dog's ultimate sacrifice: ಸಾಕು ನಾಯಿಯೊಂದು ಹಾವಿನೊಂದಿಗೆ ಕಾದಾಡಿ ಹಾವನ್ನು ಸಾಯಿಸಿ ತಾನು ಪ್ರಾಣ ಬಿಟ್ಟಿದೆ. ಉತ್ತರಪ್ರದೇಶದ ಮಿರ್ಜಾಪುರದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಾವಿನೊಂದಿಗೆ ಕಾದಾಡಿ ಪ್ರಾಣಬಿಟ್ಟ ಸಾಕುನಾಯಿ

ಸಾಕು ನಾಯಿಯೊಂದು ಹಾವಿನೊಂದಿಗೆ ಕಾದಾಡಿ ಹಾವನ್ನು ಸಾಯಿಸಿ ತಾನು ಪ್ರಾಣ ಬಿಟ್ಟಿದೆ. ಉತ್ತರಪ್ರದೇಶದ ಮಿರ್ಜಾಪುರದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎರಡು ಸಾಕುನಾಯಿಗಳು ಮನೆ ಹಿತ್ತಲಿಗೆ ಬಂದ ಸಾಕುನಾಯಿಯ ಜೊತೆಗೆ ಕಾದಾಡಿದ್ದು, ಈ ವೇಳೆ ಹಾವು ಸಾವನ್ನಪ್ಪಿದೆ ಜೊತೆಗೆ ಹಾವಿನಿಂದ ಕಡಿತಕ್ಕೊಳಗಾದ ಒಂದು ನಾಯಿಯೂ ಪ್ರಾಣ ಬಿಟ್ಟಿದೆ.

ನಾಯಿಗೂ ಅನೇಕ ಬಾರಿ ಕಚ್ಚಿದ ಹಾವು: ಹಾವನ್ನು ಸಾಯಿಸಿ ತಾನು ಪ್ರಾಣಬಿಟ್ಟ ಶ್ವಾನ

ಸ್ಥಳೀಯ ಕುಟುಂಬದ ಎರಡು ಸಾಕು ನಾಯಿಗಳು ಮನೆಗೆ ನಾಗರಹಾವು ನುಗ್ಗಿದಾಗ ನಿಷ್ಠೆ ಮತ್ತು ಧೈರ್ಯವನ್ನು ಪ್ರದರ್ಶಿಸಿದವು. ಎರಡೂ ನಾಯಿಗಳು ಹಾವಿನೊಂದಿಗೆ ಹೋರಾಡಿ, ಅದು ಕುಟುಂಬದ ಇತರ ಸದಸ್ಯರ ಮೇಲೆ ದಾಳಿ ಮಾಡುವ ಮೊದಲು ಅದನ್ನು ಮನೆಯಿಂದ ಹೊರಗೆಸೆದವು. ವರದಿಯ ಪ್ರಕಾರ ಹಾವು ಹಾಗೂ ನಾಯಿ ನಡುವಿನ ಉಗ್ರ ಹೋರಾಟದ ಸಮಯದಲ್ಲಿ ಹಾವು ಸತ್ತುಹೋಯಿತು ಇದರ ಜೊತೆಗೆ ನಾಯಿಗೂ ಕೂಡ ಅನೇಕ ಬಾರಿ ಹಾವು ಕಡಿತದಿಂದ ಗಾಯಗೊಂಡಿದ್ದು ನಾಯಿಯೂ ವಿಷವೇರಿ ಪ್ರಾಣ ಬಿಟ್ಟಿದೆ. ಈ ಸಂಪೂರ್ಣ ದೃಶ್ಯವನ್ನು ನೋಡುಗರು ತಮ್ಮ ಮೊಬೈಲ್ ಕ್ಯಾಮರಾಗಳಲ್ಲಿ ರೆಕಾರ್ಡ್ ಮಾಡಿದ್ದಾರೆ. ಇದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ರಾಣಾ ಸಿಂಗ್ ಎಂಬುವವರ ಮನೆಯಲ್ಲಿ ಘಟನೆ

ಮಿರ್ಜಾಪುರದ ಚನ್ಬೆ ಬ್ಲಾಕ್‌ನ ಬಬುರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಲ್ಲಿ ರಾಣಾ ಸಿಂಗ್ ಎಂಬುವವರ ಮನೆಗೆ ಹಾವೊಂದು ಬಂದಿದ್ದು, ಈ ವೇಳೆ ಅವರ ಕುಟುಂಬದ ಎರಡು ಸಾಕು ನಾಯಿಗಳಾದ ಬಾದಲ್ ಮತ್ತು ಗ್ರೇಸ್, ಅವರ ಮನೆಗೆ ಪ್ರವೇಶಿಸಿದ ನಾಗರಹಾವಿನಿಂದ ಕುಟುಂಬ ಸದಸ್ಯರನ್ನು ರಕ್ಷಿಸಲು ಹೋರಾಡಿವೆ. ಬಾದಲ್ ಜರ್ಮನ್ ಶೆಫರ್ಡ್ ಶ್ವಾನವಾಗಿದ್ದು, ನಾಗರಹಾವನ್ನು ಮನೆಯಿಂದ ದೂರ ಓಡಿಸಿ ಹೊಲಕ್ಕೆ ಓಡಿಸಿತು. ಅಲ್ಲಿ ಕಾದಾಟದ ಸಮಯದಲ್ಲಿ, ಹಾವು ಬಾದಲ್‌ನನ್ನು ಮೂರು ಬಾರಿ ಕಚ್ಚಿತು ಎಂದು ವರದಿಯಾಗಿದೆ. ಆದರೆ ಶ್ವಾನ ಮಾತ್ರ ಧೃತಿಗೆಡದೇ ಹೋರಾಡಿ ಹಾವನ್ನು ಸಾಯಿಸಿ ತಾನು ಪ್ರಾಣ ಬಿಟ್ಟಿದೆ. ಹಾವು ಮೃತಪಟ್ಟ ಸ್ವಲ್ಪ ಹೊತ್ತಿನಲ್ಲೇ ಜರ್ಮನ್ ಶೆಫರ್ಡ್ ಶ್ವಾನವೂ ಕೂಡ ಪ್ರಾಣ ಬಿಟ್ಟಿದೆ. ಘಟನೆಯಲ್ಲಿ ತಮ್ಮ ಶ್ವಾನವನ್ನು ಕಳೆದುಕೊಂಡ ಕುಟುಂಬದವರು ತೀವ್ರ ದುಃಖಿತರಾಗಿದ್ದು, ತಮ್ಮ ನಿಷ್ಠಾವಂತ ಒಡನಾಡಿಗೆ ಗೌರವಯುತ ಅಂತ್ಯಕ್ರಿಯೆಯನ್ನು ನಡೆಸಿದ್ದಾರೆ. ಈ ವೀಡಿಯೋ ನೋಡಿದ ನೆಟ್ಟಿಗರು ಮಾತ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾವಿನ ಜೊತೆ ಶ್ವಾನವನ್ನು ಕಾದಾಡುವುದಕ್ಕೆ ಬಿಡುವ ಬದಲು ಆ ಶ್ವಾನವನ್ನು ರಕ್ಷಣೆ ಮಾಡಬೇಕಿತ್ತು. ಆದರೆ ಅವರು ಘಟನೆಯ ವೀಡಿಯೋವನ್ನು ರೆಕಾರ್ಡ್‌ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಮಹಿಳೆಯನ್ನು ಅಸಭ್ಯವಾಗಿ ಸ್ಪರ್ಶಿಸಿದ ವ್ಯಕ್ತಿಗೆ ಬಿತ್ತು ಗೂಸಾ

ಇದನ್ನೂ ಓದಿ: 2 ವರ್ಷದ ಕಂದನನ್ನು ನೆಂಟರ ಮನೆಯಲ್ಲಿ ಬಿಟ್ಟು ಬಂದು ಸಾವಿಗೆ ಶರಣಾದ ದಂಪತಿ

Scroll to load tweet…