MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Aamir Khan Fitness: 61 ವರ್ಷವಾಗಿದ್ದರೂ ಆಮಿರ್‌ ಖಾನ್‌ ಅಷ್ಟು ಫಿಟ್‌ ಆಗಿರೋದು ಹೇಗೆ? ಇಲ್ಲಿದೆ ಸೀಕ್ರೆಟ್‌

Aamir Khan Fitness: 61 ವರ್ಷವಾಗಿದ್ದರೂ ಆಮಿರ್‌ ಖಾನ್‌ ಅಷ್ಟು ಫಿಟ್‌ ಆಗಿರೋದು ಹೇಗೆ? ಇಲ್ಲಿದೆ ಸೀಕ್ರೆಟ್‌

'ಕೌನ್ ಬನೇಗಾ ಕರೋಡ್‌ಪತಿ 18' ಶೋನಲ್ಲಿ ಆಮೀರ್ ಖಾನ್ ತಮ್ಮ ಫಿಟ್ನೆಸ್ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ದೇಸಿ ತುಪ್ಪ ಸೇವಿಸುವುದೇ ತಮ್ಮ ಆರೋಗ್ಯದ ಗುಟ್ಟು ಎಂದು ಅವರು ಹೇಳಿದ್ದಾರೆ.

2 Min read
Author : Santosh Naik
Published : Aug 17 2026, 07:55 PM IST
Share this Photo Gallery
  • FB
  • TW
  • Linkdin
  • Whatsapp
16
ಫಿಟ್‌ನೆಟ್‌ ಗುಟ್ಟು ಬಹಿರಂಗ ಮಾಡಿದ ಆಮೀರ್‌ ಖಾನ್‌
Image Credit : Instagram@sonytvusa

ಫಿಟ್‌ನೆಟ್‌ ಗುಟ್ಟು ಬಹಿರಂಗ ಮಾಡಿದ ಆಮೀರ್‌ ಖಾನ್‌

61 ವರ್ಷ ವಯಸ್ಸಾದರೂ ಇಂದಿಗೂ ಅತ್ಯಂತ ಫಿಟ್ ಹಾಗೂ ತರುಣರಂತೆ ಕಂಗೊಳಿಸುವ ಬಾಲಿವುಡ್‌ನ 'ಮಿಸ್ಟರ್‌ ಪರ್ಫೆಕ್ಷನಿಸ್ಟ್' ಆಮಿರ್ ಖಾನ್ ಅವರ ಆರೋಗ್ಯದ ರಹಸ್ಯವೆಂದರೆ ಅವರ ಶಿಸ್ತಿನ ಜೀವನಶೈಲಿ ಮತ್ತು ಸಮತೋಲಿತ ಆಹಾರ ಕ್ರಮ. ಇತ್ತೀಚೆಗೆ 'ಕೌನ್ ಬನೇಗಾ ಕರೋಡ್‌ಪತಿ 18' (KBC 18) ಶೋನಲ್ಲಿ ಭಾಗವಹಿಸಿದ್ದ ಆಮಿರ್ ಖಾನ್, ತಮ್ಮ ದಿನನಿತ್ಯದ ಫಿಟ್ನೆಸ್ ರಹಸ್ಯವನ್ನು ಬಿಚ್ಚಿಟ್ಟಿದ್ದು, ಅದನ್ನು ಕೇಳಿ ಕಾರ್ಯಕ್ರಮದ ನಿರೂಪಕ ಅಮಿತಾಭ್ ಬಚ್ಚನ್ ಅವರೇ ಆಶ್ಚರ್ಯಚಕಿತರಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ಶುದ್ಧ ದೇಸಿ ತುಪ್ಪ ಸೇವನೆ
Image Credit : X

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ಶುದ್ಧ ದೇಸಿ ತುಪ್ಪ ಸೇವನೆ

'ಕೌನ್ ಬನೇಗಾ ಕರೋಡ್‌ಪತಿ 18' ಶೋನ ಹಾಟ್ ಸೀಟ್‌ನಲ್ಲಿ ಕುಳಿತಿದ್ದ ಆಮಿರ್ ಖಾನ್, ತಮ್ಮ ದಿನದ ಶುರುವಾತಿನ ರಹಸ್ಯವನ್ನು ಹಂಚಿಕೊಂಡಿದ್ದಾರೆ. "ನಾನು ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಮೊದಲ ಕೆಲಸವಾಗಿ ಒಂದು ದೊಡ್ಡ ಚಮಚ ಶುದ್ಧ ದೇಸಿ ತುಪ್ಪವನ್ನು ಸೇವಿಸುತ್ತೇನೆ" ಎಂದು ಆಮಿರ್ ಹೇಳಿದ್ದಾರೆ. ಇದನ್ನು ಕೇಳಿ ಬಿಗ್ ಬಿ ಅಮಿತಾಭ್ ಬಚ್ಚನ್ ತೀವ್ರ ಆಶ್ಚರ್ಯ ವ್ಯಕ್ತಪಡಿಸಿದಾಗ, "ಹೌದು, ಒಂದು ಚಮಚ ಪ್ಯೂರ್ ತುಪ್ಪದ ರುಚಿ ತುಂಬಾ ಚೆನ್ನಾಗಿರುತ್ತದೆ ಮತ್ತು ಆರೋಗ್ಯಕ್ಕೂ ಒಳ್ಳೆಯದು" ಎಂದು ಆಮಿರ್ ಸಮರ್ಥಿಸಿಕೊಂಡಿದ್ದಾರೆ.

Related Articles

Related image1
ʼನನ್ನ ಮಗನ ಸಿನಿಮಾ ಸೋತಿದ್ದೇ ಒಳ್ಳೇದಾಯ್ತುʼ; ಮೊದಲ ಪತ್ನಿ ಪುತ್ರನ ಬಗ್ಗೆ ಆಮಿರ್‌ ಖಾನ್‌ ಇಂಥಾ ಮಾತಾಡಿದ್ರಾ?
Related image2
ಆಮಿರ್‌ ಖಾನ್‌ ಪ್ರೇಯಸಿ ಬೆಂಗಳೂರಿನ Gauri Spratt ; ಐತಿಹಾಸಿಕ ಕುಟುಂಬದ ಹಿನ್ನಲೆ ಹೊಂದಿರೋ ಇವರಾರು?
36
ತುಪ್ಪದ ಆರೋಗ್ಯ ಗುಣಗಳು ಹಾಗೂ ಬಿಗ್ ಬಿ ಪ್ರತಿಕ್ರಿಯೆ
Image Credit : instagram

ತುಪ್ಪದ ಆರೋಗ್ಯ ಗುಣಗಳು ಹಾಗೂ ಬಿಗ್ ಬಿ ಪ್ರತಿಕ್ರಿಯೆ

ಆಮಿರ್ ಖಾನ್ ಅವರ ಮಾತುಗಳನ್ನು ಕೇಳಿದ ಅಮಿತಾಭ್ ಬಚ್ಚನ್, ದೇಸಿ ತುಪ್ಪ ಸೇವನೆಯಿಂದ ಮೆದುಳು ಯಾವಾಗಲೂ ತಾಜಾ ಮತ್ತು ಸಕ್ರಿಯವಾಗಿರುತ್ತದೆ, ನಾನು ಕೂಡ ಇಂದಿನಿಂದಲೇ ಇದನ್ನು ಆರಂಭಿಸುತ್ತೇನೆ ಎಂದು ತಮಾಷೆಯಾಗಿ ಹೇಳಿದ್ದಾರೆ. ಭಾರತೀಯ ಆಹಾರ ಸಂಸ್ಕೃತಿಯಲ್ಲಿ ಸಾಂಪ್ರದಾಯಿಕವಾಗಿ ಬಳಕೆಯಾಗುವ ದೇಸಿ ತುಪ್ಪದಲ್ಲಿ ವಿಟಮಿನ್ ಎ, ಡಿ ಮತ್ತು ಇ ಸಮೃದ್ಧವಾಗಿದ್ದು, ಇವು ಕಣ್ಣಿನ ಆರೋಗ್ಯ ಹಾಗೂ ಮೂಳೆಗಳ ಗಟ್ಟಿಯಾದ ಬೆಳವಣಿಗೆಗೆ ಅತ್ಯಂತ ಉಪಯುಕ್ತವಾಗಿವೆ.

46
ಕೆಬಿಸಿ 18 ರಂಗೇರಿಸಿದ ತಾರಾಗಣ
Image Credit : Asianet News

ಕೆಬಿಸಿ 18 ರಂಗೇರಿಸಿದ ತಾರಾಗಣ

ಕೆಬಿಸಿ ಸೀಸನ್ 18ರ ಈ ವಿಶೇಷ ಸಂಚಿಕೆಯಲ್ಲಿ ಆಮಿರ್ ಖಾನ್ ಅವರೊಂದಿಗೆ ಬಾಲಿವುಡ್ ನಟ ಸನ್ನಿ ಡಿಯೋಲ್ ಹಾಗೂ ನಟಿ ಪ್ರೀತಿ ಜಿಂಟಾ ಕೂಡ ಭಾಗವಹಿಸಿ ಕಾರ್ಯಕ್ರಮಕ್ಕೆ ಕಳೆ ಕಟ್ಟಿದ್ದರು. ಶೋನ ಇತ್ತೀಚಿನ ಪ್ರೋಮೊದಲ್ಲಿ ಈ ರಸವತ್ತಾದ ಸಂಭಾಷಣೆಯ ತುಣುಕುಗಳು ವೈರಲ್ ಆಗಿವೆ.

56
'ಬಂಟ್ವಾರಾ 1947' ಚಿತ್ರದ ನಿರ್ಮಾಣದಲ್ಲಿ ಆಮಿರ್
Image Credit : instagram

'ಬಂಟ್ವಾರಾ 1947' ಚಿತ್ರದ ನಿರ್ಮಾಣದಲ್ಲಿ ಆಮಿರ್

ಆಮಿರ್ ಖಾನ್ ಪ್ರಸ್ತುತ ತಮ್ಮ ನಿರ್ಮಾಣದ 'ಬಂಟ್ವಾರಾ 1947' (Batwara 1947) ಸಿನಿಮಾದ ಯಶಸ್ಸಿನ ಅಲೆಯಲ್ಲಿದ್ದಾರೆ. 2026ರ ಆಗಸ್ಟ್ 14 ರಂದು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿರುವ ಈ ಚಿತ್ರವನ್ನು ಆಮಿರ್ ಖಾನ್ ಸ್ವತಃ ನಿರ್ಮಿಸಿದ್ದು, ಸನ್ನಿ ಡಿಯೋಲ್ ಮತ್ತು ಪ್ರೀತಿ ಜಿಂಟಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

66
ಗೌರಿ ಜೊತೆ ಆಮಿರ್ ಖಾನ್ ಮೂರನೇ ವಿವಾಹ
Image Credit : Instagram

ಗೌರಿ ಜೊತೆ ಆಮಿರ್ ಖಾನ್ ಮೂರನೇ ವಿವಾಹ

ಆಮಿರ್ ಖಾನ್ ತಮ್ಮ ವೈಯಕ್ತಿಕ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಟ್ಟಿದ್ದಾರೆ. ದೀರ್ಘಕಾಲದ ಗೆಳತಿಯಾಗಿದ್ದ ಗೌರಿ ಸ್ಪ್ರಾಟ್‌(Gauri Spratt) ಅವರೊಂದಿಗೆ 2026ರ ಜುಲೈ 5 ರಂದು ಆಮಿರ್ ನೋಂದಾಯಿತ ವಿವಾಹ (Registered Marriage) ಮಾಡಿಕೊಂಡಿದ್ದಾರೆ. ಇದು ಆಮಿರ್ ಖಾನ್ ಅವರ ಮೂರನೇ ಮದುವೆಯಾಗಿದ್ದು, 2025ರಲ್ಲೇ ಇಬ್ಬರೂ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಅಧಿಕೃತಗೊಳಿಸಿದ್ದರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಆಮಿರ್ ಖಾನ್
ಆಹಾರ
ಜೀವನಶೈಲಿ
ಆರೋಗ್ಯ ಸಮಸ್ಯೆಗಳು
ಆರೋಗ್ಯಕರ ಆಹಾರಗಳು

Latest Videos
Recommended Stories
Recommended image1
ನೆಂಟ್ರು ಬಂದಾಗ್ಲೇ ಅನ್ನ ಮುದ್ದೆಯಾಗುತ್ತಾ ! ಈ ಟಿಪ್ಸ್ ಫಾಲೋ ಮಾಡಿದ್ರೆ ಎಂದೂ ಟೆನ್ಷನ್ ಇಲ್ಲ
Recommended image2
ಚಿದಂಬರ ರಹಸ್ಯ ಅಂದ್ರೇನು? ಆ ಗರ್ಭಗುಡಿಯ ಪರದೆ ಹಿಂದಿರುವ ಅಸಲಿ ಸತ್ಯ ಇಲ್ಲಿದೆ ನೋಡಿ!
Recommended image3
50 ಅಡಿ ಉದ್ದ, 1000 ಕೆಜಿ ತೂಕ : ವಿಶ್ವದ ಅತಿ ದೊಡ್ಡ ಹಾವು ಎಲ್ಲಿ ವಾಸವಾಗಿತ್ತು ಗೊತ್ತಾ?
Related Stories
Recommended image1
ʼನನ್ನ ಮಗನ ಸಿನಿಮಾ ಸೋತಿದ್ದೇ ಒಳ್ಳೇದಾಯ್ತುʼ; ಮೊದಲ ಪತ್ನಿ ಪುತ್ರನ ಬಗ್ಗೆ ಆಮಿರ್‌ ಖಾನ್‌ ಇಂಥಾ ಮಾತಾಡಿದ್ರಾ?
Recommended image2
ಆಮಿರ್‌ ಖಾನ್‌ ಪ್ರೇಯಸಿ ಬೆಂಗಳೂರಿನ Gauri Spratt ; ಐತಿಹಾಸಿಕ ಕುಟುಂಬದ ಹಿನ್ನಲೆ ಹೊಂದಿರೋ ಇವರಾರು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved