MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಈ ಬಿ-ಗ್ರೇಡ್​ ಬ್ಯೂಟಿ ಜೊತೆ ರಜನೀಕಾಂತ್​ ಸಂಬಂಧ? ಸೂಪರ್​ಸ್ಟಾರ್​ ಜೀವನದ ತೆರೆಮರೆಯ ಸ್ಟೋರಿ ಇದು

ಈ ಬಿ-ಗ್ರೇಡ್​ ಬ್ಯೂಟಿ ಜೊತೆ ರಜನೀಕಾಂತ್​ ಸಂಬಂಧ? ಸೂಪರ್​ಸ್ಟಾರ್​ ಜೀವನದ ತೆರೆಮರೆಯ ಸ್ಟೋರಿ ಇದು

ಸೂಪರ್‌ಸ್ಟಾರ್ ರಜನಿಕಾಂತ್ ಅವರ ಹೆಸರು ಒಂದು ಕಾಲದಲ್ಲಿ ನಟಿ ಸಿಲ್ಕ್ ಸ್ಮಿತಾ ಜೊತೆ ಬಲವಾಗಿ ಕೇಳಿಬಂದಿತ್ತು. ಹಲವು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದ ಈ ಜೋಡಿಯ ಸಂಬಂಧದ ಬಗ್ಗೆ ದೊಡ್ಡ ಚರ್ಚೆಯೇ ನಡೆದಿದ್ದರೂ, ಇಬ್ಬರೂ ಕೊನೆಯವರೆಗೂ ಮೌನವಾಗುಳಿದು ತಮ್ಮ ಸಂಬಂಧದ ಗುಟ್ಟನ್ನು ಬಿಟ್ಟುಕೊಡಲಿಲ್ಲ.

2 Min read
Author : Suchethana D
Published : May 31 2026, 06:42 PM IST
Share this Photo Gallery
  • FB
  • TW
  • Linkdin
  • Whatsapp
16
ಸೂಪರ್​​ಸ್ಟಾರ್​ ರಜನೀಕಾಂತ್​
Image Credit : Social Media

ಸೂಪರ್​​ಸ್ಟಾರ್​ ರಜನೀಕಾಂತ್​

ಸೂಪರ್‌ಸ್ಟಾರ್ಸ್​ ಎಂದರೆ ಟಾಪ್​ಮೋಸ್ಟ್​ ಸ್ಥಾನದಲ್ಲಿ ನಿಲ್ಲುವವರು ರಜನೀಕಾಂತ್​. ಅವರು ತಮ್ಮ ವಿಶಿಷ್ಟ ಶೈಲಿ ಮತ್ತು ಹೈ-ಆಕ್ಟೇನ್ ಆ್ಯಕ್ಷನ್ ಸೀಕ್ವೆನ್ಸ್‌ಗಳಿಗೆ ಹೆಸರುವಾಸಿಯಾಗಿದ್ದಾರೆ. ಒಂದು ಕೈಯಿಂದ ನೂರಾರು ಖಳನಾಯಕರನ್ನು ಸೋಲಿಸುವುದರಿಂದ ಹಿಡಿದು ಗಾಳಿಯ ಮಧ್ಯದಲ್ಲಿ ಅನೇಕ ತಿರುವುಗಳನ್ನು ಪ್ರದರ್ಶಿಸುವವರೆಗೆ ಮತ್ತು ಬುಲೆಟ್‌ನಿಂದ ಬ್ರೈನ್ ಟ್ಯೂಮರ್‌ನಿಂದ ರಕ್ಷಿಸಲ್ಪಡುವವರೆಗೆ ಈ ದಕ್ಷಿಣದ ಮೆಗಾಸ್ಟಾರ್ ಯಾವಾಗಲೂ ತಮ್ಮ ವಿಶಿಷ್ಟ ವ್ಯಕ್ತಿತ್ವದಿಂದ ತೆರೆಯ ಮೇಲೆ ಪ್ರೇಕ್ಷಕರನ್ನು ರಂಜಿಸುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಸಿಲ್ಕ್​ ಸ್ಮಿತಾ ಜೊತೆ
Image Credit : Asianet News

ಸಿಲ್ಕ್​ ಸ್ಮಿತಾ ಜೊತೆ

ರಜನೀಕಾಂತ್​ ಅವರ ಸುದ್ದಿ ಒಂದು ಈಗ ಬಹಳ ಸದ್ದು ಮಾಡುತ್ತಿದೆ. ಚಿತ್ರರಂಗದಲ್ಲಿ ಡೇಟಿಂಗ್​, ಮದುವೆ, ವಿಚ್ಛೇದನದ ಜೊತೆಗೆ ಅವರಿವರ ಹೆಸರಿನ ಜೊತೆ ನಟ-ನಟಿಯರ ಹೆಸರು ಥಳಕು ಹಾಕುವುದು ಮಾಮೂಲು. ಅದರಂತೆ ರಜನೀಕಾಂತ್ ಅವರ ಹೆಸರು ಕೂಡ ಕೆಲವು ನಟಿಯರ ಜೊತೆ ಕೇಳಿ ಬಂದಿತ್ತು. ಅವುಗಳಲ್ಲಿ ಒಂದು ನಟಿ ಸಿಲ್ಕ್ ಸ್ಮಿತಾ. ನಟಿಯರು ಎಂದರೆ ಸಂಪ್ರದಾಯ, ಮಡಿವಂತಿಕೆಯಿಂದ ಇರಬೇಕು ಎಂದು ಅಂದುಕೊಂಡಿದ್ದ ಕಾಲದಲ್ಲಿ ದೇಹ ಪ್ರದರ್ಶನ ಮಾಡುವುದಕ್ಕಾಗಿಯೇ ಒಂದಿಷ್ಟು ಮಂದಿಯನ್ನು ನೇಮಕ ಮಾಡಿಕೊಂಡಿದ್ದರು. ಅವರಲ್ಲಿ ಕೆಲವರು ಅದ್ಭುತ ಸುಂದರಿಯರಾಗಿದ್ದರೂ, ಇಂದಿನ ನಟಿಯರಿಗಿಂತಲೂ ನೂರು ಪಾಲು ಉತ್ತಮ ಸೌಂದರ್ಯ ಹಾಗೂ ನಟನಾ ಸಾಮರ್ಥ್ಯ ಹೊಂದಿದ್ದರೂ ನಾಯಕಿಯಾಗಿ ಮಿಂಚುವ ಅವಕಾಶ ಸಿಕ್ಕಿರಲಿಲ್ಲ. ಅಂಥವರನ್ನು ಕ್ಯಾಬರೆ ನೃತ್ಯಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಅಂಥವರಲ್ಲಿ ಒಬ್ಬರು ಅದ್ಭುತ ಸೌಂದರ್ಯದ ಘನಿಯಂತಿದ್ದ ಸಿಲ್ಕ್​ ಸ್ಮಿತಾ. ಸೆಕ್ಸ್​ ಬಾಂಬ್​ (Sex Bomb)ಎಂದೇ ಈಕೆ ಖ್ಯಾತರಾದರು.

Related Articles

Related image1
ಕೋಟಿ ಕೋಟಿ ಸಂಬಳ ಪಡೆವ ನಟರ ಬಾಡಿಗಾರ್ಡ್ಸ್​: CEOಗಳನ್ನೂ ಮೀರಿಸೋ ಸ್ಯಾಲರಿ- ಇಲ್ಲಿದೆ ಡಿಟೇಲ್ಸ್​
Related image2
ಡಿ.ಕೆ.ಶಿವಕುಮಾರ್​ ಮತ್ತು ಕಾಂಗ್ರೆಸ್​ ಕುರಿತು ನಟ ಚೇತನ್​ ಅಹಿಂಸಾ ಶಾಕಿಂಗ್​ ಸ್ಟೇಟ್​ಮೆಂಟ್​!
36
ಬಿ-ಗ್ರೇಡ್​ ನಟಿ
Image Credit : Asianet News

ಬಿ-ಗ್ರೇಡ್​ ನಟಿ

ನಟನೆ, ಸೌಂದರ್ಯ ಮಾತ್ರವಲ್ಲದೇ ನೃತ್ಯದಿಂದ ಮೋಡಿ ಮಾಡುತ್ತಿದ್ದವರು ಸಿಲ್ಕ್​ ಸ್ಮಿತಾ (Silk Smitha). ಈಗಿನಂತೆ ಆಗ ನಟಿಯರು ಅಂಗಾಂಗ ಪ್ರದರ್ಶನಕ್ಕೆ ಮುಗಿ ಬೀಳುತ್ತಿಲ್ಲವಾದ ಹಿನ್ನೆಲೆಯಲ್ಲಿ, ದೇಹ ಪ್ರದರ್ಶನಕ್ಕೆಂದೇ ಸೀಮಿತವಾಗಿದ್ದ ಸಿಲ್ಕ್ ಸ್ಮಿತಾರಂಥ ನಟಿಯರನ್ನು ಬಿ-ಗ್ರೇಡ್ ನಟಿ (B Grade Artist) ಎಂದು ಕರೆಯಲಾಗುತ್ತಿತ್ತು. ವಿಜಯಲಕ್ಷ್ಮಿ ವಡ್ಲಪಾಟಿ ಎಂಬುದು ಇವರ ಹುಟ್ಟು ಹೆಸರು. 1979 ರ ತಮಿಳು ಚಲನಚಿತ್ರ ವಂದಿಚಕ್ಕರಂನಲ್ಲಿ 'ಸಿಲ್ಕ್' ಪಾತ್ರಕ್ಕಾಗಿ ಮೊದಲ ಬಾರಿಗೆ ಗಮನ ಸೆಳೆದರು. ನಂತರ ಅವರ ಹೆಸರು ಸ್ಮಿತಾ ಎಂದು ಬದಲಾಗಿ ಎಲ್ಲರೂ ಸಿಲ್ಕ್​ ಸ್ಮಿತಾ ಎಂದೇ ಕರೆಯತೊಡಗಿದರು. ಇಂಥ ನಟಿಯ ಹೆಸರು ನಟ ರಜನೀಕಾಂತ್​ ಜೊತೆ ಚರ್ಚೆಯಾಗಿತ್ತು.

46
ದೊಡ್ಡ ಮಟ್ಟದಲ್ಲಿ ಚರ್ಚೆ
Image Credit : X

ದೊಡ್ಡ ಮಟ್ಟದಲ್ಲಿ ಚರ್ಚೆ

ರಜನೀಕಾಂತ್​ ಜೊತೆಯಲ್ಲಿ ಸೈಡ್​ ಆ್ಯಕ್ಟ್ರೆಸ್​ ಅನಿಸಿಕೊಂಡಿದ್ದ ಸಿಲ್ಕ್​ ಸ್ಮಿತಾ ಹೆಸರು ಬಹಳ ದೊಡ್ಡ ಮಟ್ಟದಲ್ಲಿಯೇ ಚರ್ಚೆಯಾಗಿತ್ತು. ಈ ಜೋಡಿ 'ಶಿವಪ್ಪು ಸೂರಿಯನ್', 'ಜೀತ್ ಹುಮಾರಿ', 'ತಂಗ ಮಗನ್' ಮತ್ತು 'ಪಾಯುಂ ಪುಲಿ' ಸೇರಿದಂತೆ ಹಲವು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿತ್ತು. ಕಮಲ್ ಹಾಸನ್ ಅಭಿನಯದ ಸದ್ಮಾ ಬಿಡುಗಡೆಯಾದ ನಂತರ ನಟಿ ರಾತ್ರೋರಾತ್ರಿ ಸೆನ್ಸೇಷನ್ ಆಗಿದ್ದರು. ಸಿಲ್ಕ್ ಸ್ಮಿತಾ ಅವರೊಂದಿಗಿನ ವಿವಾದಾತ್ಮಕ ಡ್ಯಾನ್ಸ್ ಸೀಕ್ವೆನ್ಸ್‌ಗಳಿಂದ ರಜನಿಕಾಂತ್ ಕೂಡ ಸುದ್ದಿ ಮಾಡಿದ್ದಾರೆ. ರಜನಿ ಅವರು ಸಿಲ್ಕ್ ಅವರನ್ನು ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದ್ದು, ಅವರಿಬ್ಬರ ಮಧ್ಯೆ ಸಂಬಂಧವಿತ್ತು (Relation) ಎನ್ನುವ ತನಕವೂ ಅಂದು ಜನರು ಚರ್ಚಿಸುತ್ತಿದ್ದರು.

56
ಮೌನಂ ಸಮ್ಮತಿ ಲಕ್ಷಣಂ
Image Credit : X

ಮೌನಂ ಸಮ್ಮತಿ ಲಕ್ಷಣಂ

ಇಂತಹ ಅನೇಕ ವರದಿಗಳ ಹೊರತಾಗಿಯೂ, ರಜನಿಕಾಂತ್ ಮತ್ತು ಸಿಲ್ಕ್ ಸ್ಮಿತಾ ಸಂಬಂಧದ ವದಂತಿಗಳಿಗೆ ಪ್ರತಿಕ್ರಿಯಿಸದೆ ಪರಸ್ಪರ ಸಿನಿಮಾಗಳನ್ನು ಮಾಡುವುದನ್ನು ಮುಂದುವರೆಸಿದ್ದರು. ಕೊನೆಯವರೆಗೂ ಈ ಸಂಬಂಧದ ಗುಟ್ಟು ಅವರು ಬಿಟ್ಟುಕೊಟ್ಟಿರಲಿಲ್ಲ. ಆದರೆ ಇದರ ನಡುವೆಯೇ ಸಿಲ್ಕ್​ ಸ್ಮಿತಾ ದಾರುಣವಾಗಿ ಅಂತ್ಯ ಕಂಡರು. ಕುಟುಂಬದ ಆರ್ಥಿಕ ಅಡಚಣೆಗಳಿಂದಾಗಿ ನಾಲ್ಕನೇ ತರಗತಿಯ ನಂತರ ಶಾಲೆಯನ್ನು ತೊರೆದಿದ್ದ ಸ್ಮಿತಾರನ್ನು ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಲಾಗಿತ್ತು. ಆಕೆಯ ಪತಿ ಮತ್ತು ಕುಟುಂಬಸ್ಥರು ಕೆಟ್ಟದಾಗಿ ನಡೆಸಿಕೊಂಡಿದ್ದರಿಂದ ಮನೆ ಬಿಟ್ಟು ಓಡಿ ಹೋಗಿದ್ದರು. ಹಾಗೂ ಹೀಗೂ ಸಿನಿಮಾದಲ್ಲಿ (Cinema) ಸ್ಥಾನ ಗಿಟ್ಟಿಸಿಕೊಂಡರು. ಒಂದೆರಡು ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡರೂ, ನಂತರ ಅವರ ದೇಹ ಸೌಂದರ್ಯವೇ ಮುಳುವಾಗಿ ಅವರನ್ನು ಬಿ ಗ್ರೇಡ್​ ಕಲಾವಿದೆಯಾಗಿ ಬಳಸಿಕೊಳ್ಳಲಾಯಿತು.

66
ನಟಿ ಆತ್ಮಹತ್ಯೆ
Image Credit : Asianet News

ನಟಿ ಆತ್ಮಹತ್ಯೆ

ಜೀವನದಲ್ಲಿ ಆರ್ಥಿಕ ಹಿನ್ನಡೆ ಮತ್ತು ಹದಗೆಟ್ಟ ಸಂಬಂಧಗಳಿಂದ ನಟಿ 1996 ರಲ್ಲಿ 35ನೇ ವಯಸ್ಸಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು. ಚೆನ್ನೈನ ಫ್ಲಾಟ್‌ನಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. 2011 ರಲ್ಲಿ, ವಿದ್ಯಾ ಬಾಲನ್ ದಿ ಡರ್ಟಿ ಪಿಕ್ಚರ್ ನಲ್ಲಿ ಸಿಲ್ಕ್ ಸ್ಮಿತಾ ಪಾತ್ರವನ್ನು ಮಾಡಿದರು. ಇದರಲ್ಲಿ ನಟಿ ನಸರುದ್ದೀನ್​ ಶಾ (Nasaruddeen Shah) ಅವರೊಂದಿಗೆ ತುಂಬಾ ಬೋಲ್ಡ್ ದೃಶ್ಯಗಳನ್ನು ನೀಡಿದರು. ನಾಸಿರುದ್ದೀನ್ ಶಾ ಅವರ ಪಾತ್ರವು ರಜನಿಕಾಂತ್ ಅವರಿಂದ ಪ್ರೇರಿತವಾಗಿದೆ ಎಂದು ಹಲವಾರು ವರದಿಗಳು ಬಂದಿದ್ದವು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ರಜನೀಕಾಂತ್
ಮನರಂಜನಾ ಸುದ್ದಿ
ಸಂಬಂಧಗಳು
ಪ್ರೀತಿ
ಮದುವೆ

Latest Videos
Recommended Stories
Recommended image1
ಗಂಡ ಮನೆಯಲ್ಲಿ ಇಲ್ಲದ ವೇಳೆ ಗೆಳೆಯನ ಜೊತೆ ರೋಮ್ಯಾನ್ಸ್; ಆದ್ರೆ ಕ್ಲೈಮ್ಯಾಕ್ಸ್ ಮಾತ್ರ ಅತ್ಯದ್ಭುತ, ಭಾರೀ ಟ್ವಿಸ್ಟ್!
Recommended image2
Baba Vanga prediction: ಜೂನ್ ಮೊದಲ ವಾರದಲ್ಲಿ ಈ ರಾಶಿಚಕ್ರ ಚಿಹ್ನೆಗಳಿಗೆ ಜಾಕ್‌ಪಾಟ್ ಹೊಡೆಯಲಿದೆ ಬಾಬಾ ವಂಗಾ ಪ್ರಕಾರ
Recommended image3
Bachelors Village: ಭಾರತದ ಈ ಹಳ್ಳಿಯಲ್ಲಿ ಮದುವೆಯೇ ಇಲ್ಲದೆ ಮುದುಕರಾದ 120 ಯುವಕರು! ಇದು ಸರ್ಕಾರದ ಶಾಪವಂತೆ!
Related Stories
Recommended image1
ಕೋಟಿ ಕೋಟಿ ಸಂಬಳ ಪಡೆವ ನಟರ ಬಾಡಿಗಾರ್ಡ್ಸ್​: CEOಗಳನ್ನೂ ಮೀರಿಸೋ ಸ್ಯಾಲರಿ- ಇಲ್ಲಿದೆ ಡಿಟೇಲ್ಸ್​
Recommended image2
ಡಿ.ಕೆ.ಶಿವಕುಮಾರ್​ ಮತ್ತು ಕಾಂಗ್ರೆಸ್​ ಕುರಿತು ನಟ ಚೇತನ್​ ಅಹಿಂಸಾ ಶಾಕಿಂಗ್​ ಸ್ಟೇಟ್​ಮೆಂಟ್​!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved