ಮಗನ ಸಿನಿಮಾ ಸೋಲು ಕಂಡರೆ ಬೇಸರ ಮಾಡಿಕೊಳ್ಳುವವರೂ ಇದ್ದಾರೆ. ಆದರೆ ಜುನೈದ್‌ ಖಾನ್‌ ಸೋಲು ನೋಡಿ ಮಿಸ್ಟರ್‌ ಪರ್ಫೆಕ್ಷನಿಸ್ಟ್‌ ಆಮಿರ್‌ ಖಾನ್‌ ಅವರು ಒಳ್ಳೆಯದಾಯ್ತು ಎಂದಿದ್ದಾರೆ. 

ಬಾಲಿವುಡ್ ಸೂಪರ್‌ಸ್ಟಾರ್ ಆಮಿರ್ ಖಾನ್ ಪುತ್ರ ಜುನೈದ್ ಖಾನ್ ಇತ್ತೀಚೆಗೆ ‘Loveyapa ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ನಟಿ ಶ್ರೀದೇವಿ ಎರಡನೇ ಪುತ್ರಿ ಖುಷಿ ಕಪೂರ್ ಕೂಡ ಕಾಣಿಸಿಕೊಂಡಿದ್ದರು. ಆದರೆ ಈ ಸಿನಿಮಾ ನಾಲ್ಕು ದಿನವೂ ಥಿಯೇಟರ್‌ನಲ್ಲಿ ಯಶಸ್ವಿ ಪ್ರದರ್ಶನ ಕಾಣದೆ ಮುಗ್ಗರಿಸಿ ಬಿದ್ದಿದೆ, ಎಲ್ಲದಕ್ಕಿಂತ ಜಾಸ್ತಿ ಖುಷಿ ಕಪೂರ್‌ ನಟನೆ ಭರ್ಜರಿ ಟ್ರೋಲ್‌ ಆಗಿತ್ತು. ಈ ಚಿತ್ರದ ಬಗ್ಗೆ ಆಮಿರ್‌ ಖಾನ್‌ ಮಾತನಾಡಿದ್ದಾರೆ. 

ಆಮಿರ್‌ ಖಾನ್‌ ಹೇಳಿದ್ದೇನು?
“ಸಿನಿಮಾ ಸೋತಿದ್ದು ಒಳ್ಳೆಯದಾಯಿತು. ಜುನೈದ್‌ ಚೆನ್ನಾಗಿ ನಟಿಸುತ್ತಿದ್ದಾನೆ. ಮುಂದೆಯೂ ಕಲಿಯುತ್ತಿರುತ್ತಾನೆ ಎಂದು ಭಾವಿಸ್ತೀನಿ.ಅವನು ಬಹಳ ಪ್ರತಿಭಾವಂತ. ತಾನು ನಿರ್ವಹಿಸುವ ಪಾತ್ರಗಳಲ್ಲಿ ಸಂಪೂರ್ಣವಾಗಿ ಮುಳುಗುತ್ತಾನೆ. ಮಹಾರಾಜ್ ಸಿನಿಮಾ ನೋಡುವಾಗ ಜುನೈದ್ ಆ ಪಾತ್ರವಾಗುತ್ತಾನೆ ಅಂತ ಅನಿಸುತ್ತದೆ. ಲವ್‌ಯಾಪ ಸಿನಿಮಾದಲ್ಲಿ ಅವನು ಸಂಪೂರ್ಣವಾಗಿ ಗೌರವ್‌ ಆಗಿ ಬದಲಾಗ್ತಾನೆ. ಅವನು ತನ್ನ ಪಾತ್ರಗಳನ್ನು ನಿರ್ವಹಿಸುವಾಗ ಯಾವುದೇ ಕೊರತೆ ಇಟ್ಟುಕೊಳ್ಳೋದಿಲ್ಲ” ಎಂದು ಆಮಿರ್‌ ಖಾನ್ ಹೇಳಿದ್ದಾರೆ. 

ಆಮಿರ್‌ ಖಾನ್‌ ಪ್ರೇಯಸಿ ಬೆಂಗಳೂರಿನ Gauri Spratt ; ಐತಿಹಾಸಿಕ ಕುಟುಂಬದ ಹಿನ್ನಲೆ ಹೊಂದಿರೋ ಇವರಾರು?

ಮಗನಲ್ಲಿ ದೌರ್ಬಲ್ಯವೂ ಇದೆ! 
“ಜುನೈದ್ ಒಳ್ಳೆಯ ನಟ, ಆದರೆ ಅವನಲ್ಲಿ ಕೆಲವು ದೌರ್ಬಲ್ಯಗಳೂ ಇವೆ. ನನ್ನಂತೆಯೇ ಜುನೈದ್ ಕೂಡ ಉತ್ತಮ ಡ್ಯಾನ್ಸರ್ ಅಲ್ಲ. ಜನರೊಂದಿಗೆ ಮಾತನಾಡಲು ಸಹ ಅವನಿಗೆ ತೊಂದರೆಯಾಗುತ್ತದೆ. ಸಂದರ್ಶನದ ವೇಳೆ ಜುನೈದ್ ವಿಚಿತ್ರ, ಅಸಾಂಪ್ರದಾಯಿಕ ಉತ್ತರಗಳನ್ನು ಕೊಡುತ್ತಾನೆ” ಎಂದು ಆಮಿರ್ ಖಾನ್ ಹೇಳಿದರು.

ಸರಿಯಾದ ದಾರಿಯಲ್ಲಿದ್ದಾನೆ! 
“ಮುಂದೆ ಜುನೈದ್ ಕಲಿಯುತ್ತಾನೆ, ಸುಧಾರಿಸುತ್ತಾನೆ. ಅವನ ಹಿಂದಿನ ಚಿತ್ರದ ಸೋಲು ಒಂದು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಆ ಸೋಲು ಅವನನ್ನು ಗಟ್ಟಿ ಮಾಡುತ್ತದೆ. ಕಠಿಣ ಪರಿಶ್ರಮ ಹಾಕಲು ಪ್ರೇರೇಪಿಸುತ್ತದೆ. ಜುನೈದ್ ಸರಿಯಾದ ದಾರಿಯಲ್ಲಿದ್ದಾನೆ, ಮುಂದೆ ಸಾಗುತ್ತಾನೆ” ಎಂದು ಆಮಿರ್‌ ಖಾನ್‌ ಹೇಳಿದ್ದಾರೆ. 

ತನ್ನ ಕುಟುಂಬದ ಜೊತೆ ಸಲ್ಮಾನ್‌ ಫೋಟೋ ಕ್ಲಿಕ್ಕಿಸಿದ ಆಮಿರ್‌ ಖಾನ್‌, ಚಿತ್ರ ಶೇರ್‌ ಮಾಡಿದ ನಿಖತ್‌!

ನಾನಿದ್ದ ಪರಿಸ್ಥಿಯೂ ಜುನೈದ್‌ ಇದ್ದ ಪರಿಸ್ಥಿತಿಯೂ ಒಂದೇ! 
“ಜುನೈದ್‌ನಲ್ಲಿ ನಿಮ್ಮನ್ನು ನೀವು ನೋಡುತ್ತೀರಾ?” ಎಂದು ಆಮಿರ್‌ ಖಾನ್‌ಗೆ ಪ್ರಶ್ನೆ ಮಾಡಲಾಯ್ತು. ಆಗ ಅವರು “ನನಗೆ ಆಗಾಗ ಹಾಗೆ ಅನಿಸುತ್ತದೆ” ಎಂದು ಹೇಳಿದರು. “ಜುನೈದ್‌ನಂತೆ ನಾನು ಕೂಡ ನನ್ನ ವೃತ್ತಿ ಜೀವನವನ್ನು ಪ್ರಾರಂಭಿಸಿದೆ. ನನಗೂ ಸಂದರ್ಶನ ನೀಡಲು ಕಷ್ಟವಾಗುತ್ತಿತ್ತು. ಅವನೊಂದಿಗೂ ಅದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಅವರು ಹೇಳಿದ್ದಾರೆ. 

ಆಮಿರ್‌ ಖಾನ್‌ ಅವರ ಮೊದಲ ಪತ್ನಿ ಮಗ ಜುನೈದ್‌ ಖಾನ್.‌ ಈಗ ಆಮಿರ್‌ ಅವರು ಎರಡನೇ ಪತ್ನಿಗೂ ಡಿವೋರ್ಸ್‌ ಕೊಟ್ಟು, ಗೌರಿ ಸ್ಪ್ರಾಟ್‌ ಎನ್ನುವವರ ಜೊತೆ ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದಾರೆ.