- Home
- Life
- Relationship
- ಪ್ರೀತಿಗಾಗಿ ಪ್ರಾಣ ಬಿಟ್ಟ ಸತ್ಯವ್ವ: 12ನೇ ವಯಸ್ಸಿನಲ್ಲೇ ಮದುವೆ ಫಿಕ್ಸ್ ಮಾಡಿ ಮಗಳ ಬದುಕನ್ನೇ ಕಸಿದುಕೊಂಡ ಪೋಷಕರು
ಪ್ರೀತಿಗಾಗಿ ಪ್ರಾಣ ಬಿಟ್ಟ ಸತ್ಯವ್ವ: 12ನೇ ವಯಸ್ಸಿನಲ್ಲೇ ಮದುವೆ ಫಿಕ್ಸ್ ಮಾಡಿ ಮಗಳ ಬದುಕನ್ನೇ ಕಸಿದುಕೊಂಡ ಪೋಷಕರು
ಆಕೆಗೆ ಏನು ಅರಿಯದ ವಯಸ್ಸಲ್ಲಿ ಕುಟುಂಬದವರೇ ಮದ್ವೆ ನಿಶ್ಚಯ ಮಾಡಿದ್ದರು. ಆದರೆ ಹರೆಯಕ್ಕೆ ಕಾಲಿರಿಸಿದ ಆಕೆಗೆ ಬೇರೊಬ್ಬನ ಜತೆ ಪ್ರೀತಿಯಾಗಿತ್ತು. ಪ್ರೀತಿ ತಿಳಿಯುತ್ತಿದ್ದಂತೆ ಮದುವೆ ಮಾಡಿದ್ರು ಪೋಷಕರು ಆದರೆ ಪ್ರೀತಿಸಿದವನೊಂದಿಗೆ ಅಲ್ಲ. ಹೀಗಾಗಿ ತನ್ನ ಗಂಡನ ಬಿಟ್ಟು ಓಡಿ ಹೋದ ಆಕೆಯ ಕತೆ ಮುಂದೇನಾಯ್ತು…

ಏನು ಅರಿಯದ ವಯಸ್ಸಲ್ಲಿ ಮದುವೆ ಫಿಕ್ಸ್
ವಿವಾಹಿತನ ಬಿಟ್ಟು ಪ್ರೀತಿಸಿದಾತನ ಜೊತೆ ಓಡಿ ಹೋಗಿ ಮನೆಯ ಮಾನ ಕಳೆದಳು ಎಂದು ಪೋಷಕರೇ ತಮ್ಮ ವಿವಾಹಿತ ಮಗಳನ್ನು ಕೊಲೆ ಮಾಡಿದಂತಹ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನದಿಗುಡಿ ಕ್ಷೇತ್ರದಲ್ಲಿ ನಡೆದಿದ್ದು, ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಎಸ್ಪಿ ಕೆ ರಾಮರಾಜನ್ ಮಾಹಿತಿ ನೀಡಿದ್ದು, ಪ್ರಕರಣದ ಪಿನ್ ಟು ಪಿನ್ ಡಿಟೇಲ್ ಇಲ್ಲಿದೆ. ಕೊಲೆಯಾದ ಸತ್ಯೆವ್ವಾ ಹೆಳವರ್‌ಗೆ 12ನೇ ವಯಸ್ಸಿನಲ್ಲಿಯೇ ಮದುವೆ ನಿಗದಿ ಮಾಡಲಾಗಿತ್ತು. ಆದರೆ ಸತ್ಯೆವ್ವಾ ತನ್ನದೇ ಗ್ರಾಮದ ಕೃಷ್ಣಾ ಪಾಟೀಲ್ ಎಂಬಾತನನ್ನು ಪ್ರೀತಿಸುತ್ತಿದ್ದಳು.
ಹರೆಯಕ್ಕೆ ಕಾಲಿರಿಸಿದ ಹುಡುಗಿಗೆ ಬೇರೆಯವನೊಂದಿಗೆ ಪ್ರೇಮ
ಕೃಷ್ಣ ಪಾಟೀಲ್ ಜೊತೆಗಿನ ಸತ್ಯೆವ್ವಾಳ ಪ್ರೀತಿಯ ವಿಚಾರ ಮನೆಯವರಿಗೆ ತಿಳಿಯುತ್ತಿದ್ದಂತೆ ಸತ್ಯೆವ್ವಾಳ ಕುಟುಂಬದವರು ಆಕೆಗೆ ರಾಯಬಾಗ ತಾಲೂಕಿನ ಹನಬರಟ್ಟಿ ಗ್ರಾಮದ ಸಂತೋಷ ಜೊತೆಗೆ ಮದುವೆ ಮಾಡಿದ್ದರು. ನಾಲ್ಕು ವರ್ಷದ ಹಿಂದೆ ಸತ್ಯೆವ್ವಾಳ ಮದುವೆ ಸಂತೋಷ್ ಹೆಳವಿ ಜೊತೆ ನಡೆದಿತ್ತು. ಆದರೆ ಮದುವೆಯ ನಂತರವೂ ಸತ್ಯೆವ್ವಾಗೆ ತಾನು ಪ್ರೀತಿಸಿದ ಕೃಷ್ಣಾ ಪಾಟೀಲ್ ಜೊತೆ ಸಂಪರ್ಕವಿತ್ತು. ಇತ್ತ ಆಕೆಯ ಪತಿ ಸಂತೋಷ್ ಹೆಳವಿ ಕುಡಿತಕ್ಕೆ ದಾಸನಾಗಿದ್ದ. ಇತ್ತೀಚೆಗೆ ಅಂದರೆ ಫೆ.17 ರಂದು ಸತ್ಯೆವ್ವಾ ಗಂಡನ ಮನೆಯಿಂದ ಬಂದು ತನ್ನ ಪ್ರಿಯಕರ ಕೃಷ್ಣಾ ಪಾಟೀಲ್ ಜೊತೆ ಓಡಿ ಹೋಗಿದ್ದಳು.
ಪ್ರೇಮದ ವಿಚಾರ ತಿಳಿಯುತ್ತಿದ್ದಂತೆ ನಿಶ್ಚಿತ ವರನೊಂದಿಗೆ ಮದುವೆ
ಓಡಿ ಹೋದ ನಂತರ ಸವದತ್ತಿ ತಾಲೂಕಿನ ಬೆಳವಾಡಿಯಲ್ಲಿ ಬಾಡಿಗೆ ಮನೆ ಮಾಡಿದ ಈ ಜೋಡಿ ಅಲ್ಲೇ ಉಳಿದಿದ್ದರು. ಈ ವಿಚಾರ ಸತ್ಯವ್ವಾ ಮನೆಯವರಿಗೆ ಗೊತ್ತಾಗಿ ಹದಿನೈದು ದಿನದ ಹಿಂದೆ ಅವರನ್ನು ಬೆಳವಾಡಿಯಿಂದ ತಮ್ಮ ಮನೆಗೆ ಕರೆತಂದಿದ್ದರು. ನಂತರ ಎರಡು ಕುಟುಂಬಗಳ ಮಧ್ಯೆ ಸಂಧಾನ ನಡೆದು ಸತ್ಯೆವ್ವಾಳನ್ನು ಆಕೆಯ ಮನೆಗೆ ಹಾಗೂ ಕೃಷ್ಣ ಪಾಟೀಲ್‌ನನ್ನು ಆತನ ಮನೆಗೆ ಆತನ ಕುಟುಂಬಸ್ಥರು ಕರೆದುಕೊಂಡು ಹೋಗಿದ್ದರು.
ಗಂಡನ ಬಿಟ್ಟು ಪ್ರಿಯಕರನೊಂದಿಗೆ ಓಡಿ ಬಂದ ಸತ್ಯೆವ್ವ
ನಂತರ ಆಕೆಯನ್ನು ಆಕೆಯ ಕುಟುಂಬದವರು ಮಹಾರಾಷ್ಟ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಮಾರ್ಚ್ 21ರಂದು ಅಲ್ಲಿ ಸಂಧಾನ ನಡೆದಿದ್ದು, ಈ ವೇಳೆ ಗಲಾಟೆಯಾಗಿದ್ದು, ಸತ್ಯವ್ವ ತಾನು ಕೃಷ್ಣ ಪಾಟೀಲ್ ಜೊತೆಗೆ ಇರುವುದಾಗಿ ಹೇಳಿದ್ದಾರೆ. ತಾಯಿಯ ಜೊತೆಗೂ ಸತ್ಯವ್ವ ಗಲಾಟೆ ಮಾಡಿದ್ದು, ನಂತರ ಆಕೆಯ ಚಿಕ್ಕಪ್ಪ ಪ್ರಕಾಶ, ಸಹೋದರ ಶಾನೂರು ಹೇಳವರ್, ಅಕ್ಕನ್ನ ಗಂಡ ಕಲ್ಲಪ್ಪ ಸೇರಿ ಸತ್ಯವ್ವಗೆ ಇಲಿ ಪಾಶಾಣ ನೀಡಿದ್ದು, ವಿಷ ಪ್ರಾಶನದ ಬಳಿಕ ಆಕೆ ಸಾವನ್ನಪ್ಪಿದ್ದಾಳೆ. ತಕ್ಷಣವೇ ಸ್ಥಳೀಯರ ಸಹಾಯ ಪಡೆದು ಆಕೆಯ ಅಂತ್ಯಸಂಸ್ಖಾರ ಮಾಡಿದ ಆಕೆಯ ಮನೆಯವರು ಬಳಿಕ ಸಂಬಂಧಿಕರಿಗೆ ಆಕೆ ಲೋಬಿಪಿಯಿಂದ ಸಾವನ್ನಪ್ಪಿದ್ದಾಗಿ ಸುಳ್ಳು ಹೇಳಿದ್ದಾರೆ.
ವಿಷ ನೀಡಿ ಕೊಂದು ಲೋ ಬಿಪಿಯಾಗಿ ಸತ್ತಳು ಎಂದ ಕುಟುಂಬದವರು
ಏಪ್ರಿಲ್ 10ರಂದು ಈ ಬಗ್ಗೆ ರಹಸ್ಯ ಮಾಹಿತಿಯೊಂದು ಪೊಲೀಸರಿಗೆ ಸಿಕ್ಕಿದ್ದು, ತಂದೆ ತಾಯಿಯೇ ಸೇರಿ ಮಹಾರಾಷ್ಟ್ರದಲ್ಲಿ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಜೊತೆಗೆ ಸತ್ಯವ್ವ ನಾಪತ್ತೆ ಆಗಿರುವ ವಿಚಾರವೂ ತಿಳಿಯುತ್ತದೆ. ಈ ಸಂಬಂಧ ಪೊಲೀಸರು ಕೃಷ್ಣ ಪಾಟೀಲ್‌ನನ್ನು ವಿಚಾರಣೆ ಮಾಡುತ್ತಾರೆ. ಈ ವಿಚಾರಣೆ ವೇಳೆ ಈ ಮರ್ಯಾದಾ ಹತ್ಯೆ ಪ್ರಕರಣ ಬೆಳಕಿಗೆ ಬಂದಿದ್ದಾಗಿ ಎಸ್‌ಪಿ ಕೆ ರಾಮರಾಜನ್ ಮಾಹಿತಿ ನೀಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

