ಅಮೃತಧಾರೆಯ ಮಲ್ಲಿ ಈಗ ಅಪ್ಪನ ನೂರಾರು ಕೋಟಿ ಆಸ್ತಿಗಳ ಒಡತಿ. ಆಕೆ ಹೊಸ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಮನೆಯವರು ಸಲಹೆ ನೀಡ್ತಿರೋ ನಡುವೆಯೇ ಗೆಟಪ್ಪೇ ಚೇಂಜ್ ಆಗಿದೆ ಮಲ್ಲಿದು. ಇಲ್ಲಿದೆ ವಿಡಿಯೋ ನೋಡಿ!
ಅಮೃತಧಾರೆ ಸೀರಿಯಲ್ನಲ್ಲಿ ಸದ್ಯ ಮಲ್ಲಿಯ ಲೈಫ್ನಲ್ಲಿ ಬಿರುಗಾಳಿ ಎದ್ದಿದೆ. ಪತಿ ಜೈದೇವ್ ಬೇರೊಬ್ಬ ಹುಡುಗಿಯ ಜೊತೆ ಮದುವೆಯಾಗಿದ್ದಾನೆ. ಇಷ್ಟು ದಿನ ತಾನು ಬಡವಳು ಎಂದುಕೊಂಡಿದ್ದ ಮಲ್ಲಿ ಇದೀಗ ಸಹಸ್ರಾರು ಕೋಟಿ ರೂಪಾಯಿಗಳ ಒಡತಿ ಆಗಿದ್ದಾಳೆ. ಕೋಟ್ಯಧೀಶ್ವರ ರಾಜೇಂದ್ರ ಭೂಪತಿ ಮಗಳು ಎನ್ನುವ ವಿಷಯ ತಿಳಿಯುತ್ತಲೇ ಅಪ್ಪನನ್ನೂ ಕಳೆದುಕೊಂಡಿದ್ದಾಳೆ. ಒಟ್ಟಿನಲ್ಲಿ ಆಕೆಯ ಜೀವನ ಗೋಜಲು ಗೋಜಲಾಗಿದೆ. ಆದರೆ ಇದರ ನಡುವೆಯೇ ಕಾಲೇಜನ್ನೂ ಮುಗಿಸಿದ್ದಾಳೆ ಮಲ್ಲಿ. ಇದೀಗ ಪಾರ್ಥನಿಂದ ಹೊಸ ಜೀವನ ಆರಂಭಿಸುವ ಸಲಹೆ ಬಂದಿದೆ. ನೀವು ನಿಮ್ಮಂಥ ಮಹಿಳೆಯರಿಗೆ ಮಾದರಿಯಾಗಬೇಕು ಎಂದು ಹೇಳಿದ್ದಾನೆ ಪಾರ್ಥ. ಹೊಸ ಬದುಕನ್ನು ಕಟ್ಟಿಕೊಳ್ಳುವಂತೆ ಹೇಳಿದ್ದಾನೆ,
ಇದು ಸೀರಿಯಲ್ ಕಥೆಯಾದ್ರೆ, ನಿಜ ಜೀವನದಲ್ಲಿ ಮಲ್ಲಿ ಪಾತ್ರಧಾರಿ ಅನ್ವಿತಾ ಸಾಗರ್ ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್ ಆ್ಯಕ್ಟೀವ್ ಆಗಿದ್ದಾರೆ. ಇದೀಗ ಅವರ ವಿಡಿಯೋ ಒಂದು ವೈರಲ್ ಆಗಿದೆ. ಇದರಲ್ಲಿ ಅವರು ವರ್ಧ ಮಾಸ್ಟರ್ ಜೊತೆ ಸಕತ್ ಸ್ಟೆಪ್ ಹಾಕಿದ್ದಾರೆ. ಇದಕ್ಕೆ ನೆಟ್ಟಿಗರು ತಮಾಷೆ ಮಾಡುತ್ತಿದ್ದು, ಅಪ್ಪನ ನೂರಾರು ಕೋಟಿ ಆಸ್ತಿ ಕೈಗೆ ಸಿಕ್ಕ ಮೇಲೆ ಗೆಟಪ್ಪೇ ಚೇಂಜಾಗೋಯ್ತಾ ಎಂದಿದ್ದಾರೆ. ಇನ್ನು ಸೀರಿಯಲ್ನಲ್ಲಿಯೂ ಇದೇ ರೀತಿಯ ಗೆಟಪ್ನಲ್ಲಿ ಕಾಣಿಸಿಕೊಳ್ಳುವ ಆಸೆಯನ್ನೂ ಕೆಲವು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ನಟಿ ಅನ್ವಿತಾ ಸಾಗರ್ ಕುರಿತು ಹೇಳುವುದಾದರೆ, ಇವರು ಕನ್ನಡ ಸಿನಿಮಾ ಮತ್ತು ಧಾರಾವಾಹಿ ಕ್ಷೇತ್ರದಲ್ಲಿ ಕಳೆದೊಂದು ದಶಕದಿಂದ ಸಕ್ರಿಯರಾಗಿದ್ದದಾರೆ. ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಗಟ್ಟಿಮೇಳದಲ್ಲಿ ಆದ್ಯಾ ಪಾತ್ರದಲ್ಲಿ ನಟಿಸಿದ್ದರು. ಇದಾದ ಬಳಿಕ ಉದಯ ಟಿವಿಯ ಅಣ್ಣ ತಂಗಿ ಸೀರಿಯಲ್ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅದು 1 ಸಾವಿರ ಸಂಚಿಕೆಗಳನ್ನು ಆಗಲೇ ಪೂರೈಸಿದೆ. ಇದೀಗ ಮತ್ತೆ ಅನ್ವಿತಾ ಸಾಗರ್ ಅಮೃತಧಾರೆ ಸೀರಿಯಲ್ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ. ಮಲ್ಲಿ ಪಾತ್ರಧಾರಿಯಾಗಿದ್ದ ರಾಧಾ ಭಗವತಿ ಅವರು ಭಾರ್ಗವಿ ಎಲ್ಎಲ್ಬಿ ಸೀರಿಯಲ್ಗಾಗಿ ಈ ಪಾತ್ರ ತೊರೆದ ಬಳಿಕ, ಈಗ ಆ ಪಾತ್ರದಲ್ಲಿ ಅನ್ವಿತಾ ನಟಿಸುತ್ತಿದ್ದಾರೆ.
ಕೆಲ ದಿನಗಳ ಹಿಂದೆ ನಟಿ, ತಮ್ಮ ರಿಯಲ್ ಲೈಫ್ ಲವ್, ಬ್ರೇಕಪ್ ಬಗ್ಗೆ ಹೇಳಿಕೊಂಡಿದ್ದಾರೆ. ನಾನು ನಿಜ ಜೀವನದಲ್ಲಿಯೂ ಒಂಥರಾ ಮಲ್ಲಿಯ ರೀತಿಯವಳೇ ಎಂದಿದ್ದರು. ನಾನು ಪ್ರೀತಿಸಿದವರಿಂದ ಎಕ್ಸ್ಪೆಕ್ಟ್ ಮಾಡಿದ್ದು ಸಿಗದೇ ಇದ್ದಾಗ ತುಂಬಾ ಹರ್ಟ್ ಆಗುತ್ತದೆ. ನನಗೂ ಹಾಗೆಯೇ ಆಗಿದೆ. ಯಾರೇ ನನ್ನ ಜೀವನದಲ್ಲಿ ಬಂದ ಸಮಯದಲ್ಲಿ ನನಗೇ ಮೊದಲ ಪ್ರಯಾರಿಟಿ ಕೊಡಬೇಕು. ಬೇರೆಯ ಫ್ರೆಂಡ್ಸ್ ಬರುವುದು ಬೇಡ ಅಂತೇನೂ ನಾನು ಹೇಳಲ್ಲ. ಆದರೆ ನನಗೆ ಆದ್ಯತೆ ಕೊಡಬೇಕು. ಹಾಗೆ ಮಾಡದೇ ನನ್ನನ್ನು ನೆಗ್ಲೆಕ್ಟ್ ಮಾಡಿದರೆ ಮನಸ್ಸಿಗೆ ನೋವಾಗುತ್ತದೆ. ಇಂಥದ್ದೇ ನನ್ನ ಲೈಫ್ನಲ್ಲಿಯೂ ಆಗಿದೆ ಎಂದಿದ್ದಾರೆ. ಲವ್ ಮಾಡಿದ್ದೆ. ಈಗ ಎಲ್ಲಾ ಹೋಗಿದೆ. ಈಗ ಹ್ಯಾಪ್ಪಿನೋ ಹೌದೋ ಅಲ್ವೋ ಗೊತ್ತಿಲ್ಲ. ಒಟ್ಟಿನಲ್ಲಿ ಇದ್ದೀನಿ ಅಷ್ಟೇ ಎಂದು ನೋವಿನಿಂದ ನುಡಿದಿದ್ದರು ಅನ್ವಿತಾ. ನಾನು ಲವ್ ಮಾಡುವ ಹುಡುಗನಿಂದ ಏನೇನೋ ದೊಡ್ಡದ್ದೇನು ಬಯಸಲಿಲ್ಲ. ಅವನು ಹೆಚ್ಚು ದುಡಿಯಬೇಕು, ಒಳ್ಳೆಯ ಕಡೆ ಕರೆದುಕೊಂಡು ಹೋಗಬೇಕು, ಇಂಟರ್ನ್ಯಾಷನಲ್ ಟೂರ್ ಮಾಡಬೇಕು ಎಂದೇನೂ ನಾನು ಬಯಸುವವಳಲ್ಲ. ತಳ್ಳುವ ಗಾಡಿಯಲ್ಲಿ ಏನು ಕೊಡಿಸಿದರೂ ಸಾಕು. ಅಂಥವಳು ನಾನು. ಆದರೆ ನನ್ನ ಜೀವನದಲ್ಲಿ ಆಗಿದ್ದೆಲ್ಲಾ ಮೋಸವೇ. ತುಂಬಾ ಅನ್ಯಾಯವಾಯಿತು ಎಂದಿದ್ದರು.
