Monsoon Kitchen Tips: ಮಳೆಗಾಲದಲ್ಲಿ ಉಪ್ಪು ಒದ್ದೆಯಾಗ್ತಿದ್ದರೆ ಈ ಸುಲಭ ಟಿಪ್ಸ್ ಫಾಲೋ ಮಾಡಿ
ಮಳೆಗಾಲದಲ್ಲಿ ಬಿಸಿಲು ಬಂದ್ರೆ ನೆಮ್ಮದಿ ಜೊತೆ ಟೆನ್ಷನ್ ಕೂಡ ಕಾಡುತ್ತೆ. ತೇವಾಂಶದಿಂದ ನೆಲ ಒದ್ದೆಯಾಗುತ್ತೆ. ಮನೆಯಲ್ಲಿರುವ ಕೆಲ ವಸ್ತುಗಳು ಒದ್ದೆಯಾಗುತ್ವೆ. ಅದ್ರಲ್ಲಿ ಉಪ್ಪು ಕೂಡ ಸೇರಿದೆ. ಮಳೆಗಾಲದಲ್ಲಿ ಉಪ್ಪು ಒದ್ದೆಯಾಗುವ ಸಮಸ್ಯೆಗೆ ಸರಳ ಉಪಾಯ ಇಲ್ಲಿದೆ.

ಅಕ್ಕಿ
ಉಪ್ಪು ಒದ್ದೆಯಾಗುವುದು ಸಾಮಾನ್ಯ ಸಂಗತಿ. ಅನೇಕ ವರ್ಷಗಳಿಂದ ಈ ಸಮಸ್ಯೆಯಿಂದ ಜನರು ಬಳಲ್ತಿದ್ದಾರೆ. ಆದ್ರೆ ಮನೆಯಲ್ಲಿಯೇ ಇರುವ ಸುಲಭ ಪರಿಹಾರ ತಿಳಿದಿರಬಹುದು. ನಿಮ್ಮ ಮನೆಯಲ್ಲೂ ಮಳೆಗಾಲದಲ್ಲಿ ಉಪ್ಪು ಒದ್ದೆಯಾಗ್ತಿದ್ದರೆ ಮೊದಲ ಮತ್ತು ಅತ್ಯಂತ ಪರಿಣಾಮಕಾರಿ ವಿಧಾನವಾದ ಅಕ್ಕಿ ಕಾಳುಗಳ ಪ್ರಯೋಗ ನೀವು ಮಾಡ್ಬಹುದು. ಉಪ್ಪಿನ ಡಬ್ಬಿಯಲ್ಲಿ 8 ರಿಂದ 10 ಕಚ್ಚಾ ಅಕ್ಕಿಯನ್ನು ಹಾಕಿ. ಅಕ್ಕಿಗೆ ತೇವಾಂಶವನ್ನು ಹೀರಿಕೊಳ್ಳುವ ಸ್ವಾಭಾವಿಕ ಗುಣವಿರುವುದರಿಂದ, ಉಪ್ಪು ಒಣವಾಗಿಯೇ ಉಳಿಯುತ್ತದೆ. ಬೇಕಾದರೆ ಅಕ್ಕಿಯನ್ನು ಸಣ್ಣ ಹತ್ತಿಯ ಬಟ್ಟೆಯಲ್ಲಿ ಕಟ್ಟಿಕೊಂಡು ಡಬ್ಬಿಯೊಳಗೆ ಇಡಬಹುದು.
ಗಾಜಿನ ಡಬ್ಬ
ಇನ್ನೊಂದು ಮುಖ್ಯ ಸಲಹೆ ಎಂದರೆ ಡಬ್ಬದ ಒಳಗೆ ಗಾಳಿ ಹೋದಾಗ ಉಪ್ಪು ಒದ್ದೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಪ್ಲಾಸ್ಟಿಕ್ ಡಬ್ಬಿಗಳಿಗಿಂತ ಗಾಜಿನ ಏರ್ಟೈಟ್ ಜಾರ್ ತೇವಾಂಶವನ್ನು ಒಳಗೆ ಹೋಗದಂತೆ ತಡೆಯುತ್ತದೆ. ನೀವು ಉಪ್ಪನ್ನು ಹಾಕಲು ಗಾಜಿನ ಡಬ್ಬವನ್ನು ಬಳಸುವುದು ಉತ್ತಮ. ಉಪ್ಪು ತೆಗೆದ ತಕ್ಷಣ ಮುಚ್ಚಳವನ್ನು ಬಿಗಿಯಾಗಿ ಮುಚ್ಚುವುದು ಕೂಡ ಅಷ್ಟೇ ಮುಖ್ಯ.
ಲವಂಗ
ಲವಂಗ ಅಥವಾ ರಾಜ್ಮಾ ಕಾಳುಗಳೂ ಉಪ್ಪನ್ನು ಒದ್ದೆಯಾಗದಂತೆ ತಡೆಯುತ್ತದೆ. ಉಪ್ಪಿನ ಡಬ್ಬಿಯಲ್ಲಿ 4 ಅಥವಾ 5 ಲವಂಗಗಳನ್ನು ಅಥವಾ 2–3 ರಾಜ್ಮಾ ಕಾಳುಗಳನ್ನು ಹಾಕಿದರೆ ಅವು ಹೆಚ್ಚುವರಿ ತೇವವನ್ನು ಹೀರಿಕೊಂಡು ಉಪ್ಪು ಗಟ್ಟಿಯಾಗುವುದನ್ನು ತಡೆಯುತ್ತವೆ. ಜೊತೆಗೆ ಲವಂಗದಿಂದ ಸೌಮ್ಯವಾದ ಪರಿಮಳವೂ ಸಿಗುತ್ತದೆ.
ಇದು ನೆನಪಿರಲಿ
ಉಪ್ಪನ್ನು ಬಳಸುವಾಗ ಒಣ ಸ್ಪೂನ್ ಬಳಸಿ. ಒದ್ದೆಯಾದ ಸ್ಪೂನ್ ನಿಂದ ಉಪ್ಪನ್ನು ತೆಗೆದರೆ ಅದು ಬೇಗನೆ ತೇವಗೊಂಡು ಹಾಳಾಗುವ ಸಾಧ್ಯತೆ ಹೆಚ್ಚು. ಹಾಗೆಯೇ ಉಪ್ಪಿನ ಡಬ್ಬಿಯನ್ನು ಗ್ಯಾಸ್ ಸ್ಟೌವ್ ಅಥವಾ ಸಿಂಕ್ ಹತ್ತಿರ ಇಡುವುದನ್ನು ತಪ್ಪಿಸಿ. ತಂಪಾದ, ಒಣವಾದ ಸ್ಥಳದಲ್ಲಿ ಇಟ್ಟರೆ ಉಪ್ಪು ಹೆಚ್ಚು ದಿನಗಳವರೆಗೆ ಉತ್ತಮ ಸ್ಥಿತಿಯಲ್ಲಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

