ಅಕ್ಕಿ ತೊಳೆದ ನೀರನ್ನು ಗಿಡಕ್ಕೆ ಹೀಗೆ ಹಾಕ್ತಿದ್ದೀರಾ? ಹಳದಿಯಾಗಿ ಬಾಡಿಹೋಗಬಹುದು ಎಚ್ಚರ!
Rice water gardening tips in Kannada: ಅಕ್ಕಿ ತೊಳೆದ ನೀರು ಗಿಡಗಳಿಗೆ ಒಳ್ಳೆಯದು ಎಂದು ನೀವು ಅದನ್ನು ನೇರವಾಗಿ ಗಿಡದ ಬುಡಕ್ಕೆ ಸುರಿಯುತ್ತಿದ್ದೀರಾ? ಹಾಗಾದರೆ ನಿಮ್ಮ ಗಿಡಗಳು ಹಚ್ಚಹಸಿರಾಗುವ ಬದಲು ಹಳದಿಯಾಗಿ ಬಾಡಿಹೋಗುವ ಅಪಾಯವೇ ಹೆಚ್ಚು!
ಹಳದಿಯಾಗಿ ಬಾಡಿಹೋಗುವ ಅಪಾಯವೇ ಹೆಚ್ಚು!
ಹಳದಿಯಾಗಿ ಬಾಡಿಹೋಗುವ ಅಪಾಯವೇ ಹೆಚ್ಚು!
ಅಕ್ಕಿ ತೊಳೆದ ನೀರು ಗಿಡಗಳಿಗೆ ಒಳ್ಳೆಯದು ಎಂದು ಹೆಚ್ಚಿನವರು ಅದನ್ನು ಹಾಗೆಯೇ ನೇರವಾಗಿ ಗಿಡದ ಬುಡಕ್ಕೆ ಸುರಿಯುತ್ತಾರೆ. ಆದರೆ, ಈ ರೀತಿ ಮಾಡುವುದರಿಂದ ಗಿಡಗಳು ಹಚ್ಚಹಸಿರಾಗುವ ಬದಲು ಹಳದಿಯಾಗಿ ಬಾಡಿಹೋಗುವ ಅಪಾಯವೇ ಹೆಚ್ಚು.
ನೇರವಾಗಿ ಹಾಕಿದರೆ ಗಿಡಗಳು ಒಣಗುವುದು ಏಕೆ?
ಹಸಿ ಅಕ್ಕಿ ನೀರಿನಲ್ಲಿರುವ ಕಚ್ಚಾ ಪಿಷ್ಟವನ್ನು (Starch) ಕರಗಿಸಲು ಮಣ್ಣಿನಲ್ಲಿರುವ ಸೂಕ್ಷ್ಮಾಣುಜೀವಿಗಳು ಗಿಡದ ಬೇರುಗಳಲ್ಲಿರುವ ಸಾರಜನಕವನ್ನೇ (Nitrogen) ಕದಿಯುತ್ತವೆ. ಇದರಿಂದ ಗಿಡಕ್ಕೆ ಆಹಾರ ಸಿಗದೆ ಕ್ರಮೇಣ ಬಾಡಿಹೋಗುತ್ತದೆ.
ಹಾಗಾದರೆ ಅಕ್ಕಿ ನೀರನ್ನು ಚೆಲ್ಲಬೇಕಾ?
ಹಾಗಾದರೆ ಅಕ್ಕಿ ನೀರನ್ನು ಚೆಲ್ಲಬೇಕಾ?
ಖಂಡಿತ ಬೇಡ. ಇದು ಸಸ್ಯಗಳ ಪಾಲಿನ ದ್ರವರೂಪದ ಚಿನ್ನ. ಅಕ್ಕಿ ತೊಳೆಯುವಾಗ 59% ವಿಟಮಿನ್ ಬಿ1 (ಥಯಾಮಿನ್) ನೀರಿನಲ್ಲಿ ಕರಗಿರುತ್ತದೆ. ಇದು ಬೇರುಗಳನ್ನು ಗಟ್ಟಿಗೊಳಿಸಲು ಮತ್ತು ಬಿಸಿಲಿನ ಒತ್ತಡ ತಾಳಿಕೊಳ್ಳಲು ಗಿಡಗಳಿಗೆ ಬೇಕೇ ಬೇಕು. ಜೊತೆಗೆ ಇದರಲ್ಲಿ ನೈಸರ್ಗಿಕ ಸಾರಜನಕ, ರಂಜಕ, ಪೊಟ್ಯಾಶಿಯಂ ಹಾಗೂ ಕ್ಯಾಲ್ಸಿಯಂ ಹೇರಳವಾಗಿದೆ.
ಹೀಗೆ 'ಹುದುಗಿಸಿ' (Fermentation Trick)
ಹೀಗೆ 'ಹುದುಗಿಸಿ' (Fermentation Trick)
ಅಕ್ಕಿ ನೀರನ್ನು ಒಂದು ಜಾರಿನಲ್ಲಿ ಹಾಕಿ, ಅದಕ್ಕೆ 1 ಚಮಚ ಬೆಲ್ಲ ಅಥವಾ ನಾಟಿ ಸಕ್ಕರೆ ಬೆರೆಸಿ.
2 ರಿಂದ 3 ದಿನ ಹಾಗೆಯೇ ಇಡಿ. ಲಘು ಹುಳಿ ವಾಸನೆ ಬಂದಾಗ ಇದರಲ್ಲಿ ‘ಲ್ಯಾಕ್ಟೋಬಾಸಿಲಸ್’ ಎಂಬ ಅದ್ಭುತ ಪ್ರೊಬಯಾಟಿಕ್ ಸೃಷ್ಟಿಯಾಗಿ, ಹುದುಗಿಸಿದ ಅಕ್ಕಿ ನೀರು ರೆಡಿಯಾಗುತ್ತದೆ. ಇದು ಗಿಡಗಳು ಸುಲಭವಾಗಿ ಪೋಷಕಾಂಶ ಹೀರಿಕೊಳ್ಳಲು ನೆರವಾಗುತ್ತದೆ.
ಬಳಸುವ ಮುನ್ನ ಈ ಅಳತೆ ನೆನಪಿರಲಿ!
ಬಳಸುವ ಮುನ್ನ ಈ ಅಳತೆ ನೆನಪಿರಲಿ!
ನೀರು ಬೆರೆಸಿ ತಿಳಿಗೊಳಿಸುವುದು (Dilution) ಕಡ್ಡಾಯ
ಸಮಪ್ರಮಾಣದ ನೀರು ಬೆರೆಸಿ ತಣ್ಣಗಾದ ಮೇಲೆ ಬಳಸಿ (1:1).
ಸಣ್ಣ ಸಸಿಗಳಿಗೆ: 1 ಭಾಗ ಹುದುಗಿಸಿದ ನೀರಿಗೆ 3 ಭಾಗ ಸಾಮಾನ್ಯ ನೀರು ಬೆರೆಸಿ ವಾರಕ್ಕೊಮ್ಮೆ ಹಾಕಿ.
ತರಕಾರಿ ಗಿಡಗಳಿಗೆ: 7 ರಿಂದ 10 ದಿನಗಳಿಗೊಮ್ಮೆ ಬೇರಿಗೆ ನೀಡಿ.
ಇನ್‌ಡೋರ್ ಗಿಡಗಳಿಗೆ: 15 ದಿನಕ್ಕೊಮ್ಮೆ ಸಾಕು (ಅತಿಯಾದರೆ ಬೇರು ಕೊಳೆಯಬಹುದು).
ಕಾಯಿ ಕೊಳೆಯುವ ರೋಗಕ್ಕೆ ಸುಣ್ಣ
ಕಾಯಿ ಕೊಳೆಯುವ ರೋಗಕ್ಕೆ ಸುಣ್ಣ
ತರಕಾರಿ ಗಿಡಗಳಲ್ಲಿ ಕಾಯಿಗಳು ತುದಿಯಲ್ಲಿ ಕಪ್ಪಾಗಿ ಕೊಳೆಯುತ್ತಿದ್ದರೆ, 1 ಮಗ್ ಹುದುಗಿಸಿದ ಗಂಜಿಗೆ 3 ಚಮಚ ತಿನ್ನುವ ಸುಣ್ಣವನ್ನು ಬೆರೆಸಿ, ತಿಳಿಗೊಳಿಸಿ ಬುಡಕ್ಕೆ ಹಾಕಿ. ಕ್ಯಾಲ್ಸಿಯಂ ಕೊರತೆ ತಕ್ಷಣ ನಿವಾರಣೆಯಾಗಿ ಗಿಡ ಸಮೃದ್ಧವಾಗಿ ಬೆಳೆಯುತ್ತದೆ.
ರಾಸಾಯನಿಕ ಗೊಬ್ಬರಕ್ಕೆ ಹೇಳಿ ಬೈ-ಬೈ
ರಾಸಾಯನಿಕ ಗೊಬ್ಬರಕ್ಕೆ ಹೇಳಿ ಬೈ-ಬೈ
ಹುದುಗಿಸಿದ ಅಕ್ಕಿ ನೀರನ್ನು ನಿಯಮಿತವಾಗಿ ಬಳಸಿದರೆ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಜತೆಗೆ ತೋಟಗಾರಿಕೆ ಮತ್ತು ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಶೇಕಡ 45 ರಿಂದ 94 ರಷ್ಟು ಕಡಿಮೆ ಮಾಡಬಹುದು ಎಂದು ಸಂಶೋಧನೆಗಳು ಸಾಬೀತುಪಡಿಸಿವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
