ಕೆನೆ ಇಲ್ಲವಾ? ಚಿಂತಿಸಬೇಡಿ... ಮೊಸರಿನಿಂದಲೇ ಮಾಡಿ ಸುವಾಸನೆ ಭರಿತ ಶುದ್ಧ ತುಪ್ಪ!
Kitchen Tips: ತುಪ್ಪ ಭಾರತೀಯ ಅಡುಗೆಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ಆಹಾರ. ಆದರೆ ಮನೆಯಲ್ಲಿ ತುಪ್ಪ ಮಾಡಲು ಸಾಮಾನ್ಯವಾಗಿ ಹಾಲಿನ ಕೆನೆ ಬೇಕಾಗುತ್ತದೆ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಕೆನೆ ಇಲ್ಲದಿದ್ದರೂ ಕೇವಲ ಗಟ್ಟಿಯಾದ ಮೊಸರಿನಿಂದಲೇ ಸುವಾಸನೆಯ, ಶುದ್ಧ ತುಪ್ಪವನ್ನು ತಯಾರಿಸಬಹುದು.

ಭಾರತೀಯ ಮನೆಗಳಲ್ಲಿ ಸಾಮಾನ್ಯವಾಗಿ ಬಳಸುವ ಆಹಾರ ತುಪ್ಪ
ತುಪ್ಪ ಭಾರತೀಯ ಅಡುಗೆಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ಆಹಾರ. ಇದು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೂ ಪ್ರಯೋಜನಕಾರಿ. ಆದರೆ, ಮಾರುಕಟ್ಟೆಯಿಂದ ಖರೀದಿಸಿದ ಹೆಚ್ಚಿನ ತುಪ್ಪವು ಶುದ್ಧವಾಗಿರುವುದಿಲ್ಲ , ಹೆಚ್ಚಾಗಿ ಕಲಬೆರಕೆಯಾಗಿರುತ್ತದೆ. ಅದಕ್ಕಾಗಿಯೇ ಮನೆಯಲ್ಲಿ ತುಪ್ಪವನ್ನು ತಯಾರಿಸುವುದು ಉತ್ತಮ ಆಯ್ಕೆ.
ತುಪ್ಪ ತಯಾರಿಸಲು ಕೆನೆ ಸಂಗ್ರಹಿಸಬೇಕಾಗುತ್ತೆ
ಮನೆಯಲ್ಲಿ ತುಪ್ಪ ಮಾಡಲು, ನಾವು ಪ್ರತಿದಿನ ಹಾಲನ್ನು ಕುದಿಸಿ ಕೆನೆ ಸಂಗ್ರಹಿಸಿ ಅದರಿಂದ ತುಪ್ಪವನ್ನು ತಯಾರಿಸುತ್ತೇವೆ, ಆದರೆ ಹಾಲಿನ ಕೆನೆ ಇಲ್ಲದೇ ತುಪ್ಪ ಮಾಡುವುದು ಹೇಗೆ ಎಂದು ಎನ್ನುವುದು ನಿಮಗೆ ಗೊತ್ತಾ? ನಿಮಗೆ ಕೆನೆ ಸಂಗ್ರಹಿಸಲು ಸಮಯ ಇಲ್ಲದೇ ಇದ್ದರೆ ಅಥವಾ ಅಭ್ಯಾಸವಿಲ್ಲದಿದ್ದರೆ ಅಥವಾ ಕೆನೆ ಹೆಪ್ಪುಗಟ್ಟದಿದ್ದರೆ, ಚಿಂತೆ ಬಿಡಿ ಬೇರೆ ವಿಧಾನದ ಮೂಲಕ ತುಪ್ಪ ತಯಾರಿಸಬಹುದು.
ಮೊಸರಿನಿಂದ ತುಪ್ಪ ತೆಗೆಯಲು ಏನೆಲ್ಲಾ ಬೇಕು?
ಈ ತುಪ್ಪವನ್ನು ತಯಾರಿಸಲು ನಿಮಗೆ ಮೊಸರು ಬೇಕಾಗುತ್ತದೆ. ಮೊಸರನ್ನು ಬಳಸುವುದು ತುಪ್ಪವನ್ನು ತಯಾರಿಸಲು ಅತ್ಯುತ್ತಮ ಮತ್ತು ಅತ್ಯಂತ ಸಾಂಪ್ರದಾಯಿಕ ವಿಧಾನವಾಗಿದೆ. ಹೇಗೆ ಮಾಡೋದು ನೋಡೋಣ.
ಮೊಸರಿನಿಂದ ತುಪ್ಪವನ್ನು ತಯಾರಿಸಲು, ನಿಮಗೆ 2–3 ಲೀಟರ್ ಪೂರ್ಣ ಕೆನೆ ಹಾಲು, 2–3 ಚಮಚ ಮೊಸರು, ಕೋಲ್ಡ್ ನೀರು, ದಪ್ಪ ತಳದ ಪ್ಯಾನ್, ಹ್ಯಾಂಡ್ ಬ್ಲೆಂಡರ್ ಅಥವಾ ಮಿಕ್ಸರ್ ಬೇಕಾಗುತ್ತದೆ.
ಮೊಸರಿನಿಂದ ತುಪ್ಪ ಹೀಗೆ ತಯಾರಿಸಿ
ಮೊದಲು, ಪೂರ್ಣ ಕೆನೆ ಹಾಲನ್ನು ಕುದಿಸಿ. ಕುದಿಸಿದ ನಂತರ, ಸ್ಟೌವ್ ಆಫ್ ಮಾಡಿ. ಹಾಲು ಇನ್ನೂ ಬೆಚ್ಚಗಿರುವಾಗ, 2–3 ಚಮಚ ಮೊಸರನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಪಾತ್ರೆಯನ್ನು ಮುಚ್ಚಿ ಬೆಚ್ಚಗಿನ ಸ್ಥಳದಲ್ಲಿ ಇರಿಸಿ. ಬೇಸಿಗೆಯಲ್ಲಿ ಇದು 4–6 ಗಂಟೆಗಳನ್ನು ತೆಗೆದುಕೊಳ್ಳುತ್ತದೆ, ಆದರೆ ಚಳಿಗಾಲದಲ್ಲಿ ಇದು 8–12 ಗಂಟೆಗಳನ್ನು ತೆಗೆದುಕೊಳ್ಳಬಹುದು.
ಮೊಸರಿನಿಂದ ತುಪ್ಪ ಹೀಗೆ ತಯಾರಿಸಿ
- ಗಟ್ಟಿಯಾದ ಮೊಸರು ರೆಡಿಯಾದ ಮೊಸರನ್ನು ಮಿಕ್ಸರ್ ಜಾರ್‌ಗೆ ಹಾಕಿ.
- ಸ್ವಲ್ಪ ಕೋಲ್ಡ್ ನೀರು ಸೇರಿಸಿ.
- ಕೆಲವು ಸೆಕೆಂಡುಗಳ ಕಾಲ ಮಿಕ್ಸ್ ಮಾಡಿ.
- ಸ್ವಲ್ಪ ಹೊತ್ತಿನಲ್ಲೇ ಬೆಣ್ಣೆ ಮೇಲ್ಭಾಗಕ್ಕೆ ತೇಲಿಬರುತ್ತದೆ.
- ಕೆಳಗೆ ಉಳಿಯುವ ದ್ರವವೇ ಮಜ್ಜಿಗೆ.
- ಬೆಣ್ಣೆಯನ್ನು ಬೇರ್ಪಡಿಸಿ ತೆಗೆದುಕೊಳ್ಳಿ.
- ತೆಗೆದ ಬೆಣ್ಣೆಯನ್ನು ತಣ್ಣೀರಿನಲ್ಲಿ 2–3 ಬಾರಿ ತೊಳೆಯಿರಿ. ಇದರಿಂದ ಮೊಸರಿನ ಹುಳಿ ರುಚಿ ಕಡಿಮೆಯಾಗುತ್ತದೆ ಹಾಗೂ ತುಪ್ಪ ಹೆಚ್ಚು ದಿನ ಕೆಡದೇ ಇರುತ್ತದೆ.
- ಬೆಣ್ಣೆಯನ್ನು ದಪ್ಪ ತಳದ ಪಾತ್ರೆಯಲ್ಲಿ ಹಾಕಿ.
- ಕಡಿಮೆ ಉರಿಯಲ್ಲಿ ನಿಧಾನವಾಗಿ ಕುದಿಸಿ.
- ಸ್ವಲ್ಪ ಸಮಯದ ಬಳಿಕ ನೊರೆ ಕಾಣಿಸುತ್ತದೆ.
- ನಂತರ ಚಿನ್ನದ ಬಣ್ಣದ ತುಪ್ಪ ಬೇರ್ಪಡಲು ಆರಂಭವಾಗುತ್ತದೆ.
- ಸುಂದರವಾದ ಸುವಾಸನೆ ಬಂದಾಗ ಗ್ಯಾಸ್ ಆರಿಸಿ.
- ತುಪ್ಪವನ್ನು ಸೋಸಿ ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿ.
ಈ ಅಂಶಗಳನ್ನು ನೆನಪಿನಲ್ಲಿಡಿ
- ಫುಲ್ ಕ್ರೀಮ್ ಹಾಲಿನ ಮೊಸರು ಬಳಸಿದರೆ ಹೆಚ್ಚು ಬೆಣ್ಣೆ ದೊರೆಯುತ್ತದೆ.
- ತುಪ್ಪ ಮಾಡುವಾಗ ಯಾವಾಗಲೂ ಕಡಿಮೆ ಉರಿಯಲ್ಲೇ ಕುದಿಸಿ.
- ಸಂಪೂರ್ಣ ತಣ್ಣಗಾದ ನಂತರವೇ ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿ.
- ತೇವಾಂಶವಿಲ್ಲದ ಚಮಚವನ್ನು ಮಾತ್ರ ಬಳಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
