ಇಡೀ ತಮಿಳುನಾಡಿನಲ್ಲಿ ನಟಿ ತ್ರಿಷಾ ಬಗ್ಗೆ ಪೊಸಿಟಿವ್ ಟಾಕ್ ಶುರುವಾಗಿದೆ. ನಟಿ ತ್ರಿಷಾ ಕೈ ಇಟ್ಟಲ್ಲಿ, ಕಾಲಿಟ್ಟಲ್ಲಿ ಎಲ್ಲಾ ಕಡೆ ಗೆಲವು ಕಟ್ಟಿಟ್ಟ ಬುತ್ತಿ ಎಂದು ಮಾತನ್ನಾಡಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಈ ಬೆಳವಣಿಗೆ ಸೀಕ್ರೆಟ್ ಏನು? ಈ ಸ್ಟೋರಿ ನೋಡಿ..

ತ್ರಿಷಾ ಕೃಷ್ಣನ್ ಅದೃಷ್ಟದ ಸೀಕ್ರ್ರೆಟ್ ಬಯಲಾಯ್ತು!

Add Asianetnews Kannada as a Preferred SourcegooglePreferred

ನಟಿ ತ್ರಿಷಾ ಕೃಷ್ಣನ್ (Trisha Krishnan) ಅವರು ಸದ್ಯ ಭಾರೀ ಟ್ರೆಂಡ್ ಸೃಷ್ಟಿಸಿದ್ದಾರೆ. ತಮಿಳುನಾಡು ಅಸೆಂಬ್ಲಿ ಚುನಾವಣೆಯಲ್ಲಿ ಗೆದ್ದಿರುವ ನಟ-ರಾಜಕಾರಣಿ ದಳಪತಿ ವಿಜಯ್ ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವಾಗ ನಟಿ ತ್ರಿಷಾ ಅವರು ವಿಜಯ್ ಕುಟುಂಬದ ಜೊತೆಗೇ ಇದ್ದರು. ಅಷ್ಟೇ ಅಲ್ಲ, ನಟಿ ತ್ರಿಷಾ ಅವರು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನಟಿ ವಿಜಯ್ (Vijay Joseph) ಜಯಭೇರಿಗೆ ಕಾರಣಕರ್ತರು ಎನ್ನಲಾಗುತ್ತಿದೆ.

ಪತ್ನಿ ಸಂಗೀತಾ ಅವರು ತಮ್ಮ ಮಕ್ಕಳ ಜೊತೆ ಪತಿ ವಿಜಯ್ ಅವರಿಂದ ದೂರ ಇರುವುದು ಮಾತ್ರವಲ್ಲ, ಡಿವೋರ್ಸ್‌ಗೆ ಅರ್ಜಿಯನ್ನು ಸಹ ಸಲ್ಲಿಸಿದ್ದಾರೆ ಎನ್ನಲಾಗಿದೆ. ಆದರೆ ಆ ಸಮಯದಲ್ಲಿ ನಟಿ ತ್ರಿಷಾ ಅವರು ವಿಜಯ್ ಅವರಿಗೆ ಭಾವನಾತ್ಮಕ ಬೆಂಬಲ ನೀಡಿರುವ ಜೊತೆಗೆ, ವಿಜಯ್ ಕುಟುಂಬದ ಬೆನ್ನಿಗೆ ಕೂಡ ನಿಂತು ಬೆಂಬಲಿಸಿದ್ದಾರೆ ಎನ್ನಲಾಗುತ್ತಿದೆ. ಈ ಎಲ್ಲಾ ಕಾರಣಗಳು ನಟ ವಿಜಯ್ ಇಂದು ತಮಿಳುನಾಡಿನ ಮುಖ್ಯಮಂತ್ರಿಯಾಗಲು ಸಾಧ್ಯವಾಗಿದೆ ಎನ್ನಲಾಗುತ್ತಿದೆ.

ನಟ ಸೂರ್ಯ ನಟನೆಯ ಸಿನಿಮಾಗಳ ಸತತ ಸೋಲು

ಇದು ವಿಜಯ್ ಮಾತಾಯ್ತು. ಅದು ಬಿಟ್ಟು ನಟ ಸೂರ್ಯ (Suriya) ಕೂಡ ಸತತ ಸೋಲಿನಿಂದ ಕಂಗೆಟ್ಟಿದ್ದರು. ಇತ್ತೀಚಿನ ವರ್ಷಗಳಲ್ಲಿ ತಮಿಳು ಸ್ಟಾರ್ ನಟ ಸೂರ್ಯ ನಟನೆಯ ಸಿನಿಮಾಗಳು ಸತತ ಸೋಲು ಕಂಡಿತ್ತು. ಆದರೆ, ಈ ತಿಂಗಳು 15 ರಂದು () ಬಿಡುಗಡೆ ಕಂಡಿರುವ ಕರುಪ್ಪು ಸಿನಿಮಾ ಕೇವಲ 3 ದಿನಗಳಲ್ಲಿ 100 ಕೋಟಿ ಕ್ಲಬ್ ಸೇರಿ ಹೊಸ ದಾಖಲೆ ನಿರ್ಮಿಸಿದೆ. ಅಚ್ಚರಿ ಎನ್ನಲು ಅಸಾಧ್ಯ ಎಂಬಂತೆ, ಈ ಸಿನಿಮಾದ ನಾಯಕಿ ನಟಿ ತ್ರಿಷಾ ಕೃಷ್ಣನ್.

ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ, ಇಡೀ ತಮಿಳುನಾಡಿನಲ್ಲಿ ನಟಿ ತ್ರಿಷಾ ಬಗ್ಗೆ ಪೊಸಿಟಿವ್ ಟಾಕ್ ಶುರುವಾಗಿದೆ. ನಟಿ ತ್ರಿಷಾ ಕೈ ಇಟ್ಟಲ್ಲಿ, ಕಾಲಿಟ್ಟಲ್ಲಿ ಎಲ್ಲಾ ಕಡೆ ಗೆಲವು ಕಟ್ಟಿಟ್ಟ ಬುತ್ತಿ ಎಂದು ಮಾತನ್ನಾಡಿಕೊಳ್ಳುತ್ತಿದ್ದಾರೆ. ನಟ ವಿಜಯ್ ಬಾಳಿನಲ್ಲಿ ವೈಯಕ್ತಿಕವಾಗಿ, ನಟ ಸೂರ್ಯ ಅವರ ಲೈಫಲ್ಲಿವೃತ್ತಿಪರವಾಗಿ, ಈ ಇಬ್ಬರ ಅಚ್ಚರಿಯ ಗೆಲುವಿನಲ್ಲಿ ನಟಿ ತ್ರಿಷಾ ಪಾಲು ಬಹಳಷ್ಟಿದೆ ಎಂಬ ಮಾತು ಸದ್ಯಕ್ಕೆ ಓಡಾಡುತ್ತಿದೆ. ಕಾರಣ, ನಟಿ ತ್ರಿಷಾ ಲೈಫಲ್ಲಿ ಈಗ ಒಳ್ಳೆಯ ಟೈಂ ನಡೆಯುತ್ತಿದೆ. ಅಂದರೆ, ತ್ರಿಷಾ ಸಮಯ ಬಹಳ ಚೆನ್ನಾಗಿದೆ.

ಟೈ ನಂಬೋರು, ಸಮಯದ ಬಗ್ಗೆ ಮಾತನ್ನಾಡುವವರು

ಟೈ ನಂಬೋರು, ಸಮಯದ ಬಗ್ಗೆ ಮಾತನ್ನಾಡುವವರು ಬಹಳಷ್ಟು ಸಂಖ್ಯೆಯಲ್ಲಿ ಇದ್ದಾರೆ. ಅವರೆಲ್ಲರ ಅಭಿಪ್ರಾಯದಂತೆ ನಟಿ ತ್ರಿಷಾ ಅವರಿಂದಲೇ ನಟ ವಿಜಯ್ ಹಾಗೂ ನಟ ಸೂರ್ಯ ಬದುಕಿನಲ್ಲಿ ಸಾಕಷ್ಟು ಉತ್ತಮ ಬದಲಾವಣೆ ಜೊತೆಗೆ ಗೆಲವು ಒದಗಿದೆ ಎನ್ನುವುದು. ಅದನ್ನು ನಂಬುವುದು ಬಿಡುವುದು ಅವರವರ ಇಷ್ಟಕ್ಕೆ ಬಿಟ್ಟಿದ್ದು ಎನ್ನಬಹುದಾದರೂ ಈ ಎರಡೂ ಜನರ ಕೆಲಸದ ವಿಷಯದಲ್ಲಿ ನಟಿ ತ್ರಿಷಾ ಪಾಲು ಇದ್ದೇ ಇದೆ. ಆದ್ದರಿಂದ ಈ ಮಾತನ್ನು ತಳ್ಳಿಹಾಕಲಂತೂ ಸಾಧ್ಯವಿಲ್ಲ.

ಒಟ್ಟಿನಲ್ಲಿ, ಸದ್ಯಕ್ಕೆ ಸ್ವತಃ ನಟಿ ತ್ರಿಷಾ ಅವರ ಲೈಫಂತೂ ಏರುಗತಿಯಲ್ಲಿದೆ. ಸ್ಟಾಲಿನ್ ಮಗ ಹಾಗೂ ಕಮಲ್ ಹಾಸನ್ ನಿಮಾಣ, ರಜನಿಕಾಂತ್-ಕಮಲ್ ಹಾಸನ್ ನಟನೆಯ ಮುಂಬರುವ ಸಿನಿಮಾಗೆ ಇದೇ ತ್ರಿಷಾ ನಾಯಕಿಯಾಗಿದ್ದಾರೆ. ಅಲ್ಲಿಗೆ ನಟಿ ತ್ರಿಷಾಗೆ ಸಿನಿಮಾರಂಗದಲ್ಲಿ ಇರುವ ಡಿಮಾಂಡ್ ಸ್ವಲ್ಪವೂ ಕಡಿಮೆಯಾಗಿಲ್ಲ ಎನ್ನಬಹುದು. ಒಟ್ಟಿನಲ್ಲಿ ಸದ್ಯಕ್ಕೆ ತ್ರಿಷಾ ಟೈಂ ಓಡುತ್ತಿದೆ. ಅವರಿಂದ ಹಲವರ ಟೈಂ ಕೂಡ ಚೆನ್ನಾಗಿದೆ ಎಂಬ ಮಾತು ಸುತ್ತುತ್ತಿರುವುದಂತೂ ಸುಳ್ಳಲ್ಲ.