Asianet Suvarna News Asianet Suvarna News

Women Health : ಕೆಲಸದ ಒತ್ತಡದಿಂದ ಹದಗೆಡ್ತಿದೆ ಮಹಿಳೆಯರ ಲೈಂಗಿಕ ಆರೋಗ್ಯ

ವೃತ್ತಿ ಹಾಗೂ ಕುಟುಂಬ.. ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವುದು ಅನೇಕ ಮಹಿಳೆಯರಿಗೆ ಕಷ್ಟ. ಹಾಗೆ ಇವೆರಡನ್ನೂ ಒಟ್ಟಿಗೆ ಸಂಭಾಳಿಸುವುದು ಕೂಡ ಕಷ್ಟ. ಇದ್ರಿಂದ ಒತ್ತಡ ಹೆಚ್ಚಾಗುತ್ತದೆ. ಈ ಒತ್ತಡ ಅವರ ಮಾನಸಿಕ ಹಾಗೂ ಲೈಂಗಿಕ ಆರೋಗ್ಯದ ಮೇಲಾಗ್ತಿದೆ.
 

According To Survey Professional Stress Increasing Sexual Health Issues In Women In India
Author
First Published Sep 28, 2022, 11:22 AM IST

ಅನೇಕ ಕಂಪನಿಗಳು ಹುಡುಗಿಯರಿಗೆ ಕೆಲಸ ಕೊಡೋದಿಲ್ಲ. ಅದ್ರಲ್ಲೂ ಮದುವೆಯಾಗಿ ಮಕ್ಕಳಾಗಿರುವ ಮಹಿಳೆಯರನ್ನು ಕೆಲಸಕ್ಕೆ ತೆಗೆದುಕೊಳ್ಳೋದೇ ಇಲ್ಲ. ಮದುವೆಯಾದ್ರೆ, ಮಕ್ಕಳಾದ್ರೆ ವೃತ್ತಿ ಜೀವನ ಹಾಳಾಗುತ್ತೆ ಎನ್ನುವ ಭಯ ಅನೇಕ ಮಹಿಳೆಯರಿಗಿದೆ. ಮಹಿಳೆಯರ ಉದ್ಯೋಗದಲ್ಲಿ ಭಾರೀ ಕುಸಿತವಾಗಿದೆ. ಇದನ್ನು ಪರಿಗಣಿಸಿರುವ ಅನೇಕ ಹುಡುಗಿಯರು ಮದುವೆಯಾಗಲು ಹಾಗೂ ಮಕ್ಕಳನ್ನು ಪಡೆಯಲು ಹಿಂದೇಟು ಹಾಕ್ತಿದ್ದಾರೆ. ಇದ್ರಿಂದ ಮಹಿಳೆಯರ ಮಾನಸಿಕ ಆರೋಗ್ಯ ಹದಗೆಡುತ್ತಿದೆ. ಬರೀ ಮಾನಸಿಕ ಆರೋಗ್ಯ ಮಾತ್ರವಲ್ಲ ಲೈಂಗಿಕ ಜೀವನದ ಮೇಲೂ ಇದ್ರ ಪರಿಣಾಮವನ್ನು ನಾವು ಕಾಣಬಹುದಾಗಿದೆ. ಭಾರತದಲ್ಲಿ ಲಕ್ಷಾಂತರ ಮಹಿಳೆಯರು ವೃತ್ತಿಪರ ಹೊರೆಯಿಂದ ಮಾನಸಿಕ ಹಾಗೂ ಲೈಂಗಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆಂದು ವರದಿಗಳು ಹೇಳ್ತಿವೆ.

ಕೊರೊನಾ (Corona) ದಿಂದ ಕಡಿಮೆಯಾಗಿದೆ ಮಹಿಳೆಯರ ಉದ್ಯೋಗ (Employment) : ವಿಶ್ವ ಬ್ಯಾಂಕ್ (World Bank) ಅಂಕಿ ಅಂಶಗಳ ಪ್ರಕಾರ, ಕೊರೊನಾದಿಂದ ಮಹಿಳೆ ಉದ್ಯೋಗದಲ್ಲಿ ಏರುಪೇರಾಗುತ್ತಿದೆ. ಭಾರತದಲ್ಲಿ ಮಹಿಳಾ ಉದ್ಯೋಗ 2022 ರಲ್ಲಿ ಶೇಕಡಾ 9 ರಷ್ಟು ಕಡಿಮೆಯಾಗಿದೆ. ಮಹಿಳೆಯರಲ್ಲಿ ಒತ್ತಡ ಹೆಚ್ಚಾಗಲು ಇದು ಮುಖ್ಯ ಕಾರಣಗಳಲ್ಲಿ ಒಂದು. ಅನೇಕ ಕಾರಣಗಳಿಂದ ಮಹಿಳಾ ಉದ್ಯೋಗಿಗಳಲ್ಲಿ ಒತ್ತಡ ಹೆಚ್ಚಾಗ್ತಿದೆ. ಈ ಒತ್ತಡ ಅನೇಕ ಸಮಸ್ಯೆಗಳನ್ನು ಸೃಷ್ಟಿ ಮಾಡ್ತಿದೆ.

Indian Law: ಅನಾಥಾಶ್ರಮ ಸೇರ್ಬೇಕಾಗಿಲ್ಲ, ಮಗನ ಆಸ್ತಿಯಲ್ಲಿ ತಾಯಿಗೂ ಇದೆ ಹಕ್ಕು

ಬಂಜೆತನಕ್ಕೆ ಕಾರಣವಾಗ್ತಿದೆ ಒತ್ತಡ : ಒತ್ತಡ ನಮ್ಮ ಆರೋಗ್ಯದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಕೆಲಸದ ಒತ್ತಡ ಹೆಚ್ಚಾದಂತೆ ಮಹಿಳೆಯರ ಲೈಂಗಿಕ ಆರೋಗ್ಯ ಹಾಳಾಗುತ್ತದೆ. ಒತ್ತಡ ಮಹಿಳೆಯರ ಲೈಂಗಿಕ ಆರೋಗ್ಯದ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುತ್ತದೆ. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್), ಎಂಡೊಮೆಟ್ರಿಯೊಸಿಸ್ ನಂತಹ ಸಮಸ್ಯೆ ಕೆಲಸ ಮಾಡುವ ಮಹಿಳೆಯರಲ್ಲಿ ಬಂಜೆತನಕ್ಕೆ ಕಾರಣವಾಗುತ್ತವೆ. ಉದ್ಯೋಗಸ್ಥ ಮಹಿಳೆಯರ ಆರೋಗ್ಯ ಸುಧಾರಿಸಲು ಅನೇಕ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳುತ್ತಿದೆ. ಹೆರಿಗೆ ರಜೆ, ಅವಧಿ ರಜೆಗಳನ್ನು ನೀಡ್ತಿದೆ. ಆದ್ರೂ ಮಹಿಳೆಯರ ಒತ್ತಡ ಕಡಿಮೆಯಾಗ್ತಿಲ್ಲ.

NCBI 2018 ರಲ್ಲಿ ಉದ್ಯೋಗಸ್ಥ ಮಹಿಳೆಯರು ಮತ್ತು ಸಂತಾನೋತ್ಪತ್ತಿ, ಲೈಂಗಿಕ ಆರೋಗ್ಯದ ಬಗ್ಗೆ ಸಮೀಕ್ಷೆ ನಡೆಸಿತ್ತು.  ಕೆಲಸ ಮಾಡುವ ಮಹಿಳೆಯರಿಂದ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಲಾಗಿತ್ತು. ವರದಿ ಪ್ರಕಾರ ಶೇಕಡಾ 52ರಷ್ಟು ಮಹಿಳೆಯರು ಕೆಲಸದ ಜೊತೆ ತಮ್ಮ ಆರೋಗ್ಯವನ್ನು ನಿರ್ವಹಿಸಲು ಹೆಣಗಾಡ್ತಿದ್ದಾರೆ ಎಂಬ ಸಂಗತಿ ಹೊರ ಬಿದ್ದಿತ್ತು. 

ಆರೋಗ್ಯಕ ಲೈಂಗಿಕ ಜೀವನಕ್ಕೆ ಒತ್ತಡ ಶತ್ರು : ಮಾನಸಿಕ ಆರೋಗ್ಯ ಚೆನ್ನಾಗಿದ್ರೆ ಲೈಫ್ ಚೆನ್ನಾಗಿದ್ದಂತೆ. ಮಾನಸಿಕ ಆರೋಗ್ಯ ಹದಗೆಟ್ಟಾಗ ದೈಹಿಕ ಆರೋಗ್ಯ ಕೂಡ ಹಾಳಾಗ್ತಾ ಬರುತ್ತದೆ. ಇದ್ರಿಂದ ಲೈಂಗಿಕ ಜೀವನ ಕೂಡ ಹದಗೆಡುತ್ತದೆ. ಲೈಂಗಿಕ ಜೀವನ, ಸಂತಾನೋತ್ಪತ್ತಿಗೆ ಆರೋಗ್ಯಕರ ಮನಸ್ಸು ಬಹಳ ಮುಖ್ಯ. ಭಾರತದಲ್ಲಿ ಪಿಸಿಒಎಸ್ ಸಮಸ್ಯೆ ಹೆಚ್ಚಾಗ್ತಿದೆ. ಐವರಲ್ಲಿ ಒಬ್ಬ ಮಹಿಳೆಗೆ ಈ ಪಿಸಿಒಎಸ್ ಕಾಡ್ತಿದೆ. ಅಂದ್ರೆ ಶೇಕಡಾ 20ರಷ್ಟು ಮಹಿಳೆಯರು ಇದ್ರಿಂದ ಬಳಲುತ್ತಿದ್ದಾರೆ. ಪಿಸಿಒಎಸ್ ಬಂಜೆತನಕ್ಕೆ ಪ್ರಮುಖ ಕಾರಣವಾಗಿದೆ. ಅಂಡೋತ್ಪತ್ತಿ ಬಂಜೆತನಕ್ಕೆ ಶೇಕಡಾ 80ರಷ್ಟು ಕಾರಣ ಪಿಸಿಒಎಸ್ ಎಂಬುದು ಪತ್ತೆಯಾಗಿದೆ. 

ಗರ್ಭಿಣಿ ಹೊಟ್ಟೆ ನೋಡಿ ಹುಟ್ಟೋ ಮಗು ಹೆಣ್ಣೋ, ಗಂಡೋ ಹೇಳ್ಬಹುದಾ?

ಈಗ ತಂತ್ರಜ್ಞಾನ ವೇಗವಾಗಿ ಬೆಳೆದಿದೆ, ಮಕ್ಕಳನ್ನು ಪಡೆಯೋದು ಕಷ್ಟದ ಕೆಲಸವಲ್ಲ ಎನ್ನಬಹುದು. ಆದ್ರೆ ಐವಿಎಫ್ ಮೂಲಕ ಮಕ್ಕಳನ್ನು ಪಡೆಯೋದು ಸುಲಭದ ಕೆಲಸವಲ್ಲ. ಭಾರತದಲ್ಲಿ ಐವಿಎಫ್ ಚಿಕಿತ್ಸೆ ದುಬಾರಿ. ಕಾರ್ಪೋರೇಟ್ ಗ್ರೂಪ್ ಇದನ್ನು ವಿಮಾ ಪಾಲಿಸಿಯಡಿ ಸೇರಿಸಿಲ್ಲ. ಇದ್ರಿಂದ ಸಾಮಾನ್ಯ ಮಹಿಳೆಯರು ಮಾತ್ರವಲ್ಲ ಕಾರ್ಪೋರೇಟ್ ಕಂಪನಿಯಲ್ಲಿ ಕೆಲಸ ಮಾಡುವ ಮಹಿಳೆಯರಿಗೂ ಈ ಚಿಕಿತ್ಸೆ ದುಬಾರಿ ಎನ್ನಬಹುದು. ವೆಚ್ಛ ಮಹಿಳೆಯರಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಭಾರತದಲ್ಲಿ ಐವಿಎಫ್ ಚಿಕಿತ್ಸೆಯ ವೆಚ್ಚ ಸುಮಾರು 1.5 ಲಕ್ಷ ರೂಪಾಯಿ. ಇನ್ನು ಲ್ಯಾಪರೊಸ್ಕೋಪಿಗೆ ಸುಮಾರು 75 ಸಾವಿರ ಖರ್ಚಾಗುತ್ತದೆ. 

ಬಂಜೆತನ ಸಮಸ್ಯೆಯಿಂದ ದೂರವಿರಬೇಕು, ಸಂತಾನೋತ್ಪತ್ತಿ ಸುಲಭವಾಗ್ಬೇಕೆಂದ್ರೆ ಮಹಿಳೆಯರು ಒತ್ತಡ ಜೀವನದಿಂದ ಹೊರಗೆ ಬರುವುದು ಬಹಳ ಮುಖ್ಯ. 
 

Follow Us:
Download App:
  • android
  • ios