ಪತಿಯ ಅಕ್ರಮ ಸಂಬಂಧ ಪತ್ತೆ ಮಾಡಿದ್ದ ಪತ್ನಿ ನಿಗೂಢ ಸಾವು: ಪೋಷಕರಿಂದ ಕೊಲೆ ಆರೋಪ
ದಾವಣಗೆರೆಯಲ್ಲಿ ಇತ್ತೀಚೆಗೆ ಮದುವೆಯಾಗಿದ್ದ ಕಾವ್ಯ ಎಂಬ ಗೃಹಿಣಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಪತಿಯ ಅಕ್ರಮ ಸಂಬಂಧದ ಸಾಕ್ಷ್ಯ ಸಂಗ್ರಹಿಸಿದ್ದ ಆಕೆಯನ್ನು, ಪತಿಯೇ ಹಣಕ್ಕಾಗಿ ಪೀಡಿಸಿ ಕೊಲೆ ಮಾಡಿದ್ದಾನೆ ಎಂದು ಮೃತರ ಪೋಷಕರು ಆರೋಪಿಸಿ, ದೂರು ದಾಖಲಿಸಿದ್ದಾರೆ.

ದಾವಣಗೆರೆ: ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಗೃಹಿಣಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಪತಿ ವಿರುದ್ಧ ಗೃಹಿಣಿ ಪೋಷಕರು ಕೊಲೆ ಆರೋಪ ಮಾಡಿದ್ದು, ಪತಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.. ಮಂಡಲೂರು ಗ್ರಾಮದ 26 ವರ್ಷದ ಕಾವ್ಯ ಮೃತಪಟ್ಟ ಗೃಹಿಣಿ.
ಎರಡು ವರ್ಷದ ಹಿಂದೆ ಕಾವ್ಯ ಮದುವೆ ಹೊದಿಗೆರೆ ನಿವಾಸಿ ರವಿ ಎಂಬಾತನ ಜೊತೆ ನಡೆದಿತ್ತು. ಆದರೆ ಕಾವ್ಯ ಪತಿ ಮನುವಿಗೆ ಬೇರೆ ಯುವತಿ ಜೊತೆ ಅಕ್ರಮ ಸಂಬಂಧವಿತ್ತು ಎಂದು ಕಾವ್ಯ ಮನೆಯವರು ಆರೋಪಿಸಿದ್ದಾರೆ. ಅಲ್ಲದೇ ಮನು ಕಾವ್ಯಾಗೆ ತವರು ಮನೆಯಿಂದ ಹಣ ತರುವಂತೆ ಪೀಡಿಸುತ್ತಿದ್ದ. ಈಗ ಆತನೇ ಆಕೆಯನ್ನು ಹೊಡೆದು ಕೊಂದಿದ್ದಾನೆ ಎಂದು ಕಾವ್ಯಾ ಮನೆಯವರು ಆರೋಪಿಸಿದ್ದಾರೆ.
ಪತಿ ಮನುವಿಗೆ ಬೇರೆ ಯುವತಿ ಜೊತೆ ಅಕ್ರಮ ಸಂಬಂಧ ಇರುವ ಬಗ್ಗೆ ಕಾವ್ಯ ದಾಖಲೆ ಸಂಗ್ರಹ ಮಾಡಿದ್ದಳು. ಅನ್ಯ ಯುವತಿ ಜೊತೆ ಆತ ಚಾಟ್ ಮಾಡಿದ್ದ ಸ್ಕ್ರೀನ್ ಶಾಟ್ ಅನ್ನು ಕಾವ್ಯ ಸಂಗ್ರಹಿಸಿದ್ದಳು. ಇದನ್ನು ಪೆನ್‌ಡ್ರೈವ್‌ನಲ್ಲಿ ಸೇವ್ ಮಾಡಿದ್ದ ಕಾವ್ಯ ತವರು ಮನೆಯಲ್ಲಿ ತನ್ನ ತಮ್ಮನ ಬ್ಯಾಗ್‌ನಲ್ಲಿ ಇರಿಸಿದ್ದಳು ಎಂದು ಪೋಷಕರು ಹೇಳಿದ್ದಾರೆ.
ಆದರೆ ಈಗ ಮಗಳು ದಾವಣಗೆರೆಯ ಅಂಚೆ ಇಲಾಖೆ ವಸತಿಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದು, ಗಂಡ ಮನುವೇ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಕಾವ್ಯಾಳ ಪೋಷಕರು ದಾವಣಗೆರೆ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾವ್ಯಾಳನ್ನು ಆಕೆಯ ಪತಿಯೇ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಆದರೆ ಈ ಬಗ್ಗೆ ಪೊಲೀಸರು ಸರಿಯಾದ ತನಿಖೆ ನಡೆಸುತ್ತಿಲ್ಲ ಎಂದು ಕಾವ್ಯ ಪೋಷಕರು ಆರೋಪಿಸಿದ್ದಾರೆ. ಆತನಿಗಿರುವ ಅಕ್ರಮ ಸಂಬಂಧದ ಬಗ್ಗೆ ಕಾವ್ಯ ಸಂಗ್ರಹಿಸಿದ ಸಾಕ್ಷ್ಯವನ್ನು ನ್ಯಾಯಾಲಯಕ್ಕೆ ನೀಡುತ್ತೇವೆ ಪೊಲೀಸರಿಗೆ ನೀಡುವುದಿಲ್ಲ ಎಂದು ಕಾವ್ಯ ಪೋಷಕರು ಹೇಳಿದ್ದಾರೆ.
ಮನು ಜೊತೆ 2 ವರ್ಷಗಳ ಹಿಂದೆ ಕಾವ್ಯಳ ಮದುವೆಯನ್ನು ಬಹಳ ಅದ್ದೂರಿಯಾಗಿ ಪೋಷಕರು ಮಾಡಿದ್ದರು. ಮದುವೆಗೂ ಮುನ್ನ ಅದ್ಧೂರಿ ಫೋಟೋಶೂಟ್ ಮಾಡಿಸಲಾಗಿತ್ತು.
. ಲಕ್ಷಾಂತರ ಸಾಲ ಮಾಡಿ ಮಗಳ ಮದುವೆ ಮಾಡಲಾಗಿತ್ತು. ಆದರೆ ಕೇವಲ ಎರಡೇ ವರ್ಷಕ್ಕೆ ಮಗಳು ಹೀಗೆ ಪ್ರಾಣ ಕಳೆದುಕೊಂಡಿದ್ದು, ಕಾವ್ಯಳ ಪೋಷಕರು ಕಣ್ಣೀರಿಟ್ಟಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
