MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Blind Village: ಈ ಹಳ್ಳಿಯಲ್ಲಿ ಮರ ನೋಡಿದ್ರೆ ಕಣ್ಣು ಕಾಣಲ್ವಾ? ಇದರ ಹಿಂದಿನ ಕಥೆ ಏನು?

Blind Village: ಈ ಹಳ್ಳಿಯಲ್ಲಿ ಮರ ನೋಡಿದ್ರೆ ಕಣ್ಣು ಕಾಣಲ್ವಾ? ಇದರ ಹಿಂದಿನ ಕಥೆ ಏನು?

Blind village in Mexico: ಮರವನ್ನು ನೋಡಿದರೆ ಕಣ್ಣಿನ ದೃಷ್ಟಿ ಹೋಗುತ್ತಾ? ನಿಜಕ್ಕೂ ಒಂದು ಹಳ್ಳಿಯಲ್ಲಿ ಹೀಗಾಗುತ್ತಿದೆಯಾ? ಕಣ್ಣು ಕಾಣದಿರುವುದಕ್ಕೂ ಆ ಮರಕ್ಕೂ ಏನು ಸಂಬಂಧ? ಈ ವಿಚಿತ್ರ ಘಟನೆ ಎಲ್ಲಿ ನಡೆದಿದೆ ಗೊತ್ತಾ?

2 Min read
Author : Ashwini HR
Published : Sep 29 2026, 07:08 PM IST
Share this Photo Gallery
  • FB
  • TW
  • Linkdin
  • Whatsapp
12
ಈ ಹಳ್ಳಿಯಲ್ಲಿ ಎಲ್ಲರಿಗೂ ಕಣ್ಣು ಕಾಣದಿರಲು ಕಾರಣವೇನು?
Image Credit : gemini ai

ಈ ಹಳ್ಳಿಯಲ್ಲಿ ಎಲ್ಲರಿಗೂ ಕಣ್ಣು ಕಾಣದಿರಲು ಕಾರಣವೇನು?

ಈ ಹಳ್ಳಿಯಲ್ಲಿ ಎಲ್ಲರಿಗೂ ಕಣ್ಣು ಕಾಣದಿರಲು ಕಾರಣವೇನು?
ಪ್ರಪಂಚದಲ್ಲಿ ಕೆಲವು ವಿಚಿತ್ರಗಳು ನಮ್ಮ ಊಹೆಗೂ ನಿಲುಕುವುದಿಲ್ಲ. ಕಣ್ಣಿಗೆ ಕಾಣದ ಶಕ್ತಿಗಳು, ದೆವ್ವದ ಶಾಪ ಎಂದು ನಾವು ನಂಬುವ ಹಲವು ವಿಷಯಗಳ ಹಿಂದೆ ಒಂದು ವೈಜ್ಞಾನಿಕ ಸತ್ಯ ಅಡಗಿರುತ್ತದೆ. ದಕ್ಷಿಣ ಮೆಕ್ಸಿಕೋದ ಓಕ್ಸಾಕಾ (Oaxaca) ರಾಜ್ಯದಲ್ಲಿರುವ 'ಟಿಲ್ಟೆಪೆಕ್' (Tiltepec) ಎಂಬ ಹಳ್ಳಿ ಇಂತಹದ್ದೇ ಒಂದು ಅಚ್ಚರಿಯ ಸತ್ಯವನ್ನು ಬಚ್ಚಿಟ್ಟುಕೊಂಡಿದೆ.

ತಲೆತಲಾಂತರದಿಂದ ಇಲ್ಲಿ ವಾಸಿಸುವ ಜನರು ಒಂದು ಭಯಾನಕ ನಂಬಿಕೆಯಿಂದ ನಡುಗುತ್ತಿದ್ದರು. ಅದೇನೆಂದರೆ, ಆ ಹಳ್ಳಿಯಲ್ಲಿರುವ ಒಂದು ಮರದ ಕಡೆ ಕಣ್ಣೆತ್ತಿ ನೋಡಿದರೆ ಸಾಕು, ಮನುಷ್ಯರು ಕ್ಷಣಾರ್ಧದಲ್ಲಿ ಕುರುಡರಾಗುತ್ತಾರೆ ಎಂದು. ಈ ವಿಚಿತ್ರ ಭಯದ ಸುತ್ತ ಹೆಣೆದ ಕಥೆಯೇ ಈ 'ಕುರುಡು ಹಳ್ಳಿ'ಯ ರಹಸ್ಯ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
22
ಅಸಲಿಗೆ ಆ ಮರದ ಕಥೆ ಏನು?
Image Credit : gemini ai

ಅಸಲಿಗೆ ಆ ಮರದ ಕಥೆ ಏನು?

ಟಿಲ್ಟೆಪೆಕ್ ಗ್ರಾಮಸ್ಥರು ಝಾಪೊಟೆಕ್ (Zapotec) ಬುಡಕಟ್ಟಿಗೆ ಸೇರಿದವರು. ಇವರ ನಂಬಿಕೆಯ ಪ್ರಕಾರ ಅಲ್ಲಿ 'ಬಾವಿನಿ' ಅಥವಾ 'ಲವಾಜೆಲಾ' ಎಂದು ಕರೆಯಲ್ಪಡುವ ಒಂದು ಮರವಿದೆ. ಆ ಮರ ತುಂಬಾ ಅಪಾಯಕಾರಿ, ಅದನ್ನು ಯಾರಾದರೂ ನೋಡಿದರೆ ಅವರ ದೃಷ್ಟಿ ಶಾಶ್ವತವಾಗಿ ಹೋಗುತ್ತದೆ ಎಂದು ಇವರು ಬಲವಾಗಿ ನಂಬಿದ್ದರು. ಕಾಲಕ್ರಮೇಣ ಹಳ್ಳಿಯಲ್ಲಿ ಸತತವಾಗಿ ಜನರು ದೃಷ್ಟಿ ಕಳೆದುಕೊಳ್ಳಲು ಪ್ರಾರಂಭಿಸಿದಾಗ, ಇದೇನೋ ಅದೃಶ್ಯ ಶಕ್ತಿ ಅಥವಾ ದೆವ್ವದ ಶಾಪ ಎಂದು ಭಾವಿಸಿ ಭಯದಿಂದಲೇ ಬದುಕುತ್ತಿದ್ದರು.

ಆದರೆ ವಿಜ್ಞಾನಿಗಳು ಎಂಟ್ರಿ ಕೊಟ್ಟಾಗ ಶಾಕಿಂಗ್ ಸತ್ಯ ಹೊರಬಿತ್ತು! ವೈದ್ಯರು ಮತ್ತು ವಿಜ್ಞಾನಿಗಳು ಈ ವಿಚಿತ್ರ ಘಟನೆಯ ಬಗ್ಗೆ ಸಂಶೋಧನೆ ನಡೆಸಿದರು. ಗ್ರಾಮಸ್ಥರು ನಂಬಿರುವಂತೆ ಆ ಮರದಿಂದಾಗಲಿ ಅಥವಾ ದೆವ್ವಗಳಿಂದಾಗಲಿ ಯಾರೂ ಕುರುಡರಾಗುತ್ತಿಲ್ಲ, ಅಸಲಿ ಕಾರಣವೇ ಬೇರೆ ಇದೆ ಎಂದು ಸಂಶೋಧನೆಯಲ್ಲಿ ಸಾಬೀತಾಯಿತು.

ಅಲ್ಲಿನ ಜನರು ಅಂಧತ್ವಕ್ಕೆ ತುತ್ತಾಗಲು ಅಸಲಿ ಕಾರಣ ಒಂದು ಅಪಾಯಕಾರಿ ಪರಾವಲಂಬಿ ರೋಗ. ಇದನ್ನು ವೈದ್ಯಕೀಯ ಭಾಷೆಯಲ್ಲಿ 'ಆಂಕೊಸೆರ್ಸಿಯಾಸಿಸ್' (Onchocerciasis) ಅಥವಾ 'ರಿವರ್ ಬ್ಲೈಂಡ್‌ನೆಸ್' (River Blindness) ಎನ್ನುತ್ತಾರೆ. 'ಆಂಕೊಸೆರ್ಕಾ ವೋಲ್ವುಲಸ್' (Onchocerca volvulus) ಎಂಬ ಪರಾವಲಂಬಿ ಹುಳುಗಳಿಂದ ಈ ಅಪಾಯ ಎದುರಾಗುತ್ತದೆ.

ಈ ರೋಗದ ಹಿಂದಿನ ಅಸಲಿ ವಿಲನ್‌ಗಳು ಸಣ್ಣ ಕಪ್ಪು ನೊಣಗಳು. ಇವು ಸಾಮಾನ್ಯವಾಗಿ ವೇಗವಾಗಿ ಹರಿಯುವ ನದಿಗಳು ಮತ್ತು ನೀರಿನ ಮೂಲಗಳ ಬಳಿ ಹೆಚ್ಚಾಗಿ ಬೆಳೆಯುತ್ತವೆ. ಈ ನೊಣ ಮನುಷ್ಯನನ್ನು ಕಚ್ಚಿದಾಗ, ಆ ಪರಾವಲಂಬಿ ಜೀವಿಯು ದೇಹವನ್ನು ಪ್ರವೇಶಿಸಿ, ಕ್ರಮೇಣ ಕಣ್ಣುಗಳ ಮೇಲೆ ತೀವ್ರ ಪರಿಣಾಮ ಬೀರಿ ದೃಷ್ಟಿಯನ್ನು ಕಸಿದುಕೊಳ್ಳುತ್ತದೆ.

ಈ ಹಳ್ಳಿಯಲ್ಲಿ ಹುಟ್ಟುವ ಪ್ರತಿಯೊಂದು ಮಗು ಹುಟ್ಟಿನಿಂದಲೇ ಕುರುಡನಾಗಿರುತ್ತದೆ ಎಂಬ ಮತ್ತೊಂದು ದೊಡ್ಡ ತಪ್ಪು ಕಲ್ಪನೆಯೂ ಪ್ರಚಾರದಲ್ಲಿದೆ. ಆದರೆ ಇದು ಸಂಪೂರ್ಣ ಸುಳ್ಳು ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಎಲ್ಲಾ ಮಕ್ಕಳು ಸಂಪೂರ್ಣ ದೃಷ್ಟಿಯೊಂದಿಗೆ ಜನಿಸುತ್ತಾರೆ. ಆದರೆ ಆ ಪ್ರದೇಶದಲ್ಲಿ ಓಡಾಡುವ ಸೋಂಕಿತ ಕಪ್ಪು ನೊಣಗಳು ಪದೇ ಪದೇ ಕಚ್ಚುವುದರಿಂದ ಅವರು ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ಕೇವಲ ಮನುಷ್ಯರಿಗೆ ಮಾತ್ರವಲ್ಲದೆ ಪ್ರಾಣಿಗಳಿಗೂ ಈ ಸಮಸ್ಯೆ ಕಾಡುತ್ತದೆ. ಆದರೆ ಈ ಸಣ್ಣ ವೈಜ್ಞಾನಿಕ ಸತ್ಯ ತಿಳಿಯದೆ, ತಲೆತಲಾಂತರದಿಂದ ಅಲ್ಲಿನ ಜನರು ಇದನ್ನು ದುಷ್ಟಶಕ್ತಿಯ ಮಹಿಮೆ ಎಂದುಕೊಂಡು ಭಯಪಡುತ್ತಿದ್ದರು.

Related Articles

Related image1
ಬರೋಬ್ಬರಿ 60-80 ದಿನ ಉಪವಾಸವಿರುವ 'ಕಾಳಿಂಗ' ವು ಮರಿಗಳು ಹುಟ್ಟುವ ಮುನ್ನವೇ ಗೂಡು ಬಿಟ್ಟು ಓಡುವುದೇಕೆ?
Related image2
ಶವಪೆಟ್ಟಿಗೆಯಿಂದ ಗುನುಗುವ ಶಬ್ದ ಬಂತೆಂದು ತೆರೆದು ನೋಡಿದಾಗ ಸತ್ತ ಮಹಿಳೆ ಜೀವಂತ, ಕೆಲವೇ ಗಂಟೆಗಳಲ್ಲಿ ಕಾದಿತ್ತು ಶಾಕ್!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
 

Latest Videos
Recommended Stories
Recommended image1
ಗ್ಯಾಸ್ ಬಳಸದೆ ಕೇವಲ 5 ನಿಮಿಷದಲ್ಲಿ ಮಾಡಿ ಸಾಫ್ಟ್ ಸ್ವೀಟ್ ಪೇಡ.. ಬಾಯಲ್ಲಿಟ್ಟರೆ ಕರಗುತ್ತೆ
Recommended image2
‘5 ವರ್ಷ ಪೋಷಕರಿಂದ ದೂರವಿರಿ’... ಮದುವೆಯಾದ ಜೋಡಿಗಳಿಗೆ Relationship Coach ಕೊಟ್ಟ ವಿಚಿತ್ರ ಸಲಹೆ!
Recommended image3
Gold Rings: ಹುಡುಗಿಯರ ಮನಗೆಲ್ಲುವ ಬ್ಯೂಟಿಫುಲ್ ಗೋಲ್ಡ್ ರಿಂಗ್ ಡಿಸೈನ್ಸ್!
Related Stories
Recommended image1
ಬರೋಬ್ಬರಿ 60-80 ದಿನ ಉಪವಾಸವಿರುವ 'ಕಾಳಿಂಗ' ವು ಮರಿಗಳು ಹುಟ್ಟುವ ಮುನ್ನವೇ ಗೂಡು ಬಿಟ್ಟು ಓಡುವುದೇಕೆ?
Recommended image2
ಶವಪೆಟ್ಟಿಗೆಯಿಂದ ಗುನುಗುವ ಶಬ್ದ ಬಂತೆಂದು ತೆರೆದು ನೋಡಿದಾಗ ಸತ್ತ ಮಹಿಳೆ ಜೀವಂತ, ಕೆಲವೇ ಗಂಟೆಗಳಲ್ಲಿ ಕಾದಿತ್ತು ಶಾಕ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved