MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind-W vs Pak-W Asia Cup 2026
Teacher's Day Wishes 2026
Teacher's Day Special
Karnataka Farmers Loan Waiver
Sharavathi Pumped Storage Project
Bengaluru FSSAI Inspection
KPSC Ex-chairman Shivashankarappa
India Forex Reserves
Karnataka Police Constable Recruitment
Karnataka Rakshana Vedike
ISRO GSLV F17 Launch
Bengaluru Suburban Rail
  • Home
  • Life
  • ಕೈ ನೋಯಿಸಕೊಳ್ಳಬೇಡಿ.. ಶ್ರಮಪಡದೆ ಗಲೀಜು ಪಾತ್ರೆ ಕ್ಲೀನ್ ಮಾಡಲು ಹುಣಸೆಹಣ್ಣನ್ನ ಹೀಗೆ ಬಳಸಿ

ಕೈ ನೋಯಿಸಕೊಳ್ಳಬೇಡಿ.. ಶ್ರಮಪಡದೆ ಗಲೀಜು ಪಾತ್ರೆ ಕ್ಲೀನ್ ಮಾಡಲು ಹುಣಸೆಹಣ್ಣನ್ನ ಹೀಗೆ ಬಳಸಿ

Tamarind cleaning hacks: ಅಡುಗೆಮನೆಯಲ್ಲಿ ಸದಾ ಕಾಲ ಜಿಡ್ಡು ಮತ್ತು ಪಾತ್ರೆಗಳು ಬಣ್ಣಗೆಡುವುದು ಸಾಮಾನ್ಯ. ಆದರೆ ಹುಣಸೆಹಣ್ಣಿನ ತಿರುಳು ನೈಸರ್ಗಿಕ ಸ್ಕ್ರಬ್ಬರ್‌ನಂತೆ ಕೆಲಸ ಮಾಡುವುದಲ್ಲದೆ, ಪಾತ್ರೆಗಳಿಗೆ ಹೊಸ ಕಳೆಯನ್ನು ನೀಡುತ್ತದೆ. ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ..

2 Min read
Author : Ashwini HR
Published : Sep 05 2026, 02:32 PM IST
Share this Photo Gallery
  • FB
  • TW
  • Linkdin
  • Whatsapp
15
ಪಾತ್ರೆಗಳಿಗೆ ಹೊಸ ಕಳೆಯನ್ನು ನೀಡುತ್ತೆ
Image Credit : AI Image

ಪಾತ್ರೆಗಳಿಗೆ ಹೊಸ ಕಳೆಯನ್ನು ನೀಡುತ್ತೆ

ಪಾತ್ರೆಗಳಿಗೆ ಹೊಸ ಕಳೆಯನ್ನು ನೀಡುತ್ತೆ
ಹುಣಸೆಹಣ್ಣು ಕೇವಲ ಸಾರು, ಸಾಂಬಾರ್‌ಗೆ ರುಚಿ ನೀಡಲು ಮಾತ್ರವಲ್ಲ, ಅಡುಗೆಮನೆಯನ್ನು ಫಳಫಳ ಹೊಳೆಯುವಂತೆ ಮಾಡಲೂ ಸಹಕಾರಿ! ರಾಸಾಯನಿಕಯುಕ್ತ ಕ್ಲೀನರ್‌ಗಳ ಬದಲಿಗೆ, ಹುಣಸೆಹಣ್ಣಿನಲ್ಲಿರುವ ನೈಸರ್ಗಿಕ ಆಮ್ಲೀಯ (Acidic) ಗುಣವನ್ನು ಬಳಸಿ ಪಾತ್ರೆಗಳ ಮೇಲಿನ ಜಿಡ್ಡು ಮತ್ತು ಮೊಂಡು ಕಲೆಗಳನ್ನು ಹೇಗೆ ಸುಲಭವಾಗಿ ಹೋಗಲಾಡಿಸಬಹುದು ಎಂಬ 5 ಅದ್ಭುತ ವಿಧಾನಗಳು ಇಲ್ಲಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಕಪ್ಪು ಕಲೆಗಳು ಮಾಯ
Image Credit : AI Image

ಕಪ್ಪು ಕಲೆಗಳು ಮಾಯ

ಕಪ್ಪು ಕಲೆಗಳು ಮಾಯ
ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳ ಹೊಳಪಿಗೆ
ಸ್ಟೀಲ್ ಪಾತ್ರೆಗಳ ಮೇಲೆ ಆಹಾರದ ಕಲೆಗಳಿದ್ದರೆ ಅಥವಾ ಅವು ಮಂದವಾಗಿದ್ದರೆ (Dull), ಬೀಜ ಮತ್ತು ನಾರು ತೆಗೆದ ಹುಣಸೆಹಣ್ಣಿಗೆ ಸ್ವಲ್ಪ ನೀರು ಸೇರಿಸಿ ಕಲೆಗಳ ಮೇಲೆ ಉಜ್ಜಿ. ಕೆಲವು ನಿಮಿಷ ಬಿಟ್ಟು ಮೃದುವಾದ ಸ್ಪಾಂಜ್‌ನಿಂದ ತೊಳೆದರೆ ಪಾತ್ರೆಗಳು ಹೊಸದರಂತೆ ಮಿನುಗುತ್ತವೆ.

ಕಪ್ಪಾದ ತಾಮ್ರದ (Copper) ಪಾತ್ರೆಗಳನ್ನು ಶುಚಿಗೊಳಿಸಲು
ತಾಮ್ರದ ಪಾತ್ರೆಗಳು ಬೇಗನೆ ಕಪ್ಪಾಗುತ್ತವೆ. ಇದಕ್ಕೆ ಹುಣಸೆಹಣ್ಣಿನ ಪೇಸ್ಟ್ ಹಚ್ಚಿ ಲಘುವಾಗಿ ಉಜ್ಜಿ ತಕ್ಷಣ ನೀರಿನಿಂದ ತೊಳೆಯಿರಿ. ಒಣ ಬಟ್ಟೆಯಿಂದ ಒರೆಸಿದರೆ ನೀರಿನ ಕಲೆಗಳು ಉಳಿಯದೆ ತಾಮ್ರದ ಪಾತ್ರೆಗಳು ತಕ್ಷಣವೇ ಕಾಂತಿ ಪಡೆಯುತ್ತವೆ.

ಹಿತ್ತಾಳೆ (Brass) ಪಾತ್ರೆಗಳನ್ನು ಮಿನುಗಿಸಲು
ಪೂಜಾ ಸಾಮಗ್ರಿಗಳು ಅಥವಾ ಹಿತ್ತಾಳೆಯ ಅಲಂಕಾರಿಕ ವಸ್ತುಗಳಿಗೆ ಹುಣಸೆಹಣ್ಣಿನ ಪೇಸ್ಟ್ ಹಚ್ಚಿ ಹಗುರವಾಗಿ ಉಜ್ಜಿ. ಇದರಿಂದ ಲೋಹದ ಮೇಲಿನ ಹಸಿರು ಅಥವಾ ಕಪ್ಪು ಕಲೆಗಳು ಮಾಯವಾಗಿ ಬಂಗಾರದಂತಹ ಬಣ್ಣ ಮರಳಿ ಬರುತ್ತದೆ.

Related Articles

Related image1
ಹಿಟ್ಟು, ಹಂಚು ಎಲ್ಲಾ ಸರಿಯಿದ್ರೂ ದೋಸೆ ಅಂಟಿಕೊಳ್ಳುತ್ತಿದೆಯೇ? ಬಾಣಸಿಗರ ಈ ಟ್ರಿಕ್ಸ್ ಫಾಲೋ ಮಾಡಿ
Related image2
ಎಣ್ಣೆ, ತುಪ್ಪ ಅಲ್ವೇ ಅಲ್ಲ.. ಚಪಾತಿ ಮಾಡುವಾಗ 2 ಚಮಚ ಈ ಹಿಟ್ಟನ್ನು ಬೆರೆಸಿ.. ಹತ್ತಿಯಂತೆ ಮೃದುವಾಗಿರುತ್ತವೆ
35
ಸೀದ ಪಾತ್ರೆಗಳ ತಳ ಸ್ವಚ್ಛಗೊಳಿಸಲು
Image Credit : Getty

ಸೀದ ಪಾತ್ರೆಗಳ ತಳ ಸ್ವಚ್ಛಗೊಳಿಸಲು

ಸೀದ ಪಾತ್ರೆಗಳ ತಳ ಸ್ವಚ್ಛಗೊಳಿಸಲು
ಪಾತ್ರೆಯ ತಳದಲ್ಲಿ ಆಹಾರ ಸೀದುಹೋಗಿದ್ದರೆ ಅಥವಾ ಗಟ್ಟಿಯಾಗಿ ಅಂಟಿಕೊಂಡಿದ್ದರೆ, ಆ ಜಾಗಕ್ಕೆ ಹುಣಸೆಹಣ್ಣಿನ ಪೇಸ್ಟ್ ಹಚ್ಚಿ ಸ್ವಲ್ಪ ಹೊತ್ತು ಬಿಡಿ. ಇದು ಗಟ್ಟಿಯಾದ ಆಹಾರವನ್ನು ಸಡಿಲಗೊಳಿಸುತ್ತದೆ. ನಂತರ ಉಗುರುಬೆಚ್ಚಗಿನ ನೀರಿನಿಂದ ತೊಳೆದರೆ ಶ್ರಮವಿಲ್ಲದೆ ಪಾತ್ರೆ ಶುಚಿಯಾಗುತ್ತದೆ.

45
ಕಲೆಯಾದ ಮೆಟಲ್ ಡಬ್ಬಿಗಳ ಕ್ಲೀನಿಂಗ್
Image Credit : Getty

ಕಲೆಯಾದ ಮೆಟಲ್ ಡಬ್ಬಿಗಳ ಕ್ಲೀನಿಂಗ್

ಕಲೆಯಾದ ಮೆಟಲ್ ಡಬ್ಬಿಗಳ ಕ್ಲೀನಿಂಗ್
ಲೋಹದ ಡಬ್ಬಿಗಳ ಒಳಗಿನ ಮೊಂಡು ಕಲೆಗಳನ್ನು ಹೋಗಲಾಡಿಸಲು ಹುಣಸೆಹಣ್ಣಿನ ಪೇಸ್ಟ್ ಹಚ್ಚಿ 5 ನಿಮಿಷ ಬಿಡಿ. ನಂತರ ಪಾತ್ರೆ ತೊಳೆಯುವ ಸೋಪು ಮತ್ತು ನೀರಿನಿಂದ ತೊಳೆದರೆ ಜಿಡ್ಡು ಮತ್ತು ಕಲೆ ಎರಡೂ ಮಾಯವಾಗುತ್ತವೆ.

55
ಗಮನಿಸಬೇಕಾದ ಮುನ್ನೆಚ್ಚರಿಕೆಗಳು
Image Credit : google

ಗಮನಿಸಬೇಕಾದ ಮುನ್ನೆಚ್ಚರಿಕೆಗಳು

ಗಮನಿಸಬೇಕಾದ ಮುನ್ನೆಚ್ಚರಿಕೆಗಳು
ಮಾರ್ಬಲ್ ಮೇಲೆ ಬಳಸಬೇಡಿ: ಹುಣಸೆಹಣ್ಣಿನಲ್ಲಿ ಆಸಿಡ್ ಇರುವುದರಿಂದ ಮಾರ್ಬಲ್ (Marble) ಅಥವಾ ನೈಸರ್ಗಿಕ ಕಲ್ಲುಗಳ (Natural Stones) ಮೇಲೆ ಇದನ್ನು ಹಚ್ಚಬೇಡಿ. ಇದು ಕಲ್ಲಿನ ಹೊಳಪನ್ನು ಕಸಿದುಕೊಳ್ಳಬಹುದು.

ಹೆಚ್ಚು ಹೊತ್ತು ಬಿಡಬೇಡಿ: ಲೋಹದ ಪಾತ್ರೆಗಳ ಮೇಲೆ ಹುಣಸೆಹಣ್ಣನ್ನು ಅತಿಯಾದ ಸಮಯ ಹಚ್ಚಿಡಬೇಡಿ. ಹಚ್ಚಿದ ತಕ್ಷಣ ಉಜ್ಜಿ ತೊಳೆಯುವುದು ಉತ್ತಮ, ಇಲ್ಲದಿದ್ದರೆ ಆಸಿಡ್ ಅಂಶ ಲೋಹದ ಬಣ್ಣ ಬದಲಿಸಬಹುದು.

ಮೃದುವಾಗಿ ಉಜ್ಜಿ: ಪಾತ್ರೆಗಳ ಮೇಲೆ ಗೀರುಗಳು ಬೀಳದಂತೆ ಯಾವಾಗಲೂ ಮೃದುವಾದ ಸ್ಪಾಂಜ್ ಅಥವಾ ಬಟ್ಟೆಯನ್ನೇ ಬಳಸಿ.

ಪರೀಕ್ಷಿಸಿ ನೋಡಿ: ಯಾವುದೇ ಬೆಲೆಬಾಳುವ ಪಾತ್ರೆ ಅಥವಾ ಪಾಲಿಶ್ ಮಾಡಿದ ವಸ್ತುವನ್ನು ಕ್ಲೀನ್ ಮಾಡುವ ಮುನ್ನ, ಒಂದು ಸಣ್ಣ ಜಾಗದಲ್ಲಿ ಹಚ್ಚಿ ಪರೀಕ್ಷಿಸಿ (Patch test) ನೋಡುವುದು ಉತ್ತಮ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
ಅಡುಗೆಮನೆ ಸಲಹೆಗಳು
ಮಹಿಳೆಯರು

Latest Videos
Recommended Stories
Recommended image1
ಬಿಸಿ ಅನ್ನ Vs ತಣ್ಣನೆಯ ಅನ್ನ: ಆರೋಗ್ಯಕ್ಕೆ ಯಾವುದು ಬೆಸ್ಟ್? ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ
Recommended image2
ವಂದೇ ಭಾರತ್ ರೈಲಿನ 'ಅತ್ಯಾಧುನಿಕ ಸೌಲಭ್ಯ' ಕಟ್; ಆದಾಯಕ್ಕಾಗಿ ಪ್ರಯಾಣಿಕರಿಗೆ ಶಾಕ್ ಕೊಟ್ಟ ರೈಲ್ವೆ ಇಲಾಖೆ!
Recommended image3
ವೈರಲ್ ವಿಡಿಯೋ ನೋಡಿ ಹಾಲಿಗೆ ಮೆಣಸಿನಕಾಯಿ, ನಾಣ್ಯ ಹಾಕಿದ್ರೆ ಕಾದಿತ್ತು ಶಾಕಿಂಗ್ ರಿಸಲ್ಟ್!
Related Stories
Recommended image1
ಹಿಟ್ಟು, ಹಂಚು ಎಲ್ಲಾ ಸರಿಯಿದ್ರೂ ದೋಸೆ ಅಂಟಿಕೊಳ್ಳುತ್ತಿದೆಯೇ? ಬಾಣಸಿಗರ ಈ ಟ್ರಿಕ್ಸ್ ಫಾಲೋ ಮಾಡಿ
Recommended image2
ಎಣ್ಣೆ, ತುಪ್ಪ ಅಲ್ವೇ ಅಲ್ಲ.. ಚಪಾತಿ ಮಾಡುವಾಗ 2 ಚಮಚ ಈ ಹಿಟ್ಟನ್ನು ಬೆರೆಸಿ.. ಹತ್ತಿಯಂತೆ ಮೃದುವಾಗಿರುತ್ತವೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved