ಪುಟ್ಟ ಮಕ್ಕಳಿರುವ ಮನೆಗೆ ಸೂಕ್ತವಾದ ಎಂದಿಗೂ ಕಚ್ಚದ 5 ಸ್ನೇಹಮಯಿ ನಾಯಿಗಳು
ಮಕ್ಕಳಿರುವ ಕುಟುಂಬಗಳಿಗೆ ಸೂಕ್ತವಾದ, ಸೌಮ್ಯ ಸ್ವಭಾವದ ಮತ್ತು ವಿರಳವಾಗಿ ಕಚ್ಚುವ ಕೆಲವು ನಾಯಿ ತಳಿಗಳ ಬಗ್ಗೆ ಇಲ್ಲಿದೆ ಮಾಹಿತಿ.
- FB
- TW
- Linkdin
Follow Us
)
ಮನೆಯಲ್ಲಿ ಸಾಕಲು ಬೆಸ್ಟ್ ಎನಿಸಿದ ನಾಯಿಗಳು
ಇತ್ತೀಚೆಗೆ ವಿವಿಧ ತಳಿಗಳ ನಾಯಿಗಳನ್ನು ಸಾಕುವವರ ಸಂಖ್ಯೆ ಹೆಚ್ಚಾಗ್ತಿದೆ. ಸಾಕುನಾಯಿಗಳು ಮನುಷ್ಯರ ಬೆಸ್ಟ್ ಫ್ರೆಂಡ್ ಎನಿಸಿದ್ದು, ಅವರುಗಳು ಮನುಷ್ಯರ ಜೊತೆಗೆ ಸದಾ ಇದ್ದು, ಮನುಷ್ಯರ ಆತಂಕವನ್ನು ನಿವಾರಿಸುತ್ತವೆ. ಒಂಟಿಯಾಗಿ ಬದುಕುತ್ತಿರುವ ಅನೇಕರು ತಮ್ಮ ಬಳಿ ಒಂದು ನಾಯಿಯನ್ನು ಸಾಕುತ್ತಾರೆ. ನಾಯಿಗಳು ಸಾಕುವುದು ಟ್ರೆಂಡಿಂಗ್ ಎನಿಸಿರುವ ಈ ಸಮಯದಲ್ಲಿ ಸಾಕುವುದಕ್ಕೆ ಯಾವ ನಾಯಿಗಳು ಬೆಸ್ಟ್ ಎಂಬುದನ್ನು ಈಗ ನೋಡೋಣ.
ಮನೆಯಲ್ಲಿ ಸಾಕಲು ಬೆಸ್ಟ್ ಎನಿಸಿದ ನಾಯಿಗಳು
ನೀವು ನಾಯಿ ಪ್ರಿಯರೇ ಮತ್ತು ಸಾಕುಪ್ರಾಣಿಯನ್ನು ಪಡೆಯಬೇಕೆಂದು ಯೋಚಿಸುತ್ತಿದ್ದೀರಾ? ಹಾಗಾದರೆ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸೂಕ್ತವಾದ ನಾಯಿ ತಳಿಯನ್ನು ಆಯ್ಕೆ ಮಾಡುವ ಮೊದಲು ನೀವು ಪರಿಶೀಲಿಸಬೇಕಾದ ಕೆಲವು ನಿಯಮಗಳ ಬಗ್ಗೆ ನೋಡೋಣ. ಒಂದೇ ರೀತಿಯ ಜೀವನಶೈಲಿಯಿಂದ ಹಿಡಿದು ವ್ಯಕ್ತಿತ್ವದ ಗುಣಲಕ್ಷಣಗಳವರೆಗೆ ಮತ್ತು ನಿಮ್ಮ ಕುಟುಂಬಕ್ಕೆ, ವಿಶೇಷವಾಗಿ ಪುಟ್ಟ ಮಕ್ಕಳಿರುವ ಸಂದರ್ಭದಲ್ಲಿ ನಾಯಿಯನ್ನು ಆಯ್ಕೆ ಮಾಡುವಾಗ, ಪ್ರಮುಖ ಕಾಳಜಿಗಳಲ್ಲಿ ಒಂದು ಸುರಕ್ಷತೆ ಮತ್ತು ಮನೋಧರ್ಮ.
ಮನೆಯಲ್ಲಿ ಸಾಕಲು ಬೆಸ್ಟ್ ಎನಿಸಿದ ನಾಯಿಗಳು
ಪ್ರತಿಯೊಂದು ನಾಯಿಯು ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿದ್ದರೂ, ಕೆಲವು ತಳಿಗಳು ತುಂಬಾ ಆಕ್ರಮಣಕಾರಿಯಾಗಿರುತ್ತವೆ. ಇದಕ್ಕೆ ವಿರುದ್ಧವಾಗಿ, ಸೌಮ್ಯ, ಸ್ನೇಹಪರ ಮತ್ತು ತಾಳ್ಮೆಯಿಂದ ಕೂಡಿರುವ ಇತರ ಕೆಲವು ನಾಯಿ ತಳಿಗಳಿವೆ. ಒತ್ತಡದಲ್ಲಿದ್ದರೂ ಸಹ ಈ ನಾಯಿಗಳು ಕಚ್ಚುವ ಸಾಧ್ಯತೆ ಕಡಿಮೆ ಮತ್ತು ಅವುಗಳ ಪ್ರೀತಿಯ, ನಿಷ್ಠಾವಂತ ಸ್ವಭಾವಕ್ಕೆ ಹೆಸರುವಾಸಿಯಾಗಿದೆ ಇವು ಕುಟುಂಬಗಳಿಗೆ, ವಿಶೇಷವಾಗಿ ಮಕ್ಕಳಿಗೆ ಉತ್ತಮ ಸಾಕುಪ್ರಾಣಿಗಳೆನಿಸಿವೆ. ಸ್ನೇಹಪರವಾಗಿರುವ ವಿರಳವಾಗಿ ಕಚ್ಚುವಂತಹ ಕೆಲವು ಸಾಕು ನಾಯಿ ತಳಿಗಳನ್ನು ನಾವು ಇಲ್ಲಿ ನೋಡೋಣ.
ಮನೆಯಲ್ಲಿ ಸಾಕಲು ಬೆಸ್ಟ್ ಎನಿಸಿದ ನಾಯಿಗಳು
ಕ್ಯಾವಲಿಯರ್ ಕಿಂಗ್ ಚಾರ್ಲ್ಸ್ ಸ್ಪೈನಿಯೆಲ್
ಕ್ಯಾವಲಿಯರ್ ಕಿಂಗ್ ಚಾರ್ಲ್ಸ್ ಸ್ಪೈನಿಯಲ್ ಪ್ರೀತಿಯ ಮತ್ತು ಮುದ್ದಾದ ಆಟಿಕೆರೂಪದ ನಾಯಿ ತಳಿಯಾಗಿದೆ. ಅವು ಸೌಮ್ಯ ಸ್ವಭಾವದ ಶ್ವಾನಗಳಾಗಿದ್ದು, ತಮ್ಮ ಮನುಷ್ಯರೊಂದಿಗೆ ಮುದ್ದಾಡುವುದನ್ನು ಇಷ್ಟಪಡುತ್ತವೆ. ಇವೆಲ್ಲವೂ ಅವುಗಳನ್ನು ಅಪಾರ್ಟ್ಮೆಂಡ್‌ಗಳಲ್ಲಿ ವಾಸಿಸುವ ಜನರಿಗೆ ಉತ್ತಮ ಸಾಕುಪ್ರಾಣಿಗಳನ್ನಾಗಿ ಮಾಡುತ್ತವೆ. ಅವುಗಳನ್ನು ಸಾಕುಪ್ರಾಣಿಯಾಗಿ ಹೊಂದಲು ಮತ್ತೊಂದು ಉತ್ತಮ ಕಾರಣವೆಂದರೆ ಕ್ಯಾವಲಿಯರ್ಗಳು ಸಾಮಾನ್ಯವಾಗಿ ತಾಳ್ಮೆ ಮತ್ತು ಶಾಂತವಾಗಿರುತ್ತವೆ. ಈ ನಾಯಿಗಳು ಇತರ ಸಾಕುಪ್ರಾಣಿಗಳೊಂದಿಗೂ ಚೆನ್ನಾಗಿ ಹೊಂದಿಕೊಳ್ಳುತ್ತವೆ.
ಮನೆಯಲ್ಲಿ ಸಾಕಲು ಬೆಸ್ಟ್ ಎನಿಸಿದ ನಾಯಿಗಳು
ಬಿಚಾನ್ ಫ್ರೈಜ್
ಬಿಚಾನ್ ಫ್ರೈಸ್ ತಳಿಯ ಶ್ವಾನಗಳು ಕೂಡ ಮಾನವ ಒಡನಾಟವನ್ನು ಇಷ್ಟಪಡುತ್ತವೆ. ಅವು ವಿರಳವಾಗಿ ಆಕ್ರಮಣಶೀಲತೆಯ ಲಕ್ಷಣಗಳನ್ನು ತೋರಿಸುತ್ತವೆ, ಇದು ಅವುಗಳನ್ನು ಮಕ್ಕಳಿಗೆ ಉತ್ತಮ ಸಹಚರರನ್ನಾಗಿ ಮಾಡುತ್ತದೆ. ಅವುಗಳ ಸಂತೋಷದಾಯಕ ವ್ಯಕ್ತಿತ್ವವು ಅವುಗಳ ಜೊತೆ ಬಾಂಧವ್ಯವನ್ನು ಸುಲಭಗೊಳಿಸುತ್ತದೆ ಮತ್ತು ಅವು ಗಮನದ ಕೇಂದ್ರಬಿಂದುವಾಗಿರುವುದನ್ನು ಆನಂದಿಸುತ್ತವೆ.
ಮನೆಯಲ್ಲಿ ಸಾಕಲು ಬೆಸ್ಟ್ ಎನಿಸಿದ ನಾಯಿಗಳು
ಲ್ಯಾಬ್ರಡಾರ್ ರಿಟ್ರೈವರ್
ವಿಶ್ವದ ಅತ್ಯಂತ ಜನಪ್ರಿಯ ಸಾಕು ನಾಯಿ ತಳಿಗಳಲ್ಲಿ ಒಂದಾದ ಲ್ಯಾಬ್ರಡಾರ್ ರಿಟ್ರೈವರ್‌ಗಳು ತಮ್ಮ ಪ್ರೀತಿಯ ಜನರನ್ನು ಮೆಚ್ಚಿಸುವ ಸ್ವಭಾವಕ್ಕೆ ಹೆಸರುವಾಸಿಯಾಗಿದೆ. ಅವು ಸೌಮ್ಯ, ಮೋಜಿನ, ಪ್ರೀತಿಯ ಮತ್ತು ಮುಕ್ತ ಸ್ವಭಾವವನ್ನು ಹೊಂದಿವೆ, ಇದು ಮಕ್ಕಳಿಗೆ ಉತ್ತಮ ಒಡನಾಡಿಗಳಾಗಲು ಮತ್ತು ಸಕ್ರಿಯ ಜೀವನಶೈಲಿಯನ್ನು ಹೊಂದಿರುವ ಜನರಿಗೆ ಪರಿಪೂರ್ಣ ಸಾಕುಪ್ರಾಣಿಗಳಾಗಿ ಮಾಡುತ್ತದೆ.
ಮನೆಯಲ್ಲಿ ಸಾಕಲು ಬೆಸ್ಟ್ ಎನಿಸಿದ ನಾಯಿಗಳು
ಬೀಗಲ್‌ಗಳು
ಬೀಗಲ್‌ಗಳು ಸಣ್ಣ, ತಮಾಷೆಯ ಮತ್ತು ಸ್ನೇಹಪರ ನಾಯಿಗಳಾಗಿದ್ದು, ಕುಟುಂಬ ವಾತಾವರಣದಲ್ಲಿ ಚೆನ್ನಾಗಿ ಬದುಕುತ್ತವೆ. ಅವು ಮಾನವ ಸಹವಾಸವನ್ನು ಆನಂದಿಸುತ್ತವೆ ಮತ್ತು ಮಕ್ಕಳೊಂದಿಗೆ ಬಹಳ ಮುದ್ದಾಗಿ ಸಹನೆಯಿಂದ ಇರುತ್ತವೆ. ಇದು ಅವುಗಳನ್ನು ಉತ್ತಮ ಕುಟುಂಬ ಸಾಕುಪ್ರಾಣಿಗಳನ್ನಾಗಿ ಮಾಡುತ್ತದೆ. ಅಲ್ಲದೆ, ಬೀಗಲ್‌ಗಳು ದಾಳಿ ಮಾಡುವುದು ಕಡಿಮ ಮತ್ತು ಸದಾ ಖುಷಿಯಿಂದ ಕೂಡಿರುತ್ತವೆ. ತರಬೇತಿಯ ವಿಷಯದಲ್ಲಿ ಅವು ಸ್ವಲ್ಪ ಹಠಮಾರಿಗಳಾಗಿದ್ದರೂ, ಅವು ಕಚ್ಚುವುದಿಲ್ಲ.
ಮನೆಯಲ್ಲಿ ಸಾಕಲು ಬೆಸ್ಟ್ ಎನಿಸಿದ ನಾಯಿಗಳು
ಗೋಲ್ಡನ್ ರಿಟ್ರೈವರ್
ಗೋಲ್ಡನ್ ರಿಟ್ರೈವರ್‌ಗಳು ಅತ್ಯಂತ ಜನಪ್ರಿಯ ಸಾಕು ನಾಯಿಗಳಲ್ಲಿ ಒಂದಾಗಿದೆ. ಈ ನಾಯಿಗಳು ಸ್ನೇಹಪರವಾಗಿದ್ದು, ವಿಶೇಷವಾಗಿ ಮಕ್ಕಳೊಂದಿಗೆ ನಿಷ್ಠಾವಂತ ಮತ್ತು ನಂಬಲಾಗದಷ್ಟು ಸೌಮ್ಯ ಮತ್ತು ತಾಳ್ಮೆಯಿಂದಿರುತ್ತವೆ. ಅವು ಬುದ್ಧಿವಂತ ಪ್ರಾಣಿಗಳಾಗಿದ್ದು. ಅವುಗಳನ್ನು ತರಬೇತಿ ಮಾಡುವುದು ಸುಲಬ ಹಾಗೂ ಬಹಳ ವಿರಳಾತಿವಿರಳ ಪ್ರಕರಣಗಳಲ್ಲಿ ಆಕ್ರಮಣಶೀಲರಾಗಿರುತ್ತವೆ. ಈ ಗೋಲ್ಡನ್ ರಿಟ್ರೈವರ್‌ಗಳು ಮಾನವ ಸಂವಹನಗಳನ್ನು ಇಷ್ಟಪಡುತ್ತವೆ ಮತ್ತು ಕುಟುಂಬ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಇಷ್ಟಪಡುತ್ತವೆ.