MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ತನ್ನ ಸಾಕುನಾಯಿಗೆ ವರನ ಕಡೆಯವರು ಥಳಿಸಿದ್ದಕ್ಕೆ ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧು

ತನ್ನ ಸಾಕುನಾಯಿಗೆ ವರನ ಕಡೆಯವರು ಥಳಿಸಿದ್ದಕ್ಕೆ ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧು

wedding called off over pet dog: ಉತ್ತರ ಪ್ರದೇಶದಲ್ಲಿ, ಮದುವೆ ಸಮಾರಂಭದ ವೇಳೆ ವಧುವಿನ ಸಾಕುನಾಯಿ ಬೊಗಳಿದ್ದಕ್ಕೆ ವರನ ಕಡೆಯವರು ಅದಕ್ಕೆ ಥಳಿಸಿದ್ದಾರೆ. ಈ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಜಗಳ ನಡೆದು, ಹೊಡೆದಾಟವಾಗಿದೆ. ಇದರಿಂದಾಗಿ ವಧು ಮದುವೆಯಾಗಲು ನಿರಾಕರಿಸಿದ್ದು, ಮದುವೆಯೇ ರದ್ದಾಗಿದೆ.

2 Min read
Author : Anusha Kb
Published : Feb 22 2026, 11:06 AM IST
Share this Photo Gallery
  • FB
  • TW
  • Linkdin
  • Whatsapp
16
ನಾಯಿಗಳನ್ನು ಮನೆಯ ಸದಸ್ಯರಂತೆ ಕಾಣ್ತಾರೆ ಜನ
Image Credit : AI

ನಾಯಿಗಳನ್ನು ಮನೆಯ ಸದಸ್ಯರಂತೆ ಕಾಣ್ತಾರೆ ಜನ

ಪ್ರಯಾಗರಾಜ್: ಇತ್ತೀಚೆಗೆ ಸಾಕುನಾಯಿಗಳು ಮನೆಯ ಸದಸ್ಯರಂತಾಗಿದ್ದಾರೆ. ಮನುಷ್ಯರಿಗಿಂತ ಹೆಚ್ಚಿನ ಸವಲತ್ತುಗಳನ್ನು ಸಾಕುನಾಯಿಗಳಿಗೆ ಅನೇಕರು ಕೊಡಿಸುತ್ತಾರೆ. ಅದಕ್ಕೆ ಅದರದ್ದೇ ಆದ ಮಲಗುವ ಮಂಚ, ಬೆಡ್‌ಶೀಟ್, ಆಟಿಕೆ ತಿನ್ನುವ ಆಹಾರ ಹೀಗೆ ಸಿಟಿಗಳಲ್ಲಿ ನಾಯಿ ಸಾಕುವ ಜನ ಅದಕ್ಕೆಂದೇ ತಿಂಗಳಿಗೆ ಸಾವಿರಾರು ರೂಪಾಯಿಗಳನ್ನು ತೆಗೆದಿರಿಸುತ್ತಾರೆ.

ಇದನ್ನೂ ಓದಿ: ದೇಶದ ಮಾನ ವಿಶ್ವಮಟ್ಟದಲ್ಲಿ ಹರಾಜು ಹಾಕಲು ಕಾಂಗ್ರೆಸ್ ಯತ್ನ: ಎಐ ಶೃಂಗಸಭೆಯಲ್ಲಿ 'ಕೈ' ಟಾಪ್‌ಲೆಸ್‌ ಪ್ರತಿಭಟನೆಗೆ ಬಿಜೆಪಿ ಆಕ್ರೋಶ

26
 ನಾಯಿ ಕಾರಣಕ್ಕೆ ನಡೆದಿತ್ತು ವಿಚ್ಛೇದನ
Image Credit : X

ನಾಯಿ ಕಾರಣಕ್ಕೆ ನಡೆದಿತ್ತು ವಿಚ್ಛೇದನ

ಸಾಕುನಾಯಿಗಳ ಕಾರಣಕ್ಕೆ ಗಂಡ ಹೆಂಡತಿ ವಿಚ್ಛೇದನ ಪಡೆದುಕೊಂಡಿದ್ದು ಇದೆ. ನಾಯಿಯನ್ನು ಜೊತೆಗೆ ಮಲಗಿಸಿಕೊಳ್ಳುತ್ತಾಳೆ ಎಂದು ಗಂಡ ಹೆಂಡತಿ ಮಧ್ಯೆ ಜಗಳ ಬಂದು ವಿಚ್ಛೇದನವಾದ ಘಟನೆ ವರ್ಷದ ಹಿಂದೆ ನಡೆದಿತ್ತು. ಮತ್ತೊಂದು ಪ್ರಕರಣದಲ್ಲಿ ಗಂಡನ ನಾಯಿ ಹಾಗೂ ಹೆಂಡತಿಯ ನಾಯಿಗೆ ಪರಸ್ಪರ ಆಗಿ ಬರುವುದಿಲ್ಲ ಎಂಬ ಕಾರಣಕ್ಕೂ ಜೋಡಿಯೊಂದು ಡಿವೋರ್ಸ್ ಪಡೆದುಕೊಂಡ ಘಟನೆ ನಡೆದಿತ್ತು. ಈ ಎಲ್ಲಾ ಘಟನೆಗಳು ಮಾಸುವ ಮೊದಲೇ ಇಲ್ಲೊಂದು ನಾಯಿಯ ಕಾರಣಕ್ಕೆ ಮದುವೆಯೇ ಮುರಿದು ಬಿದ್ದಂತಹ ಘಟನೆಯೊಂದು ನಡೆದಿದೆ.

ಇದನ್ನೂ ಓದಿ: ಕಲಬುರಗಿ: ಪರೀಕ್ಷೆಯಲ್ಲಿ ನಕಲು ಪ್ರಶ್ನಿಸಿದ್ದಕ್ಕೆ ರೌಡಿಯಾಗಿ ಬದಲಾದ ಮೆಡಿಕಲ್ ವಿದ್ಯಾರ್ಥಿ: ಪ್ರೊಫೆಸರ್ ಮೇಲೆಯೇ ಹಲ್ಲೆ: ವೀಡಿಯೋ

Related Articles

Related image1
ಹಾವಿನೊಂದಿಗೆ ಕಾದಾಡಿ ಪ್ರಾಣಬಿಟ್ಟ ಸಾಕುನಾಯಿ: ವೀಡಿಯೋ
Related image2
ಬಟ್ಟೆ ಒಗೆದಂತೆ ಒಗೆದು ಸಾಕುನಾಯಿ ಕೊಂದಳು!
36
 ನಾಯಿ ಕಾರಣಕ್ಕೆ ನಿಂತೋಯ್ತು ಮದುವೆ
Image Credit : X

ನಾಯಿ ಕಾರಣಕ್ಕೆ ನಿಂತೋಯ್ತು ಮದುವೆ

ಹೌದು ವಧುವಿನ ನಾಯಿಯ ಕಾರಣಕ್ಕೆ ಉತ್ತರ ಪ್ರದೇಶದಲ್ಲಿ ಮದುವೆಯೊಂದು ನಿಂತು ಹೋಗಿದೆ.. ಹಾಗಿದ್ರೆ ಆಗಿದ್ದೇನು?

ಮದುವೆ ಸಂಭ್ರಮ ಮನೆಯಲ್ಲಿ ನಡೆಯುತ್ತಿದ್ದಾಗ ಮನೆಯಿಂದ ತುಸು ದೂರದಲ್ಲಿ ಕಟ್ಟಿ ಹಾಕಿದ್ದ ನಾಯಿ ತುಂಬಾ ಜನರನ್ನು ನೋಡಿ ಗೊಂದಲಕ್ಕೆ ಒಳಗಾಗಿ ಬೊಗಳುವುದಕ್ಕೆ ಶುರು ಮಾಡಿದೆ. ಈ ನಾಯಿ ನಿರಂತರವಾಗಿ ಬೊಗಳುವುದನ್ನು ನೋಡಿ ಕಿರಿಕಿರಿಗೊಳಗಾದ ವರನ ಕಡೆಯವರು ಅದನ್ನು ಶಾಂತಗೊಳಿಸುವುದಕ್ಕೆ ಮುಂದಾಗಿದ್ದಾರೆ. ಆದರೆ ನಾಯಿ ಸುಮ್ಮನಿರುವ ಬದಲು ಅಪರಿಚಿತರನ್ನು ನೋಡಿ ಇನ್ನೂ ಜೋರಾಗಿ ಬೊಬ್ಬೆ ಹಾಕುವುದಕ್ಕೆ ಶುರು ಮಾಡಿದೆ. ಈ ವೇಳೆ ವರನ ಕಡೆಯವರು ನಾಯಿಗೆ ಥಳಿಸಿದರು ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ಅಮ್ಮನ ಅಂಬಾರಿ: ಮೇವಿನ ಹೊರೆಯ ಜೊತೆ ಮಗನನ್ನು ಕಟ್ಟಿ ತಲೆಯ ಮೇಲಿಟ್ಟು ಸಾಗಿದ ತಾಯಿ

46
ನಾಯಿಗೆ ಹೊಡೆದ ವರನ ಕಡೆಯವರು
Image Credit : X

ನಾಯಿಗೆ ಹೊಡೆದ ವರನ ಕಡೆಯವರು

ತಮ್ಮ ಸಾಕುನಾಯಿಗೆ ವರನ ಸಂಬಂಧಿಕರು ಥಳಿಸಿದರು ಎಂದು ಸಿಟ್ಟಿಗೆದ್ದ ವಧುವಿನ ಕಡೆಯವರು ಈ ವಿಚಾರವನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಎರಡು ಕಡೆಯವರ ನಡುವೆ ಗಲಾಟೆ ಶುರುವಾಗಿದೆ. ಕೂಡಲೇ ಈ ವಾಗ್ವಾದ ವಿಕೋಪಕ್ಕೆ ತಿರುಗಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಗಲಾಟೆಯಲ್ಲಿ ಕನಿಷ್ಠ ಐದು ಜನ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದ ಫತೇಪುರ ಜಿಲ್ಲೆಯ ಖಾಗ ತಹಸಿಲ್‌ನಲ್ಲಿ ಈ ಘಟನೆ ನಡೆದಿದೆ. 25 ವರ್ಷದ ಆಭರಣ ವ್ಯಾಪಾರಿ ಸುಮಿತ್ ಕೇಸರ್ವಾನಿ ಹಾಗೂ 19 ವರ್ಷದ ತನು ಕೇಸರ್ವಾನಿ ನಡುವೆ ಮದುವೆ ನಿಗದಿಯಾಗಿದ್ದು, ಇಬ್ಬರು ಮದುವೆಯಾಗುವುದಕ್ಕೆ ಸಿದ್ಧ

ಇದನ್ನೂ ಓದಿ: ನಾವು ದೇಶಕ್ಕಾಗಿ ಹೋರಾಡಿದೆವು ಆದರೆ ದೇಶ ನಮ್ಮ ಕೈ ಬಿಟ್ಟಿತು: ಬಲೂಚ್‌ ಹೋರಾಟಗಾರರ ಕೈಗೆ ಸಿಕ್ಕಿದ ಪಾಕ್ ಯೋಧರ ಅಳಲು

56
ಸಿಟ್ಟಿಗೆದ್ದ ವಧುವಿನ ಕಡೆಯವರು, ಪರಸ್ಪರ ಕಿತ್ತಾಟ
Image Credit : X

ಸಿಟ್ಟಿಗೆದ್ದ ವಧುವಿನ ಕಡೆಯವರು, ಪರಸ್ಪರ ಕಿತ್ತಾಟ

ವಧುವಿನ ಕುಟುಂಬಕ್ಕೆ ಸೇರಿದ ಸಾಕು ನಾಯಿಯೊಂದು ವಧು ಮತ್ತು ವರನ ಕುಟುಂಬಗಳ ನಡುವೆ ಹಿಂಸಾತ್ಮಕ ವಾಗ್ವಾದಕ್ಕೆ ಕಾರಣವಾಗಿ, ಕನಿಷ್ಠ ಐದು ಜನರು ಗಾಯಗೊಂಡಿರುವ ಘಟನೆ ಫತೇಪುರ್ ಜಿಲ್ಲೆಯ ಖಾಗಾ ತಹಸಿಲ್‌ನಲ್ಲಿ ನಡೆದಿದೆ. ಗುರುವಾರ ಈ ಘಟನೆ ನಡೆದಿದ್ದು, 25 ವರ್ಷದ ಆಭರಣ ವ್ಯಾಪಾರಿ ಸುಮಿತ್ ಕೇಸರ್ವಾನಿ 19 ವರ್ಷದ ತನು ಕೇಸರ್ವಾನಿ ಅವರನ್ನು ಮದುವೆಯಾಗಲು ಸಿದ್ಧರಾಗಿ ಮದುವೆಯ ಸಂಪ್ರದಾಯಗಳು ನಡೆಯುತ್ತಿದ್ದಾಗಲೇ ಘಟನೆ ನಡೆದಿದೆ.

ಇದನ್ನೂ ಓದಿ: ಚೆನ್ನೈ ಶಿವ ದೇಗುಲಕ್ಕೆ ಭೇಟಿ ನೀಡಿ ನಿರರ್ಗಳವಾಗಿ ಶಿವ ತಾಂಡವ ಪಠಿಸಿದ ಪಾಪ್ ಗಾಯಕ

66
ಮದುವೆಯೇ ಕ್ಯಾನ್ಸಲ್
Image Credit : X

ಮದುವೆಯೇ ಕ್ಯಾನ್ಸಲ್

ವಧು ಹಾಗೂ ವರನ ಕಡೆಯವರು ಪರಸ್ಪರ ಕುರ್ಚಿ ಹಾಗೂ ಕೋಲುಗಳನ್ನು ಬಳಸಿ ಹೊಡೆದಾಡಿದ್ದು, ಘಟನೆಯಲ್ಲಿ ವಧುವಿನ ಕುಟುಂಬದ ಮೂವರು ಸದಸ್ಯರಾದ ರಿಷಭ್ ಕೇಸರ್ವಾನಿ, ಶುಭಂ ಗುಪ್ತಾ ಮತ್ತು ಸಂಗೀತಾ ದೇವಿ ಅವರ ತಲೆಗೆ ಗಾಯಗಳಾಗಿದ್ದರೆ, ಮತ್ತೊಬ್ಬರ ಕೈ ಮುರಿದಿದೆ. ವರನ ಕಡೆಯ ಕೆಲವು ಸದಸ್ಯರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯಿಂದಾಗಿ ವಧು ಮದುವೆಯಾಗಲು ನಿರಾಕರಿಸಿದ್ದು ಮದುವೆ ಕ್ಯಾನ್ಸಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲ ಎಂದು ಖಗಾದ ಎಸ್‌ಎಚ್‌ಒ ಆರ್‌ಕೆ ಪಟೇಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಬದುಕಿದ್ದು ಕೆಲವೇ ವರ್ಷ ನಟಿಸಿದ್ದ 3 ಸಿನಿಮಾವೂ ಸೂಪರ್ ಹಿಟ್: 25ಕ್ಕೆ ಬದುಕು ಅಂತ್ಯಗೊಳಿಸಿದ ಜಿಯಾ ಖಾನ್

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಮದುವೆ
ಸಂಬಂಧಗಳು

Latest Videos
Recommended Stories
Recommended image1
ಹಠಮಾರಿ ಮಕ್ಕಳ ಪಾಲನೆಗೆ ಚೀನಾದ 'ರಿವರ್ಸ್ ಪೇರೆಂಟಿಂಗ್' ಸೂತ್ರ!
Recommended image2
ಚಾಣಕ್ಯ ನೀತಿ: ಪುರುಷರು ಮಹಿಳೆಯಿಂದ ಮೋಸ ಹೋದ ನಂತ್ರಾನೇ ಈ ಪಾಠಗಳನ್ನು ಕಲೀತಾರಂತೆ!
Recommended image3
ಫಸ್ಟ್‌ ಮದುವೆಯಲ್ಲಿ ನರಕ; ಪ್ರೀತಿಸಿ ಎರಡನೇ ಮದುವೆಯಾದ Shikhar Dhawan; ಫೋಟೋಗಳಿವು
Related Stories
Recommended image1
ಹಾವಿನೊಂದಿಗೆ ಕಾದಾಡಿ ಪ್ರಾಣಬಿಟ್ಟ ಸಾಕುನಾಯಿ: ವೀಡಿಯೋ
Recommended image2
ಬಟ್ಟೆ ಒಗೆದಂತೆ ಒಗೆದು ಸಾಕುನಾಯಿ ಕೊಂದಳು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved