MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • Relationship tips: ಸಂಗಾತಿಯೊಂದಿಗೆ ಜಗಳವಾದಾಗ ಮರೆತೂ ಈ 5 ತಪ್ಪು ಮಾಡ್ಬೇಡಿ

Relationship tips: ಸಂಗಾತಿಯೊಂದಿಗೆ ಜಗಳವಾದಾಗ ಮರೆತೂ ಈ 5 ತಪ್ಪು ಮಾಡ್ಬೇಡಿ

Relationship tips for couples Kannada: ಸಂಸಾರದಲ್ಲಿ ಜಗಳ ಸಾಮಾನ್ಯ, ಆದರೆ ಆ ಜಗಳ ಸಂಬಂಧವನ್ನೇ ಮುರಿಯುವ ಮಟ್ಟಕ್ಕೆ ಹೋಗಬಾರದು ಎಂದರೆ ನೀವು ಕೆಲವು ತಪ್ಪುಗಳನ್ನು ಮಾಡಬಾರದು. ಗಂಡ-ಹೆಂಡತಿಯ ನಡುವೆ ಪ್ರೀತಿ ಮತ್ತು ವಿಶ್ವಾಸ ಹೆಚ್ಚಿಸಲು ಇಲ್ಲಿವೆ ತಜ್ಞರು ನೀಡಿದ 5 ಅಮೂಲ್ಯ ಸಲಹೆಗಳು.

2 Min read
Author : Ashwini HR
Published : Jul 21 2026, 10:25 PM IST
Share this Photo Gallery
  • FB
  • TW
  • Linkdin
  • Whatsapp
17
ಪ್ರೀತಿಯಿಂದ ಉಳಿಸಿಕೊಳ್ಳುವುದು ಹೇಗೆ?
Image Credit : Gemini AI

ಪ್ರೀತಿಯಿಂದ ಉಳಿಸಿಕೊಳ್ಳುವುದು ಹೇಗೆ?

ಪ್ರೀತಿಯಿಂದ ಉಳಿಸಿಕೊಳ್ಳುವುದು ಹೇಗೆ?
ಇತ್ತೀಚಿನ ದಿನಗಳಲ್ಲಿ ದಂಪತಿಯ ನಡುವೆ ಅನುರಾಗಕ್ಕಿಂತ ಹೆಚ್ಚಾಗಿ ಮನಸ್ತಾಪಗಳೇ ಹೆಚ್ಚಾಗುತ್ತಿವೆ. ಇಬ್ಬರೂ ಉದ್ಯೋಗಸ್ಥರಾಗಿರುವುದು, ಬಿಡುವಿಲ್ಲದ ಕೆಲಸ ಮತ್ತು ಪರಸ್ಪರ ಮಾತನಾಡಲು ಸಮಯದ ಅಭಾವದಿಂದಾಗಿ ಪ್ರೀತಿ ಕಡಿಮೆಯಾಗುತ್ತಿದೆ ಎಂದು ಮನಶ್ಶಾಸ್ತ್ರಜ್ಞರು ಹೇಳುತ್ತಾರೆ. ಸಣ್ಣಪುಟ್ಟ ಜಗಳಗಳು ವಿಕೋಪಕ್ಕೆ ಹೋಗಿ ವಿಚ್ಛೇದನದವರೆಗೆ ತಲುಪುತ್ತಿವೆ. ಆದರೆ, ಯಾವುದೇ ಸಂಬಂಧವನ್ನು ಜಗಳದ ಕಾರಣಕ್ಕೆ ಅಂತ್ಯಗೊಳಿಸುವ ಬದಲು ಪ್ರೀತಿಯಿಂದ ಉಳಿಸಿಕೊಳ್ಳುವುದು ಹೇಗೆ? ಇಲ್ಲಿದೆ ಕೆಲವು ಪ್ರಮುಖ ಸಲಹೆಗಳು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಜಗಳವಾದಾಗ ಪಾಲಿಸಬೇಕಾದ 5 ಪ್ರಮುಖ ಸೂತ್ರಗಳು
Image Credit : chatgpt

ಜಗಳವಾದಾಗ ಪಾಲಿಸಬೇಕಾದ 5 ಪ್ರಮುಖ ಸೂತ್ರಗಳು

1. ನಾಲ್ಕು ಜನರ ಮುಂದೆ ಜಗಳವಾಡಬೇಡಿ (Keep it Private) 
ಗಂಡ-ಹೆಂಡತಿಯ ನಡುವೆ ಭಿನ್ನಾಭಿಪ್ರಾಯಗಳು ಬರುವುದು ಸಹಜ. ಆದರೆ, ಅದನ್ನು ಹತ್ತು ಜನರ ಮುಂದೆ ಅಥವಾ ಕುಟುಂಬದವರ ಮುಂದೆ ಚರ್ಚಿಸಬೇಡಿ. ಇತರರ ಮುಂದೆ ಸಂಗಾತಿಯ ತಪ್ಪುಗಳನ್ನು ಎತ್ತಿ ತೋರಿಸುವುದು ಸಂಬಂಧವನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆಯೇ ಹೊರತು ಬಲಪಡಿಸುವುದಿಲ್ಲ. ಏನೇ ದೂರುಗಳಿದ್ದರೂ ನಿಮ್ಮ ಕೋಣೆಯೊಳಗೆ ಮುಖಾಮುಖಿ ಕುಳಿತು ಶಾಂತಿಯುತವಾಗಿ ಮಾತನಾಡಿ ಬಗೆಹರಿಸಿಕೊಳ್ಳಿ.

Related Articles

Related image1
Relationship: ಗೌರವ ಬೇಡಿಕೊಂಡ್ರೆ ಸಿಗಲ್ಲ, ಹೀಗಿರಿ.. ಅವರೇ ನಿಮ್ಮನ್ನ ಹುಡುಕಿ ಬರ್ತಾರೆ
Related image2
Relationship Tips: ಮ್ಯಾರೇಜ್ ಲೈಫ್ ಬೋರ್ ಆಗಬಾರ್ದಾ? ಹಾಗಿದ್ರೆ ಪ್ರತಿ ಜೋಡಿ ಈ 5 ಕೆಲಸ ಮಾಡ್ಲೇಬೇಕು!
37
2. ಮುಕ್ತ ಸಂವಹನ ಇರಲಿ (Open Communication)
Image Credit : chatgpt

2. ಮುಕ್ತ ಸಂವಹನ ಇರಲಿ (Open Communication)

2. ಮುಕ್ತ ಸಂವಹನ ಇರಲಿ (Open Communication)
ದಾಂಪತ್ಯಕ್ಕೆ ಸಂವಹನವೇ ಗಟ್ಟಿ ಬುನಾದಿ. ನಿಮ್ಮ ಮನಸ್ಸಿನ ನೋವು, ಆಸೆ ಮತ್ತು ಆತಂಕಗಳನ್ನು ಸಂಗಾತಿಯೊಂದಿಗೆ ಮುಕ್ತವಾಗಿ ಹಂಚಿಕೊಳ್ಳಿ. ಅದೇ ರೀತಿ ಎದುರಾಳಿ ವ್ಯಕ್ತಿ ಹೇಳುವುದನ್ನೂ ಸಹ ತಾಳ್ಮೆಯಿಂದ ಕೇಳಿಸಿಕೊಳ್ಳಿ. ಅಸಮಾಧಾನಗಳು ದೊಡ್ಡದಾಗುವ ಮುನ್ನವೇ ಮಾತುಕತೆಯ ಮೂಲಕ ಅವುಗಳಿಗೆ ಬ್ರೇಕ್ ಹಾಕಿ.

47
3. ನಂಬಿಕೆ ಮತ್ತು ಪ್ರಾಮಾಣಿಕತೆ
Image Credit : AI Image

3. ನಂಬಿಕೆ ಮತ್ತು ಪ್ರಾಮಾಣಿಕತೆ

3. ನಂಬಿಕೆ ಮತ್ತು ಪ್ರಾಮಾಣಿಕತೆ
ಸಂಬಂಧದಲ್ಲಿ ನಂಬಿಕೆಯೇ ಅತಿದೊಡ್ಡ ಬಲ. ಸಂಗಾತಿಯ ಮುಂದೆ ಸುಳ್ಳು ಹೇಳುವುದು, ವಿಷಯಗಳನ್ನು ಮುಚ್ಚಿಡುವುದು ಅಥವಾ ಪದೇ ಪದೇ ಅವಮಾನಿಸುವುದರಿಂದ ನಂಬಿಕೆ ನಶಿಸಿಹೋಗುತ್ತದೆ. ಒಮ್ಮೆ ಕಳೆದುಕೊಂಡ ನಂಬಿಕೆಯನ್ನು ಮತ್ತೆ ಗಳಿಸುವುದು ತುಂಬಾ ಕಷ್ಟ ಎಂಬುದು ನೆನಪಿರಲಿ.

57
4. ಪ್ರೀತಿಯ ಜೊತೆಗೆ ಗೌರವವಿರಲಿ (Respect Each Other)
Image Credit : AI Image

4. ಪ್ರೀತಿಯ ಜೊತೆಗೆ ಗೌರವವಿರಲಿ (Respect Each Other)

4. ಪ್ರೀತಿಯ ಜೊತೆಗೆ ಗೌರವವಿರಲಿ (Respect Each Other)
ದಾಂಪತ್ಯದಲ್ಲಿ ಪ್ರೀತಿ ಎಷ್ಟು ಮುಖ್ಯವೋ, ಪರಸ್ಪರ ಗೌರವವೂ ಅಷ್ಟೇ ಮುಖ್ಯ. ಜಗಳವಾದಾಗ ಕೆಟ್ಟ ಮಾತುಗಳನ್ನು ಬಳಸುವುದು, ಸಂಗಾತಿಯನ್ನು ಕೀಳಾಗಿ ಕಾಣುವುದು ಮಾಡಬೇಡಿ. ಸಂಬಂಧದಲ್ಲಿ ಪರಸ್ಪರ ಗೌರವವಿದ್ದಾಗ ಮಾತ್ರ ಅದು ದೀರ್ಘಕಾಲದವರೆಗೆ ಆರೋಗ್ಯಕರವಾಗಿರುತ್ತದೆ.

67
5. ಅವರಿಗಾಗಿ ಸಮಯ ಮೀಸಲಿಡಿ (Quality Time)
Image Credit : Gemini AI

5. ಅವರಿಗಾಗಿ ಸಮಯ ಮೀಸಲಿಡಿ (Quality Time)

5. ಅವರಿಗಾಗಿ ಸಮಯ ಮೀಸಲಿಡಿ (Quality Time)
ನೀವು ಎಷ್ಟೇ ಬ್ಯುಸಿಯಾಗಿದ್ದರೂ ಸಂಗಾತಿಗಾಗಿ ಸ್ವಲ್ಪ ಸಮಯ ಮೀಸಲಿಡಿ. ಆಗಾಗ ಜೊತೆಯಲ್ಲಿ ಹೊರಗೆ ಹೋಗುವುದು, ಒಟ್ಟಿಗೆ ಊಟ ಮಾಡುವುದು ಮತ್ತು ಮೊಬೈಲ್ ಫೋನ್‌ಗಳನ್ನು ಪಕ್ಕಕ್ಕಿಟ್ಟು ಹರಟೆ ಹೊಡೆಯುವುದರಿಂದ ಭಾವನಾತ್ಮಕವಾಗಿ ಹತ್ತಿರವಾಗಬಹುದು. ಕೆಲಸದ ಒತ್ತಡದ ನಡುವೆಯೂ ಅವರಿಗೆ ನೀಡುವ ಸಣ್ಣ ಸಮಯವೂ ಸಂಬಂಧವನ್ನು ಗಟ್ಟಿಗೊಳಿಸುತ್ತದೆ.

77
ಕೊನೆಯ ಮಾತು
Image Credit : Gemini AI

ಕೊನೆಯ ಮಾತು

ಕೊನೆಯ ಮಾತು
ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಮೂಡಿದಾಗ ಸಿಟ್ಟಿನಿಂದ ಒಬ್ಬರನ್ನೊಬ್ಬರು ದೂಷಿಸಬೇಡಿ. ಸಮಸ್ಯೆಯ ಮೇಲೆ ಗಮನಹರಿಸಿ ಅದನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ಅಗತ್ಯವಿದ್ದರೆ ಸ್ವಲ್ಪ ಸಮಯ ತೆಗೆದುಕೊಂಡು ನಂತರ ಸಮಾಧಾನದಿಂದ ಮಾತನಾಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಸಂಬಂಧಗಳು
ಮದುವೆ
ಮಹಿಳೆಯರು

Latest Videos
Recommended Stories
Recommended image1
ಹನಿಮೂನ್​ ಹಂತಕಿ ಸೋನಂ ರಘುವಂಶಿಗೆ ಎರಡು ಆಯ್ಕೆ ಕೊಟ್ಟ ಸುಪ್ರೀಂ ಕೋರ್ಟ್​: ಏನದು? ಮುಂದೇನು
Recommended image2
ದುಷ್ಟ ಶಕ್ತಿ, ದೃಷ್ಟಿ ತೆಗೆಯುವ ಶಾಸ್ತ್ರ; ವಧು ವರನ ವಿರುದ್ಧ ಕೋರ್ಟ್‌ಗೆ ಹೋದ ಯುವತಿಗೆ 32 ಲಕ್ಷ ರೂ ಪರಿಹಾರ
Recommended image3
ಕರುನಾಡು ಮೆಚ್ಚಿದ Lakshmi Nivasa ಸೀರಿಯಲ್​ ದಂಪತಿ ಬಾಳಲ್ಲಿ ಬಿರುಗಾಳಿ: ಮುರಿದು ಬೀಳತ್ತಾ ಏಳು ಜನ್ಮಗಳ ಬಂಧ
Related Stories
Recommended image1
Relationship: ಗೌರವ ಬೇಡಿಕೊಂಡ್ರೆ ಸಿಗಲ್ಲ, ಹೀಗಿರಿ.. ಅವರೇ ನಿಮ್ಮನ್ನ ಹುಡುಕಿ ಬರ್ತಾರೆ
Recommended image2
Relationship Tips: ಮ್ಯಾರೇಜ್ ಲೈಫ್ ಬೋರ್ ಆಗಬಾರ್ದಾ? ಹಾಗಿದ್ರೆ ಪ್ರತಿ ಜೋಡಿ ಈ 5 ಕೆಲಸ ಮಾಡ್ಲೇಬೇಕು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved