Asianet Suvarna News Asianet Suvarna News

ನಿಮ್ಮ ಮನೆಯಲ್ಲಿದ್ಯಾ ಈ ತಳಿಯ ಶ್ವಾನಗಳು? 23 ಆಕ್ರಮಣಕಾರಿ Dog Breed ದೇಶದಲ್ಲಿ ಬ್ಯಾನ್‌!

ಪ್ರಮುಖ ಶ್ವಾನದ ತಳಿಗಳು ಮತ್ತು ಮನುಷ್ಯರನ್ನು ರಕ್ಷಿಸಲು ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA) ಇಂಡಿಯಾದಿಂದ ಮನವಿ ಬಂದ ಬಳಿಕ ಕೇಂದ್ರ ಸರ್ಕಾರ ಈ ತೀರ್ಮಾನ ಮಾಡಿದೆ.

Pitbull Terrier to Rottweiler Centre seeks ban on 23 ferocious dog breeds Check list san
Author
First Published Mar 13, 2024, 10:54 PM IST

ನವದೆಹಲಿ (ಮಾ.13): ದೇಶಾದ್ಯಂತ ಹೆಚ್ಚುತ್ತಿರುವ ನಾಯಿ ಕಡಿತದ ಪ್ರಕರಣಗಳ ಮಧ್ಯೆ, "ಮನುಷ್ಯನ ಜೀವಕ್ಕೆ ಅಪಾಯ" ಎಂದು ಪರಿಗಣಿಸಲಾದ 23 "ಆಕ್ರಮಣಕಾರಿ" ಶ್ವಾನ ತಳಿಗಳ ಆಮದು, ಮಾರಾಟ ಮತ್ತು ಸಂತಾನೋತ್ಪತ್ತಿಯ ಮೇಲೆ ಕೇಂದ್ರವು ನಿಷೇಧ ಹೇರಿದೆ. ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಜಂಟಿ ಕಾರ್ಯದರ್ಶಿ ಡಾ.ಒ.ಪಿ.ಚೌಧರಿ ಅವರು ಈ ಕುರಿತಾಗಿ  ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನು ಕಳುಹಿಸಿದ್ದಾರೆ. ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನಿಷೇಧಿತ ಶ್ವಾನಗಳ ತಳಿಗಳ ಪಟ್ಟಿ ಹೀಗಿದೆ,  ಪಿಟ್‌ಬುಲ್ ಟೆರಿಯರ್, ಟೋಸಾ ಇನು, ಅಮೇರಿಕನ್ ಸ್ಟಾಫರ್ಡ್‌ಶೈರ್ ಟೆರಿಯರ್, ಫಿಲಾ ಬ್ರೆಸಿಲಿರೊ, ಡೊಗೊ ಅರ್ಜೆಂಟಿನೋ, ಅಮೇರಿಕನ್ ಬುಲ್‌ಡಾಗ್, ಬೋರ್‌ಬೋಲ್, ಕಂಗಲ್, ರಷ್ಯನ್ ಶೆಫರ್ಡ್, ಟೊರ್ನ್‌ಜಾಕ್, ಸರ್ಪ್ಲಾನಿನಾಕ್, ಜಪಾನೀಸ್ ಟೋಸಾ ಮತ್ತು ಅಕಿಟಾ, ಮಾಸ್ಟಿಫ್ಸ್, ರಾಟ್‌ವೀಲರ್, ಟೆರಿಯರ್‌ಗಳು ರಿಡ್ಜ್ಬ್ಯಾಕ್, ವುಲ್ಫ್ ಡಾಗ್ಸ್, ಕೆನರಿಯೊ, ಅಕ್ಬಾಶ್ ನಾಯಿ, ಮಾಸ್ಕೋ ಗಾರ್ಡ್ ಡಾಗ್, ಕೇನ್ ಕೊರ್ಸೊ, ಮತ್ತು ಸಾಮಾನ್ಯವಾಗಿ 'ಬ್ಯಾನ್ ಡಾಗ್' ಎಂದು ಕರೆಯಲ್ಪಡುವ ಎಲ್ಲಾ ಶ್ವಾನಗಳನ್ನು ನಿಷೇಧ ಮಾಡಲಾಗಿದೆ.

ಪತ್ರದ ಪ್ರಕಾರ, ಪಶು ಸಂಗೋಪನಾ ಆಯುಕ್ತರ ಅಧ್ಯಕ್ಷತೆಯಲ್ಲಿ ರಚಿಸಲಾದ ತಜ್ಞರ ಸಮಿತಿಯು ಅಂತಹ ನಾಯಿ ತಳಿಗಳ ಆಮದನ್ನು ನಿಷೇಧಿಸಲು ಶಿಫಾರಸು ಮಾಡಿದೆ. ಶ್ವಾನ ಸಾಕಣೆ ಮತ್ತು ಮಾರುಕಟ್ಟೆ ನಿಯಮಗಳು 2017 ಮತ್ತು ಪೆಟ್ ಶಾಪ್ ನಿಯಮಗಳು 2018 ರ ಜಾರಿಗಾಗಿ ಕೇಂದ್ರ ಸರ್ಕಾರವು ಸಹ ಸೂಚನೆ ನೀಡಿದೆ.

ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA) ಇಂಡಿಯಾದಿಂದ ಮನವಿ ಬಂದ ಬಳಿಕ ಕೇಂದ್ರ ಸರ್ಕಾರ ಈ ನಿರ್ಧಾರ ಮಾಡಿದೆ. ದೇಶದಲ್ಲಿನ ದುರ್ಬಲ ತಳಿಗಳ ನಾಯಿಗಳು ಹಾಗೂ ಮುನುಷ್ಯರ ಮೇಲೆ ಆಕಮಣಕಾರಿ ಶ್ವಾನದ ತಳಿಗಳ ದಾಳಿ ಹೆಚ್ಚಾಗುತ್ತಿರುವ ಕಾರಣ, ಈ ನಿರ್ಧಾರ ಮಾಡಲಾಗಿದೆ.  ಈ ಬಗ್ಗೆ ಪೇಟಾ ದೆಹಲಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನೂ ಸಲ್ಲಿಸಿದೆ.

ಈ ಆದೇಶವು ಮಾನವರು ಮತ್ತು ದುರ್ಬಲ ತಳಿಗಳ ಶ್ವಾನಗಳಿಗೆ ರಕ್ಷಣೆಯನ್ನು ನೀಡುವಲ್ಲಿ ಪ್ರಮುಖವಾಗಿದೆ ಮತ್ತು ಪಿಟ್ ಬುಲ್‌ಗಳು ಮತ್ತು ಇತರ ತಳಿಗಳನ್ನು ಆಯುಧಗಳ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಪಿಟ್ ಬುಲ್‌ಗಳು ಮತ್ತು ಸಂಬಂಧಿತ ತಳಿಗಳು ಭಾರತದಲ್ಲಿ ನಿಷೇಧಿತವಾಗಿರುವ ತಳಿಗಳಾಗಿವೆ ಎಂದು ಪೆಟಾ ತಿಳಿಸಿದೆ.

ಪೊಲೀಸ್ ಇಲಾಖೆ ಸೇರಿದ ಮುದ್ದು ಮುದ್ದಾದ ಅತೀ ಕಿರಿಯ ಉದ್ಯೋಗಿಗಳ ಫೋಟೋ ಶೂಟ್‌.!

ಕಳೆದ ಕೆಲವು ತಿಂಗಳುಗಳಲ್ಲಿ ನಾಯಿ ಕಡಿತದ ಪ್ರಕರಣದ ಸಂಖ್ಯೆ ವಿಪರೀತವಾಗಿ ಏರಿಕೆಯಾಗಿವೆ. ಮಂಗಳವಾರ ಹಿಮಾಚಲ ಪ್ರದೇಶದ ಬಿಲಾಸ್‌ಪುರ ಪ್ರದೇಶದಲ್ಲಿ ಬೀದಿ ನಾಯಿಗಳು 20 ಮಂದಿಯ ಮೇಲೆ ದಾಳಿ ಮಾಡಿದ್ದವು. ಕಳೆದ ತಿಂಗಳು ಪುಟ್ಟ ಮಗುವಿನ ಮೇಲೆ ಪಿಟ್‌ಬುಲ್‌ ತಳಿಯ ನಾಯಿ ದಾಳಿ ಮಾಡಿತ್ತು. ಇದರಿಂದಾಗಿ 17 ದಿನಗಳ ಕಾಲ ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಘಟನೆ ದೆಹಲಿಯಲ್ಲಿ ವರದಿಯಾಗಿತ್ತು.  ಕಳೆದ ವಾರ ನಡೆದ ಮತ್ತೊಂದು ಘಟನೆಯಲ್ಲಿ, ಗಾಜಿಯಾಬಾದ್‌ನಲ್ಲಿ ಪಿಟ್ ಬುಲ್ ದಾಳಿ ಮಾಡಿದ ನಂತರ 10 ವರ್ಷದ ಮಗು ತೀವ್ರವಾಗಿ ಗಾಯಗೊಂಡಿತ್ತು.

ನೀವು ಶ್ವಾನಗಳ ಮಾಲೀಕರ: ಹಾಗಿದ್ರೆ ನಿಮಗೂ ಈ ಅನುಭವ ಆಗಿರಬೇಕು : Viral Video

Follow Us:
Download App:
  • android
  • ios