MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • 40 ವರ್ಷದ ಗಂಡ ಬೇಡ, ಪ್ರಿಯತಮ ಬೇಕು: ಯುವತಿ ಕೋರಿಕೆಗೆ ನ್ಯಾಯಾಲಯದಿಂದ ಮಹತ್ವದ ತೀರ್ಪು

40 ವರ್ಷದ ಗಂಡ ಬೇಡ, ಪ್ರಿಯತಮ ಬೇಕು: ಯುವತಿ ಕೋರಿಕೆಗೆ ನ್ಯಾಯಾಲಯದಿಂದ ಮಹತ್ವದ ತೀರ್ಪು

21 ವರ್ಷಗಳ ವಯಸ್ಸಿನ ಅಂತರವಿದ್ದ ಪತಿಯೊಂದಿಗೆ ದಾಂಪತ್ಯದಲ್ಲಿ ಅಸಮಾಧಾನಗೊಂಡಿದ್ದ 19 ವರ್ಷದ ಯುವತಿ, ತನ್ನ ಪ್ರಿಯತಮನ ಜೊತೆ ಬದುಕಲು ಇಚ್ಛಿಸಿದ್ದಾಳೆ. ಯುವತಿಯ ವಾದವನ್ನು ಆಲಿಸಿದ ಮಧ್ಯಪ್ರದೇಶ ಹೈಕೋರ್ಟ್‌, ವಯಸ್ಕ ವ್ಯಕ್ತಿಗೆ ಯಾರೊಂದಿಗೆ ವಾಸಿಸಬೇಕೆಂದು ನಿರ್ಧರಿಸುವ ಹಕ್ಕಿದೆ ಎಂದು ಹೇಳಿದೆ.

1 Min read
Author : Kannadaprabha News
Published : Apr 07 2026, 08:52 AM IST
Share this Photo Gallery
  • FB
  • TW
  • Linkdin
  • Whatsapp
15
21 ವರ್ಷ ವಯಸ್ಸಿನ ಅಂತರ
Image Credit : AI Meta

21 ವರ್ಷ ವಯಸ್ಸಿನ ಅಂತರ

ನನ್ನ ಗಂಡನಿಗೆ 40 ವರ್ಷ. ನನಗೆ 19 ವರ್ಷ. 21 ವರ್ಷ ವಯಸ್ಸಿನ ಅಂತರದ ಕಾರಣ ನಮ್ಮಿಬ್ಬರ ದಾಂಪತ್ಯ ಸರಿ ಹೊಂದುತ್ತಿಲ್ಲ. ಹಾಗಾಗಿ ಪ್ರಿಯತಮನ ಜೊತೆ ಜೀವನ ಮಾಡುತ್ತೇನೆ ಎಂದ ಯುವತಿಗೆ ಮಧ್ಯಪ್ರದೇಶ ಹೈಕೋರ್ಟ್‌ ಗಂಡನನ್ನು ಬಿಟ್ಟು ಪ್ರೇಮಿಯ ಜೊತೆ ತೆರಳಲು ಅನುವು ಮಾಡಿಕೊಟ್ಟ ಪ್ರಸಂಗ ನಡೆದಿದೆ. ಗ್ವಾಲಿಯರ್‌ ಪೀಠದ ನ್ಯಾ. ಆನಂದ್‌ ಪಾಠಕ್‌ ಹಾಗೂ ನ್ಯಾ. ಪುಷ್ಪೇಂದ್ರ ಯಾದವ್‌ ಅವರ ಪೀಠ ಈ ತೀರ್ಪು ನೀಡಿದೆ. (ಸಾಂದರ್ಭಿಕ ಚಿತ್ರ)

25
ಏನಿದು ಪ್ರಕರಣ?
Image Credit : AI Meta

ಏನಿದು ಪ್ರಕರಣ?

ವರ್ಷದ ಹಿಂದೆ 40 ವರ್ಷದ ಅವಧೇಶ್‌ ಎಂಬಾತ 19ರ ಯುವತಿಯ ಜೊತೆ ವಿವಾಹವಾಗಿದ್ದ. ಇತ್ತೀಚೆಗೆ, ಅನುಜ್‌ ಕುಮಾರ್‌ ಎಂಬಾತ ತನ್ನ ಪತ್ನಿಯನ್ನು ಅಕ್ರಮವಾಗಿ ಸೆರೆಹಿಡಿದಿಟ್ಟುಕೊಂಡಿದ್ದಾನೆ ಎಂದು ಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದನು. ಕೋರ್ಟ್‌ ಆದೇಶದಂತೆ ಪೊಲೀಸರು ಯುವತಿಯನ್ನು ಹುಡುಕಿ ತಂದಿದ್ದಾರೆ. (ಸಾಂದರ್ಭಿಕ ಚಿತ್ರ)

Related Articles

Related image1
ಸ್ಟಾರ್‌ ನಟಿ ಜೊತೆ ಅಕ್ರಮ ಸಂಬಂಧ, ಆಕೆಯ ಜೊತೆ ಫಾರಿನ್‌ ಟ್ರಿಪ್‌: ವಿಚ್ಛೇದನಕ್ಕೆ ಕಾರಣ ತಿಳಿಸಿದ ವಿಜಯ್‌ ಪತ್ನಿ
Related image2
7 ಮಕ್ಳಳಿದ್ರೂ ಅಕ್ರಮ ಸಂಬಂಧ, 7 ವರ್ಷದ ಮಗನ ಮುಂದೆಯೇ ಹೆಂಡತಿ, ಫ್ರೆಂಡ್‌ಗೆ ಗಂಡ ಗುಂಡಿಕ್ಕಿ ಕೊಂದ!
35
 ನಾನು ಖುಷಿಯಾಗಿಲ್ಲ
Image Credit : AI Meta

ನಾನು ಖುಷಿಯಾಗಿಲ್ಲ

ವಿಚಾರಣೆ ವೇಳೆ ಯುವತಿ ತನ್ನ ಪತಿ, ಪಾಲಕರು ಹಾಗೂ ಪ್ರೇಮಿ ಉಪಸ್ಥಿತರಿರುವಾಗಲೇ, ‘ನನ್ನ ಮತ್ತು ಗಂಡನ ನಡುವೆ 21 ವರ್ಷ ಅಂತರವಿದೆ. ನಮ್ಮಿಬ್ಬರ ಸಂಬಂಧ ಸರಿ ಬರುತ್ತಿಲ್ಲ. ಆತನ ಜೊತೆ ನಾನು ಖುಷಿಯಾಗಿಲ್ಲ. ಹಾಗಾಗಿ ಪ್ರಿಯತಮನ ಜೊತೆಗೇ ಬಾಳುತ್ತೇನೆ’ ಎಂದಿದ್ದಾಳೆ. (ಸಾಂದರ್ಭಿಕ ಚಿತ್ರ)

45
ನ್ಯಾಯಾಲಯದಿಂದ ಮಹತ್ವದ ತೀರ್ಪು
Image Credit : AI Meta

ನ್ಯಾಯಾಲಯದಿಂದ ಮಹತ್ವದ ತೀರ್ಪು

ಯುವತಿಯ ವಾದವನ್ನು ಆಲಿಸಿದ ಪೀಠ, ‘ಅವಳು ಯಾವುದೇ ಕಾನೂನುಬಾಹಿರ ನಿರ್ಬಂಧದಲ್ಲಿಲ್ಲ ಎಂಬುದು ಸ್ಪಷ್ಟವಾಗಿದೆ. ವಯಸ್ಕ ವ್ಯಕ್ತಿಗೆ ಎಲ್ಲಿ ಮತ್ತು ಯಾರೊಂದಿಗೆ ವಾಸಿಸಬೇಕೆಂದು ನಿರ್ಧರಿಸುವ ಹಕ್ಕಿದೆ. ಆಕೆ ಪ್ರಿಯತಮನ ಜೊತೆ ಬದುಕಬಹುದು’ ಎಂದು ತೀರ್ಪು ನೀಡಿದೆ. (ಸಾಂದರ್ಭಿಕ ಚಿತ್ರ)

ಇದನ್ನೂ ಓದಿ: ಬೆಂಗಳೂರು : ಅಕ್ರಮ ಸಂಬಂಧ ಕಾರಣ ಬಾಲಕನಿಂದ ಡಬಲ್‌ ಮ*ರ್ಡರ್!

55
ಒಪ್ಪಿತ ವಿವಾಹೇತರ ಸಂಬಂಧ
Image Credit : AI Meta

ಒಪ್ಪಿತ ವಿವಾಹೇತರ ಸಂಬಂಧ

ಜೊತೆಗೆ, ಆಕೆ ಸುರಕ್ಷಿತವಾಗಿದ್ದಾಳೋ ಇಲ್ಲವೋ ಎಂಬುದರ ಬಗ್ಗೆ ನಿಗಾ ಇಡಲು 6 ತಿಂಗಳ ಅವಧಿಗೆ ‘ಶೌರ್ಯ ದೀದಿ’ಯರನ್ನು ನೇಮಿಸಿದೆ. ಕಳೆದ ತಿಂಗಳು ಅಲಹಾಬಾದ್‌ ಹೈಕೋರ್ಟ್‌, ವಯಸ್ಕ ವ್ಯಕ್ತಿ ಒಪ್ಪಿತ ವಿವಾಹೇತರ ಸಂಬಂಧ ಇಟ್ಟುಕೊಳ್ಳುವುದು ತಪ್ಪಲ್ಲ ಎಂದು ತೀರ್ಪು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. (ಸಾಂದರ್ಭಿಕ ಚಿತ್ರ)

ಇದನ್ನೂ ಓದಿ: 20 ವರ್ಷ ಗೊತ್ತೇ ಆಗ್ಲಿಲ್ಲ ಗಂಡನ ಸೀಕ್ರೆಟ್! ಸತ್ಯ ಬಯಲಾಗ್ತಿದ್ದಂತೆ ಸೋಡಾಚೀಟಿ ಕೊಟ್ಟ ಪತ್ನಿ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಅಕ್ರಮ ಸಂಬಂಧ
ಸಂಬಂಧಗಳು
ಮದುವೆ
ದಂಪತಿಗಳು

Latest Videos
Recommended Stories
Recommended image1
ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ದೈಹಿಕ ಸಂಪರ್ಕ ಬೆಳೆಸಬಹುದೇ?, ಇಲ್ಲಿದೆ ಶಾಕಿಂಗ್‌ ಸತ್ಯ
Recommended image2
'ನಾನು ಒಂದೇ ದಿನ ಅಮ್ಮ ಮತ್ತು ಅಪ್ಪ ಇಬ್ಬರನ್ನೂ ಕಳೆದುಕೊಂಡೆ'.. ಸತ್ಯಸಂಗತಿ ಹೇಳಿ ಕಣ್ಣೀರು ಹಾಕಿದ ಜಾಹ್ನವಿ ಕಪೂರ್
Recommended image3
ಆ್ಯಕ್ಟಿಂಗ್​ ಬರಲ್ಲ ಎಂದು ಹೆಂಗಸರೆದುರೇ ಉಗಿದುಬಿಟ್ಟರು: ಕಣ್ಣೀರು ಹಾಕುತ್ತಲೇ ಆಕೆಗಾಗಿ ಸಹಿಸಿಕೊಂಡೆ- ಪ್ರಮೋದ್​ ಶೆಟ್ಟಿ ಮೆಲುಕು
Related Stories
Recommended image1
ಸ್ಟಾರ್‌ ನಟಿ ಜೊತೆ ಅಕ್ರಮ ಸಂಬಂಧ, ಆಕೆಯ ಜೊತೆ ಫಾರಿನ್‌ ಟ್ರಿಪ್‌: ವಿಚ್ಛೇದನಕ್ಕೆ ಕಾರಣ ತಿಳಿಸಿದ ವಿಜಯ್‌ ಪತ್ನಿ
Recommended image2
7 ಮಕ್ಳಳಿದ್ರೂ ಅಕ್ರಮ ಸಂಬಂಧ, 7 ವರ್ಷದ ಮಗನ ಮುಂದೆಯೇ ಹೆಂಡತಿ, ಫ್ರೆಂಡ್‌ಗೆ ಗಂಡ ಗುಂಡಿಕ್ಕಿ ಕೊಂದ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved