ಉತ್ತರ ಪ್ರದೇಶದ ಮೊರದಾಬಾದ್‌ನಲ್ಲಿ ಮರ್ಯಾದಾ ಹತ್ಯೆಯೊಂದು ನಡೆದಿದೆ. ಮನೆಯವರನ್ನು ವಿರೋಧಿಸಿ ಮದುವೆಯಾಗಿದ್ದ ಯುವ ಜೋಡಿಯನ್ನು ಯುವತಿಯ ಸಹೋದರರೇ ಕೊಂದು ಹೊಲದಲ್ಲಿ ಹೂತು ಹಾಕಿದ್ದಾರೆ.

ಮೊರದಾಬಾದ್‌: ಉತ್ತರ ಪ್ರದೇಶದ ಮೊರದಾಬಾದ್‌ನಲ್ಲಿ ಮರ್ಯಾದಾ ಹತ್ಯೆಯೊಂದು ನಡೆದಿದೆ. ಮನೆಯವರನ್ನು ವಿರೋಧಿಸಿ ಮದುವೆಯಾಗಿದ್ದ ಯುವ ಜೋಡಿಯನ್ನು ಯುವತಿಯ ಸಹೋದರರೇ ಕೊಂದು ಹೊಲದಲ್ಲಿ ಹೂತು ಹಾಕಿದ್ದಾರೆ. ಈ ಸಂಬಂಧ ಇಬ್ಬರ ಬಂಧನವಾಗಿದೆ.

ಕಾಜಲ್‌ ಮತ್ತು ಆಕೆಯ ಸಂಗಾತಿ ಅರ್ಮಾನ್‌ ಹತ್ಯೆ

ಕಾಜಲ್‌ ಮತ್ತು ಆಕೆಯ ಸಂಗಾತಿ ಅರ್ಮಾನ್‌ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದರು. ಈ ನಡುವೆ ನೀಮ್‌ ಕರೋಲಿ ಬಾಬಾ ದೇವಸ್ಥಾನದ ಸಮೀಪದ ಹೊಲದ ಬಳಿಕ ಗುಂಡಿಯಲ್ಲಿ ಹೂತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಮರ್ಯಾದಾ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಹಾಗಾಗಿ ಪೊಲೀಸರು ಯುವತಿ ಮನೆಯವರ ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ.

ಇಬ್ಬರು ಕಳೆದ ಎರಡು ವರ್ಷಗಳಿಂದ ಪ್ರೀತಿಯಲ್ಲಿದ್ದರು

ಇಬ್ಬರು ಕಳೆದ ಎರಡು ವರ್ಷಗಳಿಂದ ಪ್ರೀತಿಯಲ್ಲಿದ್ದರು. ಆದರೆ ಕಾಜಲ್‌ ಪೋಷಕರು ಒಪ್ಪಿರಲಿಲ್ಲ. ಈ ನಡುವೆ ದಂಪತಿಗಳಿದ್ದ ಮನೆಗೆ ಆಗಮಿಸಿದ್ದ ಆಕೆಯ ಪೋಷಕರು ಕೋಪದಲ್ಲಿ ಇಬ್ಬರನ್ನೂ ಕೊಂದಿದ್ದಾರೆ. ಬಳಿಕ ಸಾಕ್ಷ್ಯ ನಾಶಕ್ಕಾಗಿ ಹೂತಿರುವುದಾಗಿ ಆಕೆಯ ಇಬ್ಬರು ಸಹೋದರರು ಒಪ್ಪಿಕೊಂಡಿದ್ದಾರೆ, ಈ ಸಂಬಂಧ ಪೊಲೀಸರು ಕಾಜಲ್‌ನ ಇಬ್ಬರು ಸಹೋದರರ ಬಂಧಿಸಿದ್ದಾರೆ.