MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Today's Horoscope in Kannada
Mandya Jaggery Price
Bengaluru Garden City
Bengaluru Fake Medicine Racket
Karnataka-Tamil Nadu Border
Karnataka IAS Officer Missing
Pakistan-based Gang Doddaballapur
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
  • Home
  • Entertainment
  • News
  • Amruthadhaare: ಮಲ್ಲಿ ಹೊಟ್ಟೆ ಉರಿಸೋಕೆ ಹೋಗಿ ಇಂಗು ತಿಂದ ಮಂಗನಂತಾದ ಜೈದೇವ

Amruthadhaare: ಮಲ್ಲಿ ಹೊಟ್ಟೆ ಉರಿಸೋಕೆ ಹೋಗಿ ಇಂಗು ತಿಂದ ಮಂಗನಂತಾದ ಜೈದೇವ

ಅಮೃತಧಾರೆಯಲ್ಲಿ ಜೈದೇವ ಮತ್ತು ದಿಯಾ ಮಲ್ಲಿಯ ಹೊಟ್ಟೆ ಉರಿಸೋಕೆ ಹೋಗಿ ಇಂಗು ತಿಂದ ಮಂಗನಂತಾದ ಘಟನೆ ನಡೆದಿದೆ. ಏನಿದು ಸೀರಿಯಲ್​ ಟ್ವಿಸ್ಟು? 

2 Min read
Author : Suchethana D
| Updated : Jul 31 2025, 12:23 PM IST
Share this Photo Gallery
  • FB
  • TW
  • Linkdin
  • Whatsapp
18
ಅಮೃತಧಾರೆ ಸೀರಿಯಲ್​ ಟ್ವಿಸ್ಟ್​
Image Credit : Facebook

ಅಮೃತಧಾರೆ ಸೀರಿಯಲ್​ ಟ್ವಿಸ್ಟ್​

ಅಮೃತಧಾರೆ ಸೀರಿಯಲ್​ಗೆ ಈಗ ಸಕತ್​ ಟ್ವಿಸ್ಟ್​ ಸಿಕ್ಕಿದೆ. ಅತ್ತ ಭೂಮಿಕಾ ಮತ್ತು ಗೌತಮ್​ ಮಗುವಿನ ಟೆನ್ಷನ್​ ಅಂತೂ ಇದ್ದೇ ಇದೆ. ಮಗುವಿಗೆ ಆಕಾಶ್​ ಎಂದು ಹೆಸರು ಇಟ್ಟಾಗಿದೆ. ಭೂಮಿಯ ಮಗ ಆಕಾಶ್​ ಎನ್ನುವ ಅರ್ಥದಲ್ಲಿ ಈ ಹೆಸರು ಇಡಲಾಗಿದೆ. ಆದರೆ ಇನ್ನೊಂದು ಮಗುವಿಗಾಗಿ ಶೋಧ ಕಾರ್ಯವನ್ನು ಗೌತಮ್​ ಮತ್ತು ಆನಂದ್ ಮುಂದುವರೆಸಿದ್ದಾರೆ. ಆದರೆ ಶಕುಂತಲಾ ಮಾತ್ರ ಇರುವ ಮಗುವನ್ನೂ ಮುಗಿಸುವ ಪ್ಲ್ಯಾನ್​ ಹಾಕುತ್ತಿದ್ದಾಳೆ. ತಾವೇ ಮಗುವನ್ನು ಕಿಡ್​ನ್ಯಾಪ್​ ಮಾಡಿರುವ ವಿಷಯವನ್ನು ಭಾಗ್ಯಮ್ಮನ ಬಳಿ ಶಕುಂತಲಾ ಬಾಯಿಬಿಟ್ಟಿದ್ದಾಳೆ. ಇದರಿಂದ ಭಾಗ್ಯಮ್ಮನಿಗೆ ಭೂಮಿಯೇ ಕುಸಿದ ಅನುಭವವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
ಮಲ್ಲಿ ಹೊಟ್ಟೆ ಉರಿಸೋಕೆ ರೆಡಿಯಾದ ಜೈದೇವ್​-ದಿಯಾ
Image Credit : Facebook

ಮಲ್ಲಿ ಹೊಟ್ಟೆ ಉರಿಸೋಕೆ ರೆಡಿಯಾದ ಜೈದೇವ್​-ದಿಯಾ

ಆದರೆ ಅದೇ ಇನ್ನೊಂದೆಡೆ ಮಲ್ಲಿಯ ಸ್ಟೋರಿ ಸಕತ್​ ಇಂಟರೆಸ್ಟಿಂಗ್​ ಆಗಿದೆ. ಭೂಮಿಕಾ ಮಗುವಿನ ನಾಮಕರಣದ ದಿನ ಮನೆಗೆ ಬಂದ ಮಹಿಳೆಯರು, ಮಲ್ಲಿಯ ಬಗ್ಗೆ ಚುಚ್ಚು ಮಾತುಗಳನ್ನಾಡಿದ್ದಾರೆ. ಅಸಲಿಗೆ ಇದು ಶಕುಂತಲಾ ಪ್ಲ್ಯಾನೇ ಆಗಿತ್ತು. ಮಲ್ಲಿಗೆ ನೋವಾದರೆ, ಭೂಮಿಕಾ ಮತ್ತು ಗೌತಮ್​ಗೂ ನೋವಾಗುತ್ತದೆ ಎನ್ನುವುದು ಒಂದಾದರೆ, ಮಲ್ಲಿ ಈಗ ಕೋಟ್ಯಧೀಶ್ವರೆ ಆಗಿರುವ ಕಾರಣ, ಆಕೆಯ ಆಸ್ತಿಯನ್ನೂ ಕಬಳಿಸಲು ಜೈದೇವನನ್ನು ಮತ್ತೆ ಮಲ್ಲಿಯ ಜೊತೆ ಸೇರಿಸುವ ಹುನ್ನಾರ ಅವಳದ್ದು.

Related Articles

Related image1
ಅಮೃತಧಾರೆಗೆ ಮತ್ತೆ ವಾಪಸ್​ ಬಂದ್ಲಾ ಹಳೆ ಮಲ್ಲಿ? ಜೈದೇವ್​ ಜೊತೆ ನೋಡಿ ಫ್ಯಾನ್ಸ್​ ಫುಲ್​ ಖುಷ್​
Related image2
Anvita Sagar: ನೂರಾರು ಕೋಟಿಗಳ ಒಡತಿ ಅಮೃತಧಾರೆ ಮಲ್ಲಿ! ಗಂಡ ಬೇರೆ ಹೋದ್ಮೇಲೆ ಗೆಟಪ್ಪೇ ಚೇಂಜು
38
ಭೂಮಿಕಾ-ಮಲ್ಲಿ ಸಕತ್​ ಪ್ಲ್ಯಾನ್​
Image Credit : Facebook

ಭೂಮಿಕಾ-ಮಲ್ಲಿ ಸಕತ್​ ಪ್ಲ್ಯಾನ್​

ಅದೇ ಕಾರಣಕ್ಕೆ ಅಕ್ಕ-ಪಕ್ಕದ ಮಹಿಳೆಯರನ್ನು ಕರೆಸಿದ್ದಳು. ಅದರಂತೆ ಅವರು ಕೂಡ ಮಲ್ಲಿಗೆ ಚುಚ್ಚು ಮಾತು ಆಡಿದ್ದರು. ಆದರೆ ಭೂಮಿ ಟೀಚರ್ ಸುಮ್ನೆ ಇರ್ತಾಳಾ? ಆಡುವವರ ಬಾಯಿಗೆ ಹೇಗೆ ಬೀಗ ಹಾಕಬೇಕು ಎನ್ನುವುದು ಅವಳಿಗೆ ಚೆನ್ನಾಗಿ ಗೊತ್ತು. ಮೂದಲಿಸಿದವರನ್ನು ತರಾಟೆಗೆ ತೆಗೆದುಕೊಂಡ ಭೂಮಿಕಾ, ಅವರನ್ನು ಮನೆಯಿಂದ ಹೊರಕ್ಕೆ ಕಳಿಸಿದಳು. ಏನೋ ಪ್ಲ್ಯಾನ್​ ಮಾಡಿಕೊಂಡಿದ್ದ ಶಕುಂತಲಾಗೂ ಮುಖಭಂಗ ಆದಂತಾಗಿತ್ತು.

48
ಮಲ್ಲಿ ಹೊಟ್ಟೆ ಉರಿಸೋಕೆ ಹೋಗಿ ಎಡವಟ್ಟು ಆಯ್ತು!
Image Credit : Facebook

ಮಲ್ಲಿ ಹೊಟ್ಟೆ ಉರಿಸೋಕೆ ಹೋಗಿ ಎಡವಟ್ಟು ಆಯ್ತು!

ಇನ್ನು ಭೂಮಿಕಾ ಈ ವಿಷಯದಿಂದ ವಿಚಲಿತಳಾಗಿ, ಮಲ್ಲಿಯ ಲೈಫ್​ ಸೆಟಲ್​ ಮಾಡುವ ಯೋಚನೆಯಲ್ಲಿದ್ದಾಳೆ. ಗೌತಮ್ ಜೊತೆ ಈ ವಿಷಯವಾಗಿ ಮಾತನಾಡಿದ್ದಾಳೆ. ಮಲ್ಲಿಯ ಬದುಕನ್ನು ಸರಿ ಮಾಡುವುದಾಗಿ ಇಬ್ಬರೂ ಮಾತನಾಡಿದ್ದಾರೆ.

58
ಮಲ್ಲಿ ಹೊಟ್ಟೆ ಉರಿಸೋಕೆ ಹೋಗಿ ಎಡವಟ್ಟು ಆಯ್ತು!
Image Credit : Facebook

ಮಲ್ಲಿ ಹೊಟ್ಟೆ ಉರಿಸೋಕೆ ಹೋಗಿ ಎಡವಟ್ಟು ಆಯ್ತು!

ಮತ್ತೊಂದೆಡೆ ಮಲ್ಲಿಯ ಹೊಟ್ಟೆ ಉರಿಸುವ ಸಲುವಾಗಿ ಜೈದೇವ ಮತ್ತು ದಿಯಾ ಅವಳು ಇದ್ದಲ್ಲಿಗೆ ಬಂದು ಲವ್​ ಶುರುಹಚ್ಚಿಕೊಂಡಿದ್ದಾರೆ. ಇದನ್ನು ನೋಡಿ ಮಲ್ಲಿ ಭೂಮಿಕಾಗೆ ಮೆಸೇಜ್​ ಮಾಡಿದ್ದಾಳೆ. ಆಗ ಭೂಮಿಕಾ ಮ್ಯಾರೇಜ್​ ಬ್ರೋಕರ್​ ರೀತಿ ಕಾಲ್​ ಮಾಡಿದ್ದಾಳೆ. ನಿಮ್ಮ ಪ್ರೊಫೈಲ್​ ನೋಡಿ ಸಿಕ್ಕಾಪಟ್ಟೆ ಪ್ರಪೋಸಲ್​ ಬರ್ತಿವೆ ಎಂದಿದ್ದಾಳೆ.

68
ಇಂಗು ತಿಂದ ಮಂಗನಂತಾದ ಜೈದೇವ-ದಿಯಾ
Image Credit : Facebook

ಇಂಗು ತಿಂದ ಮಂಗನಂತಾದ ಜೈದೇವ-ದಿಯಾ

ನಂತರ ಮಲ್ಲಿ ಒಹೊ ನನ್ನ ಪ್ರೊಫೈಲ್​ ನೋಡಿದ್ರಾ? ಮದುವೆಗೆ ರೆಡಿನಾ ಕೇಳಿದ್ದಾಳೆ. ಕೊನೆಗೆ ಡಿವೋರ್ಸ್​ ಇನ್ನೂ ಆಗಿಲ್ಲ. ನೀವು ಹೂಂ ಅಂದ್ರೆ ಈಗ್ಲೇ ಕೊಡ್ತೇನೆ ಎನ್ನುವ ಮೂಲಕ ಜೈದೇವ್​ ಮತ್ತು ದಿಯಾಳಿಗೆ ದಂಗು ಬಡಿಸಿದ್ದಾಳೆ.

78
ಇಂಗು ತಿಂದ ಮಂಗನಂತಾದ ಜೈದೇವ-ದಿಯಾ
Image Credit : Facebook

ಇಂಗು ತಿಂದ ಮಂಗನಂತಾದ ಜೈದೇವ-ದಿಯಾ

ಅವರಿಬ್ಬರ ಮುಖ ಇಂಗು ತಿಂದ ಮಂಗನಂತಾಗಿದೆ. ಇವಿಷ್ಟು ನಾಟಕ ಆದರೂ, ಮಲ್ಲಿ ಲೈಫ್​ನಲ್ಲಿ ಹೊಸ ಎಂಟ್ರಿ ಆಗುವುದು ಪಕ್ಕಾ ಆಗಿದೆ. ಇದೀಗ ಹೊಸ ಎಂಟ್ರಿ ಯಾರು ಎನ್ನುವ ಕುತೂಹಲ ವೀಕ್ಷಕರದ್ದು. ಮತ್ತೊಂದು ರೋಲ್​ಗೆ ಯಾವ ನಟ ಬರುತ್ತಾನೆ ಎಂದು ಕಾಯುತ್ತಿದ್ದಾರೆ ವೀಕ್ಷಕರು.

88
ಇಂಗು ತಿಂದ ಮಂಗನಂತಾದ ಜೈದೇವ-ದಿಯಾ
Image Credit : facebook

ಇಂಗು ತಿಂದ ಮಂಗನಂತಾದ ಜೈದೇವ-ದಿಯಾ

ಮಲ್ಲಿಗೆ ಇನ್ನೊಂದು ಮದುವೆ ಮಾಡಬೇಕು, ಜೈದೇವ ಮತ್ತು ಶಕುಂತಲಾ ಅದನ್ನು ನೋಡಿ ಹೊಟ್ಟೆ ಉರಿದುಕೊಂಡು ಸಾಯಬೇಕು. ದಿಯಾಳ ಹಿಂದೆ ಹೋದ ಜೈದೇವ ಬೀದಿ ಪಾಲಾಗಬೇಕು ಎನ್ನುವುದು ವೀಕ್ಷಕರ ಮಹದಾಸೆ. ಆದರೆ ಸೀರಿಯಲ್​ ಯಾವ ಟರ್ನ್​ ತೆಗೆದುಕೊಳ್ಳುತ್ತದೆ ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮೃತಧಾರೆ
ಕನ್ನಡ ಧಾರಾವಾಹಿ
ಜೀ ಕನ್ನಡ
ಸಂಬಂಧಗಳು

Latest Videos
Recommended Stories
Recommended image1
‘ನಾನು ಮದ್ಯಪಾನ ಬಿಡಲು ಅವರೇ ಕಾರಣ’..: ಸೂಪರ್‌ಸ್ಟಾರ್ ರಜನಿಕಾಂತ್ ಹೇಳಿದ ಆ ಘಟನೆಯೇನು?
Recommended image2
ಗಂಡ ಸತ್ತರೆ ಕುಂಕುಮ, ಬಳೆ ಯಾಕೆ ತೆಗೀಬೇಕು? ನಟಿ ಅನಸೂಯಾ ಹೇಳಿಕೆಯಿಂದ ಭಾರೀ ಚರ್ಚೆ
Recommended image3
ಆಘಾತ..! ಅಪಘಾತಕ್ಕೆ ಈಡಾದ ಸ್ಟಾರ್ ನಟ ಅಜಿತ್‌ ಕುಮಾರ್‌ ಕಾರು; ಈಗ ಹೇಗಿದೆ 'ತಲಾ'ರ ಆರೋಗ್ಯ?
Related Stories
Recommended image1
ಅಮೃತಧಾರೆಗೆ ಮತ್ತೆ ವಾಪಸ್​ ಬಂದ್ಲಾ ಹಳೆ ಮಲ್ಲಿ? ಜೈದೇವ್​ ಜೊತೆ ನೋಡಿ ಫ್ಯಾನ್ಸ್​ ಫುಲ್​ ಖುಷ್​
Recommended image2
Anvita Sagar: ನೂರಾರು ಕೋಟಿಗಳ ಒಡತಿ ಅಮೃತಧಾರೆ ಮಲ್ಲಿ! ಗಂಡ ಬೇರೆ ಹೋದ್ಮೇಲೆ ಗೆಟಪ್ಪೇ ಚೇಂಜು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved