ಗರಿಗರಿ ದೋಸೆಗೆ ಒಂದು ದಿನ ಮುಂಚೆಯೇ ಕಾವಲಿಗೆ ಮಾಡಿಸಿ ತೈಲ ಮಜ್ಜನ; ಇದು ಅಜ್ಜಿ ಟಿಪ್ಸ್
ಕಬ್ಬಿಣದ ಕಾವಲಿಯಲ್ಲಿ ದೋಸೆ ಮಾಡುವಾಗ ಅಂಟಿಕೊಳ್ಳದಿರಲು ಒಂದು ದಿನ ಮುಂಚಿತವಾಗಿ ಕೆಲವೊಂದು ವಿಧಾನಗಳನ್ನು ಅನುಸರಿಬೇಕಾಗುತ್ತದೆ.. ಈ ವಿಧಾನದಿಂದ ಗರಿಗರಿಯಾದ ದೋಸೆ ಸುಲಭವಾಗಿ ಮಾಡಬಹುದು.

ದೋಸೆಗೂ ಮುನ್ನ ಕಾವಲಿ ರೆಡಿ ಮಾಡ್ಕೊಳ್ಳಿ
ದೋಸೆ ಹಿಟ್ಟು ಹೇಗೆ ರುಬ್ಬಿಕೊಳ್ಳಬೇಕು? ಅಕ್ಕಿ, ಉದ್ದಿನಬೇಳೆ ಪ್ರಮಾಣ ಎಷ್ಟಿರಬೇಕು ಎಂಬಿತ್ಯಾದಿ ವಿಷಯಗಳು ಬಹುತೇಕರಿಗೆ ತಿಳಿದಿರುತ್ತದೆ. ಸರಿಯಾದ ಪ್ರಮಾಣದಲ್ಲಿ ಹಿಟ್ಟು ಸಿದ್ಧ ಮಾಡಿಕೊಂಡರೂ ಕೆಲವೊಮ್ಮೆ ದೋಸೆ ಕಾವಲಿಯಿಂದ ಮೇಲೇಳಲು ಹಠ ಹಿಡಿಯುತ್ತದೆ. ಹಿಟ್ಟು ರೆಡಿ ಮಾಡಿಕೊಳ್ಳೋದರ ಜೊತೆಯಲ್ಲಿ ಒಂದು ದಿನದ ಮುಂಚಿತವಾಗಿ ಕಾವಲಿಯನ್ನು ಸಿದ್ಧ ಮಾಡಿಕೊಳ್ಳಬೇಕಾಗುತ್ತದೆ.
ಕಾವಲಿಗೆ ದೋಸೆ ಅಂಟಿಕೊಳ್ಳಲ್ಲ
ಸಾಮಾನ್ಯವಾಗಿ ನಾನ್‌ಸ್ಟಿಕ್ ಕಾವಲಿ ಬಳಕೆ ಮಾಡೋರಿಗೆ ಈ ಸಮಸ್ಯೆಯುಂಟಾಗಲ್ಲ. ಕಬ್ಬಿಣದಿಂದ ಮಾಡಿರೋ ದಪ್ಪ ತಳ ಹೊಂದಿರುವ ಕಾವಲಿ ನಿಮ್ಮ ಮನೆಯಲ್ಲಿದ್ರೆ ಒಂದು ದಿನದ ಮುಂಚಿತವಾಗಿ ಕೆಲವೊಂದು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ಟಿಪ್ಸ್ ಫಾಲೋ ಮಾಡಿದ್ರೆ ದೋಸೆ ಕಾವಲಿಗೆ ಅಂಟಿಕೊಳ್ಳಲ್ಲ.
ಕಾವಲಿಗೆ ಎಣ್ಣೆಯ ಮಜ್ಜನ
ದೋಸೆ ಮಾಡುವ ಮುಂಚೆ ಕನಿಷ್ಠ ನಾಲ್ಕೈದು ಗಂಟೆಗಳ ಮುಂಚೆಯೇ ಕಾವಲಿಯನ್ನು ಸ್ವಚ್ಚವಾಗಿ ತೊಳೆದುಕೊಳ್ಳಿ. ನೀರಿನಂಶ ಹೋಗುವಂತೆ ಕಾವಲಿಯನ್ನು ಒಣಬಟ್ಟೆಯಿಂದ ಒರೆಸಿಕೊಳ್ಳಬೇಕು. ನಂತರ ಕಾವಲಿ ಮೇಲೆ ಒಂದು ಟೀ ಸ್ಪೂನ್‌ನಷ್ಟು ಅಡುಗೆಎಣ್ಣೆ ಹಾಕಿ ನಯವಾಗಿ ಒರೆಸಿಕೊಳ್ಳಬೇಕು. ಕಾವಲಿಗೆ ಎಣ್ಣೆ ಹಚ್ಚಿ ಎತ್ತಿಟ್ಟುಕೊಳ್ಳಿ.
ಕಾಟನ್ ಬಟ್ಟೆ ಬಳಸಿ
ದೋಸೆ ಮಾಡುವಾಗ ಒಲೆ ಆನ್ ಮಾಡ್ಕೊಂಡು ಕಾವಲಿಯನ್ನು ಸಂಪೂರ್ಣವಾಗಿ ಬಿಸಿ ಮಾಡ್ಕೊಳ್ಳಿ. ಕಾವಲಿ ಬಿಸಿಯಾಗುತ್ತಿದ್ದಂತೆ ಸ್ವಚ್ಛವಾದ ಕಾಟನ್ ಬಟ್ಟೆಯಿಂದ ಎಣ್ಣೆ ಅಂಶವನ್ನು ಒರೆಸಿಕೊಳ್ಳಬೇಕು. ನಂತರ ಕೊಂಚ ನೀರು ಚುಮುಕಿಸಿ ಮತ್ತೊಮ್ಮೆ ಬಟ್ಟೆಯಿಂದ ಒರೆಸಿಕೊಳ್ಳಬೇಕು.
ಕಾವಲಿಯನ್ನು ಕ್ಲೀನ್ ಮಾಡಿಕೊಳ್ಳುತ್ತಿರಬೇಕು!
ದೋಸೆ ಮಾಡುವ ಮುನ್ನ ಈ ರೀತಿಯಾಗಿ ಕಾವಲಿ ಕ್ಲೀನ್ ಮಾಡಿಕೊಳ್ಳಬೇಕು. ಈ ರೀತಿ ಮಾಡಿಕೊಂಡ್ರೆ ಗರಿಗರಿ ದೋಸೆ ನಿಮ್ಮದಾಗುತ್ತದೆ. ದೀರ್ಘ ಸಮಯದವರೆಗೆ ದೋಸೆ ಮಾಡುತ್ತಿದ್ರೆ ಕಾವಲಿ ತಳ ಹಿಡಿಯುತ್ತದೆ. ಈ ಸಂದರ್ಭದಲ್ಲಿ ಒಂದು ಸಣ್ಣ ಲೋಟದಷ್ಟು ನೀರು ಹಾಕಿಕೊಂಡ್ರೆ ಕಾವಲಿ ಮತ್ತೆ ಹೊಸದರಂತೆ ಆಗುತ್ತದೆ. ಬೇಕಿದ್ರೆ ಕಾವಲಿಗೆ ಎಣ್ಣೆ ಹಚ್ಚಲು ಕತ್ತರಿಸಿದ ಈರುಳ್ಳಿ ತುಂಡನ್ನು ಬಳಸಬಹುದಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
