ಈ ಕಾಳನ್ನು ಪ್ರತಿನಿತ್ಯ ಸೇವಿಸಿದ್ರೆ 45 ನಂತರವೂ ಸೆಕ್ಸ್ ಲೈಫ್ ಸೂಪರ್ ಆಗಿರುತ್ತೆ
45 ವರ್ಷಕ್ಕಿಂತ ಮೇಲ್ಪಟ್ಟ ಪುರುಷರ ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟವು ಕಡಿಮೆಯಾಗಲು ಪ್ರಾರಂಭಿಸುವುದನ್ನು ಹೆಚ್ಚಾಗಿ ನೋಡ್ತೇವೆ. ಇದರ ಪರಿಣಾಮವಾಗಿ, ಲೈಂಗಿಕ ಜೀವನದಲ್ಲಿ ಒಂದಲ್ಲ ಒಂದು ಸಮಸ್ಯೆಗಳು ಕಂಡು ಬರುತ್ತವೆ. ಈ ಸಮಸ್ಯೆ ನಿವಾರಿಸಲು ನೀವು ಔಷಧಗಳನ್ನು ಹುಡುಕುವ ಮುನ್ನ, ನಿಮ್ಮ ಮನೆಯ ಅಡುಗೆಮನೆಯಲ್ಲಿರುವ ಮಸಾಲೆಗಳ ಕಡೆಗೆ ಗಮನ ಹರಿಸಿ. ಅವು ಉತ್ತಮ ಔಷಧೀಯ ಗುಣವನ್ನು ಹೊಂದಿವೆ. ಅದರಲ್ಲೂ ಮುಖ್ಯವಾಗಿ ಮೆಂತ್ಯ, ಇದು ಔಷಧಿಗಳಿಗಿಂತ ಹೆಚ್ಚು ಪವರ್ ಫುಲ್ ಆಗಿದೆ. ಮೆಂತ್ಯವು ದೇಹ ಮತ್ತು ಆರೋಗ್ಯಕ್ಕೆ ಒಳ್ಳೆಯದು. ಅಂತೆಯೇ, ಮೆಂತ್ಯವು ಪುರುಷರ ಲೈಂಗಿಕ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿಯಾಗಿದೆ. ನಿಯಮಿತವಾಗಿ ಒಂದು ಚಮಚ ಮೆಂತ್ಯ ಸೇವಿಸುತ್ತಿದ್ರೆ, ಬೆಡ್ ನಲ್ಲಿ ನೀವೆ ರೂಲ್ ಮಾಡೋದು ಗ್ಯಾರಂಟಿ.
ಹೆಚ್ಚಿನ ದಂಪತಿಗಳು ಲೈಂಗಿಕತೆಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಪುರುಷರು ಮತ್ತು ಮಹಿಳೆಯರು ಇಬ್ಬರೂ ತಮ್ಮ ಲೈಂಗಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. 45 ವರ್ಷಕ್ಕಿಂತ ಮೇಲ್ಪಟ್ಟ ಪುರುಷರ ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟವು (testosterone) ಕಡಿಮೆಯಾಗುತ್ತಾ ಬಂದಂತೆ, ಲೈಂಗಿಕ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತೆ.
ಲೈಂಗಿಕತೆಯು ಅನೇಕ ಜನರು ಸಾಕಷ್ಟು ಫ್ಯಾಂಟಸಿಯನ್ನು ಹೊಂದಿರುವ ವಿಷಯವಾಗಿದೆ. ಪ್ರತಿಯೊಬ್ಬರೂ ವಿಭಿನ್ನ ರೀತಿಯಲ್ಲಿ ಲೈಂಗಿಕತೆಯನ್ನು ಆನಂದಿಸುತ್ತಾರೆ. ಆದರೂ, ಅನೇಕ ಜನರು ಲೈಂಗಿಕ ಆರೋಗ್ಯದ ಸಮಸ್ಯೆಯಿಂದ (sexual problem) ಬಳಲುತ್ತಿದ್ದಾರೆ. ಪುರುಷರು ಮತ್ತು ಮಹಿಳೆಯರು ಇಬ್ಬರೂ ತಮ್ಮ ಲೈಂಗಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ.
45 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆಯಾಗಲು ಪ್ರಾರಂಭಿಸಿದಾಗ, ಲೈಂಗಿಕ ಜೀವನ (sex life) ನೀರಸವಾಗುತ್ತೆ. ಈ ಸಮಯದಲ್ಲಿ ಅಡುಗೆ ಮನೆಯಲ್ಲಿ ಸಿಗುವ ಒಂದು ಮಸಾಲೆ ನಿಮ್ಮ ಸಹಾಯಕ್ಕೆ ಬರುತ್ತೆ. ಅದು ಯಾವುದೇ ಅಂದ್ರೆ ಮೆಂತ್ಯ, ಇದು ಔಷಧಿಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಇದು ಲಿಬಿಡೋ ಸಮಸ್ಯೆ ದೂರ ಮಾಡಿ ಸೆಕ್ಸ್ ಲೈಫ್ ಉತ್ತಮವಾಗುವಂತೆ ಮಾಡುತ್ತೆ.
ಇತ್ತೀಚೆಗೆ, ಒಂದು ಅಧ್ಯಯನವು ಒಂದು ವಿಷಯವನ್ನು ಬಹಿರಂಗಪಡಿಸಿದೆ. ಪುರುಷ ದೇಹದಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಮಟ್ಟವನ್ನು ಹೆಚ್ಚಿಸಲು ಮೆಂತ್ಯ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ರಿಸರ್ಚ್ ನಲ್ಲಿ ಕಂಡುಬಂದಿದೆ. ಅಂದ್ರೆ ಇದು ಪುರುಷರ ಸೆಕ್ಸ್ ಲೈಫ್ ನಲ್ಲಿ (sex life) ಮತ್ತಷ್ಟು ಮಸಾಲೆ ತುಂಬಲು ಸಹಾಯ ಮಾಡುತ್ತೆ.
ಮೆಂತ್ಯದಲ್ಲಿ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಡಿ ಮತ್ತು ವಿವಿಧ ಖನಿಜ ಅಂಶಗಳು ಇರುತ್ತವೆ. ಜೀವಸತ್ವಗಳ ಜೊತೆಗೆ, ಮೆಂತ್ಯವು ಸಾಕಷ್ಟು ಫೈಬರ್, ಕಬ್ಬಿಣ ಮತ್ತು ಬಯೋಟಿನ್ ಅನ್ನು ಹೊಂದಿರುತ್ತದೆ. ಮೆಂತ್ಯದಲ್ಲಿ ಎರಡು ಕ್ರಿಯಾತ್ಮಕ ಘಟಕಗಳಿವೆ, ಅವುಗಳೆಂದರೆ ಸಪೋನಿನ್ ಮತ್ತು ಕೌಮರಿನ್. ಈ ಎರಡು ಘಟಕಗಳು ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಟೆಸ್ಟೋಸ್ಟೆರಾನ್ ಒಂದು ಲೈಂಗಿಕ ಹಾರ್ಮೋನ್ ಆಗಿದ್ದು, ಇದು ಪುರುಷರು ಮತ್ತು ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡು ಬರುತ್ತೆ. ಈ ಹಾರ್ಮೋನ್ ಲೈಂಗಿಕ ಚಟುವಟಿಕೆಗೆ ಸಹಾಯ ಮಾಡುವುದರಿಂದ, ಇದು ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ನಿಮ್ಮ ಲೈಂಗಿಕ ಜೀವನ ಚೆನ್ನಾಗಿರಬೇಕು ಎಂದಾದರೆ ಟೆಸ್ಟೋಸ್ಟೆರಾನ್ ಹಾರ್ಮೋನ್ ದೇಹದಲ್ಲಿ ಸಕ್ರಿಯವಾಗಿರಬೇಕು.
ಬೊಜ್ಜು ಮತ್ತು ಮಧುಮೇಹದಂತಹ ಕೆಲವು ದೈಹಿಕ ಸಮಸ್ಯೆಗಳಿಂದಾಗಿ (physical problem), ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದಕ್ಕಾಗಿ ವಿವಿಧ ರೀತಿಯ ಚಿಕಿತ್ಸೆಗಳಿವೆ. ಅವುಗಳಲ್ಲಿ ಒಂದು ಹಾರ್ಮೋನ್ ಬದಲಿ ಚಿಕಿತ್ಸೆ, ಆದರೂ ಯಾರೂ ಇದನ್ನು ಆಯ್ಕೆ ಮಾಡೋದಿಲ್ಲ. ಆದ್ದರಿಂದ, ದೇಶೀಯ ರೀತಿಯಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಮಟ್ಟ ಹೆಚ್ಚಿಸಲು ಮೆಂತ್ಯ ಸಹಾಯಕವಾಗಿದೆ.
ಮೆಂತ್ಯ ಮಧುಮೇಹಿಗಳಿಗೆ ತುಂಬಾ ಉತ್ತಮ ಆಹಾರಗಳಲ್ಲಿ ಒಂದಾಗಿದೆ. ಮೆಂತ್ಯ ಉರಿಯೂತ ಶಮನಕಾರಿ ಗುಣಲಕ್ಷಣಗಳನ್ನು ಹೊಂದಿದ್ದು, ಉರಿಯೂತದ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತೆ, ಅಷ್ಟೇ ಅಲ್ಲ, ಮಾರಣಾಂತಿಕ ರೋಗವಾದ ಕ್ಯಾನ್ಸರ್ ಅನ್ನು ನಾಶಪಡಿಸುವಲ್ಲಿ ಮೆಂತ್ಯ ತುಂಬಾ ಉಪಯುಕ್ತವಾಗಿದೆ.
ಮೆಂತ್ಯ ಸೊಪ್ಪು ಅಥವಾ ಮೆಂತ್ಯ ಕಾಳು ಎರಡೂ ದೇಹಕ್ಕೆ ಪರಿಣಾಮಕಾರಿ. ಮೆಂತ್ಯ ದೇಹ ಮತ್ತು ಆರೋಗ್ಯಕ್ಕೆ ಒಳ್ಳೆಯದು. ಅಂತೆಯೇ, ಮೆಂತೆ ಪುರುಷರ ಲೈಂಗಿಕ ಆರೋಗ್ಯಕ್ಕೆ (sexual health) ತುಂಬಾ ಪರಿಣಾಮಕಾರಿಯಾಗಿದೆ. ನಿಯಮಿತವಾಗಿ ಒಂದು ಚಮಚ ಮೆಂತೆಯನ್ನು ಪ್ರತಿನಿತ್ಯ ಸೇವಿಸುತ್ತಾ ಬಂದರೆ ಲೈಂಗಿಕ ಆರೋಗ್ಯ ಉತ್ತಮವಾಗಿರುತ್ತೆ ಎಂದು ತಿಳಿದು ಬಂದಿದೆ.