MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ನಿಮ್ಮ ಮನೆಯಲ್ಲಿರುವ ಹಳೆ ಪೇಪರ್‌ಗಳಿಂದ ಮನೆಯನ್ನು ಹೇಗೆಲ್ಲಾ ಅಲಂಕರಿಸಬಹುದು ಗೊತ್ತಾ?

ನಿಮ್ಮ ಮನೆಯಲ್ಲಿರುವ ಹಳೆ ಪೇಪರ್‌ಗಳಿಂದ ಮನೆಯನ್ನು ಹೇಗೆಲ್ಲಾ ಅಲಂಕರಿಸಬಹುದು ಗೊತ್ತಾ?

DIY newspaper crafts for home: ಮನೆಯಲ್ಲಿ ಹಳೆ ನ್ಯೂಸ್ ಪೇಪರ್‌ಗಳು ರಾಶಿ ಬಿದ್ದಿವೆಯಾ? ಅವುಗಳನ್ನು ಕಸಕ್ಕೆ ಹಾಕುವ ಬದಲು, ಹಲವು ರೀತಿಯಲ್ಲಿ ಮರುಬಳಕೆ ಮಾಡಬಹುದು. ಈ ಹಳೆಯ ಪೇಪರ್‌ಗಳಿಂದ ನಿಮ್ಮ ಮನೆಯನ್ನು ಹೇಗೆಲ್ಲಾ ಅಂದಗೊಳಿಸಬಹುದು ಅಂತ ಇಲ್ಲಿ ನೋಡೋಣ ಬನ್ನಿ…  

1 Min read
Author : Ashwini HR
Published : Jun 12 2026, 08:49 PM IST
Share this Photo Gallery
  • FB
  • TW
  • Linkdin
  • Whatsapp
14
ನ್ಯೂಸ್ ಪೇಪರ್ ಬಳಸುವ ವಿಧಾನ...
Image Credit : Freepic

ನ್ಯೂಸ್ ಪೇಪರ್ ಬಳಸುವ ವಿಧಾನ...

ಇವತ್ತಿನ ನ್ಯೂಸ್ ಪೇಪರ್ ನಾಳೆಗೆ ಕಸದ ಬುಟ್ಟಿ ಸೇರುತ್ತೆ ಅಂತ ಹೆಚ್ಚಿನವರು ಅಂದುಕೊಂಡಿರುತ್ತಾರೆ. ಹೆಚ್ಚೆಂದರೆ ಕಪಾಟಿನಲ್ಲಿ ಬಟ್ಟೆಗಳ ಕೆಳಗೆ ಹಾಸಲು ಬಳಸುತ್ತಾರೆ. ಆದರೆ ಇದೇ ಹಳೆ ಪೇಪರ್‌ಗಳಿಂದ ಮನೆಯನ್ನು ಹೊಸದರಂತೆ ಹೊಳೆಯುವಂತೆ ಮಾಡಬಹುದು. ಅಷ್ಟೇ ಅಲ್ಲ, ಆರೋಗ್ಯಕ್ಕೆ ಹಾನಿಕಾರಕವಾದ ಪ್ಲಾಸ್ಟಿಕ್‌ಗೆ ಬದಲಾಗಿಯೂ ಇದನ್ನು ಬಳಸಬಹುದು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಮನೆ ಸ್ವಚ್ಛಗೊಳಿಸಲು...
Image Credit : Asianet News

ಮನೆ ಸ್ವಚ್ಛಗೊಳಿಸಲು...

ಮನೆಯ ಕಿಟಕಿ, ಕನ್ನಡಿಯನ್ನು ಸ್ವಚ್ಛಗೊಳಿಸಲು ದುಬಾರಿ ಲಿಕ್ವಿಡ್‌ಗಳ ಬದಲು, ಪೇಪರ್‌ಗೆ ಸ್ವಲ್ಪ ವಿನೆಗರ್ ಹಾಕಿ ಒರೆಸಿದರೆ ಸಾಕು, ಹೊಸದರಂತೆ ಹೊಳೆಯುತ್ತವೆ. ಕಪಾಟು, ಅಡುಗೆಮನೆ ಕ್ಯಾಬಿನ್‌, ಪುಸ್ತಕದ ಶೆಲ್ಫ್‌ಗಳ ಕೆಳಗೆ ಪೇಪರ್ ಹಾಸುವುದರಿಂದ ಧೂಳು ಹಿಡಿಯುವುದಿಲ್ಲ. ಮನೆ ಬದಲಾಯಿಸುವಾಗ ಗಾಜಿನ ವಸ್ತುಗಳು ಒಡೆಯದಂತೆ ಅವುಗಳನ್ನು ಪೇಪರ್‌ನಲ್ಲಿ ಸುತ್ತಿ ಪ್ಯಾಕ್ ಮಾಡಿದರೆ ಸುರಕ್ಷಿತವಾಗಿರುತ್ತವೆ.

Related Articles

Related image1
ಜಾಸ್ತಿ ಜಾಗಬೇಕಿಲ್ಲ, ಶ್ರಮ ಪಡಬೇಕಿಲ್ಲ.. 1 ಪಾಟ್ ಇದ್ರೆ, ಬಿಸಿಲಿದ್ರೆ ಸಾಕು ಸೊಂಪಾಗಿ ಬೆಳೆಯುತ್ತೆ ನುಗ್ಗೆಕಾಯಿ ಗಿಡ
Related image2
ಭಾರತೀಯರು ಇಂಟರ್‌ನೆಟ್‌ನಲ್ಲಿ ಅತಿ ಹೆಚ್ಚು ಹುಡುಕೋದು ಏನನ್ನ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್‌ ಲಿಸ್ಟ್‌
34
ಹೀಗೂ ಬಳಸಬಹುದು...
Image Credit : Freepik

ಹೀಗೂ ಬಳಸಬಹುದು...

ಮನೆಗೆ ಪೇಂಟ್ ಮಾಡುವಾಗ ನೆಲಕ್ಕೆ ಬಣ್ಣ ಬೀಳದಂತೆ ತಡೆಯಲು ಪೇಪರ್‌ಗಳನ್ನು ಹಾಸಬಹುದು. ಇದರಿಂದ ಕ್ಲೀನಿಂಗ್ ಕೆಲಸ ಸುಲಭವಾಗುತ್ತದೆ. ಮಾವು, ಸಪೋಟಾದಂತಹ ಹಣ್ಣುಗಳನ್ನು ರಾಸಾಯನಿಕಗಳಿಲ್ಲದೆ ನೈಸರ್ಗಿಕವಾಗಿ ಹಣ್ಣಾಗಿಸಲು ಪೇಪರ್‌ನಲ್ಲಿ ಸುತ್ತಿಟ್ಟರೆ ಸಾಕು. ಶೂಗಳಿಂದ ಬರುವ ಕೆಟ್ಟ ವಾಸನೆಯನ್ನು ತಡೆಯಲು, ಬಳಸದಿದ್ದಾಗ ಅವುಗಳೊಳಗೆ ಪೇಪರ್ ತುಂಡುಗಳನ್ನು ಇಡುವುದರಿಂದ ತೇವಾಂಶವನ್ನು ಹೀರಿಕೊಂಡು ವಾಸನೆ ಬರುವುದಿಲ್ಲ.
44
ಚಿಕ್ಕ ಮಕ್ಕಳಿದ್ದರೆ...
Image Credit : Pinterest

ಚಿಕ್ಕ ಮಕ್ಕಳಿದ್ದರೆ...

ಮನೆಯಲ್ಲಿ ಮಕ್ಕಳಿದ್ದರೆ, ಅವರಲ್ಲಿನ ಸೃಜನಶೀಲತೆ ಹೆಚ್ಚಿಸಲು ಹಳೆ ಪೇಪರ್‌ಗಳನ್ನು ನೀಡಬಹುದು. ಇದರಿಂದ ಅವರು ಕಾಗದದ ಆಟಿಕೆಗಳು, ಅಲಂಕಾರಿಕ ವಸ್ತುಗಳನ್ನು ತಯಾರಿಸಲು ಕಲಿಯುತ್ತಾರೆ. ಪುಸ್ತಕಗಳಿಗೆ ಕವರ್ ಹಾಕಲು, ಫ್ರಿಡ್ಜ್‌ನಲ್ಲಿ ತರಕಾರಿಗಳನ್ನು ಇಡುವ ಡಬ್ಬದಲ್ಲಿ ಪೇಪರ್ ಹಾಸಿಟ್ಟರೆ ತೇವಾಂಶವನ್ನು ಹೀರಿಕೊಂಡು ಹೆಚ್ಚು ದಿನ ತಾಜಾವಾಗಿರುತ್ತವೆ. ಬೆಳ್ಳಿಯ ವಸ್ತುಗಳನ್ನು ಪೇಪರ್‌ನಲ್ಲಿ ಸುತ್ತಿಟ್ಟರೆ ಅವು ಕಪ್ಪಾಗದೆ ಹೊಸದರಂತೆ ಇರುತ್ತವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
ಮಹಿಳೆಯರು

Latest Videos
Recommended Stories
Recommended image1
Shocking News: ಕೈತುಂಬಾ ಸಂಬಳ ಬರುವ ಕಾರ್ಪೊರೇಟ್ ಕೆಲಸ ತ್ಯಜಿಸಿ ಯೋಗ ಶಿಕ್ಷಕಿಯಾದ ಬೆಂಗಳೂರಿನ ಯುವತಿ!
Recommended image2
ರಶ್ಮಿಕಾ ಮಂದಣ್ಣ ಸೀರೆ ಕಾಂಬಿನೇಷನ್‌ಗೆ ಮುಗಿಬಿದ್ದ ಮಹಿಳೆಯರು: 10 ಕೋಟಿ ಮೌಲ್ಯದ ಸೀರೆ ಸೇಲ್‌
Recommended image3
'ನಿನ್ನ ನೆನಪಾಗುತ್ತಿದೆ, ಬೇಗ ಬಾ'.. Gen Z ನಿದ್ದೆಗೆಡಿಸಿದ 'ಮಿಸ್ಸಿಂಗ್' ಮೆಸೇಜ್! ಏನಿದು ಶಾರ್ವರಿ-ವೇದಂಗ್ ರೈನಾ ಆಟ?
Related Stories
Recommended image1
ಜಾಸ್ತಿ ಜಾಗಬೇಕಿಲ್ಲ, ಶ್ರಮ ಪಡಬೇಕಿಲ್ಲ.. 1 ಪಾಟ್ ಇದ್ರೆ, ಬಿಸಿಲಿದ್ರೆ ಸಾಕು ಸೊಂಪಾಗಿ ಬೆಳೆಯುತ್ತೆ ನುಗ್ಗೆಕಾಯಿ ಗಿಡ
Recommended image2
ಭಾರತೀಯರು ಇಂಟರ್‌ನೆಟ್‌ನಲ್ಲಿ ಅತಿ ಹೆಚ್ಚು ಹುಡುಕೋದು ಏನನ್ನ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್‌ ಲಿಸ್ಟ್‌
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved