅಸಾಧ್ಯ ಎನ್ನಿಸುವ ವರ್ಕ್​ಔಟ್​ ಮಾಡಿರುವ ನಟಿಯ ವಿಡಿಯೋ ನೋಡಿ ಫ್ಯಾನ್ಸ್​ ಫಿದಾ (Fans Fida) ಆಗಿದ್ದಾರೆ. ಇದರ ವಿಡಿಯೋ ಅನ್ನು ಅವರು ತಮ್ಮ ಇನ್‍ಸ್ಟಾಗ್ರಾಮ್‍ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. 2021ರಲ್ಲಿ ಇವರು ಇನ್​ಸ್ಟಾಗ್ರಾಮ್​ ಖಾತೆ ತೆರೆದಿದ್ದರು. ಖಾತೆ ತೆರೆದ 2 ಗಂಟೆಯಲ್ಲಿ ಮಿಲಿಯನ್ ಫಾಲೋವರ್ಸ್ ಪಡೆದುಕೊಳ್ಳುವ ಮೂಲಕವಾಗಿ ದಾಖಲೆ ಮಾಡಿದ್ದರು ನಟಿ.

46
ವರ್ಕ್​ಔಟ್​ ಶೇರ್​
Image Credit : Social Media

ವರ್ಕ್​ಔಟ್​ ಶೇರ್​

ಈಗ ಅದರಲ್ಲಿಯೇ ತಮ್ಮ ವರ್ಕ್​ಔಟ್​ ಶೇರ್​ ಮಾಡಿದ್ದಾರೆ. ಅಸಾಧ್ಯ ಎನಿಸುವ ವರ್ಕ್​ಔಟ್​ ಮಾಡಿದ್ದಾರೆ. ಭಾರವಾಗಿರುವ ವರ್ಕ್​ಔಟ್​ ಸಲಕರಣೆಗಳನ್ನು ಎತ್ತುವ ಮೂಲಕ ತಮ್ಮ ಶೌರ್ಯ ಪ್ರದರ್ಶನ ಮಾಡಿದ್ದಾರೆ. ಈ ಮೂಲಕ ಸಕತ್​ ವೇಟ್​ ಲಾಸ್​ ಮಾಡಿಕೊಂಡಿದ್ದಾರೆ. ಕೆಲ ವರ್ಷಗಳಿಂದ ವರ್ಕ್​ಔಟ್​ (workout) ನಡೆಸುತ್ತಿರುವ ನಟಿ, ಕಳೆದ ವರ್ಷ ಸುಮಾರು 16 ಕೆ.ಜಿ. ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಇದನ್ನು ನೋಡಿಯೇ ಫ್ಯಾನ್ಸ್​ ಅಚ್ಚರಿ ವ್ಯಕ್ತಪಡಿಸಿದ್ದರು.

56
ಫಿಟ್​ನೆಸ್​ ಗುಟ್ಟು
Image Credit : Asianet News

ಫಿಟ್​ನೆಸ್​ ಗುಟ್ಟು

ಈಗ ಮತ್ತೊಂದು ಬಾರಿ ನಟಿ ತಮ್ಮ ವಿಡಿಯೋ ಶೇರ್​ ಮಾಡಿಕೊಳ್ಳುವ ಮೂಲಕ ತಮ್ಮ ಫಿಟ್​ನೆಸ್​ ಕುರಿತು ಮಾತನಾಡಿದ್ದಾರೆ. ಈ ಮೊದಲು ನಾನು ತೂಕವನ್ನು ಹೆಚ್ಚಿಸುವ ಬಗ್ಗೆ ಚಿಂತಿಸಲಿಲ್ಲ, ನಿಯಮಿತವಾಗಿ ವ್ಯಾಯಾಮ ಮಾಡಲು ಸೋಮಾರಿಯಾಗಿದ್ದೆ.

66
ಕಡಿಮೆ ಕ್ಯಾಲೋರಿ ಆಹಾರ
Image Credit : Instagram

ಕಡಿಮೆ ಕ್ಯಾಲೋರಿ ಆಹಾರ

ನಂತರ ನಾನು ಸಾಕಷ್ಟು ತೂಕವನ್ನು ಹೊಂದಿದ್ದೇನೆ ಎಂದು ಅರಿತುಕೊಂಡೆ. ಆದ್ದರಿಂದ ಕಳೆದ ಕೆಲವು ತಿಂಗಳುಗಳಿಂದ, ನಾನು ಆರೋಗ್ಯಕರ ಆದರೆ ಕಡಿಮೆ ಕ್ಯಾಲೋರಿ ಆಹಾರವನ್ನು ಅನುಸರಿಸುತ್ತಿದ್ದೇನೆ. ನಾನು ನಿಯಮಿತವಾಗಿ ವ್ಯಾಯಾಮ ಮಾಡುತ್ತೇನೆ ಮತ್ತು ಕೆಲವು ಕಿಲೋಗಳನ್ನು ಕಳೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ನಟಿ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಮನರಂಜನಾ ಸುದ್ದಿ
ಟಿವಿ ಶೋ
ಕಾಲಿವುಡ್
ಸಂಬಂಧಗಳು
ಸೌಂದರ್ಯ ಸಲಹೆಗಳು
Latest Videos
Recommended Stories
Recommended image1
ಜಾನ್ವಿ ಕಪೂರ್‌ಳನ್ನು ಕಿಸ್ ಮಾಡುವ ಗೊಂಬೆಯನ್ನಾಗಿ ಬಳಸಿಕೊಂಡಿದ್ದಾರೆ; 'ಪೆದ್ದಿ' ಚಿತ್ರತಂಡದ ವಿರುದ್ಧ ಗಾಯಕಿ ಆಕ್ರೋಶ!
Recommended image2
Shocking: ಚೈತ್ರಾ ಆಚಾರ್ ಬೋಲ್ಡ್ ಫೋಟೋಗೆ ಶ್ರುತಿ ಮಗಳು ಗೌರಿ ಹಾಕಿರೋ ಕಾಮೆಂಟ್ ನೋಡಿದ್ರಾ?
Recommended image3
ಮಗ ಸಿಎಂ ವಿಜಯ್ ಬಗ್ಗೆ ಅಮ್ಮ ಶೋಭಾ ಚಂದ್ರಶೇಖರ್ ಹೇಳಿದ್ದೇನು? ಈ ಸೀಕ್ರೆಟ್ ಇನ್ನೂತನಕ ಹೊರಬಿದ್ದಿರಲಿಲ್ಲ!
Related Stories
Recommended image1
Amruthadhaare ಸೀರಿಯಲ್​ನಲ್ಲಿ ಸುಟ್ಟು ಬೂದಿಯಾದ ದಿಯಾ ಈಗ ಶ್ರೀಮತಿ, ಕ್ಯೂಟ್​ ವಿಡಿಯೋ ಶೂಟ್​
Recommended image2
Bigg Boss ರಕ್ಷಿತಾ ಗೌಡಗೆ ಕೂಡಿ ಬಂತು ಕಂಕಣ ಭಾಗ್ಯ? ಗೆಜ್ಜೆ ಹಾಕಿ ಪ್ರಪೋಸ್​ ಮಾಡಿದ ನಟ ಭವಿಷ್​ ಗೌಡ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved