ಅನ್ನ ಮಾಡುವ ಮುಂಚೆ ಎಷ್ಟು ಬಾರಿ ಅಕ್ಕಿಯನ್ನು ಹೇಗೆ & ಎಷ್ಟು ಬಾರಿ ತೊಳೆಯಬೇಕು? Kitchen Hacks
Rice Washing Tips: ಅನ್ನ ಮಾಡುವ ಮೊದಲು ಅಕ್ಕಿಯನ್ನು ಎಷ್ಟು ಬಾರಿ ತೊಳೆಯಬೇಕು ಮತ್ತು ಸರಿಯಾದ ವಿಧಾನ ಯಾವುದು ಎಂಬುದನ್ನು ಈ ಲೇಖನ ವಿವರಿಸುತ್ತದೆ. ಅಕ್ಕಿ ತೊಳೆದ ನೀರನ್ನು ಗಿಡಗಳಿಗೆ ಅಥವಾ ಜಾನುವಾರುಗಳಿಗೆ ಬಳಸುವ ಮೂಲಕ ನೀರನ್ನು ಉಳಿತಾಯ ಮಾಡಬಹುದು.

ಅಕ್ಕಿಯಲ್ಲಿ ಏನಿದೆ?
ಅಕ್ಕಿಯನ್ನು ಎರಡು ಬಾರಿ ತೊಳೆದು ಕುಕ್ಕರ್‌ನಲ್ಲಿ ದ್ವಿಗುಣ ಪ್ರಮಾಣದಲ್ಲಿ ನೀರು ಸೇರಿಸಿಟ್ಟು ಎರಡು ಕೂಗು ಕೂಗಿಸಿದ್ರೆ ಅನ್ನ ರೆಡಿಯಾಗುತ್ತದೆ. ಆದ್ರೆ ಅನ್ನ ಮಾಡುವ ಮೊದಲು ಅಕ್ಕಿಯನ್ನು ನೀರಿನಲ್ಲಿ ಎಷ್ಟು ಬಾರಿ ತೊಳೆಯಬೇಕು ಎಂಬ ವಿಚಾರ ನಿಮಗೆ ತಿಳಿದಿದೆಯಾ? ಕೆಲವರು ಎರಡರಿಂದ ಮೂರು ಬಾರಿ, ಒಂದಿಷ್ಟು ಜನರು ನಾಲ್ಕೈದು ಬಾರಿ ಅಕ್ಕಿಯನ್ನು ತೊಳೆಯುತ್ತಾರೆ. ಒಂದಿಷ್ಟು ಮಂದಿ ಅದರಲ್ಲೇನಿದೆ ಎಂದು ಹೇಳಿ ಅಕ್ಕಿಯನ್ನು ಒಮ್ಮೆ ತೊಳೆಯುತ್ತಾರೆ.
ಅಕ್ಕಿಯನ್ನು ಏಕೆ ತೊಳೆಯುತ್ತಾರೆ?
ಅಕ್ಕಿಯಲ್ಲಿರುವ ಧೂಳು, ಹಿಟ್ಟಿನಂತಹ ಪುಡಿ, ಸೂಕ್ಷ್ಮ ಕಲ್ಮಶಗಳನ್ನು ತೆಗೆಯಲು ಅಕ್ಕಿಯನ್ನು ತೊಳೆಯಲಾಗುತ್ತದೆ. ಕೆಲವೊಮ್ಮೆ ಧೂಳಿನ ಕಣಗಳು ಹೆಚ್ಚಿದ್ರೆ ಅಕ್ಕಿ ತೊಳೆಯಲು ಅಧಿಕ ನೀರು ಬೇಕಾಗುತ್ತದೆ.
ಅಕ್ಕಿಯನ್ನು ಎಷ್ಟು ಬಾರಿ ತೊಳೆಯಬೇಕು?
ಸಾಮಾನ್ಯವಾಗಿ ಕ್ರಮಬದ್ಧವಾಗಿ ಶುದ್ಧ ನೀರಿನಿಂದ ಅಕ್ಕಿಯನ್ನು ಎರಡು ಬಾರಿ ತೊಳೆದ್ರೆ ಸಾಕು ಎಂದು ಆಹಾರತಜ್ಞರು ಹೇಳುತ್ತಾರೆ. ಉತ್ತಮ ಗುಣಮಟ್ಟದ ಅಕ್ಕಿಯಿದ್ರೆ ಒಂದು ಬಾರಿ ತೊಳೆದ್ರೆ ಸಾಕು. ಇದರಿಂದ ನೀರಿನ ವ್ಯರ್ಥವೂ ಕಡಿಮೆಯಾಗುತ್ತದೆ.
ಅಕ್ಕಿ ತೊಳೆಯುವ ಮುನ್ನ ಈ ಕೆಲಸಗಳನ್ನು ಮಾಡಿ
ಅಕ್ಕಿಯನ್ನು ನಾಲ್ಕರಿಂದ ಐದು ಬಾರಿ ತೊಳೆದ್ರೆ ಅದು ಸ್ವಚ್ಚವಾಗುತ್ತೆ ಅನ್ನೋದು ಹಲವರ ಅಭಿಪ್ರಾಯವಾಗಿದೆ. ಅಕ್ಕಿಯನ್ನು ತೊಳೆಯುವ ಮುನ್ನ ಆರಿಸುವುದು, ತೂರುವಿಕೆ ಅಂತಹ ವಿಧಾನಗಳ ಮೂಲಕ ಸ್ವಚ್ಛ ಮಾಡಿಕೊಳ್ಳಬಹುದು. ಇದರಿಂದ ಹೆಚ್ಚು ನೀರು ಬಳಕೆ ಮಾಡೋದು ಕಡಿಮೆಯಾಗುತ್ತದೆ. ಈ ಮೂಲಕ ನೀರು ಉಳಿತಾಯ ಮಾಡಿದಂತಾಗುತ್ತದೆ.
ಅಕ್ಕಿ ತೊಳೆಯುವ ವಿಧಾನ
ಅಕ್ಕಿ ತೊಳೆಯುವಾಗ ಕೈಗಳಿಂದ ಉಜ್ಜುವ ಅಗತ್ಯವಿಲ್ಲ. ಅಕ್ಕಿಯನ್ನು ನೀರಿನಲ್ಲಿ ಹಾಕಿ ನಿಧಾನವಾಗಿ ಕೈಗಳಿಂದ ಅಲ್ಲಾಡಿಸಿದ್ರೆ ಸಾಕು. ಕೆಲವರು ಅಕ್ಕಿಯನ್ನು ಕೈಗಳಿಂದ ಉಜ್ಜುತ್ತಾರೆ. ಇದರಿಂದ ಅನ್ನ ಮುದ್ದೆಯಂತೆ ಆಗುವ ಸಾಧ್ಯತೆ ಇರುತ್ತದೆ. ಅಕ್ಕಿ ತೊಳೆದ ನೀರನ್ನು ಚೆಲ್ಲುವ ಬದಲಾಗಿ ಅದನ್ನು ಗಿಡಗಳಿಗೆ ಹಾಕಬಹುದು. ಹಳ್ಳಿಗಳಲ್ಲಿ ಇಂತಹ ನೀರನ್ನು ಜಾನುವಾರುಗಳಿಗೆ ಕುಡಿಸುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

