ನೀಟ್ ಪರೀಕ್ಷೆ ಅವ್ಯವಹಾರದ ಕುರಿತ ಪ್ರತಿಭಟನೆಯ ಬಗ್ಗೆ ನಟಿ ಶ್ವೇತಾ ತಿವಾರಿ ಪ್ರಶ್ನೆ ಎತ್ತಿದ್ದಾರೆ. ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇದ್ದರೆ, ಆಮ್ ಆದ್ಮಿ ಪಕ್ಷದ ಆಡಳಿತವಿರುವ ಪಂಜಾಬ್‌ನಲ್ಲಿ ನಡೆದ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಯಾಕೆ ಪ್ರತಿಭಟಿಸುತ್ತಿಲ್ಲ ಎಂದು ಸವಾಲು ಹಾಕಿದ್ದಾರೆ. ಈ ಮೂಲಕ ಪ್ರತಿಭಟನೆಯ ಹಿಂದಿನ ಉದ್ದೇಶವನ್ನು ಅವರು ಪ್ರಶ್ನಿಸಿದ್ದಾರೆ.
ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅವ್ಯವಹಾರ ಕುರಿತು ಕಾಕ್ರೋಚ್ ಜನತಾ ಪಕ್ಷ ನಡೆಸಿದ್ದ ಪ್ರತಿಭಟನೆಯ ವೇಳೆ ಪಾಕಿಸ್ತಾನಿಗಳು, ಖಲಿಸ್ತಾನಿಗಳು ಎಲ್ಲರೂ ಭಾಗಿಯಾಗಿದ್ದು, ಗುಟ್ಟಾಗಿ ಉಳಿದಿಲ್ಲ. ವಿದ್ಯಾರ್ಥಿಗಳಿಗೆ ಅನ್ಯಾಯ ಆಗಿದೆ ಎನ್ನುವುದನ್ನೇ ನೆಪಮಾಡಿಕೊಂಡು ಪ್ರತಿಭಟನೆಯ ವೇಳೆ ಕಲ್ಲುಗಳನ್ನು ತಂದಿರುವುದು ಬಹುದೊಡ್ಡ ಮಟ್ಟಿನ ಚರ್ಚೆಯಾಗುತ್ತಿದೆ. ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ ಬಳಿಕವೂ ಕಲ್ಲು ತೂರಾಟ ನಡೆದಿದೆ ಎಂದು ಈ ಪ್ರತಿಭಟನೆ ನಡೆದಿರುವುದು ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಲೋ ಅಥ್ವಾ ಇದರ ಹಿಂದೆ ಅಜೆಂಡಾ ಬೇರೆಯದ್ದೇ ಇದ್ಯೋ ಎನ್ನುವ ಬಗ್ಗೆ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ.
ಅದಕ್ಕೇ ಇದೀಗ ಪ್ರತಿಭಟನಾಕಾರರಿಗೆ ಸವಾಲು ಹಾಕಿದ್ದಾರೆ ಬಾಲಿವುಡ್ ನಟಿ ಶ್ವೇತಾ ತಿವಾರಿ (Shweta Tiwari). ಕಿರುತೆರೆ ಮೂಲಕ ಎಂಟ್ರಿ ಕೊಟ್ಟು ಕಿರುತೆರೆಯಲ್ಲಿ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡು, ಇದೀಗ ಬಾಲಿವುಡ್ ನಲ್ಲೂ ಶೈನ್ ಆಗುತ್ತಿರುವ ನಟಿ ಶ್ವೇತಾ ತಿವಾರಿ ತಮ್ಮ ಸೌಂದರ್ಯದಿಂದಲೇ ಗುರುತಿಸಿಕೊಂಡವರು. ವರ್ಷದಿಂದ ವರ್ಷಕ್ಕೆ ಇವರ ವಯಸ್ಸು ಚಿಕ್ಕದಾಗುತ್ತಾ ಹೋಗುವ ಬಗ್ಗೆ ಸಾಕಷ್ಟು ಚರ್ಚೆ ನಡೆದಿರುವ ನಡುವೆಯೇ, ಇದೀಗ ವಿದ್ಯಾರ್ಥಿಗಳನ್ನು ಮುಂದು ಮಾಡಿಕೊಂಡು ನಡೆದಿರುವ ಪ್ರತಿಭಟನೆಯ ಸತ್ಯಾಸತ್ಯತೆಯನ್ನು ಪರೀಕ್ಷೆ ಮಾಡುವ ಹೇಳಿಕೆಹೊಂದನ್ನು ನೀಡಿದ್ದಾರೆ.
ಪಂಜಾಬ್ನಲ್ಲೂ ಪ್ರಶ್ನೆ ಪತ್ರಿಕೆ ಸೋರಿಕೆ
ಇದಕ್ಕೆ ಕಾರಣ, ಪಂಜಾಬ್‌ನಲ್ಲಿ ನಡೆದ ಪ್ರಶ್ನೆ ಪತ್ರಿಕೆ ಸೋರಿಕೆ. ಈ ಪ್ರಕರಣದ ಬಗ್ಗೆ ಆಡಳಿತಾರೂಢ ಆಮ್ ಆದ್ಮಿ ಪಕ್ಷವನ್ನು ಬಿಜೆಪಿ ಇದಾಗಲೇ ಪ್ರಶ್ನಿಸುತ್ತಿದೆ. ಪಂಜಾಬ್ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಅವರ ರಾಜೀನಾಮೆಗೆ ಒತ್ತಾಯಿಸಲು ಪ್ರಾರಂಭಿಸಿದೆ. ಆದಾಗ್ಯೂ, ಮುಖ್ಯಮಂತ್ರಿ ಭಗವಂತ್ ಮಾನ್ ತಮ್ಮ ಅಧಿಕಾರಾವಧಿಯಲ್ಲಿ ಯಾವುದೇ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ನಿರಾಕರಿಸಿದ್ದಾರೆ. ಇದರ ನಡುವೆಯೇ ನಟಿ ಶ್ವೇತಾ ತಿವಾರಿ ಇದೇ ಸವಾಲನ್ನು ಎಸೆದಿದ್ದಾರೆ. ವಿದ್ಯಾರ್ಥಿಗಳ ಮೇಲೆ ಪ್ರೀತಿ ಇರುವುದೇ ಹೌದಾದರೆ ಪಂಜಾಬ್ನಲ್ಲಿಯೂ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಹಾಗಿದ್ದರೆ ಅಲ್ಲಿಯ ಶಿಕ್ಷಣ ಸಚಿವರ ರಾಜೀನಾಮೆ ಯಾವಾಗ ಕೇಳ್ತೀರಿ, ಪ್ರತಿಭಟನೆ ಮಾಡ್ತೀರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
AAPನ ಅಭಿಜೀತ್ ಉತ್ತರಿಸ್ತಾರಾ?
ಅಷ್ಟಕ್ಕೂ ಕಾಕ್ರೋಚ್ ಪಕ್ಷದ ನಾಯಕ ಅಭಿಜೀತ್ ದೀಪ್ಕೆ ಆ್ಯಪ್ ಪಕ್ಷವನ್ನು ಗುರುತಿಸಿಕೊಂಡವರು. ಪಂಜಾಬ್ನಲ್ಲಿಯೂ ಅದೇ ಪಕ್ಷದ ಆಡಳಿತ ಇರುವ ಕಾರಣ, ಬಿಜೆಪಿ ಬೆಂಬಲಿಗರು ಚಾಲೆಂಜ್ ಹಾಕಿದ್ದು, ನಟಿ ಕೂಡ ಇದೇ ಸವಾಲು ಎಸೆದಿದ್ದಾರೆ. ಇದಕ್ಕೆ ಪ್ರತಿಭಟನಾಕಾರರು ಏನು ಮಾಡುತ್ತಾರೆ ಎಂದು ಕಾದು ನೋಡಬೇಕಿದೆ. ಪಿಎಸ್‌ಇಬಿ 12 ನೇ ತರಗತಿಯ ಇಂಗ್ಲಿಷ್ ಮಂಡಳಿ ಪರೀಕ್ಷೆ, ಪಂಜಾಬ್ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಪಿಎಸ್‌ಟಿಇಟಿ), ಮತ್ತು ಕೃಷಿ ಅಭಿವೃದ್ಧಿ ಅಧಿಕಾರಿ (ಎಡಿಒ) ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ, ಜೊತೆಗೆ ಪಂಜಾಬ್ ಅಧೀನ ಸೇವೆಗಳ ಆಯ್ಕೆ ಮಂಡಳಿ (ಪಿಎಸ್‌ಎಸ್‌ಎಸ್‌ಬಿ) ಗ್ರೂಪ್-ಬಿ ಮತ್ತು ಸಂಯೋಜಿತ ನೇಮಕಾತಿಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪ ಇದೆ.


