MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಆಮೀರ್​ ಖಾನ್​ ಚಿತ್ರ ಫ್ಲಾಪ್​ ಆಯ್ತು, ಅಕ್ಷಯ್​ ಕುಮಾರ್​ ಮದ್ವೆಯಾಯ್ತು! ಬಾಲಿವುಡ್​ ತಾರೆಯರ ಇಂಟರೆಸ್ಟಿಂಗ್​ ಕಹಾನಿ

ಆಮೀರ್​ ಖಾನ್​ ಚಿತ್ರ ಫ್ಲಾಪ್​ ಆಯ್ತು, ಅಕ್ಷಯ್​ ಕುಮಾರ್​ ಮದ್ವೆಯಾಯ್ತು! ಬಾಲಿವುಡ್​ ತಾರೆಯರ ಇಂಟರೆಸ್ಟಿಂಗ್​ ಕಹಾನಿ

2000ರಲ್ಲಿ ತೆರೆಕಂಡ ಅಮೀರ್ ಖಾನ್ ಮತ್ತು ಟ್ವಿಂಕಲ್ ಖನ್ನಾ ಅಭಿನಯದ 'ಮೇಲಾ' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಯಿತು. ಈ ಚಿತ್ರ ಸೋತರೆ ಮಾತ್ರ ಅಕ್ಷಯ್ ಕುಮಾರ್ ಅವರನ್ನು ಮದುವೆಯಾಗುವುದಾಗಿ ಟ್ವಿಂಕಲ್ ಶರತ್ತು ವಿಧಿಸಿದ್ದರು,  ಚಿತ್ರ ಫ್ಲಾಪ್ ಆಗಿ, ಅಕ್ಷಯ್-ಟ್ವಿಂಕಲ್  ಮದುವೆಯಾದರು.

2 Min read
Author : Suchethana D
Published : May 31 2026, 09:33 PM IST
Share this Photo Gallery
  • FB
  • TW
  • Linkdin
  • Whatsapp
16
2000ನೇ ಸಾಲಿನ ಮೇಲಾ ಚಿತ್ರ
Image Credit : Social Media

2000ನೇ ಸಾಲಿನ ಮೇಲಾ ಚಿತ್ರ

ಆಮೀರ್ ಖಾನ್ (Amir Khan) ಮತ್ತು ಟ್ವಿಂಕಲ್ ಖನ್ನಾ ಅಭಿನಯದ 'ಮೇಲಾ' ಚಿತ್ರವು ಫ್ಲಾಪ್ ಆಗಿರಬಹುದು ಆದರೆ 2000 ರ ಪ್ರಸಿದ್ಧ ಚಲನಚಿತ್ರಗಳಲ್ಲಿ ಒಂದಾಗಿದೆ. ಅದು ಚರ್ಚೆಗೆ ಬರುವುದರ ಹಿಂದೆ ಹಲವು ಕಾರಣಗಳಿವೆ. ಇದು ಅಮೀರ್ ಟ್ವಿಂಕಲ್ ಜೋಡಿ ಮೊದಲ ಬಾರಿಗೆ ಕಾಣಿಸಿಕೊಂಡ ಚಿತ್ರ. ಇದರೊಂದಿಗೆ, ಟ್ವಿಂಕಲ್ ಖನ್ನಾ ಅಕ್ಷಯ್ ಕುಮಾರ್ ಅವರೊಂದಿಗಿನ ಸಂಬಂಧಕ್ಕಾಗಿ ಸುದ್ದಿ ಮಾಡುತ್ತಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಫ್ಲಾಪ್​ ಚಿತ್ರ
Image Credit : instagram

ಫ್ಲಾಪ್​ ಚಿತ್ರ

'ಮೇಲಾ' ಚಿತ್ರ ಹಿಟ್ ಆಗಿದ್ದರೆ ಬಹುಶಃ ಟ್ವಿಂಕಲ್ ಖನ್ನಾ ಅಕ್ಷಯ್ ಕುಮಾರ್ ಎಂದಿಗೂ ಒಂದಾಗುತ್ತಿರಲಿಲ್ಲ, ಇಂದು ಅವರ ನಡುವಿನ ಸಂಬಂಧವು ರೂಪುಗೊಳ್ಳುತ್ತಿರಲಿಲ್ಲ ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ. ‘ಮೇಲಾ’ ಚಿತ್ರ ಬಿಡುಗಡೆಯಾಗಿ 26 ವರ್ಷಗಳಾಗಿದ್ದು, ಈ ಚಿತ್ರವನ್ನು ಧರ್ಮೇಶ್ ದರ್ಶನ್ ನಿರ್ದೇಶಿಸಿದ್ದಾರೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಫ್ಲಾಪ್ (Superflop) ಎಂದು ಸಾಬೀತಾಯಿತು. ಈ ಚಿತ್ರ ವಿಫಲವಾದ ತಕ್ಷಣ, ಟ್ವಿಂಕಲ್ ಖನ್ನಾ ಅವರು ಅಕ್ಷಯ್ ಕುಮಾರ್​ ಅವರನ್ನು ಮದುವೆಯಾದರು.

Related Articles

Related image1
ಕೋಟಿ ಕೋಟಿ ಸಂಬಳ ಪಡೆವ ನಟರ ಬಾಡಿಗಾರ್ಡ್ಸ್​: CEOಗಳನ್ನೂ ಮೀರಿಸೋ ಸ್ಯಾಲರಿ- ಇಲ್ಲಿದೆ ಡಿಟೇಲ್ಸ್​
Related image2
ಈ ಬಿ-ಗ್ರೇಡ್​ ಬ್ಯೂಟಿ ಜೊತೆ ರಜನೀಕಾಂತ್​ ಸಂಬಂಧ? ಸೂಪರ್​ಸ್ಟಾರ್​ ಜೀವನದ ತೆರೆಮರೆಯ ಸ್ಟೋರಿ ಇದು
36
ಕಂಡೀಷನ್​ ಹಾಕಿದ್ದ ಟ್ವಿಂಕಲ್​ ಖನ್ನಾ
Image Credit : instagram

ಕಂಡೀಷನ್​ ಹಾಕಿದ್ದ ಟ್ವಿಂಕಲ್​ ಖನ್ನಾ

ಈ ಚಿತ್ರ ಹಿಟ್ ಆಗಿದ್ದರೆ ಏನಾಗುತ್ತಿತ್ತು ಎಂದು ನೀವು ಊಹಿಸುವುದೂ ಕಷ್ಟ. ಏನಾಗುತ್ತಿತ್ತು ಎಂದರೆ, ಟ್ವಿಂಕಲ್- ಅಕ್ಷಯ್ ಒಂದಾಗುತ್ತಿರಲಿಲ್ಲ. ಏಕೆಂದರೆ ಟ್ವಿಂಕಲ್ ಅವರು ಅಕ್ಷಯ್ ಜೊತೆ ಮಾಡಿಕೊಂಡಿದ್ದ ಕಂಡೀಷನ್ ಹಾಗಾಗಿತ್ತು. 'ಮೇಲಾ' ಚಿತ್ರೀಕರಣ ನಡೆಯುತ್ತಿರುವಾಗ, ಅಕ್ಷಯ್ ಮತ್ತು ಟ್ವಿಂಕಲ್ (Twinkle Khanna) ಅವರ ಪ್ರೇಮಕಥೆಯು ಬಹಳಷ್ಟು ಸುದ್ದಿಗಳನ್ನು ಮಾಡುತ್ತಿತ್ತು. ಆ ದಿನಗಳಲ್ಲಿ ನಟಿ ರವೀನಾ ಟಂಡನ್ ಜೊತೆಗೆ ಅಕ್ಷಯ್ ಹೆಸರು ಹೆಚ್ಚಾಗಿ ಕೇಳಿ ಬರುತ್ತಿತ್ತು. ಅಕ್ಷಯ್ ಕುಮಾರ್ ರವೀನಾಳನ್ನು ಮಾತ್ರ ಮದುವೆಯಾಗುತ್ತಾರೆ ಎಂದು ಮೊದಲಿಗೆ ಜನರು ಭಾವಿಸಿದ್ದರು, ಆದರೆ ಅದು ನಡೆಯಲಿಲ್ಲ.

46
ಉತ್ತುಂಗದಲ್ಲಿದ್ದ ನಟಿ
Image Credit : instagram

ಉತ್ತುಂಗದಲ್ಲಿದ್ದ ನಟಿ

ಮಾಧ್ಯಮ ವರದಿಗಳ ಪ್ರಕಾರ, 2000 ರ ಸಮಯದಲ್ಲಿ, ಟ್ವಿಂಟಲ್ ಅವರ ವೃತ್ತಿಜೀವನವು ಅವನತಿ ಹೊಂದಿತ್ತು ಮತ್ತು ಅಕ್ಷಯ್ ಕುಮಾರ್ ಸೂಪರ್​ಹಿಟ್​ ಆಗಿದ್ದರು. ಆದರೂ, ಅವರು ಟ್ವಿಂಕಲ್‌ರನ್ನು ಮದುವೆಯಾಗಲು ಬಯಸಿದ್ದರು. ಅಕ್ಷಯ್​, ಟ್ವಿಂಕಲ್​ ಅವರನ್ನು ತುಂಬಾ ಪ್ರೀತಿಸುತ್ತಿದ್ದರು. ಆದರೆ ಟ್ವಿಂಕಲ್ ಅಕ್ಷಯ್ ಜೊತೆ ಪ್ರೀತಿಯಲ್ಲಿದ್ದರೂ ತಮ್ಮ ವೃತ್ತಿಜೀವನದತ್ತ ಗಮನ ಹರಿಸಲು ಬಯಸಿದ್ದರು.

56
ಫ್ಲಾಪ್​ ಆದ್ರಷ್ಟೇ ಮದುವೆ
Image Credit : instagram

ಫ್ಲಾಪ್​ ಆದ್ರಷ್ಟೇ ಮದುವೆ

ಹೀಗಿರುವಾಗ ಅಕ್ಷಯ್ ಕುಮಾರ್ ಅವರು ಮೇಲಾ ಚಿತ್ರ ಬಿಡುಗಡೆಗೂ ಮುನ್ನವೇ ಟ್ವಿಂಕಲ್ ಖನ್ನಾ ಅವರ ಬಳಿ ಮದುವೆ ಪ್ರಸ್ತಾಪ ಇಟ್ಟಾಗ, ಟ್ವಿಂಕಲ್ ಅವರು ಒಂದು ಕಂಡೀಷನ್​ ಹಾಕಿದ್ದರು. ಅದೇನೆಂದರೆ, ಟ್ವಿಂಕಲ್ ಅವರ ಮೇಲಾ ಫ್ಲಾಪ್​ ಆದರೆ ಮದುವೆಯಾಗುವೆ, ಇಲ್ಲದಿದ್ದರೆ ನನ್ನ ವೃತ್ತಿ ಜೀವನದ ಕಡೆಗೆ ಗಮನ ಹರಿಸುವೆ ಎಂದು. ಟ್ವಿಂಕಲ್‌ಗೆ ಹೀಗೆ ಹೇಳುವುದು ಸುಲಭವಾಗಬಹುದು, ಆದರೆ ಅಕ್ಷಯ್ ಕುಮಾರ್ ಯಾವಾಗಲೂ ಈ ಚಿತ್ರದ ಬಗ್ಗೆ ಸಂದಿಗ್ಧತೆಯಲ್ಲಿಯೇ ಇದ್ದರು. ಸೂಪರ್​ಹಿಟ್​ ಆಗಿಬಿಟ್ಟರೆ ತಮ್ಮ ಗತಿ ಏನು ಎಂದು ಚಿಂತಿಸುತ್ತಿದ್ದರು. ಕೊನೆಗೆ ಅಕ್ಷಯ್​ ಕುಮಾರ್​ ವಿನ್​ ಆದ್ರು, 'ಮೇಲಾ' (Mela) ಫ್ಲಾಪ್​ ಆಯಿತು. 18 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 25 ಕೋಟಿ ಗಳಿಸಲು ಸಾಧ್ಯವಾಯಿತು. ಅದು ಫ್ಲಾಪ್​ ಆದರೂ ಅಕ್ಷಯ್​ ಕುಮಾರ್​ ಸಕ್ಸಸ್​ ಆದರು.

66
ಆದಾಯ ತೆರಿಗೆ ಗುಟ್ಟು ರಟ್ಟು
Image Credit : INSTAGRAM @Twinkle Khanna

ಆದಾಯ ತೆರಿಗೆ ಗುಟ್ಟು ರಟ್ಟು

ಈ ಬಗ್ಗೆ ಸ್ವತಃ ಅಕ್ಷಯ್ ಫಿಲ್ಮ್‌ಫೇರ್ (Filmfare) ಸಂಭಾಷಣೆಯಲ್ಲಿ ಹೇಳಿದ್ದಾರೆ. ವರದಿಗಳ ಪ್ರಕಾರ, ಟ್ವಿಂಕಲ್ ಅವರನ್ನು ಮದುವೆಯಾಗಲು ಒಪ್ಪಿದಾಗ, ನಟಿಯ ತಾಯಿ ಡಿಂಪಲ್ ಕಪಾಡಿಯಾ, ಅಕ್ಷಯ್ ಕುಮಾರ್ ಜೊತೆ ಒಂದು ವರ್ಷವಾದರೂ ಲಿವ್​ ಇನ್​ನಲ್ಲಿ ಇರಲು ಹೇಳಿದ್ದರಂತೆ. ಆ ಸಮಯದಲ್ಲಿ ಇಬ್ಬರ ನಡುವೆ ಬಾಂಧವ್ಯ ವೃದ್ಧಿಯಾದ ಮೇಲೆ ಮದುವೆಗೆ ಒಪ್ಪಿಗೆ ಸೂಚಿಸಿದ್ದರು ಎನ್ನಲಾಗಿದೆ. 17 ಜನವರಿ 2001 ರಂದು ಇಬ್ಬರೂ ವಿವಾಹವಾದರು. 22 ವರ್ಷಗಳ ಈ ದಾಂಪತ್ಯದಲ್ಲಿ, ದಂಪತಿಗಳು ಮಗ ಆರವ್ ಮತ್ತು ಮಗಳು ನಿತಾರಾಗೆ ಪೋಷಕರಾಗಿದ್ದಾರೆ. ಅಕ್ಷಯ್ ಇನ್ನೂ ಸಿನಿಮಾಗಳಲ್ಲಿ ಸಕ್ರಿಯವಾಗಿರುವಾಗಲೇ ಟ್ವಿಂಕಲ್ ಈಗ ಬಾಲಿವುಡ್‌ನಿಂದ ದೂರವಾಗಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಮನರಂಜನಾ ಸುದ್ದಿ
ಅಕ್ಷಯ್ ಕುಮಾರ್
ಬಾಲಿವುಡ್
ಪ್ರೀತಿ
ಮದುವೆ
ಆಮಿರ್ ಖಾನ್

Latest Videos
Recommended Stories
Recommended image1
Obsession: ಇದು ಈ ವರ್ಷದ 'ನಂಬರ್ 1' ಸಿನಿಮಾ; 7 ಕೋಟಿ ಬಜೆಟ್ 'ಆಬ್ಸೆಷನ್' ಗಳಿಸಿದ್ದು 1000 ಕೋಟಿ!
Recommended image2
ಎಷ್ಟೇ ಒಳ್ಳೆಯವರಾಗಿದ್ದರೂ ಇಂತವರಿಗೆ ಸಹಾಯ ಮಾಡಬೇಡಿ.. ಚಾಣಕ್ಯನ ಪ್ರಮುಖ ಎಚ್ಚರಿಕೆ!
Recommended image3
Secret: ಆರಾಧ್ಯಾಗೆ ಸ್ಮಾರ್ಟ್‌ಫೋನ್ ಯಾಕೆ ಕೊಟ್ಟಿಲ್ಲ ಐಶ್ವರ್ಯಾ ರೈ-ಅಭಿಷೇಕ್ ಜೋಡಿ? ಈ ಸೀಕ್ರೆಟ್ ಗೊತ್ತಾದ್ರೆ ಜಗತ್ತೇ ಶಾಕ್ ಆಗುತ್ತೆ!
Related Stories
Recommended image1
ಕೋಟಿ ಕೋಟಿ ಸಂಬಳ ಪಡೆವ ನಟರ ಬಾಡಿಗಾರ್ಡ್ಸ್​: CEOಗಳನ್ನೂ ಮೀರಿಸೋ ಸ್ಯಾಲರಿ- ಇಲ್ಲಿದೆ ಡಿಟೇಲ್ಸ್​
Recommended image2
ಈ ಬಿ-ಗ್ರೇಡ್​ ಬ್ಯೂಟಿ ಜೊತೆ ರಜನೀಕಾಂತ್​ ಸಂಬಂಧ? ಸೂಪರ್​ಸ್ಟಾರ್​ ಜೀವನದ ತೆರೆಮರೆಯ ಸ್ಟೋರಿ ಇದು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved