45ನೇ ವಯಸ್ಸಿಗೆ ಅಮ್ಮನಾದ ಶಿವಣ್ಣನ ನಾಯಕಿ ಪದ್ಮಪ್ರಿಯಾ: ನಟಿಯ ಕುತೂಹಲದ ಸ್ಟೋರಿ ಇಲ್ಲಿದೆ
ಶಿವರಾಜ್ಕುಮಾರ್ ಅಭಿನಯದ 'ತಮಸ್ಸು' ಸಿನಿಮಾ ಖ್ಯಾತಿಯ ನಟಿ ಪದ್ಮಪ್ರಿಯಾ ಜಾನಕಿರಾಮನ್ ಅವರು 45ನೇ ವಯಸ್ಸಿನಲ್ಲಿ ತಾಯಿಯಾಗಿದ್ದಾರೆ. ಮಗು ಜನಿಸಿ ಒಂದು ವರ್ಷದ ಬಳಿಕ, ಮಗುವಿನ ಪುಟ್ಟ ಕೈಗಳ ಫೋಟೋ ಹಂಚಿಕೊಳ್ಳುವ ಮೂಲಕ ಈ ಸಿಹಿ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಶಿವರಾಜ್ಕುಮಾರ್ ನಾಯಕಿ
2010ರಲ್ಲಿ ಬಿಡುಗಡೆಯಾದ ನಟ ಶಿವರಾಜ್ಕುಮಾರ್, ಹರ್ಷಿಕಾ ಪೂಣಚ್ಚ ಅಭಿನಯದ ತಮಸ್ಸು ಸಿನಿಮಾದಲ್ಲಿ ನಟಿಸಿ ಎಲ್ಲರ ಮನಸ್ಸನ್ನು ಗೆದ್ದಿದ್ದ ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿಯೂ ಛಾಪು ಮೂಡಿಸಿರೋ ಬಹುಭಾಷಾ ನಟಿ ಪದ್ಮಪ್ರಿಯಾ ಜಾನಕಿರಾಮನ್ (Padma Priya Janakiraman) ಇದೀಗ 45ನೇ ವಯಸ್ಸಿನಲ್ಲಿ ಅಮ್ಮನಾಗಿರುವ ಖುಷಿಯನ್ನು ಹಂಚಿಕೊಂಡಿದ್ದಾರೆ. ತಮ್ಮ ಅತ್ಯುತ್ತಮ ಅಭಿನಯಕ್ಕಾಗಿ ಹಲವು ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿ-ಪುರಸ್ಕಾರಗಳನ್ನ ಪಡೆದುಕೊಂಡಿರೋ ನಟಿ ಈಗ ಅಮ್ಮ ಆಗಿದ್ದಾರೆ.
ಗುಟ್ಟಾಗಿಟ್ಟಿದ್ದ ನಟಿ
ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಆ್ಯಕ್ಟೀವ್ ಆಗಿದ್ದರೂ ಗರ್ಭಿಣಿಯಾಗಿದ್ದನ್ನು ಕಾಣದಂತೆ ರೀಲ್ಸ್ ಮಾಡುತ್ತಿದ್ದ ನಟಿ, ಎಲ್ಲರಿಗೂ ಈಗ ಗುಡ್ನ್ಯೂಸ್ ನೀಡಿ ಶಾಕ್ ನೀಡಿದ್ದಾರೆ. ಕಳೆದ ವರ್ಷವೇ ಮಗುವಾಗಿದ್ದು, ಇದೀಗ ಒಂದು ವರ್ಷದ ಬಳಿಕ ಅದನ್ನು ರಿವೀಲ್ ಮಾಡಿದ್ದಾರೆ.
ಮಗುವಿನ ಪುಟ್ಟ ಕೈಗಳ ಶೇರ್
ಮಗುವಿನ ಪುಟ್ಟ ಕೈಗಳ ಫೋಟೋವನ್ನ ಶೇರ್ ಮಾಡಿಕೊಳ್ಳುವ ಮೂಲಕ ತಾವು ತಾಯಿಯಾಗಿರುವ ವಿಚಾರವನ್ನ ರಿವೀಲ್ ಮಾಡಿದ್ದಾರೆ. ʻಜೀವನದ 365 ದಿನಗಳುʼ ಎಂದು ಕ್ಯಾಪ್ಷನ್ ಕೊಟ್ಟು ಅಮ್ಮನಾದ ವಿಷಯವನ್ನು ಶೇರ್ ಮಾಡಿಕೊಂಡಿದ್ದಾರೆ.
ಯಾರು ಇವರ ಪತಿ?
ಅಂದಹಾಗೆ ಪದ್ಮಪ್ರಿಯಾ ಅವರು, 2014ರಲ್ಲಿ ಜಾಸ್ಮಿನ್ ಶಾ ಅವರನ್ನು ಮದುವೆಯಾಗಿದ್ದರು. ಇವರು AAP ಪಕ್ಷದ ನಾಯಕ. ಮದುವೆಯಾದ ಬಳಿಕ ಕೆಲವು ಸಿನಿಮಾದಲ್ಲಿ ನಟಿಸಿ ಆಮೇಲೆ ಕೊಂಚ ದೂರ ಸರಿದಿದ್ದರು. ಬಳಿಕ ಅಮ್ಮನಾಗಿದ್ದರೂ ಅದನ್ನು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಈಗ ದಿಢೀರ್ ಎಂದು ಅಭಿಮಾನಿಗಳಿಗೆ ಅಚ್ಚರಿ ಕೊಟ್ಟಿದ್ದಾರೆ.
ಬೇರೆ ನಟಿಯರಿಗಿಂತ ಭಿನ್ನ
ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಮ್ಮ ಗರ್ಭಧಾರಣೆಯ ಫೋಟೋಶೂಟ್ ಅಥವಾ ಸೀಮಂತ ಶಾಸ್ತ್ರದ ಫೋಟೋಗಳನ್ನ ಶೇರ್ ಮಾಡಿಕೊಳ್ಳುತ್ತಾರೆ. ಆದರೆ, ಪದ್ಮಪ್ರಿಯಾ ಹಾಗೇನೂ ಮಾಡದೇ, ಗರ್ಭಿಣಿಯಾಗಿದ್ದರೂ, ಬಳಿಕ ಮಗುವಾಗಿದ್ದರೂ ಎಲ್ಲವೂ ಸೀಕ್ರೇಟ್ ಆಗಿಯೇ ಇಟ್ಟಿದ್ದರು. ಈಗ ಮಗುವಿನ ಮುಖ ಅಥವಾ ಲಿಂಗವನ್ನ ಅವರು ಇನ್ನೂ ಬಹಿರಂಗಪಡಿಸಿಲ್ಲ. ಕೇವಲ ಮಗುವಿನ ಕೈಗಳ ಫೋಟೋ ಮಾತ್ರ ಶೇರ್ ಮಾಡಿಕೊಂಡಿದ್ದಾರೆ.
ಕೇರಳ ಮೂಲದ ಪದ್ಮಪ್ರಿಯಾ
ಕೇರಳ ಮೂಲದ ಪದ್ಮಪ್ರಿಯಾ, ಟಾಲಿವುಡ್ ಸಿನಿಮಾನಲ್ಲಿ 2004ರಲ್ಲಿ ನಿರ್ಮಾಣವಾಗಿದ್ದ ‘ಸೀನು ವಾಸಂತಿ ಲಕ್ಷ್ಮಿ’ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. ಮಲಯಾಳಂ ಸಿನಿಮಾಗೆ ಅದೇ ವರ್ಷ ಮುಮ್ಮಟ್ಟಿ ಅವರ ‘ಕಾಳ್ಚ’ ಮೂಲಕ ಗಮನ ಸೆಳೆದಿದ್ದರು. ಕನ್ನಡದಲ್ಲಿ ತಮಸ್ಸು, 5 ಒಂದ್ಲ ಐದು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಈ ಸಿನಿಮಾಗಳು ಅಷ್ಟು ಹಿಟ್ ಆಗಿರಲಿಲ್ಲ. ಆದರೆ ಮಲಯಾಳಂನಲ್ಲಿ ಸ್ಟಾರ್ ಡಮ್ ಪಡೆದುಕೊಂಡಿದ್ದು, ಇವರು ಕೊನೆಯದಾಗಿ 2022ರಲ್ಲಿ ‘ವಂಡರ್ ಉಮೆನ್’ ಸಿನಿಮಾದಲ್ಲಿ ನಟಿಸಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

