ಬಾಲಿವುಡ್‌ ನಟ ಆಮಿರ್‌ ಖಾನ್‌ ಅವರ ಗರ್ಲ್‌ಫ್ರೆಂಡ್‌ ಬೆಂಗಳೂರಿನವರು. ಇನ್ನೂ ಹೆಚ್ಚಿನ ಮಾಹಿತಿ ಇಲ್ಲಿದೆ. 

ಬಾಲಿವುಡ್‌ ನಟ ಆಮಿರ್‌ ಖಾನ್‌ ಅವರು 60ನೇ ವಯಸ್ಸಿಗೆ ಗರ್ಲ್‌ಫ್ರೆಂಡ್‌ ಪರಿಚಯ ಮಾಡಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಮೂರನೇ ಮದುವೆ ಬಗ್ಗೆಯೂ ಮಾತನಾಡಿದ್ದಾರೆ.

ಗೌರಿ ಎಲ್ಲಿಯವರು?
ಗೌರಿ ಅವರು ಬೆಂಗಳೂರಿನವರು. ಆಮಿರ್‌ ಖಾನ್‌ ಅವರ ಪ್ರೊಡಕ್ಷನ್‌ನಲ್ಲಿ ಕೆಲಸ ಮಾಡುತ್ತಾರೆ. ಗೌರಿಗೆ ಆರು ವರ್ಷದ ಮಗನಿದ್ದು, ಅವನು ಅಮಿರ್‌ ಅವರ ʼಲಗಾನ್ʼ ಹಾಗೂ ʼದಂಗಲ್‌ʼ ಸಿನಿಮಾ ನೋಡಿದ್ದಾರಂತೆ. 

ಕುಟುಂಬದ ಹಿನ್ನಲೆ ಏನು?
ಗೌರಿ ಸ್ಪ್ರಾಟ್‌ ಅವರು ಆಂಗ್ಲೋ ಇಂಡಿಯನ್.‌ ಇವರ ತಂದೆ ತಮಿಳು-ಬ್ರಿಟಿಷ್‌, ಇವರ ತಾಯಿ ಪಂಜಾಬಿ ಐರೀಷ್.‌ ಗೌರಿ ತಮ್ಮನ್ನು ತಾವು ಭಾರತೀಯ ನಾರಿ ಎಂದು ಹೆಮ್ಮೆಯಿಂದ ಕರೆದುಕೊಳ್ಳುತ್ತಾರೆ. ಗೌರಿ ತಾತ ಭಾರತೀಯ ಸ್ವಾತಂತ್ರ್ಯಕ್ಕೋಸ್ಕರ ಹೋರಾಡಿದ್ದಾರೆ. ಈ ವಿಷಯವನ್ನು ಇತಿಹಾಸಕಾರ ರಾಮಚಂದ್ರ ಗುಹಾ ಅವರು ಬರೆದಿರೋದಾಗಿ ಆಮಿರ್‌ ಖಾನ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಗೌರಿ ತಾಯಿ ಸಲೂನ್‌ ಇದ್ದರೆ, ಮುಂಬೈನಲ್ಲಿ ಇವರ ಸಲೂನ್‌ ಇದೆ. ಬಹುತೇಕ ಗೌರಿ ಅವರು ಬೆಂಗಳೂರಿನಲ್ಲಿ ಸಮಯ ಕಳೆದಿದ್ದಾರೆ. 

ಗೌರಿ ಜೊತೆ ಡೇಟಿಂಗ್ ಒಪ್ಪಿಕೊಂಡ ಆಮಿರ್ ಖಾನ್, ಮೂರನೇ ಗರ್ಲ್ ಫ್ರೆಂಡ್ ಫೋಟೋ ವೈರಲ್

ಎಲ್ಲಿ ಓದಿದ್ದಾರೆ?
ಗೌರಿ ಅವರು ಬ್ಲೂ ಮೌಂಟೇನ್‌ ಶಾಲೆಯಲ್ಲಿ ಡಿಗ್ರಿ ಪಡೆದಿದ್ದಾರೆ. ʼಸೂಪರ್‌ಸ್ಟಾರ್‌ʼ ಪಟ್ಟದ ಮೇಲೆ ಗೌರಿಗೆ ನಂಬಿಕೆ ಇಲ್ಲ. ಬಾಲಿವುಡ್‌ ಹುಚ್ಚುತನವನ್ನು ಗೌರಿ ಈಗ ಅರ್ಥಮಾಡಿಕೊಂಡು ಹೊಂದಿಕೊಳ್ಳುತ್ತಿದ್ದಾರಂತೆ. 

ಹೇಗೆ ಪರಿಚಯ ಆಗಿತ್ತು?
ಈ ಹಿಂದೆಯೇ ಆಮಿರ್‌ ಖಾನ್‌-ಗೌರಿ ಪರಿಚಯ ಆಗಿತ್ತು. ಆಮೇಲೆ ಆಮಿರ್‌ ಕಸಿನ್‌ ಮೂಲಕ ಮತ್ತೆ ಈ ಜೋಡಿ ಫೋನ್‌ ನಂಬರ್‌ ಬದಲಾಯಿಸಿಕೊಂಡು ಮಾತನಾಡಿದೆ. ಎರಡು ವರ್ಷದ ಹಿಂದೆ ಆಮಿರ್‌, ಗೌರಿ ಪರಿಚಯ ಆಗಿತ್ತು. ಆಮಿರ್‌ ಖಾನ್‌, ಗೌರಿ ಈಗ ಒಟ್ಟಿಗೆ ( ಲಿವ್‌ ಇನ್‌ ರಿಲೇಶನ್‌ಶಿಪ್‌ ) ಬದುಕುತ್ತಿದ್ದಾರೆ. ಇನ್ನು ಆಮಿರ್‌ ಮಕ್ಕಳು ಕೂಡ ಗೌರಿಯನ್ನು ಒಪ್ಪಿಕೊಂಡಿದ್ದಾರಂತೆ. 

100 ಕೋಟಿ ರೂ ಕಲೆಕ್ಷನ್‌ ಮಾಡಿರೋ ತಂಡೇಲ್‌ ಸಿನಿಮಾ ಒಟಿಟಿಗೆ ಬಂದೇಬಿಡ್ತು! ಎಲ್ಲಿ ನೋಡಬಹುದು?

ಗೌರಿ ಬಗ್ಗೆ ಆಮಿರ್‌ ಖಾನ್‌ ಹೇಳಿದ್ದೇನು? 
“ನನ್ನ ಜೀವನದಲ್ಲಿ ಶಾಂತಿ ನೀಡುವ ಹುಡುಗಿಯನ್ನು ನಾನು ಹುಡುಕುತ್ತಿದ್ದೆ. ಕೊನೆಗೂ ಗೌರಿ ಸಿಕ್ಕಿದಳು. ಈಗ ನಾನು ಗೌರಿ ಜೊತೆ ಕಾಫಿ ಕುಡಿಯುತ್ತಿರೋದನ್ನು ನೋಡಿದರೆ, ನೀವು ಬಂದು ನಮ್ಮ ಜೊತೆ ಜಾಯಿನ್‌ ಆಗಬಹುದು. ನನ್ನ ರಿಲೇಶನ್‌ಶಿಪ್‌ನ್ನು ಮುಚ್ಚಿಡುವ ಅವಶ್ಯಕತೆ ಇಲ್ಲ. ಶಾರುಖ್‌ ಖಾನ್‌ ಲೈಫ್‌ನಲ್ಲೂ ಗೌರಿ ಇದ್ದಾರೆ, ನನ್ನ ಲೈಫ್‌ಗೂ ಗೌರಿ ಬಂದಿದ್ದಾರೆ, ನಾನು ನನ್ನ ರಿಲೇಶನ್‌ಶಿಪ್‌ಗೆ ಕಮಿಟ್‌ ಆಗಿದ್ದೇನೆ” ಎಂದು ಆಮಿರ್‌ ಖಾನ್‌ ಹೇಳಿದ್ದಾರೆ. 

ಭಕ್ತಿ ಹೆಸರಲ್ಲಿ ಲೈಂಗಿಕ ಲಾಭ; ವಿವಾದಾತ್ಮಕ ಸಿನಿಮಾ ರೀ ಕ್ರಿಯೇಟ್ ಮಾಡ್ತಾ ʼನಾ ನಿನ್ನ ಬಿಡಲಾರೆʼ?

ಮದುವೆ ಬಗ್ಗೆ ಏನು ಹೇಳುತ್ತಾರೆ?
“ನನಗೆ ಈಗಾಗಲೇ ಎರಡು ಮದುವೆ ಆಗಿದೆ. ನಾನು ಅರವತ್ತನೇ ವಯಸ್ಸಿನಲ್ಲಿ ಮದುವೆ ಆಗೋದು ಸರಿ ಕಾಣೋದಿಲ್ಲ. ಆದರೆ ನಾನು ನನ್ನ ರಿಲೇಶನ್‌ಶಿಪ್‌ನಲ್ಲಿ ಕಮಿಟ್‌ಮೆಂಟ್‌ ತೋರಿಸುವೆ” ಎಂದು ಆಮಿರ್‌ ಖಾನ್‌ ಹೇಳಿದ್ದಾರೆ.

ಎರಡು ಡಿವೋರ್ಸ್‌ 
1986-2002ರವರೆಗೆ ಆಮಿರ್‌ ಖಾನ್-‌ ರೀನಾ ದತ್ತ ಸಂಸಾರ ನಡೆಸಿದ್ದರು. ಮನಸ್ತಾಪಗಳಿಂದ ಈ ಜೋಡಿ ಡಿವೋರ್ಸ್‌ ಪಡೆದಿತು. ಇವರಿಗೆ ರೀನಾ ದತ್ತ, ಜುನೈದ್‌ ಖಾನ್‌ ಎಂಬ ಮಕ್ಕಳಿದ್ದಾರೆ. ಇದಾದ ಬಳಿಕ ಕಿರಣ್‌ ರಾವ್‌ ಜೊತೆ ಆಮಿರ್‌ ಮದುವೆಯಾಗಿದ್ದರು. ಇವರಿಗೆ ಆಜಾದ್‌ ಎಂಬ ಪುತ್ರನಿದ್ದಾನೆ. 2021ರಲ್ಲಿ ಕಿರಣ್‌ ರಾವ್‌ಗೂ ಆಮಿರ್‌ ಡಿವೋರ್ಸ್‌ ನೀಡಿದ್ದರು.