ಕುಲ್ದೀಪ್ ಯಾದವ್- ವಂಶಿಕಾ ಚಡ್ಡಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸಪ್ತಪದಿ ತುಳಿಯುವ ಮುನ್ನವೇ ಇಬ್ಬರ ಕೆಲವು ಫೋಟೋಗಳು ವೈರಲ್ ಆಗುತ್ತಿವೆ. ನೆಟ್ಟಿಗರು ಜೋಡಿಗೆ ಫ್ಯಾನ್ಸ್ ಶುಭ ಹಾರೈಸುತ್ತಿದ್ದಾರೆ.
Image credits: x.com
Kannada
ಇಬ್ಬರ ವೃತ್ತಿ ಜೀವನ ಸಂಪೂರ್ಣ ವಿಭಿನ್ನ
ಕುಲ್ದೀಪ್ ಮತ್ತು ವಂಶಿಕಾ ಅವರ ವೃತ್ತಿ ಜೀವನ ಒಂದಕ್ಕೊಂದು ಸಂಬಂಧವೇ ಇಲ್ಲ. ಕುಲ್ದೀಪ್ ಒಬ್ಬ ಕ್ರಿಕೆಟ್ ಸ್ಟಾರ್ ಆಗಿರುವುದರಿಂದ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ವಂಶಿಕಾಗೆ ಲೈಮ್‌ಲೈಟ್‌ನಲ್ಲಿ ಕಾಣಿಸಿಕೊಂಡಿಲ್ಲ.
Image credits: x.com
Kannada
ಇಬ್ಬರ ಶಿಕ್ಷಣದಲ್ಲೂ ಇದೆ ಅಜಗಜಾಂತರ
ಕುಲ್ದೀಪ್ 12ನೇ ತರಗತಿವರೆಗೆ ಮಾತ್ರ ಓದಿದ್ದಾರೆ. ಕ್ರಿಕೆಟ್ ಮೇಲಿನ ಹುಚ್ಚಿನಿಂದಾಗಿ ಅವರು ಓದಿನ ಕಡೆ ಹೆಚ್ಚು ಗಮನ ಹರಿಸಲಿಲ್ಲ. ಆದರೆ ವಂಶಿಕಾ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ.
Image credits: x.com
Kannada
ಕುಲ್ದೀಪ್‌ಗಿಂತ ವಂಶಿಕಾ ಎಷ್ಟು ಭಿನ್ನ?
ಕುಲ್ದೀಪ್ ಯಾದವ್ ತುಂಬಾ ಮಾತಾಡುತ್ತಾರೆ, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಆದರೆ ವಂಶಿಕಾ ಚಡ್ಡಾ ತುಂಬಾ ಕಡಿಮೆ ಮಾತಾಡುತ್ತಾರೆ. ಅವರದ್ದು ಶಾಂತ ಸ್ವಭಾವ, ತಮ್ಮ ಕೆಲಸ ತಾವು ಅಂತ ಇರುತ್ತಾರೆ.
Image credits: x.com
Kannada
ಬೀದಿ ಗೆಳೆಯರು ಈಗ ಜೀವನ ಸಂಗಾತಿಗಳು
ಇಬ್ಬರ ಜೀವನಶೈಲಿ ಇಷ್ಟೊಂದು ಭಿನ್ನವಾಗಿದ್ದರೂ, ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಾರೆ. ಒಂದೇ ಕಾಲೋನಿಯ ಬೀದಿಗಳಲ್ಲಿ ಶುರುವಾದ ಸ್ನೇಹ ಮೊದಲು ಪ್ರೀತಿಗೆ ತಿರುಗಿ, ಈಗ ಜೀವನ ಸಂಗಾತಿಗಳಾಗುತ್ತಿದ್ದಾರೆ.
Image credits: x.com
Kannada
ಕುಲ್ದೀಪ್ ಮತ್ತು ವಂಶಿಕಾ ಲವ್ಲಿ ಫೋಟೋ
ಕುಲ್ದೀಪ್ ಮತ್ತು ವಂಶಿಕಾ ಇನ್ನು ಕೆಲವೇ ಕ್ಷಣಗಳಲ್ಲಿ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿಯಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರ ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.